Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 2:8 - ಕನ್ನಡ ಸತ್ಯವೇದವು C.L. Bible (BSI)

8 ಸೌಲನ ಸೇನಾಪತಿ ಹಾಗು ನೇರನ ಮಗನಾದ ಅಬ್ನೇರನು ಸೌಲನ ಮಗನಾದ ಈಷ್ಬೋಶೆತನನ್ನು ನದಿಯ ಆಚೆಯಲ್ಲಿರುವ ಮಹನಯಿಮಿಗೆ ಕರೆದೊಯ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಸೌಲನ ಸೇನಾಧಿಪತಿಯೂ ನೇರನ ಮಗನೂ ಆದ ಅಬ್ನೇರನು ಸೌಲನ ಮಗನಾದ ಈಷ್ಬೋಶೆತನನ್ನು ಹೊಳೆಯ ಆಚೆಯಲ್ಲಿರುವ ಮಹನಯಿಮಿಗೆ ಕರೆದುಕೊಂಡು ಹೋಗಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಸೌಲನ ಸೇನಾಪತಿಯೂ ನೇರನ ಮಗನೂ ಆದ ಅಬ್ನೇರನು ಸೌಲನ ಮಗನಾದ ಈಷ್ಬೋಶೆತನನ್ನು ಹೊಳೆಯ ಆಚೆಯಲ್ಲಿರುವ ಮಹನಯಿವಿುಗೆ ಒಯ್ದು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಸೌಲನ ಸೈನ್ಯದಲ್ಲಿ ನೇರನ ಮಗನಾದ ಅಬ್ನೇರನು ಸೇನಾಧಿಪತಿಯಾಗಿದ್ದನು. ಸೌಲನ ಮಗನಾದ ಈಷ್ಬೋಶೆತನನ್ನು ಅಬ್ನೇರನು ಮಹನಯಿಮಿಗೆ ಕರೆದೊಯ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಸೌಲನ ಸೈನ್ಯಾಧಿಪತಿಯಾದ ನೇರನ ಮಗನಾಗಿರುವ ಅಬ್ನೇರನು ಸೌಲನ ಮಗ ಈಷ್ಬೋಶೆತನನ್ನು ಮಹನಯಿಮಿಗೆ ಕರೆದುಕೊಂಡು ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 2:8
18 ತಿಳಿವುಗಳ ಹೋಲಿಕೆ  

ಅಹೀಮಾಚನ ಮಗಳಾದ ಅಹೀನೋವಮಳು ಅವನ ಹೆಂಡತಿ; ನೇರನ ಮಗನಾದ ಅಬ್ನೇರನು ಅವನ ಸೇನಾಪತಿ; ನೇರನು ಸೌಲನ ಚಿಕ್ಕಪ್ಪನು.


ದೇವದೂತರು ಅವನೆದುರಿಗೆ ಬಂದರು. ಯಕೋಬನು ಅವರನ್ನು ನೋಡಿ, “ಇದು ದೇವರ ಪಾಳೆಯ,” ಏಂದು ಹೇಳಿ ಆ ಸ್ಥಳಕ್ಕೆ ‘ಮಹನಯಿಮ್’ ಎಂದು ಹೆಸರಿಟ್ಟನು.


ನೇರನು ಕೀಷನ ತಂದೆ. ಕೀಷ ಸೌಲನ ತಂದೆ. ಸೌಲನಿಗೆ ನಾಲ್ವರು ಮಕ್ಕಳು: ಯೋನಾತಾನ್, ಮಲ್ಕೀಷೂವ, ಅಬೀನಾದಾಬ್, ಎಪ್ಬಾಳ್ ಎಂಬವರು.


ಕೀಷನ ತಂದೆ ನೇರ. ಕೀಷ ಅರಸ ಸೌಲನ ತಂದೆ. ಯೋನಾತಾನ್, ಮಲ್ಕೀಷೂವ, ಅಬೀನಾದಾಬ್, ಎಷ್ಬಾಳ ಎಂಬವರು ಸೌಲನ ಮಕ್ಕಳು.


ಅಲ್ಲಿಂದ, “ಅಬ್ನೇರನೇ, ನನ್ನ ಮಾತು ಕೇಳಿಸುತ್ತಿದ್ದೇಯೋ?” ಎಂದು ನೇರನ ಮಗನಾದ ಅಬ್ನೇರನಿಗೂ ಸೈನಿಕರಿಗೂ ಕೇಳಿಸುವಂತೆ ಕೂಗಿದನು. ಅಬ್ನೇರನು, “ಅರಸನನ್ನು ಕೂಗುವ ನೀನಾರು?” ಎಂದು ಕೇಳಿದನು.


ದಾವೀದನು ಆ ಫಿಲಿಷ್ಟಿಯನೊಡನೆ ಯುದ್ಧಮಾಡಲು ಹೊರಟಿದ್ದನ್ನು ಸೌಲನು ನೋಡಿದನು. ತನ್ನ ಸೇನಾಪತಿಯಾದ ಅಬ್ನೇರನನ್ನು ಉದ್ದೇಶಿಸಿ, “ಅಬ್ನೇರನೇ, ಈ ತರುಣ ಯಾರ ಮಗ?” ಎಂದು ವಿಚಾರಿಸಿದನು. ಅದಕ್ಕೆ ಅಬ್ನೇರನು, “ಅರಸರೇ, ತಮ್ಮ ಜೀವದಾಣೆ, ನನಗೆ ಗೊತ್ತಿಲ್ಲ,” ಎಂದು ಉತ್ತರಕೊಟ್ಟನು.


ಗಾದ್ಯರ ಸೊತ್ತಿನಿಂದ ಕೊಲೆಮಾಡಿದವನಿಗೆ ಆಶ್ರಯ ನಗರವಾಗಿರುವ ಗಿಲ್ಯಾದಿನ ರಾಮೋತ್, ಮಹನಯಿಮ್,


ಯೆಹೂದ್ಯರು ನನ್ನನ್ನು ಅಭಿಷೇಕಿಸಿ ತಮ್ಮ ಅರಸನನ್ನಾಗಿ ಮಾಡಿಕೊಂಡಿದ್ದಾರೆ. ಆದುದರಿಂದ ಸೌಲನು ಸತ್ತುಹೋಗಿದ್ದರೂ ನೀವು ಶೂರರಾಗಿರಿ; ನಿಮ್ಮ ಕೈಗಳು ಜೋಲುಬೀಳದಿರಲಿ,” ಎಂದು ಹೇಳಿಸಿದನು.


ಅಬ್ನೇರನೂ ಅವನ ಜನರೂ ಅರಾಬಾ ಕಣಿವೆಯಲ್ಲಿ ರಾತ್ರಿಯೆಲ್ಲಾ ಪ್ರಯಾಣಮಾಡಿ ಜೋರ್ಡನ್ ನದಿದಾಟಿ ಬಿಥ್ರೋನ್ ಕಣಿವೆಯನ್ನು ಹಾಯ್ದು ಮಹನಯಿಮಿಗೆ ಸೇರಿದರು.


ಸೌಲನ ಸೇನೆಗೂ ದಾವೀದನ ಸೇನೆಗೂ ಯುದ್ಧ ನಡೆಯುತ್ತಿದ್ದಾಗ ಸೌಲನ ವಂಶದವರಲ್ಲಿ ಅಬ್ನೇರನೇ ಪ್ರಬಲನಾಗಿದ್ದನು.


ದಾವೀದನು ಮಹನಯಿಮಿಗೆ ಹೋದನು. ಇಸ್ರಯೇಲರನ್ನೆಲ್ಲಾ ಕೂಡಿಸಿಕೊಂಡು ಅಬ್ಷಾಲೋಮನು ಜೋರ್ಡನ್ ನದಿ ದಾಟಿದನು.


ಸೌಲನ ಸಂಬಂಧಿಕರಾದ ಬೆನ್ಯಾಮೀನ್ ಗೋತ್ರದಿಂದ: 3,000 ಸೈನಿಕರು;


ಬಳಿಕ ಯಕೋಬನು ಎದೋಮ್ಯರ ನಾಡಿನ ‘ಸೇಯೀರ್’ ಎಂಬಲ್ಲಿ ವಾಸವಾಗಿದ್ದ ತನ್ನ ಅಣ್ಣ ಏಸಾವನ ಬಳಿಗೆ ಮುಂದಾಳುಗಳನ್ನು ಕಳಿಸಿದನು.


ಅರಸನು ತನ್ನ ಸೇವಕರಿಗೆ, “ಈ ದಿನ ಇಸ್ರಯೇಲರಲ್ಲಿ ಹತನಾದವನು ಒಬ್ಬ ಶ್ರೇಷ್ಠನಾಯಕ ಹಾಗು ಮಹಾಪುರುಷ ಆಗಿದ್ದನೆಂಬುದು ನಿಮಗೆ ಗೊತ್ತಿದೆ.


ಎಫ್ರಯಿಮ್ ಗೋತ್ರದಿಂದ: 20,800 ಮಹಾರಣವೀರರು;


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು