2 ಪೇತ್ರನು 2:14 - ಕನ್ನಡ ಸತ್ಯವೇದವು C.L. Bible (BSI)14 ಇವರದು ಬರೀ ಕಾಮುಕ ಕಣ್ಣು; ಇವರು ಎಂದಿಗೂ ಇಂಗದ ಪಾಪಬಯಕೆಯುಳ್ಳವರು; ದುರ್ಬಲರನ್ನು ವಂಚಿಸಿ ವಶಪಡಿಸಿಕೊಳ್ಳುವುದೇ ಇವರ ಹವ್ಯಾಸ; ಲೋಭದಲ್ಲೇ ಪಳಗಿದ ಮನಸ್ಸುಳ್ಳವರು ಹಾಗೂ ಶಾಪಗ್ರಸ್ತ ಸಂತಾನದವರು ಇವರು! ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201914 ಇವರು ವ್ಯಭಿಚಾರಿಣಿಯನ್ನು ಕಂಡು ಆನಂದಿಸುವವರೂ, ಪಾಪವನ್ನು ಕಂಡು ತೃಪ್ತಿಹೊಂದದ ಕಣ್ಣುಳ್ಳವರೂ, ಚಂಚಲತೆ ಮನಸ್ಸುವುಳ್ಳವರನ್ನು ಮರುಳುಗೊಳಿಸುವವರೂ, ಹಣದಾಸೆಯಲ್ಲಿ ಪರಿಣಿತಿ ಪಡೆದ ಹೃದಯವುಳ್ಳವರೂ, ಶಾಪಗ್ರಸ್ತ ಮಕ್ಕಳೂ ಆಗಿದ್ದಾರೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)14 ಇವರು ಜಾರತ್ವದಿಂದ ತುಂಬಿದ ಮತ್ತು ಪಾಪವನ್ನು ಬಿಡಲೊಲ್ಲದ ಕಣ್ಣುಳ್ಳವರೂ ಚಪಲಚಿತ್ತರನ್ನು ಮರುಳುಗೊಳಿಸುವವರೂ ಲೋಭದಲ್ಲಿ ತೇರ್ಗಡೆಹೊಂದಿದ ಮನಸ್ಸುಳ್ಳವರೂ ಶಾಪಕ್ಕೆ ಪಾತ್ರರೂ ಆಗಿದ್ದಾರೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್14 ಅವರು ಜಾರತ್ವದಿಂದ ತುಂಬಿದ ಮತ್ತು ಪಾಪವನ್ನು ಬಿಡಲೊಲ್ಲದ ಕಣ್ಣುಳ್ಳವರಾಗಿದ್ದಾರೆ. ಅವರು ದುರ್ಬಲರನ್ನು ಪಾಪವೆಂಬ ಉರುಲಿನಲ್ಲಿ ಬೀಳಿಸುತ್ತಾರೆ. ಅವರು ತಮ್ಮ ಹೃದಯಗಳಿಗೆ ಸ್ವಾರ್ಥವನ್ನೇ ಕಲಿಸಿದ್ದಾರೆ. ಅವರು ಶಾಪಗ್ರಸ್ತರಾಗಿದ್ದಾರೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ14 ಇವರು ಕಾಮುಕದಿಂದ ತುಂಬಿದ ಕಣ್ಣು ಮತ್ತು ಪಾಪವನ್ನು ಬಿಡಲೊಲ್ಲದ ಚಪಲಚಿತ್ತರೂ ಮರುಳುಗೊಳಿಸುವವರೂ ಲೋಭಗಳಲ್ಲಿ ತೇರ್ಗಡೆ ಹೊಂದಿದ ಹೃದಯವುಳ್ಳವರೂ ಶಾಪದ ಮಕ್ಕಳೂ ಆಗಿದ್ದಾರೆ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್14 ತೆನಿ ವೆಭಿಚಾರಾನ್ ಭರಲ್ಲ್ಯಾ ಡೊಳ್ಯಾಂಚೆ ಹೊವ್ನ್ ಹಾತ್, ತೆನಿ ವಿಶ್ವಾಸ್ ನಸಲ್ಲೆ ಪಾಪಾಚ್ಯಾ ಪಾಸಿತ್ ಪಾಡ್ವುತಾತ್, ತೆನಿ ಅಪ್ನಾ ಮನಾಕ್ನಿ ಬರೆ ದಿಸ್ತಲೆಚ್ ಚಿಂತತಾತ್, ಅನಿ ಶಾಪಾಕ್ ಗುರಿ ಹೊಲಾತ್. ಅಧ್ಯಾಯವನ್ನು ನೋಡಿ |