2 ಸಮುಯೇಲ 11:20 - ಕನ್ನಡ ಸತ್ಯವೇದವು C.L. Bible (BSI)20 ಅರಸರು ಸಿಟ್ಟುಗೊಂಡು ನಿನ್ನನ್ನು, ‘ನೀವು ಯುದ್ಧಮಾಡುವುದಕ್ಕಾಗಿ ಪಟ್ಟಣದ ತೀರ ಸಮೀಪಕ್ಕೆ ಹೋದದ್ದೇಕೆ? ಶತ್ರುಗಳು ಊರುಗೋಡೆಯ ಮೇಲಿನಿಂದ ಏನನ್ನಾದರೂ ಬಿಸಾಡಬಹುದಿತ್ತಲ್ಲವೇ? ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201920 ‘ನೀವು ಯುದ್ಧ ಮಾಡುವುದಕ್ಕಾಗಿ ಪಟ್ಟಣದ ಸಮೀಪಕ್ಕೆ ಹೋದದ್ದೇಕೆ? ಶತ್ರುಗಳು ಊರಗೋಡೆಯ ಮೇಲಣಿಂದ ಬಾಣಗಳನ್ನು ಎಸೆಯುವರೆಂದು ನಿಮಗೆ ತಿಳಿದಿರಲಿಲ್ಲವೋ? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)20 ನೀವು ಯುದ್ಧಮಾಡುವದಕ್ಕಾಗಿ ಪಟ್ಟಣದ ಸಮೀಪಕ್ಕೆ ಹೋದದ್ದೇಕೆ? ಶತ್ರುಗಳು ಊರುಗೋಡೆಯ ಮೇಲಣಿಂದ ಏನಾದರೂ ಬೀಸಾಡಬಹುದಲ್ಲವೋ? ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್20 ರಾಜನು ತಳಮಳಗೊಂಡು, ‘ಯೋವಾಬನ ಸೈನ್ಯವು ಯುದ್ಧಮಾಡುವುದಕ್ಕಾಗಿ ನಗರದ ಹತ್ತಿರಕ್ಕೆ ಏಕೆ ಹೋಯಿತು? ನಗರದ ಗೋಡೆಗಳ ಮೇಲಿರುವ ಜನರು, ಕೆಳಗಿರುವ ಜನರ ಮೇಲೆ ಬಾಣಗಳನ್ನು ಪ್ರಯೋಗಿಸಬಲ್ಲರೆಂಬುದು ಅವನಿಗೆ ಖಂಡಿತವಾಗಿಯೂ ತಿಳಿದಿದೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ20 ಅರಸನಿಗೆ ಕೋಪ ಉರಿದು, ‘ನೀವು ಯುದ್ಧಮಾಡುವುದಕ್ಕೆ ಪಟ್ಟಣಕ್ಕೆ ಇಷ್ಟು ಸಮೀಪವಾಗಿ ಸೇರಿದ್ದೇನು? ಅಧ್ಯಾಯವನ್ನು ನೋಡಿ |
ಯೆರುಬ್ಬೆಷೆತನ ಮಗನಾದ ಅಬೀಮೆಲೆಕನನ್ನು ಕೊಂದವರಾರೆಂದು ನಿಮಗೆ ಗೊತ್ತಿಲ್ಲವೇ? ತೇಬೇಚಿನಲ್ಲಿ ಒಬ್ಬ ಹೆಂಗಸು ಗೋಡೆಯ ಮೇಲಿನಿಂದ ಒಂದು ಬೀಸುವ ಕಲ್ಲನ್ನು ಅವನ ಮೇಲೆ ಎತ್ತಿಹಾಕಿ ಅವನನ್ನು ಕೊಂದಳಲ್ಲವೇ? ಹೀಗಿರುವುದರಿಂದ ನೀವು ಗೋಡೆಯ ಸಮೀಪಕ್ಕೆ ಹೋದದ್ದೇಕೆ?’ ಎಂದು ಕೇಳಿದರೆ ನೀನು, ‘ಹಿತ್ತಿಯನಾದ ನಿಮ್ಮ ಸೇವಕ ಊರೀಯನೂ ಮೃತನಾದನೆಂದು ಹೇಳು,’ ಎಂಬುದಾಗಿ ಆಜ್ಞಾಪಿಸಿ ಕಳುಹಿಸಿದನು.