Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 14:24 - ಕನ್ನಡ ಸತ್ಯವೇದವು C.L. Bible (BSI)

24 ಆದರೆ ಅರಸನು, “ಅಬ್ಷಾಲೋಮನು ತನ್ನ ಮನೆಗೆ ಹೋಗಲಿ; ಅವನು ನನ್ನ ಮುಖವನ್ನು ನೋಡಬಾರದು,” ಎಂದು ಆಜ್ಞಾಪಿಸಿದನು. ಆದ್ದರಿಂದ ಅವನು ತನ್ನ ಮನೆಗೆ ಹೋದನು. ಅರಸನ ಮುಖವನ್ನು ನೋಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಆದರೆ ಅರಸನು, “ಅಬ್ಷಾಲೋಮನು ತನ್ನ ಮನೆಗೆ ಹೋಗಲಿ, ಅವನು ನನ್ನ ಮುಖವನ್ನು ನೋಡಬಾರದು” ಎಂದು ಆಜ್ಞಾಪಿಸಿದ್ದರಿಂದ ಅವನು ತನ್ನ ಮನೆಗೆ ಹೋದನು. ಅರಸನ ಮುಖವನ್ನು ನೋಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಆದರೆ ಅರಸನು - ಅಬ್ಷಾಲೋಮನು ತನ್ನ ಮನೆಗೆ ಹೋಗಲಿ; ಅವನು ನನ್ನ ಮುಖವನ್ನು ನೋಡಬಾರದು ಎಂದು ಆಜ್ಞಾಪಿಸಿದ್ದರಿಂದ ಅವನು ತನ್ನ ಮನೆಗೆ ಹೋದನು; ಅರಸನ ಮುಖವನ್ನು ನೋಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ಆದರೆ ರಾಜನಾದ ದಾವೀದನು, “ಅಬ್ಷಾಲೋಮನು ತನ್ನ ಸ್ವಂತ ಮನೆಗೆ ಹಿಂದಿರುಗಿ ಹೋಗಲಿ. ಅವನು ನನ್ನನ್ನು ನೋಡಲು ಬರುವುದು ಬೇಡ” ಎಂದನು. ಆದ್ದರಿಂದ ಅಬ್ಷಾಲೋಮನು ತನ್ನ ಸ್ವಂತ ಮನೆಗೆ ಹಿಂದಿರುಗಿಹೋದನು. ಅಬ್ಷಾಲೋಮನು ರಾಜನನ್ನು ನೋಡಲು ಹೋಗಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಆದರೆ ಅರಸನು, “ಅವನು ತನ್ನ ಮನೆಗೆ ತಿರುಗಿ ಹೋಗಲಿ. ಅವನು ನನ್ನ ಮುಖವನ್ನು ನೋಡಬಾರದು,” ಎಂದನು. ಆದ್ದರಿಂದ ಅಬ್ಷಾಲೋಮನು ಅರಸನ ಮುಖವನ್ನು ನೋಡದೆ ತನ್ನ ಮನೆಗೆ ತಿರುಗಿಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 14:24
6 ತಿಳಿವುಗಳ ಹೋಲಿಕೆ  

ಆ ಹೆಸರು ಆ ದಾಸರ ಹಣೆಗಳ ಮೇಲೆ ಲಿಖಿತವಾಗಿರುವುದು.


ಅಬ್ಷಾಲೋಮನು ಅರಸನ ಮುಖವನ್ನು ನೋಡದೆ ಎರಡು ವರ್ಷ ಜೆರುಸಲೇಮಿನಲ್ಲಿ ವಾಸವಾಗಿದ್ದನು.


ಅದಕ್ಕೆ ದಾವೀದನು, “ಒಳ್ಳೆಯದು, ನಿನ್ನ ಸಂಗಡ ಒಪ್ಪಂದಮಾಡಿಕೊಳ್ಳುತ್ತೇನೆ; ಆದರೆ ನೀನು ಒಂದು ಕಾರ್ಯವನ್ನು ಮಾಡಬೇಕು; ನನ್ನನ್ನು ನೋಡುವುದಕ್ಕೆ ಬರುವಾಗ ಸೌಲನ ಮಗಳಾದ ಮೀಕಲಳನ್ನು ಕರೆದುಕೊಂಡು ಬರಬೇಕು. ಹಾಗೆ ಕರೆದುಕೊಂಡು ಬಾರದಿದ್ದರೆ ನೀನು ನನ್ನ ಮುಖವನ್ನು ನೋಡಕೂಡದು,” ಎಂದು ಉತ್ತರಕೊಟ್ಟನು.


ಅವನು ಮೋಶೆಗೆ, “ಇಲ್ಲಿಂದ ಹೊರಡು; ಇನ್ನು ಮುಂದೆ ನನ್ನ ಸಮ್ಮುಖಕ್ಕೆ ಬರಲೇ ಬೇಡ, ಎಚ್ಚರಿಕೆ! ತಿರುಗಿ ಬಂದೆಯಾದರೆ ಮರಣದಂಡನೆ ಆಗುವುದು,” ಎಂದು ಹೇಳಿದನು.


ಅದಕ್ಕೆ ಯೆಹೂದನು ಹೀಗೆಂದನು: “ಆ ಮನುಷ್ಯ ನಮಗೆ, ‘ನಿಮ್ಮ ತಮ್ಮನನ್ನು ಕರೆದುಕೊಂಡು ಬಂದ ಹೊರತು ನನ್ನ ದರ್ಶನಕ್ಕೆ ಬರಕೂಡದು’ ಎಂದು ಕಡುಖಂಡಿತವಾಗಿ ಹೇಳಿಬಿಟ್ಟಿದ್ದಾನೆ.


ಆಕೆಯ ಸಹೋದರನಾದ ಅಬ್ಷಾಲೋಮನು ಆಕೆಯನ್ನು ಕಂಡು, “ನಿನ್ನ ಅಣ್ಣ ಅಮ್ನೋನನು ನಿನ್ನ ಮಾನಭಂಗ ಮಾಡಿದನೇ? ನನ್ನ ತಂಗೀ, ತಕ್ಷಣಕ್ಕೆ ಸುಮ್ಮನಿರು; ಅವನು ನಿನ್ನ ಅಣ್ಣನಲ್ಲವೇ? ಈ ವಿಷಯವನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡ,” ಎಂದು ಹೇಳಿದನು. ತಾಮಾರಳು ಒಂಟಿಗಳಾಗಿ ತನ್ನ ಅಣ್ಣನಾದ ಅಬ್ಷಾಲೋಮನ ಮನೆಯಲ್ಲೇ ವಾಸಿಸಿದಳು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು