Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 22:22 - ಕನ್ನಡ ಸತ್ಯವೇದವು C.L. Bible (BSI)

22 ದೇವರನು ತೊರೆದು ದುರುಳನಾಗದೆ ನಾನನುಸರಿಸಿದೆ ಸರ್ವೇಶ್ವರನ ಮಾರ್ಗವನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಯೆಹೋವನ ಮಾರ್ಗವನ್ನೇ ಅನುಸರಿಸಿದೆನಲ್ಲಾ ನನ್ನ ದೇವರನ್ನು ಬಿಟ್ಟು ದ್ರೋಹ ಮಾಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಯೆಹೋವನ ಮಾರ್ಗವನ್ನೇ ಅನುಸರಿಸಿದೆನಲ್ಲಾ; ನನ್ನ ದೇವರನ್ನು ಬಿಟ್ಟು ದುಷ್ಟನಾಗಲಿಲ್ಲವಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ನಾನು ಆತನ ಮಾರ್ಗಗಳನ್ನೇ ಅನುಸರಿಸಿದೆನು. ನನ್ನ ದೇವರ ವಿರುದ್ಧ ನಾನು ಪಾಪವನ್ನು ಮಾಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಏಕೆಂದರೆ ನಾನು ಯೆಹೋವ ದೇವರ ಮಾರ್ಗಗಳನ್ನು ಅನುಸರಿಸಿದ್ದೇನೆ, ನನ್ನ ದೇವರನ್ನು ಬಿಟ್ಟುಹೋಗುವ ದುಷ್ಟತ್ವವನ್ನು ನಾನು ಮಾಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 22:22
15 ತಿಳಿವುಗಳ ಹೋಲಿಕೆ  

ಆದ್ದರಿಂದ ಮಕ್ಕಳೇ, ಕಿವಿಗೊಡಿ ನನಗೀಗ ನನ್ನ ಮಾರ್ಗಗಳನ್ನು ಅನುಸರಿಸುವವರು ಧನ್ಯರೆಂಬುದು ನಿಜ.


ಅವನು ತನ್ನ ಪುತ್ರಪೌತ್ರರಿಗೆ, ‘ನೀವು ನ್ಯಾಯನೀತಿಯನ್ನು ಪಾಲಿಸುತ್ತಾ ಸರ್ವೇಶ್ವರ ಸ್ವಾಮಿಯ ಮಾರ್ಗದಲ್ಲೇ ನಡೆಯಬೇಕು; ಹಾಗೆ ಮಾಡಿದರೆ ವಾಗ್ದಾನ ಮಾಡಿದುದನ್ನೆಲ್ಲ ಈಡೇರಿಸುವರು,’ ಎಂದು ಬೋಧಿಸಲೆಂದೇ ನಾನು ಅವನನ್ನು ಆರಿಸಿಕೊಂಡಿದ್ದೇನೆ".


ಧನ್ಯನು, ಪ್ರಭುವಿನಲಿ ಭಯಭಕ್ತಿಯುಳ್ಳವನು I ಧನ್ಯನು, ಆತನ ಮಾರ್ಗಗಳಲೇ ನಡೆಯುವವನು II


ಲೋಕದ ಜನರೊಡನೆ, ವಿಶೇಷವಾಗಿ ನಿಮ್ಮೊಡನೆ ವ್ಯವಹರಿಸುವಾಗ ನಾವು ಕೇವಲ ಮಾನವ ಜ್ಞಾನವನ್ನಾಶ್ರಯಿಸದೆ ದೇವರ ಅನುಗ್ರಹವನ್ನೇ ಆಶ್ರಯಿಸಿ ನಡೆದುಕೊಂಡೆವು. ದೇವದತ್ತವಾದ ನಿಷ್ಕಪಟ ಮನಸ್ಸಿನಿಂದಲೂ ಪರಿಶುದ್ಧತೆಯಿಂದಲೂ ವರ್ತಿಸಿದೆವು. ಇದಕ್ಕೆ ನಮ್ಮ ಮನಸ್ಸೇ ಸಾಕ್ಷಿ. ಇದಕ್ಕಾಗಿ ನಾವು ಹೆಮ್ಮೆಪಡುತ್ತೇವೆ.


ನನ್ನ ಪಿತನು ಕೊಟ್ಟ ಆಜ್ಞೆಗಳನ್ನು ಪಾಲಿಸಿ ಅವರ ಪ್ರೀತಿಯಲ್ಲಿ ನಾನು ನೆಲೆಗೊಂಡಿರುವ ಹಾಗೆ ನೀವು ಕೂಡ ನಾನು ಕೊಟ್ಟ ಆಜ್ಞೆಗಳನ್ನು ಪಾಲಿಸಿದರೆ ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ.


ನನಗೆ ಬೆನ್ನು ತೋರಿಸಿ, ನನ್ನ ದರ್ಶನವನ್ನು ಬಯಸದೆ, ನನ್ನ ಮಾರ್ಗಬಿಟ್ಟವರನ್ನು ಧ್ವಂಸಮಾಡುವೆನು.”


ಅಕ್ರಮಿಗಳ ದುರ್ಗತಿ ದುರ್ಮಾರ್ಗಿಗಳಿಗೆ I ಶುಭವಾಗಲಿ ಪ್ರಭೂ, ಇಸ್ರಯೇಲರಿಗೆ II


ಪ್ರಭುವಿನ ಶಾಸ್ತ್ರಾನುಸಾರ ನಡೆದವರು ಧನ್ಯರು I ದೋಷರಹಿತ ಮಾರ್ಗದಲಿ ನಡೆವವರು ಧನ್ಯರು II


ಅವನ ಕೀಳು ಬಾಯಿಯ ತುಂಬ ಕೇಡು ಕಪಟ I ಸನ್ಮತಿ ಸತ್ಕಾರ್ಯಗಳನ್ನು ಬಿಟ್ಟೇಬಿಟ್ಟ II


ಇಲ್ಲಿ ನಿಂತುಕೊಂಡಿರುವ ನಾನು, ಯಾರ ಎತ್ತನ್ನಾಗಲಿ, ಕತ್ತೆಯನ್ನಾಗಲಿ ತೆಗೆದುಕೊಂಡು ಯಾರನ್ನಾದರು ವಂಚಿಸಿ ಪೀಡಿಸಿದ್ದುಂಟೋ? ಲಂಚ ತೆಗೆದುಕೊಂಡು ಕುರುಡನಂತೆ ತೀರ್ಪು ಕೊಟ್ಟಿದ್ದುಂಟೋ? ಹಾಗೇನಾದರು ಮಾಡಿದ್ದರೆ ಸರ್ವೇಶ್ವರನ ಹಾಗು ಅವರ ಅಭಿಷಿಕ್ತನ ಮುಂದೆ ಹೇಳಿರಿ; ನಾನು ಅದನ್ನು ಹಿಂದಕ್ಕೆ ಕೊಡುತ್ತೇನೆ,” ಎಂದನು.


ಅದಕ್ಕೆ ಮೋಶೆ ಬಹುಕೋಪಗೊಂಡನು. ಸರ್ವೇಶ್ವರನಿಗೆ, “ತಾವು ಇವರ ನೈವೇದ್ಯವನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳಬೇಡಿ. ನಾನು ಇವರಿಂದ ಒಂದು ಕತ್ತೆಯನ್ನೂ ಕೂಡ ತೆಗೆದುಕೊಂಡವನಲ್ಲ. ಅವರಲ್ಲಿ ಒಬ್ಬನಿಗಾದರೂ ಹಾನಿಮಾಡಿದವನಲ್ಲ,” ಎಂದು ಮನವಿಮಾಡಿದನು.


ನೀನು ನಿನ್ನ ತಂದೆ ದಾವೀದನಂತೆ ಪೂರ್ಣಮನಸ್ಸಿನಿಂದಲೂ ಯಥಾರ್ಥಚಿತ್ತದಿಂದಲೂ ನಡೆದುಕೊಂಡು, ನನ್ನ ಆಜ್ಞಾವಿಧಿನ್ಯಾಯಗಳನ್ನು ಕೈಗೊಳ್ಳುತ್ತಾ ಬಂದರೆ, ಇಸ್ರಯೇಲರಲ್ಲಿ ನಿನ್ನ ಸಿಂಹಾಸನವನ್ನು ಸದಾ ಸ್ಥಿರಪಡಿಸುವೆನು;


ಪ್ರಭುವೇ, ನೀನೆ ನನ್ನ ಬಲವು I ನನಗಿದೆ ನಿನ್ನಲೇ ಒಲವು II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು