Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೇತ್ರನು 2:10 - ಕನ್ನಡ ಸತ್ಯವೇದವು C.L. Bible (BSI)

10 ಮುಖ್ಯವಾಗಿ, ತುಚ್ಛವಾದ ದೈಹಿಕ ವ್ಯಾಮೋಹಗಳಿಗೆ ಬಲಿಯಾಗಿರುವವರನ್ನು ಮತ್ತು ದೇವರ ಅಧಿಕಾರವನ್ನು ತೃಣೀಕರಿಸುವವರನ್ನು ಅವರು ಶಿಕ್ಷಿಸದೆ ಬಿಡುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಮುಖ್ಯವಾಗಿ ಶಾರೀರಿಕ ಬಂಡುತನದ ದುರಾಶೆಗಳಲ್ಲಿ ನಡೆದು ಪ್ರಭುತ್ವವನ್ನು ತಿರಸ್ಕಾರ ಮಾಡುವವರನ್ನು ಹೀಗೆ ಶಿಕ್ಷಿಸುವನು. ಇವರು ಯಾರಿಗೂ ಹೆದರದೇ ಸ್ವೇಚ್ಛಾಪರರಾಗಿದ್ದಾರೆ. ಮಹಿಮಾಪದವಿಯವರನ್ನು ನಿರ್ಭಯವಾಗಿ ದೂಷಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಮುಖ್ಯವಾಗಿ ಬಂಡುತನವನ್ನು ಆಶಿಸಿ ಶರೀರಭಾವಾನುಸಾರ ನಡೆದು ಪ್ರಭುತ್ವ ತಿರಸ್ಕಾರ ಮಾಡುವವರನ್ನು ಹೀಗೆ ಶಿಕ್ಷಿಸುವನು. ಇವರು ಯಾರಿಗೂ ಹೆದರದೆ ಸ್ವೇಚ್ಫಾಪರರಾಗಿದ್ದು ಮಹಾಪದವಿಯವರನ್ನು ನಿರ್ಭಯವಾಗಿ ದೂಷಿಸುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಪ್ರಭುವಿನ ಅಧಿಕಾರವನ್ನು ದ್ವೇಷಿಸುವ ಜನರನ್ನು ಮತ್ತು ತಮ್ಮ ಪಾಪಸ್ವಭಾವದ ಇಚ್ಚೆಗನುಸಾರವಾಗಿ ಕೆಟ್ಟಕಾರ್ಯಗಳನ್ನು ಮಾಡುವ ಜನರನ್ನು ದೇವರು ಹೀಗೆ ದಂಡಿಸುತ್ತಾನೆ. ಈ ಸುಳ್ಳುಬೋಧಕರು ತಮಗೆ ಬೇಕಾದದ್ದನ್ನೆಲ್ಲಾ ಮಾಡುತ್ತಾರೆ ಮತ್ತು ತಮ್ಮ ಬಗ್ಗೆ ಹೊಗಳಿಕೊಳ್ಳುತ್ತಾರೆ. ಪ್ರಭಾವದಿಂದ ಕೂಡಿರುವ ದೇವದೂತರ ಬಗ್ಗೆ ಕೆಟ್ಟದ್ದನ್ನು ಹೇಳಲು ಅವರು ಹೆದರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಆದರೆ ಮುಖ್ಯವಾಗಿ ತುಚ್ಛವಾದ ದೈಹಿಕ ವ್ಯಾಮೋಹಗಳಿಗೆ ಶರೀರಾನುಸಾರ ನಡೆದು ಪ್ರಭುತ್ವವನ್ನು ತಿರಸ್ಕಾರ ಮಾಡುವವರನ್ನು ಹೀಗೆ ಶಿಕ್ಷಿಸುವರು. ಇವರು ಯಾರಿಗೂ ಹೆದರದೆ ಸ್ವೇಚ್ಛಾಪರರಾಗಿದ್ದಾರೆ. ದುರಹಂಕಾರದಿಂದ ಸ್ವರ್ಗೀಯ ಜೀವಿಗಳನ್ನು ದೂಷಿಸುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

10 ಅನಿ ತಿ ಝುಟಿ ಶಿಕಾಪಾ ಶಿಕ್ವುತಲೆ ಕೊನಾಕ್ಬಿ ಭಿಂಯ್ ನಸ್ತಾನಾ ಅಪ್ನಾಚ್ಯಾ ಮನಾಕ್ ಯೆತಾ ತಸೆ ಆಂಗಾಕ್ ಸಮಂದ್ ಪಡಲ್ಲೆ ಹೊವ್ನ್ ಹಾತ್, ಅನಿ ಮಹಿಮೆಚ್ಯಾ ಪದ್ವಿ ವರ್ತಿ ಅನಿ ಎಕ್ಲ್ಯಾಕ್ನಿ ಮಾನ್ ದಿವ್ನಸ್ತಾನಾ ಹೊತ್ತೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೇತ್ರನು 2:10
38 ತಿಳಿವುಗಳ ಹೋಲಿಕೆ  

ಈ ದುರ್ಬೋಧಕರು ಗುಣಗುಟ್ಟುವವರು, ಅತೃಪ್ತರು, ದುರಾಶೆಗಳಿಗೆ ಬಲಿಯಾದವರು, ಬಡಾಯಿಕೊಚ್ಚಿಕೊಳ್ಳುವವರು, ಸ್ವಪ್ರಯೋಜನಕ್ಕಾಗಿ ಮುಖಸ್ತುತಿ ಮಾಡುವವರು.


ಆದರೆ, ಈ ಜನರು ತಮಗೆ ಅರ್ಥವಾಗದ ಎಲ್ಲವನ್ನೂ ದೂಷಿಸುತ್ತಾರೆ. ವಿಚಾರ ಶೂನ್ಯ ಪ್ರಾಣಿಗಳಂತೆ ಸಹಜ ಪ್ರವೃತ್ತಿಯಿಂದ ಏನನ್ನು ತಿಳಿದುಕೊಳ್ಳುತ್ತಾರೋ ಅದರಿಂದಲೇ ನಾಶವಾಗುತ್ತಾರೆ.


“ತಮ್ಮ ದುರಿಚ್ಛೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಅಂತ್ಯಕಾಲದಲ್ಲಿ ಬರುವರು,” ಎಂದು ಅವರು ಎಚ್ಚರಿಸಿದ್ದಾರೆ.


“ದೇವರನ್ನು ದೂಷಿಸಬಾರದು; ನಿಮ್ಮ ಜನನಾಯಕನನ್ನು ಶಪಿಸಬಾರದು.


ಮೊತ್ತಮೊದಲನೆಯದಾಗಿ ನೀವು ಇದನ್ನು ನೆನಪಿನಲ್ಲಿಡಬೇಕು; ಅಂತ್ಯಕಾಲದಲ್ಲಿ ಕುಚೋದ್ಯಗಾರರು ಕಾಣಿಸಿಕೊಳ್ಳುವರು.


ಏಕೆಂದರೆ, ಕೆಲವರು ಕಳ್ಳತನದಿಂದ ನಿಮ್ಮ ಸಭೆಯೊಳಗೆ ಸೇರಿಕೊಂಡಿದ್ದಾರೆ. ಇವರು ಭಕ್ತಿಹೀನರು; ನಮ್ಮ ದೇವರ ಅನುಗ್ರಹದ ನೆವದಲ್ಲಿ ತಮ್ಮ ಕಾಮಾಭಿಲಾಷೆಗಳನ್ನು ಸಮರ್ಥಿಸಿಕೊಳ್ಳುತ್ತಿರುವವರು; ನಮ್ಮ ಏಕೈಕ ಒಡೆಯರೂ ಪ್ರಭುವೂ ಆದ ಯೇಸುಕ್ರಿಸ್ತರನ್ನು ನಿರಾಕರಿಸುವವರು. ಇಂಥವರಿಗೆ ದಂಡನೆಯಾಗಬೇಕೆಂದು ಬಹಳ ಹಿಂದೆಯೇ ಪವಿತ್ರಗ್ರಂಥದಲ್ಲಿ ಲಿಖಿತವಾಗಿದೆ.


ವ್ಯಭಿಚಾರಿಗಳಿಗೂ ಅಶ್ಲೀಲ ಕೃತ್ಯಗಳಲ್ಲಿ ಭಾಗವಹಿಸುವವರಿಗೂ ಮತ್ತು ದುರಾಶೆಯುಳ್ಳವರಿಗೂ (ದುರಾಶೆ ವಿಗ್ರಹಾರಾಧನೆಯ ಒಂದು ರೂಪ) ಕ್ರಿಸ್ತಯೇಸುವಿನ ಮತ್ತು ದೇವರ ಸಾಮ್ರಾಜ್ಯದಲ್ಲಿ ಹಕ್ಕುಬಾಧ್ಯತೆ ಇಲ್ಲವೆಂದು ನಿಮಗೆ ಮನದಟ್ಟಾಗಿರಲಿ.


ಅವನ ನಾಡಿಗರಾದರೋ ಅವನನ್ನು ದ್ವೇಷಿಸುತ್ತಿದ್ದರು. ‘ಇವನು ನಮಗೆ ರಾಜನಾಗುವುದು ಬೇಡ,’ ಎಂದು ತಿಳಿಸಲು ಅವನ ಹಿಂದೆಯೇ ತಮ್ಮ ಪ್ರತಿನಿಧಿಗಳನ್ನು ಕಳುಹಿಸಿದರು.


ವಿವಾಹಬಂಧನವನ್ನು ಎಲ್ಲರೂ ಗೌರವಿಸಲಿ; ದಂಪತಿಗಳ ಸಂಬಂಧವು ನಿಷ್ಕಳಂಕವಾಗಿರಲಿ. ಕಾಮುಕರೂ ವ್ಯಭಿಚಾರಿಗಳೂ ದೇವರ ನ್ಯಾಯತೀರ್ಪಿಗೆ ಗುರಿಯಾಗುತ್ತಾರೆ.


ಏಕೆಂದರೆ, ಸಭಾಧ್ಯಕ್ಷನು ದೇವರ ಸೇವೆಯಲ್ಲಿ ಮೇಲ್ವಿಚಾರಕನಾಗಿರುವುದರಿಂದ ನಿಂದಾರಹಿತನಾಗಿರಬೇಕು. ಆತನು ಗರ್ವಿ ಅಥವಾ ಮುಂಗೋಪಿಯಾಗಿರಬಾರದು. ಕುಡಿತವಾಗಲಿ, ಹಿಂಸಾಚಾರವಾಗಲಿ, ಹಿಂಸಾಪ್ರವೃತ್ತಿಯಾಗಲಿ ಅವನಲ್ಲಿರಬಾರದು. ಅವನು ಲಾಭಕೋರನಾಗಿರಬಾರದು.


ನಿಮ್ಮಲ್ಲಿರುವ ಪ್ರಾಪಂಚಿಕ ಆಶೆ ಆಕಾಂಕ್ಷೆಗಳನ್ನು ತ್ಯಜಿಸಿರಿ. ಹಾದರ, ಅನೈತಿಕತೆ, ಕಾಮಾಭಿಲಾಷೆ, ದುರಾಲೋಚನೆ, ವಿಗ್ರಹಾರಾಧನೆಗೆ ಸಮವಾಗಿರುವ ಲೋಭ - ಇವುಗಳನ್ನು ದಮನಮಾಡಿರಿ.


ಅಧರ್ಮಿಗಳು ದೇವರ ಸಾಮ್ರಾಜ್ಯಕ್ಕೆ ಬಾಧ್ಯರಲ್ಲವೆಂದು ನೀವು ಬಲ್ಲಿರಿ. ನಿಮ್ಮನ್ನು ನೀವೇ ವಂಚಿಸಿಕೊಳ್ಳಬೇಡಿ. ದುರಾಚಾರಿಗಳು, ವಿಗ್ರಹಾರಾಧಕರು, ವ್ಯಭಿಚಾರಿಗಳು, ಸಲಿಂಗಕಾಮಿಗಳು,


ಪ್ರತ್ಯುತ್ತರವಾಗಿ ಪೌಲನು, “ಸಹೋದರರೇ, ಇವರು ಪ್ರಧಾನ ಯಾಜಕರೆಂದು ನನಗೆ ತಿಳಿಯದೆ ಹೋಯಿತು. ‘ನಿಮ್ಮ ಪ್ರಜಾಪಾಲನನ್ನು ದೂಷಿಸಬೇಡ’ ಎಂದು ಪವಿತ್ರಗ್ರಂಥದಲ್ಲೇ ಬರೆದಿದೆ ಅಲ್ಲವೆ?” ಎಂದನು.


ಅರಸನನ್ನು ಮನಸ್ಸಿನಲ್ಲಿಯೂ ನಿಂದಿಸಬೇಡ; ಧನಿಕನನ್ನು ಮಲಗುವ ಕೋಣೆಯಲ್ಲೂ ದೂಷಿಸಬೇಡ; ಆಕಾಶದ ಹಕ್ಕಿ ಆ ಸುದ್ದಿಯನ್ನು ಮುಟ್ಟಿಸೀತು; ಹಾರುವ ಪಕ್ಷಿ ಆ ಸಮಾಚಾರವನ್ನು ತಿಳಿಸೀತು!


ದೇವರು ನಮ್ಮನ್ನು ಕರೆದಿರುವುದು ಅಶುದ್ಧ ನಡತೆಗಲ್ಲ, ಪರಿಶುದ್ಧ ನಡತೆಗೆ.


ನಾವು ಪ್ರಪಂಚದಲ್ಲಿ ಬಾಳುತ್ತಿದ್ದರೂ ನಮ್ಮ ಹೋರಾಟ ಪ್ರಾಪಂಚಿಕ ಉದ್ದೇಶದಿಂದ ಕೂಡಿದ್ದಲ್ಲ.


ಆದುದರಿಂದ ಈಗ ಕ್ರಿಸ್ತಯೇಸುವಿನಲ್ಲಿ ಇರುವವರಿಗೆ ದಂಡನಾತೀರ್ಪು ಇರುವುದಿಲ್ಲ.


ಇಸ್ರಯೇಲ್ ಜನರೇ, ದುಷ್ಟಸಂತತಿಯವರೇ, ಸರ್ವೇಶ್ವರನಾದ ನಾನು ಹೇಳುವುದನ್ನು ಕೇಳಿರಿ : ನಾನು ನಿಮಗೆ ಬೆಂಗಾಡಾಗಿಯೂ ಗಾಢಾಂಧಕಾರವಾಗಿಯೂ ಪರಿಣಮಿಸಿದ್ದೇನೊ? ‘ನಾವು ಮನಬಂದಂತೆ ನಡೆದುಕೊಳ್ಳುತ್ತೇವೆ; ನಿನ್ನ ಬಳಿಗೆ ಇನ್ನು ಬಾರೆವು’ ಎಂದು ನನ್ನ ಜನರಾದ ನೀವು ಹೇಳುವುದು ಹೇಗೆ?


“ನಮ್ಮ ತುಟಿಗೆ ಹತೋಟಿ ಬೇಕಿಲ್ಲ; ನಾಲಗೆಯೇ ಗೆಲುವಿನ ಮೂಲ I ನಮಗೊಡೆಯನ ಅವಶ್ಯವಿಲ್ಲ” ಎಂದವರಾಡುವುದು ಸಲ್ಲ II


ಅರಸನು ತಮ್ಮ ಮಾತನ್ನು ಲಕ್ಷಿಸಲಿಲ್ಲ ಎಂದು ನೋಡಿ ಇಸ್ರಯೇಲರೆಲ್ಲರೂ ಅವನಿಗೆ, “ದಾವೀದನಿಗೂ ನಮಗೂ ಏನೂ ಸಂಬಂಧವಿಲ್ಲ; ಜೆಸ್ಸೆಯ ಮಗನಿಗೂ ನಮಗೂ ಯಾವ ಬಾಧ್ಯತೆಯೂ ಇಲ್ಲ; ಇಸ್ರಯೇಲರೇ, ನಿಮ್ಮ ನಿಮ್ಮ ನಿವಾಸಗಳಿಗೆ ತೆರಳಿರಿ; ದಾವೀದನವರು ತಮ್ಮ ಕುಲವನ್ನು ತಾವೇ ನೋಡಿಕೊಳ್ಳಲಿ!” ಎಂದು ಹೇಳಿ ತಮ್ಮ ಮನೆಗಳಿಗೆ ಹೊರಟುಹೋದರು.


ಬೆನ್ಯಾಮೀನ್ ಕುಲದವನೂ ಬಿಕ್ರೀಯ ಮಗನೂ ಆದ ಶೆಬನೆಂಬ ಒಬ್ಬ ನೀಚ ವ್ಯಕ್ತಿ ಅಲ್ಲಿಗೆ ಹೇಗೋ ಬಂದಿದ್ದನು. ಅವನು ಕಹಳೆಯನ್ನು ಊದಿ, “ಇಸ್ರಯೇಲರೇ, ದಾವೀದನಿಗೂ ನಮಗೂ ಏನೂ ಸಂಬಂಧವಿಲ್ಲ. ಜೆಸ್ಸೆಯನ ಮಗನಲ್ಲಿ ನಮಗೆ ಹಕ್ಕುಭಾದ್ಯತೆಯಿಲ್ಲ. ಪ್ರತಿ ಒಬ್ಬನೂ ನಮ್ಮ ನಮ್ಮ ನಿವಾಸಗಳಿಗೆ ತೆರಳೋಣ,” ಎಂದನು.


ಕೆಲವು ಮಂದಿ ಪುಂಡುಪೋಕರು, “ಇವನೇನೋ ನಮ್ಮನ್ನು ರಕ್ಷಿಸುವವನು!” ಎಂದು ತಾತ್ಸಾರಮಾಡಿ ಕಾಣಿಕೆಗಳನ್ನು ತರಲಿಲ್ಲ. ಆದರೂ ಸೌಲನು ಸುಮ್ಮನಿದ್ದನು.


ಆದರೆ ಒಬ್ಬನು ಸ್ವದೇಶದವನೇ ಆಗಲಿ ವಿದೇಶದವನೇ ಆಗಲಿ ಮನಪೂರ್ವಕವಾಗಿ, ಬೇಕು ಬೇಕೆಂದು ಪಾಪವನ್ನು ಮಾಡಿದರೆ ಅಂಥವನನ್ನು ಕುಲದಿಂದ ತೆಗೆದುಹಾಕಬೇಕು. ಏಕೆಂದರೆ ಅವನು ಸರ್ವೇಶ್ವರನನ್ನು ತೃಣೀಕರಿಸಿದ್ದಾನೆ.


ನನ್ನ ಮನವೇ, ಒಳಗಾಗಬೇಡ ಅವರ ದುರಾಲೋಚನೆಗೆ ನನ್ನ ಪ್ರಾಣವೇ, ಸೇರಬೇಡ ನೀನವರ ಗುಂಪಿಗೆ ಕೊಂದರವರು ನರರನು ಕೋಪೋದ್ರೇಕದಿಂದ ಊನಪಡಿಸಿದರು ಎತ್ತುಗಳನ್ನು ಮದದಿಂದ.


ಲಜ್ಜೆಗೆಟ್ಟವರಾಗಿ ದುರಿಚ್ಛೆಗಳಿಗೆ ಮಾರುಹೋಗಿದ್ದಾರೆ; ಅಶುದ್ಧ ಕಾರ್ಯಗಳಲ್ಲೇ ನಿರತರಾಗಿದ್ದಾರೆ.


ಜನರು ಸ್ವಾರ್ಥಚಿಂತಕರೂ ಲೋಭಿಗಳೂ ಅಹಂಕಾರಿಗಳೂ ಬಡಾಯಿಕೋರರೂ ದೇವದೂಷಕರೂ ಹೆತ್ತವರಿಗೆ ಅವಿಧೇಯರೂ ಕೃತಘ್ನರೂ ಭಕ್ತಿಹೀನರೂ ಆಗುವರು.


ಅದು ಮರಳಿ ಬಂದಾಗ, ಮನೆ ಗುಡಿಸಿರುವುದನ್ನೂ ಎಲ್ಲವೂ ಚೊಕ್ಕಟವಾಗಿರುವುದನ್ನೂ ಕಾಣುತ್ತದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು