Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 13:22 - ಕನ್ನಡ ಸತ್ಯವೇದವು C.L. Bible (BSI)

22 ಅಬ್ಷಾಲೋಮನು ಅಮ್ನೋನನ ಸಂಗಡ ಒಳ್ಳೇಮಾತನ್ನಾಗಲಿ ಕೆಟ್ಟಮಾತನ್ನಾಗಲಿ ಆಡಲಿಲ್ಲ. ತನ್ನ ತಂಗಿಯಾದ ತಾಮಾರಳನ್ನು ಕೆಡಿಸಿದ್ದಕ್ಕಾಗಿ ಅವನು ಅಮ್ನೋನನನ್ನು ದ್ವೇಷಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಅಬ್ಷಾಲೋಮನು ಅಮ್ನೋನನ ಸಂಗಡ ಒಳ್ಳೆಯ ಮಾತುಗಳನ್ನಾಗಲಿ ಕೆಟ್ಟ ಮಾತುಗಳನ್ನಾಗಲಿ ಆಡಲಿಲ್ಲ. ತನ್ನ ತಂಗಿಯಾದ ತಾಮಾರಳನ್ನು ಕೆಡಿಸಿದ್ದಕ್ಕಾಗಿ ಅವನು ಅಮ್ನೋನನನ್ನು ದ್ವೇಷಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಅಬ್ಷಾಲೋಮನು ಅಮ್ನೋನನ ಸಂಗಡ ಒಳ್ಳೇ ಮಾತನ್ನಾಗಲಿ ಕೆಟ್ಟ ಮಾತನ್ನಾಗಲಿ ಆಡಲಿಲ್ಲ. ತನ್ನ ತಂಗಿಯಾದ ತಾಮಾರಳನ್ನು ಕೆಡಿಸಿದ್ದಕ್ಕಾಗಿ ಅವನು ಅಮ್ನೋನನನ್ನು ದ್ವೇಷಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಅಬ್ಷಾಲೋಮನು ಅಮ್ನೋನನನ್ನು ದ್ವೇಷಿಸಿದನು. ಅಬ್ಷಾಲೋಮನು ಒಳ್ಳೆಯದನ್ನಾಗಲಿ ಕೆಟ್ಟದ್ದನ್ನಾಗಲಿ ಏನನ್ನೂ ಅಮ್ನೋನನಿಗೆ ಹೇಳಲಿಲ್ಲ. ಅಮ್ನೋನನು ತನ್ನ ತಂಗಿಯಾದ ತಾಮಾರಳನ್ನು ಕೆಡಿಸಿದ್ದಕ್ಕಾಗಿ ಅಬ್ಷಾಲೋಮನು ಅಮ್ನೋನನನ್ನು ದ್ವೇಷಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಆದರೆ ಅಬ್ಷಾಲೋಮನು ತನ್ನ ಸಹೋದರನಾದ ಅಮ್ನೋನನ ಸಂಗಡ ಒಳ್ಳೆಯದಾದರೂ, ಕೆಟ್ಟದ್ದಾದರೂ ಮಾತನಾಡದೆ ಇದ್ದನು. ಏಕೆಂದರೆ ಅವನು ತನ್ನ ಸಹೋದರಿಯಾದ ತಾಮಾರಳನ್ನು ಅವಮಾನ ಮಾಡಿದ್ದರಿಂದ, ಅಬ್ಷಾಲೋಮನು ಅವನನ್ನು ಹಗೆ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 13:22
19 ತಿಳಿವುಗಳ ಹೋಲಿಕೆ  

ಆ ರಾತ್ರಿಯಲ್ಲಿ ದೇವರು ಆರಾಮ್ಯನಾದ ಲಾಬಾನನಿಗೆ ಕನಸಿನಲ್ಲಿ ಕಾಣಿಸಿಕೊಂಡು, “ಎಚ್ಚರಿಕೆ, ಯಕೋಬನಿಗೆ ನೀನು ಯಾವ ಬೆದರಿಕೆಯನ್ನೂ ಹಾಕಬೇಡ!” ಎಂದು ಇದ್ದರು.


ತನ್ನ ಸಹೋದರರನ್ನು ದ್ವೇಷಿಸುವವನು ಕೊಲೆಗಾರನೇ ಹೌದು. ಯಾವ ಕೊಲೆಗಾರನಲ್ಲೂ ನಿತ್ಯಜೀವ ಇರದೆಂದು ನೀವು ಬಲ್ಲಿರಿ.


ಅದಕ್ಕೆ ಲಾಬಾನನು ಮತ್ತು ಬೆತೂವೇಲನು, ” ಇದು ಸರ್ವೇಶ್ವರ ಸ್ವಾಮಿಯಿಂದಲೇ ಬಂದ ಸೂಚನೆ, ಇದಕ್ಕೆ ನಾವು ನಿನಗೆ 'ಹೌದು - ಇಲ್ಲ’ ಎಂದು ಹೇಳಲಾಗದು.


ತನ್ನ ಸಹೋದರನನ್ನು ದ್ವೇಷಿಸುವವನು ಕತ್ತಲಲ್ಲಿ ಇದ್ದಾನೆ; ಕತ್ತಲಲ್ಲೇ ನಡೆಯುತ್ತಾನೆ. ಕತ್ತಲು ಅವನನ್ನು ಕುರುಡಾಗಿಸಿರುವುದರಿಂದ ಎತ್ತ ಹೋಗುತ್ತಿದ್ದಾನೆಂದು ಅವನಿಗೇ ತಿಳಿಯದು.


“ನಾನು ಬೆಳಕಿನಲ್ಲಿದ್ದೇನೆ” ಎಂದು ಹೇಳಿಕೊಂಡು ತನ್ನ ಸಹೋದರನನ್ನು ದ್ವೇಷಿಸುವವನು ಇನ್ನೂ ಕತ್ತಲಲ್ಲೇ ಇದ್ದಾನೆ.


ಎಲ್ಲ ವಿಧವಾದ ದ್ವೇಷ-ದೂಷಣೆ, ಕೋಪ-ಕ್ರೋಧ ಮತ್ತು ಕೆಡುಕುತನವನ್ನು ನಿಮ್ಮಿಂದ ದೂರಮಾಡಿರಿ.


ಕೋಪಮಾಡಬೇಕಾಗಿ ಬಂದರೂ ಪಾಪಮಾಡಬೇಡಿರಿ; ಸೂರ್ಯನು ಮುಳುಗುವ ಮುನ್ನ ನಿಮ್ಮ ಕೋಪವು ಇಳಿಯಲಿ.


“ನಿನ್ನ ಸೋದರನು ನಿನಗೆ ಅಪರಾಧಮಾಡಿದರೆ, ನೀನು ಹೋಗಿ ನೀವಿಬ್ಬರೇ ಇರುವಾಗ, ಅವನ ತಪ್ಪನ್ನು ಮನಗಾಣಿಸು. ಅವನು ನಿನಗೆ ಕಿವಿಗೊಟ್ಟರೆ ಅವನ ಸೋದರತ್ವವನ್ನು ನೀನು ಮತ್ತೆ ಗಳಿಸಿಕೊಂಡಂತಾಗುವುದು.


ತವಕಬೇಡ ಕೋಪಮಾಡಲಿಕ್ಕೆ; ಕೋಪಕ್ಕೆ ನೆಲೆ ಮೂಢನ ಎದೆ.


ಹಗೆಗಾರನ ತುಟಿಯಲ್ಲಿ ಸ್ನೇಹಭಾವದ ನಟನೆ; ಹೊಟ್ಟೆಯಲ್ಲಾದರೊ ಹುದುಗಿದೆ ವಂಚನೆ.


ವ್ಯಾಜ್ಯವನ್ನು ನೆರೆಯವನ ಸಂಗಡವೆ ಚರ್ಚಿಸಿ ತೀರ್ಮಾನಿಸಿಕೊ; ನೆರೆಹೊರೆಯವರ ಗುಟ್ಟನ್ನು ಬಯಲು ಮಾಡಬೇಡ.


ಹೊಟ್ಟೆಯಲ್ಲಿ ಹಗೆ ಇಟ್ಟುಕೊಳ್ಳುವವನು ಸಟೆಗಾರ; ಚಾಡಿ ಹೇಳಿ ಕೇಡುಮಾಡುವುದು ಮೂರ್ಖತನ.


ನಿಮಗೆ ಹಾನಿಮಾಡುವ ಸಾಮರ್ಥ್ಯ ನನಗಿದೆ. ಆದರೆ ಕಳೆದ ರಾತ್ರಿ ನಿಮ್ಮ ತಂದೆಯ ದೇವರು, “ಯಕೋಬನಿಗೆ ಯಾವ ಬೆದರಿಕೆಯನ್ನೂ ಹಾಕಬೇಡ, ಎಚ್ಚರಿಕೆ!” ಎಂದು ತಿಳಿಸಿದರು.


ಸನ್ಮಾರ್ಗದಲ್ಲಿ ನಡೆಯದವನೂ ಸಹೋದರನನ್ನು ಪ್ರೀತಿಸದವನೂ ದೇವರಿಂದ ಜನಿಸಿದವನಲ್ಲ. ಹೀಗೆ ದೇವರ ಮಕ್ಕಳು ಯಾರು ಮತ್ತು ಸೈತಾನನ ಮಕ್ಕಳು ಯಾರು ಎಂಬುದನ್ನು ತಿಳಿಯಬಹುದು.


ತನ್ನ ಸಹೋದರನನ್ನೇ ಕೊಂದ ಕಾಯಿನನಂತೆ ನಾವು ಇರಬಾರದು. ಅವನು ಕಡುಕೇಡಿಗನ ಕುವರ. ಅವನು ಕೊಂದುದಾದರೂ ಏಕೆ? ತನ್ನ ಕೃತ್ಯಗಳು ದುಷ್ಟವಾಗಿದ್ದು ತನ್ನ ಸಹೋದರನ ಕೃತ್ಯಗಳು ಧರ್ಮಿಷ್ಠವಾಗಿದ್ದುದರಿಂದ ಅಲ್ಲವೇ?


ಅರಸನಾದ ದಾವೀದನು ಈ ಸಂಗತಿಯನ್ನು ಕೇಳಿ ಬಹಳವಾಗಿ ಕೋಪಗೊಂಡನು.


ಹಗೆಯನ್ನು ವಂಚನೆಯಿಂದ ಮರೆಮಾಚಿದ್ದರೂ ಸಭೆಯಲ್ಲಿ ಕೆಟ್ಟತನ ಬಟ್ಟಬಯಲಾಗದಿರದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು