Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಸಮುಯೇಲ 10:6 - ಕನ್ನಡ ಸತ್ಯವೇದವು C.L. Bible (BSI)

6 ತಾವು ದಾವೀದನಿಗೆ ವೈರಿಗಳಾದೆವೆಂದು ಅಮ್ಮೋನಿಯರಿಗೆ ತಿಳಿಯಿತು. ಹಣಕೊಟ್ಟು ಬೇತ್ ರೆಹೋಬ್, ಚೋಬಾ ಎಂಬ ಪಟ್ಟಣಗಳಿಂದ ಸಿರಿಯಾದವರ ಇಪ್ಪತ್ತು ಸಾವಿರಮಂದಿ ಕಾಲಾಳುಗಳನ್ನು, ಮಾಕದ ರಾಜನಿಂದ ಸಾವಿರ ಮಂದಿ ಸೈನಿಕರನ್ನು ಹಾಗು ಟೋಬ್ ದೇಶದಿಂದ ಹನ್ನೆರಡು ಸಾವಿರ ಮಂದಿ ದಂಡಾಳುಗಳನ್ನೂ ಬರಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ತಾವು ದಾವೀದನ ಕೋಪಕ್ಕೂ, ಅಸಮಾಧಾನಕ್ಕೂ ಗುರಿಯಾಗಿದ್ದೇವೆ ಎಂದು ತಿಳಿದು ಅಮ್ಮೋನಿಯರು ಬೇತ್ ರೆಹೋಬ್ ಮತ್ತು ಚೋಬಾ ಎಂಬ ಪಟ್ಟಣಗಳಿಂದ ಅರಾಮ್ಯರ ಇಪ್ಪತ್ತು ಸಾವಿರ ಕಾಲಾಳುಗಳನ್ನೂ, ಮಾಕದ ರಾಜನಿಂದ ಸಾವಿರ ಮಂದಿ ಸೈನಿಕರನ್ನೂ ಮತ್ತು ಟೋಬ್ ದೇಶದಿಂದ ಹನ್ನೆರಡು ಸಾವಿರ ದಂಡಾಳುಗಳನ್ನೂ ಹಣಕೊಟ್ಟು ತರಿಸಿದನು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ತಾವು ದಾವೀದನಿಗೆ ಅಸಹ್ಯರಾದೆವೆಂದು ಅಮ್ಮೋನಿಯರು ತಿಳಿದು ಹಣಕೊಟ್ಟು ಬೇತ್‍ರೆಹೋಬ್, ಚೋಬಾ ಎಂಬ ಪಟ್ಟಣಗಳಿಂದ ಅರಾಮ್ಯರ ಇಪ್ಪತ್ತು ಸಾವಿರ ಮಂದಿ ಕಾಲಾಳುಗಳನ್ನೂ ಮಾಕದ ರಾಜನಿಂದ ಸಾವಿರ ಮಂದಿ ಸೈನಿಕರನ್ನೂ ಟೋಬ್ ದೇಶದಿಂದ ಹನ್ನೆರಡು ಸಾವಿರ ಮಂದಿ ದಂಡಾಳುಗಳನ್ನೂ ತರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಅಮ್ಮೋನಿಯರು ತಾವು ದಾವೀದನಿಗೆ ಶತ್ರುಗಳಾಗಿರುವುದಾಗಿ ತಿಳಿದುಕೊಂಡರು. ಆದ್ದರಿಂದ ಅಮ್ಮೋನಿಯರು ಹಣಕೊಟ್ಟು ಬೇತ್‌ರೆಹೋಬ್ ಮತ್ತು ಚೋಬಾಗಳಿಂದ ಅರಾಮ್ಯರ ಇಪ್ಪತ್ತುಸಾವಿರ ಮಂದಿ ಭೂದಳವನ್ನು ಬರಮಾಡಿಕೊಂಡರು. ಅಮ್ಮೋನಿಯರು ಮಾಕಾದ ರಾಜನನ್ನು ಮತ್ತು ಅವನ ಒಂದು ಸಾವಿರ ಸೈನಿಕರನ್ನು ಹಾಗೂ ಟೋಬ್‌ನಿಂದ ಹನ್ನೆರಡು ಸಾವಿರ ಮಂದಿ ಸೈನಿಕರನ್ನು ಬರಮಾಡಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ತಾವು ದಾವೀದನಿಗೆ ಅಸಹ್ಯರಾದೆವೆಂದು ಅಮ್ಮೋನಿಯರಿಗೆ ತಿಳಿಯಿತು. ಆದ್ದರಿಂದ ಅವರು ದೂತರನ್ನು ಕಳುಹಿಸಿ ಬೇತ್‌ರೆಹೋಬ್, ಚೋಬಾ ಎಂಬ ಪಟ್ಟಣಗಳಿಂದ ಇರುವ ಇಪ್ಪತ್ತು ಸಾವಿರ ಕಾಲಾಳುಗಳಾದ ಅರಾಮ್ಯರನ್ನೂ, ಟೋಬ್ ದೇಶದಿಂದ ಹನ್ನೆರಡು ಸಾವಿರ ಜನರನ್ನೂ, ಮಾಕದ ಅರಸನನ್ನೂ ಅವನ ಸಾವಿರ ಜನರನ್ನೂ ಕೂಲಿಗೆ ತೆಗೆದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಸಮುಯೇಲ 10:6
24 ತಿಳಿವುಗಳ ಹೋಲಿಕೆ  

ದಮಸ್ಕದ ಸಿರಿಯಾದವರು ಚೋಬದ ಅರಸನಾದ ಹದದೆಜೆರನಿಗೆ ನೆರವಾಗಲು ಬಂದಾಗ ದಾವೀದನು ಅವರನ್ನೂ ಸೋಲಿಸಿ ಅವರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ಸದೆಬಡಿದನು.


ಬಳಿಕ ಯೂಫ್ರೆಟಿಸ್ ನದಿಯ ಸುತ್ತಣ ಪ್ರದೇಶದಲ್ಲಿ ತನ್ನ ರಾಜ್ಯಾಧಿಕಾರವನ್ನು ಸ್ಥಾಪಿಸುವುದಕ್ಕೆ ಹೋಗುತ್ತಿದ್ದ ರೆಹೋಬನ ಮಗನೂ ಚೋಬದ ಅರಸನೂ ಆದ ಹದದೆಜೆರನನ್ನು ದಾವೀದನು ಪರಾಭವಗೊಳಿಸಿದನು.


ಆಗ ಯಕೋಬನು, ಸಿಮೆಯೋನ್ ಮತ್ತು ಲೇವಿಯರಿಗೆ, “ನೀವು ನನ್ನ ಹೆಸರನ್ನು ಈ ನಾಡಿನ ನಿವಾಸಿಗಳಾದ ಕಾನಾನ್ಯರಿಗೂ ಪೆರಿಜೀಯರಿಗೂ ಅಸಹ್ಯಮಾಡಿಬಿಟ್ಟರಿ; ನನ್ನನ್ನು ಅಪಾಯಕ್ಕೆ ಗುರಿಮಾಡಿದ್ದೀರಿ. ನನಗಿರುವ ಜನರು ಕೆಲವರೇ. ಈ ನಾಡಿನವರೆಲ್ಲರು ಒಟ್ಟಿಗೆ ಬಂದು ನನ್ನ ಮೇಲೆ ಬಿದ್ದರೆ ನಾನು ಮಾತ್ರವಲ್ಲ, ನನ್ನ ಮನೆಯವರೆಲ್ಲರೂ ನಿರ್ಮೂಲವಾಗುತ್ತೇವೆ ಅಲ್ಲವೇ?” ಎಂದನು.


“ದಾವೀದನ ಹೆಸರು ಸ್ವಜನರಾದ ಇಸ್ರಯೇಲರಲ್ಲೇ ತಿರಸ್ಕೃತವಾಗಿದೆ. ಆದುದರಿಂದ ಇವನು ಎಂದೆಂದಿಗೂ ತನ್ನ ಅಧೀನನಾಗಿಯೇ ಇರುವನು,” ಎಂದು ಆಕೀಷನು ನಂಬಿದ್ದನು.


ಆ ಪಟ್ಟಣ ಚೀದೋನಿಗೆ ದೂರವಾಗಿದ್ದರಿಂದಲೂ ಸಮೀಪದಲ್ಲಿ ಪರಿಚಯಸ್ಥರಾರೂ ಇಲ್ಲದ್ದರಿಂದಲೂ ಅವರಿಗೆ ಸಹಾಯ ದೊರಕಲಿಲ್ಲ. ಬೇತ್ ರೆಹೋಬಿನ ತಗ್ಗಿನಲ್ಲಿದ್ದ ಈ ಪಟ್ಟಣವನ್ನು ದಾನ್ಯರು ತಿರುಗಿ ಕಟ್ಟಿಸಿ ಅದರಲ್ಲಿ ವಾಸಿಸಿದರು.


ಆಗ ಗಿಲ್ಯಾದಿನ ಹಿರಿಯರು ಯೆಪ್ತಾಹನನ್ನು ಟೋಬ್ ದೇಶದಿಂದ ಕರೆದುಕೊಂಡು ಬರುವುದಕ್ಕಾಗಿ ಅಲ್ಲಿಗೆ ಹೋದರು.


ಅವನು ತನ್ನ ಸಹೋದರನನ್ನು ಬಿಟ್ಟು ಟೋಬ್ ದೇಶಕ್ಕೆ ಹೋದನು. ಅಲ್ಲಿನ ಪುಂಡಪೋಕರಿಗಳು ಕೂಡಿ ಅವನನ್ನು ಹಿಂಬಾಲಿಸಿದರು.


ದುಡುಕಿ ನೆರೆಯವನ ಮೇಲೆ ವ್ಯಾಜ್ಯಕ್ಕೆ ಓಡಬೇಡ; ಕಡೆಗೆ ಅವನು ನಿನ್ನ ಮಾನಕಳೆದಾಗ ಏನು ಮಾಡುವೆ, ಯೋಚಿಸು.


ಪಡೆದುಕೊಂಡ ಬೆಳ್ಳಿ ಬಂಗಾರವನ್ನೂ ಸರ್ವೇಶ್ವರನಿಗೆ ಪ್ರತಿಷ್ಠಾಪಿಸಿದನು.


ಸೌಲನು ಫಿಲಿಷ್ಟಿಯರ ದಂಡುಪ್ರದೇಶವನ್ನು ನಾಶಮಾಡಿದ್ದರಿಂದ, ತಾವು ಅವರ ದ್ವೇಷಕ್ಕೆ ಗುರಿಯಾದೆವೆಂದು ಇಸ್ರಯೇಲರು ತಿಳಿದು, ಗಿಲ್ಗಾಲಿಗೆ ಬಂದು ಸೌಲನನ್ನು ಕೂಡಿಕೊಂಡರು.


(ಬಾಷಾನ್ ನಾಡು ರೆಫಾಯರ ನಾಡೆನಿಸಿಕೊಳ್ಳುತ್ತದೆ. ಮನಸ್ಸೆಯ ವಂಶಸ್ಥನಾದ ಯಾಯೀರನು ಗೆಷೂರ್ಯರ ಮತ್ತು ಮಾಕಾತ್ಯರ ಮೇರೆಯವರೆಗೆ ಅರ್ಗೋಬ್ ಎಂಬ ಪ್ರದೇಶವನ್ನೆಲ್ಲಾ ಸ್ವಾಧೀನಮಾಡಿಕೊಂಡು ಬಾಷಾನಿಗೆ ಸೇರಿರುವ ಆ ಪ್ರಾಂತ್ಯಕ್ಕೆ ಯಾಯೀರನ ಗ್ರಾಮಗಳೆಂದು ತನ್ನ ಹೆಸರಿಟ್ಟನು. ಈ ಹೆಸರು ಇಂದಿನವರೆಗೂ ಉಂಟು).


ಅವರಿಗೆ ಆ ಮೇಸ್ತ್ರಿಗಳು, “ನೀವು ಮಾಡಿದ ದುಷ್ಕೃತ್ಯವನ್ನು ವಿಚಾರಿಸಿ ಸರ್ವೇಶ್ವರ ನಿಮಗೆ ತಕ್ಕ ಶಿಕ್ಷೆಯನ್ನು ವಿಧಿಸಲಿ. ಏಕೆಂದರೆ ಫರೋಹನಿಗೂ ಅವನ ಸೇವಕರಿಗೂ ನಾವು ಅಸಹ್ಯರಾಗುವಂತೆ ಮಾಡಿಬಿಟ್ಟಿರಿ. ನಮ್ಮನ್ನು ಕೊಲ್ಲಲು ಅವರ ಕೈಗೆ ಕತ್ತಿಯನ್ನೇ ಕೊಟ್ಟಂತಾಗಿದೆ,” ಎಂದು ನಿಂದಿಸಿದರು.


ಆವರು ಈ ವರ್ತಮಾನವನ್ನು ದಾವೀದನಿಗೆ ಹೇಳಿಕಳುಹಿಸಿದರು. ಬಹಳವಾಗಿ ಅಪಮಾನ ಹೊಂದಿದ ಅವರಿಗೆ ದಾವೀದನು ಆಳುಗಳ ಮುಖಾಂತರ, “ನಿಮ್ಮ ಗಡ್ಡ ಬೆಳೆಯುವವರೆಗೆ ನೀವು ಜೆರಿಕೋವಿನಲ್ಲಿದ್ದು ಅನಂತರ ಬನ್ನಿ,” ಎಂದು ಹೇಳಿಸಿದನು.


ಈ ಸುದ್ದಿ ದಾವೀದನಿಗೆ ಮುಟ್ಟಿತು.ಅವನು ಯೋವಾಬನನ್ನೂ ಎಲ್ಲಾ ಶೂರ ಸೈನಿಕರನ್ನೂ ಕಳುಹಿಸಿದನು.


ಮಾಕಾ ಊರಿನ ಅಹಸ್ಬೈ ಎಂಬುವನ ಮಗ ಎಲೀಫೆಲೆಟ್, ಗಿಲೋವಿನ ಅಹೀತೋಫೆಲ್ ಎಂಬವನ ಮಗ ಎಲೀಯಾಮ್,


ಸರ್ವೇಶ್ವರ ಸಿರಿಯಾದ ಪಾಳೆಯದವರಿಗೆ ರಥರಥಾಶ್ವಸಹಿತವಾದ ಮಹಾಸೈನ್ಯಘೋಷವು ಕೇಳಿಸುವಂತೆ ಮಾಡಿದ್ದರು. ಆದ್ದರಿಂದ ಅವರು, “ಇಸ್ರಯೇಲರ ಅರಸನು ಹಿತ್ತಿಯ ಹಾಗು ಈಜಿಪ್ಟ್ ಅರಸರಿಗೆ ಹಣಕೊಟ್ಟು ಅವರನ್ನು ನಮಗೆ ವಿರುದ್ಧ ಕರೆದುತಂದಿದ್ದಾನೆ,” ಎಂದುಕೊಂಡು,


ಕೂಡಿದರೊಂದಾಗಿ ರಾಜರುಗಳು, ದಾಳಿಮಾಡಬಂದರು I ನೋಡಿ ನಿಬ್ಬೆರಗಾದರು, ತಲ್ಲಣಗೊಂಡು ಓಡಿಹೋದರು II


ಹೀಗೆ ನೆತನ್ಯನ ಮಗನಾದ ಇಷ್ಮಾಯೇಲ, ಕಾರೇಹನ ಮಕ್ಕಳಾದ ಯೋಹಾನಾನ ಯೋನಾಥಾನ, ತನ್ಹುಮೆತನ ಮಗನಾದ ಸೆರಾಯ, ಮಾಕಾ ಊರಿನವನ ಮಗನಾದ ಯೆಜನ್ಯ ನೆಟೋಫದವನಾದ ಏಫಯನ ಮಕ್ಕಳು ಗೆದಲ್ಯನ ಬಳಿಗೆ ಹೋದರು.


ಸಂಬಳಕ್ಕಾಗಿ ಈಜಿಪ್ಟ್ ಸೇರಿದ ದಂಡಾಳುಗಳು ನೋಡಲಿಕ್ಕೆ ಅವರು ಕೊಬ್ಬಿದ ಕರುಗಳು. ಆದರೂ ಬೆಂಗೊಟ್ಟು ಓಡಿಹೋಗಿರುವರು ನಿಲ್ಲದೆ, ವಿಪತ್ಕಾಲ, ದಂಡನೆಯ ದಿನ, ಬಂದೊದಗಿದೆ ಅವರಿಗೆ.


ಅವನು, “ತಾವು ಹೋಗಿ ತಮ್ಮ ತಂದೆ ಮನೆಕಾಯುವುದಕ್ಕೆ ಬಿಟ್ಟಿರುವ ಅವನ ಉಪಪತ್ನಿಗಳೊಡನೆ ಸಂಗಮಿಸಿ. ಹೀಗೆ ಮಾಡುವುದಾದರೆ, ತಾವು ತಮ್ಮ ತಂದೆಗೆ ಅಸಹ್ಯವೈರಿಯಾದಿರೆಂದು ಎಲ್ಲ ಇಸ್ರಯೇಲರಿಗೆ ತಿಳಿಯುವುದು. ಆಗ ತಮ್ಮ ಪಕ್ಷದವರು ಹುಮ್ಮಸ್ಸುಗೊಳ್ಳುವರು,” ಎಂದು ಉತ್ತರಕೊಟ್ಟನು.


ದಾವೀದನು ಚೋಬದವರನ್ನು ಸಂಹರಿಸಿದಾಗ ಈ ರೆಜೋನನು ಚೋಬದ ಅರಸನೂ ತನ್ನ ಒಡೆಯನೂ ಆದ ಹದದೆಜೆರನನ್ನು ಬಿಟ್ಟು ಓಡಿಹೋಗಿ, ಕೆಲವು ಮಂದಿಯನ್ನು ಕೂಡಿಸಿಕೊಂಡು, ತಾನು ಅವರ ನಾಯಕನಾಗಿ, ಅವರೊಡನೆ ದಮಸ್ಕಕ್ಕೆ ಬಂದು ಅಲ್ಲಿ ಅರಸನಾದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು