Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 12:24 - ಕನ್ನಡ ಸತ್ಯವೇದವು C.L. Bible (BSI)

24 ದಾವೀದನು ತನ್ನ ಹೆಂಡತಿ ಬತ್ಷೆಬೆಯ ಬಳಿಗೆ ಹೋಗಿ ಆಕೆಯನ್ನು ಸಂತೈಸಿ ಆಕೆಯ ಸಂಗಡ ಮಲಗಿದನು. ಆಕೆ ಮಗನನ್ನು ಹೆತ್ತಾಗ ಅವನಿಗೆ ಸೊಲೊಮೋನೆಂದು ಹೆಸರಿಟ್ಟನು. ಸರ್ವೇಶ್ವರಸ್ವಾಮಿ ಆ ಹುಡುಗನನ್ನು ಪ್ರೀತಿಸಿದರು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ದಾವೀದನು ತನ್ನ ಹೆಂಡತಿಯಾದ ಬತ್ಷೆಬೆಯ ಬಳಿಗೆ ಹೋಗಿ ಆಕೆಯನ್ನು ಸಂತೈಸಿ ಆಕೆಯ ಸಂಗಡ ಮಲಗಿದನು. ಆಕೆಯು ಒಬ್ಬ ಮಗನನ್ನು ಹೆತ್ತಾಗ ದಾವೀದನು ಅವನಿಗೆ “ಸೊಲೊಮೋನನು” ಎಂದು ಹೆಸರಿಟ್ಟನು. ಯೆಹೋವನು ಅವನನ್ನು ಪ್ರೀತಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ದಾವೀದನು ತನ್ನ ಹೆಂಡತಿಯಾದ ಬತ್ಷೆಬೆಯ ಬಳಿಗೆ ಹೋಗಿ ಆಕೆಯನ್ನು ಸಂತೈಸಿ ಆಕೆಯ ಸಂಗಡ ಮಲಗಿದನು. ಆಕೆ ಮಗನನ್ನು ಹೆತ್ತಾಗ ಅವನಿಗೆ ಸೊಲಮೋನನೆಂದು ಹೆಸರಿಟ್ಟನು. ಯೆಹೋವನು ಹುಡುಗನನ್ನು ಪ್ರೀತಿಸಿದನು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ನಂತರ ದಾವೀದನು ತನ್ನ ಪತ್ನಿಯಾದ ಬತ್ಷೆಬೆಳನ್ನು ಸಂತೈಸಿ ಅವಳೊಂದಿಗೆ ಮಲಗಿಕೊಂಡನು. ಬತ್ಷೆಬೆಳು ಮತ್ತೆ ಗರ್ಭಿಣಿಯಾದಳು. ಅವಳಿಗೆ ಮತ್ತೊಂದು ಗಂಡು ಮಗುವಾಯಿತು. ಆ ಮಗುವಿಗೆ ಸೊಲೊಮೋನ್ ಎಂದು ದಾವೀದನು ಹೆಸರಿಟ್ಟನು. ಯೆಹೋವನು ಸೊಲೊಮೋನನನ್ನು ಪ್ರೀತಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ದಾವೀದನು ತನ್ನ ಹೆಂಡತಿಯಾದ ಬತ್ಷೆಬೆಳನ್ನು ಆಧರಿಸಿ, ಅವಳ ಬಳಿಗೆ ಹೋಗಿ ಅವಳ ಸಂಗಡ ಮಲಗಿದನು. ಅವಳು ಒಬ್ಬ ಮಗನನ್ನು ಹೆತ್ತಳು. ಅವನಿಗೆ ಸೊಲೊಮೋನನೆಂದು ಹೆಸರಿಟ್ಟನು. ಯೆಹೋವ ದೇವರು ಅವನನ್ನು ಪ್ರೀತಿ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 12:24
13 ತಿಳಿವುಗಳ ಹೋಲಿಕೆ  

ಜೆಸ್ಸೆಯನಿಗೆ ದಾವೀದರಸನು ಹುಟ್ಟಿದರು. ದಾವೀದನಿಗೆ ಊರಿಯನ ಹೆಂಡತಿಯಿಂದ ಸೊಲೊಮೋನ್,


ತರುವಾಯ ಅರಸ ದಾವೀದನು, “ದೇವರು ನನ್ನ ಮಗ ಸೊಲೊಮೋನನನ್ನೇ ಆರಿಸಿಕೊಂಡಿದ್ದಾರೆ. ಆದರೆ ಅವನು ಇನ್ನೂ ಚಿಕ್ಕವನು. ಮಾಡತಕ್ಕ ಕೆಲಸವೋ ವಿಶೇಷವಾದದ್ದು. ಕಟ್ಟ ತಕ್ಕ ಮಂದಿರ ದೇವರಾದ ಸರ್ವೇಶ್ವರನಿಗಾಗಿ!


ಅಲ್ಲಿ ಅವನಿಗೆ ಅನೇಕ ಗಂಡುಮಕ್ಕಳು ಹುಟ್ಟಿದರು. ದಾವೀದನ ಹೆಂಡತಿ ಬತ್ಷೂವ ಅಮ್ಮೀಯೇಲನ ಮಗಳು. ಆಕೆ - ಶಿಮ್ಮ, ಶೋಬಾಬ್, ನಾತಾನ್, ಸೊಲೊಮೋನ್ ಎಂಬ ನಾಲ್ಕು ಜನ ಗಂಡುಮಕ್ಕಳಿಗೆ ಜನ್ಮವಿತ್ತಳು.


ನಿನ್ನ ಆಯುಷ್ಕಾಲ ಮುಗಿದು ನೀನು ನಿನ್ನ ಪೂರ್ವಜರನ್ನು ಸೇರಿ ವಿಶ್ರಮಿಸುವಾಗ ನಿನ್ನ ಮಕ್ಕಳಲ್ಲಿ ಒಬ್ಬನನ್ನು ನಿನಗೆ ಉತ್ತರಾಧಿಕಾರಿಯನ್ನಾಗಿ ನೇಮಿಸಿ ಅವನ ರಾಜ್ಯವನ್ನು ಸ್ಥಿರಪಡಿಸುವೆನು.


ಪ್ರವಾದಿ ನಾತಾನನು, ಸರ್ವೇಶ್ವರನಿಂದ ಪಡೆದ ಆಜ್ಞೆಯಂತೆ ಅವರಿಗೋಸ್ಕರ, ಆ ಹುಡುಗನಿಗೆ ‘ಯೆದೀದ್ಯ’ ಎಂದು ಹೆಸರಿಟ್ಟನು.


ಆದರೆ, ಪ್ರವಾದಿ ನಾತಾನನನ್ನಾಗಲಿ, ಬೆನಾಯನನ್ನಾಗಲಿ, ವಿಶೇಷ ಕಾವಲಾಳುಗಳನ್ನಾಗಲಿ, ತಮ್ಮನಾದ ಸೊಲೊಮೋನನನ್ನಾಗಲಿ ಕರೆಯಲಿಲ್ಲ.


ಆಗ ನಾತಾನನು ಸೊಲೊಮೋನನ ತಾಯಿಯಾದ ಬತ್ಷೆಬೆಗೆ, “ಹಗ್ಗೀತಳ ಮಗ ಅದೋನೀಯನು, ನಮ್ಮ ಒಡೆಯ ದಾವೀದರಿಗೆ ತಿಳಿಯದೆಯೇ ಅರಸನಾದನೆಂಬುದನ್ನು ನೀನು ಕೇಳಿರಬೇಕಲ್ಲವೆ?


“ಅಂಥ ಮಹಿಳೆಯರ ದೆಸೆ ಇಂದಲೇ ಇಸ್ರಯೇಲ್ ಅರಸ ಸೊಲೊಮೋನನು ದೋಷಿಯಾದ; ಅನೇಕಾನೇಕ ಜನಾಂಗಗಳಲ್ಲಿ ಅವನಿಗೆ ಸಮಾನನಾದ ಅರಸನಿರಲಿಲ್ಲ; ಅವನು ತನ್ನ ದೇವರಿಗೆ ವಿಶೇಷಪ್ರಿಯನು; ಆದುದರಿಂದಲೇ ದೇವರು ಅವನನ್ನು ಎಲ್ಲ ಇಸ್ರಯೇಲರ ಮೇಲೆ ಅರಸನನ್ನಾಗಿ ನೇಮಿಸಿದರು. ಆದರೂ ಅನ್ಯದೇಶದ ಮಹಿಳೆಯರು ಅವನನ್ನು ಪಾಪದಲ್ಲಿ ಬೀಳಿಸಿದರು.


ಬೆನ್ಯಾಮೀನ್ ಕುಲ ಕುರಿತು ಮೋಶೆ ನುಡಿದದ್ದು : “ಸರ್ವೇಶ್ವರನಿಗೆ ಪ್ರಿಯನಾದ ಇವನು ನಿರ್ಭಯವಾಗಿ ವಾಸಮಾಡುವನು. ಇವನನ್ನಾತ ತಬ್ಬಿರುವನು ದಿನವಿಡೀ ತನ್ನ ತೋಳತೆಕ್ಕೆಯಲಿ.”


ಅಲ್ಲಿ ಅವನಿಗೆ ಹುಟ್ಟಿದವರ ಹೆಸರುಗಳು ಇವು: ಶಮ್ಮೂವ, ಶೋಬಾಬ್, ನಾತಾನ್, ಸೊಲೊಮೋನ್,


ನಾನೂ ಕೂಡ ತಂದೆಗೆ ಒಬ್ಬ ಚಿಕ್ಕ ಮಗುವಾಗಿದ್ದೆ, ತಾಯಿಗೆ ಏಕೈಕ ಕುಮಾರನೂ ಕೋಮಲನೂ ಆಗಿದ್ದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು