Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 19:22 - ಕನ್ನಡ ಸತ್ಯವೇದವು C.L. Bible (BSI)

22 ಅದಕ್ಕೆ ದಾವೀದನು, “ಚೆರೂಯಳ ಮಕ್ಕಳೇ, ನನಗೆ ನಿಮ್ಮ ಗೊಡವೆಯೇ ಬೇಡ; ನೀವು ಈ ದಿನ ನನ್ನನ್ನು ಆ ಕೃತ್ಯಕ್ಕೆ ಪ್ರೇರಿಸುವವರಾಗಿದ್ದೀರಿ. ಇಂಥ ದಿನದಲ್ಲಿ ಇಸ್ರಯೇಲರಲ್ಲಿ ಒಬ್ಬನಿಗೆ ಮರಣದಂಡನೆ ಆಗುವುದು ಸರಿಯೇ? ನಾನು ಇಸ್ರಯೇಲರ ಅರಸನೆಂಬುವುದು ಈ ದಿನ ಸ್ಪಷ್ಟವಾಗಿ ಗೊತ್ತಾಯಿತು,” ಎಂದು ನುಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಅದಕ್ಕೆ ದಾವೀದನು, “ಚೆರೂಯಳ ಮಕ್ಕಳೇ, ನನಗೆ ನಿಮ್ಮ ಗೊಡವೆಯೇ ಬೇಡ, ನೀವು ನನಗೆ ಯಾಕೆ ಶತ್ರುಗಳಾಗಬೇಕು? ಈ ದಿನದಲ್ಲಿ ಇಸ್ರಾಯೇಲ್ಯರಲ್ಲಿ ಒಬ್ಬನಿಗೆ ಮರಣದಂಡನೆಯಾಗುವುದು ಸರಿಯೋ? ನಾನು ಇಸ್ರಾಯೇಲರ ಅರಸನೆಂಬುದು ಈಹೊತ್ತು ಸ್ಪಷ್ಟವಾಗಿ ಗೊತ್ತಾಯಿತು” ಎಂದು ನುಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಅದಕ್ಕೆ ದಾವೀದನು - ಚೆರೂಯಳ ಮಕ್ಕಳೇ, ನನಗೆ ನಿಮ್ಮ ಗೊಡವೆಯೇ ಬೇಡ; ನೀವು ಈಹೊತ್ತು ನನ್ನನ್ನು ಅಕೃತ್ಯಕ್ಕೆ ಪ್ರೇರಿಸುವವರಾಗಿದ್ದೀರಿ. ಇಂಥ ದಿವಸದಲ್ಲಿ ಇಸ್ರಾಯೇಲ್ಯರಲ್ಲಿ ಒಬ್ಬನಿಗೆ ಮರಣದಂಡನೆಯಾಗುವದು ಸರಿಯೋ? ನಾನು ಇಸ್ರಾಯೇಲ್ಯರ ಅರಸನೆಂಬದು ಈಹೊತ್ತು ಸ್ಪಷ್ಟವಾಗಿ ಗೊತ್ತಾಯಿತು ಎಂದು ನುಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ದಾವೀದನು, “ಚೆರೂಯಳ ಮಕ್ಕಳೇ, ನಾನು ನಿಮಗೆ ಏನು ಮಾಡಲಿ? ನೀವಿಂದು ನನಗೆ ವಿರುದ್ಧರಾಗಿರುವಿರಿ. ವಿಶೇಷವಾದ ಈ ದಿನದಲ್ಲಿ ಒಬ್ಬ ಇಸ್ರೇಲನನ್ನು ಸಾವಿಗೆ ಗುರಿಮಾಡುವುದು ಸರಿಯಾಗಿರುವುದೇ? ಇಸ್ರೇಲಿನಲ್ಲಿ ಈ ದಿನ ನಾನು ಇಸ್ರೇಲಿಗೆಲ್ಲ ರಾಜನೆಂಬುದು ನನಗೆ ತಿಳಿದಿದೆ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಆದರೆ ದಾವೀದನು, “ಚೆರೂಯಳ ಮಕ್ಕಳೇ, ಈ ಹೊತ್ತು ನೀವು ನನಗೆ ಶತ್ರುಗಳಾಗಿರುವ ಹಾಗೆ ನಿಮ್ಮೊಂದಿಗೆ ನನಗೆ ಏನು? ಈ ಹೊತ್ತು ಇಸ್ರಾಯೇಲಿನಲ್ಲಿ ಯಾರಿಗೂ ಮರಣದಂಡನೆ ಆಗಬಾರದು, ಏಕೆಂದರೆ ಈ ಹೊತ್ತು ನಾನು ಇಸ್ರಾಯೇಲಿನ ಮೇಲೆ ಅರಸನಾಗಿದ್ದೇನೆಂದು ಗೊತ್ತಾಯಿತಲ್ಲಾ?” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 19:22
11 ತಿಳಿವುಗಳ ಹೋಲಿಕೆ  

ಅದಕ್ಕೆ ಅರಸನು, “ಚೆರೂಯಳ ಮಕ್ಕಳೇ, ನನಗೆ ನಿಮ್ಮ ಗೊಡವೆಯೇ ಬೇಡ; ಬಿಡಿ, ಅವನು ಶಪಿಸಲಿ; ದಾವೀದನನ್ನು ಶಪಿಸೆಂದು ಸರ್ವೇಶ್ವರಸ್ವಾಮಿಯೇ ಅವನಿಗೆ ಆಜ್ಞಾಪಿಸಿದ ಮೇಲೆ ‘ನೀನು ಹೀಗೇಕೆ ಮಾಡಿದೆ’ ಎಂದು ಅವನನ್ನು ಯಾರು ಕೇಳಲಾದೀತು?” ಎಂದು ಉತ್ತರಕೊಟ್ಟನು.


“ಸರ್ವೇಶ್ವರ ಈ ದಿನ ಇಸ್ರಯೇಲರಿಗೆ ಜಯವನ್ನುಂಟುಮಾಡಿರುವರು. ಆದ್ದರಿಂದ ಯಾರನ್ನೂ ಕೊಲ್ಲಬಾರದು,” ಎಂದು ಹೇಳಿದನು.


ನಾನು ರಾಜಾಭಿಷೇಕ ಹೊಂದಿದ್ದರೂ ಈಗ ಏನೂ ಮಾಡಲು ಅಶಕ್ತನಾಗಿದ್ದೇನೆ. ಚೆರೂಯಳ ಮಕ್ಕಳಾದ ಇವರು ನನ್ನ ಹತೋಟಿಗೆ ಬಾರದವರು. ಸರ್ವೇಶ್ವರನೇ ಕೆಡುಕರಿಗೆ ಮುಯ್ಯಿತೀರಿಸಲಿ,” ಎಂದು ಹೇಳಿದನು.


ಅವರು ಯೇಸುವನ್ನು ನೋಡಿದೊಡನೆಯೇ, “ಓ ದೇವರ ಪುತ್ರನೇ, ನಿಮಗೇಕೆ ನಮ್ಮ ಗೊಡವೆ? ನಿಯಮಿತಕಾಲಕ್ಕೆ ಮುಂಚೆಯೇ ನಮ್ಮನ್ನು ಪೀಡಿಸಲು ಬಂದಿರಾ?” ಎಂದು ಕೂಗಿಕೊಂಡರು.


ಸ್ಥಾಪಿತವಾಗುವುದಾಗ ಅಚಲ ಒಲವಿನ ಸಿಂಹಾಸನವು, ಅದನಲಂಕರಿಸುವನು ಪ್ರಾಮಾಣಿಕ ದಾವೀದ ವಂಶಜನು. ದೊರಕಿಸುವನಾತ ನ್ಯಾಯನೀತಿಯನು, ಶೀಘ್ರದಲೆ ನೆರವೇರಿಸುವನು ಸರಿಕಂಡದುದನು.”


ಅಬೀಷೈಯು ದಾವೀದನಿಗೆ, “ದೇವರು ಈ ದಿನ ನಿನ್ನ ವೈರಿಯನ್ನು ನಿನ್ನ ಕೈಗೆ ಒಪ್ಪಿಸಿಕೊಟ್ಟಿದ್ದಾರೆ; ಅಪ್ಪಣೆಯಾಗಲಿ, ನಾನು ಭರ್ಜಿಯಿಂದ ಒಂದೇ ಪೆಟ್ಟಿನಲ್ಲಿ ಅವನನ್ನು ನೆಲಕ್ಕೆ ಕಚ್ಚಿಕೊಳ್ಳುವಂತೆ ತಿವಿಯುತ್ತೇನೆ. ಎರಡನೆಯ ಸಾರಿ ಹೊಡೆಯುವ ಅವಶ್ಯಕತೆ ಇರುವುದಿಲ್ಲ,” ಎಂದು ಹೇಳಿದನು.


ಆಗ ಚೆರೂಯಳ ಮಗ ಅಬೀಷೈಯು ಅರಸನಿಗೆ, “ಈ ಸತ್ತನಾಯಿ ಅರಸನಾದ ನನ್ನ ಒಡೆಯರನ್ನು ಶಪಿಸುವುದೇನು? ಅಪ್ಪಣೆಯಾಗಲಿ, ನಾನು ಅವನಿರುವಲ್ಲಿಗೇ ಹೋಗಿ, ಅವನ ತಲೆ ಹಾರಿಸಿಕೊಂಡು ಬರುತ್ತೇನೆ,” ಎಂದನು.


ಆದರೆ ದಾವೀದನು, “ಅವನನ್ನು ಕೊಲ್ಲಬೇಡ; ಸರ್ವೇಶ್ವರನ ಅಭಿಷಿಕ್ತನಿಗೆ ವಿರೋಧವಾಗಿ ಕೈಯೆತ್ತುವ ಯಾವನೂ ನಿರಪರಾಧಿ ಎಂದು ಎಣಿಸಲ್ಪಡನು,” ಎಂದನು.


ತಮ್ಮ ಅಭಿಷಿಕ್ತನಿಗೆ ವಿರೋಧವಾಗಿ ಕೈಯೆತ್ತದಂತೆ ಸರ್ವೇಶ್ವರನೇ ನನ್ನನ್ನು ತಡೆಯಲಿ. ಈಗ ಬಾ, ಅವನ ತಲೆಯ ಬಳಿಯಲ್ಲಿರುವ ಭರ್ಜಿಯನ್ನೂ ತಂಬಿಗೆಯನ್ನೂ ತೆಗೆದುಕೊಂಡು ಹೋಗೋಣ,” ಎಂದು ಹೇಳಿದನು.


ಅರಸನಾದ ದಾವೀದನು ಬಹುರೀಮಿಗೆ ಬಂದಾಗ ಸೌಲನ ವಂಶದವನೂ ಗೇರನ ಮಗನೂ ಆದ ಶಿಮ್ಮೀ ಎಂಬವನು ದಾವೀದನನ್ನು ಶಪಿಸುತ್ತಾ ಆ ಊರಿನಿಂದ ಹೊರಗೆ ಬಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು