Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೇತ್ರನು 1:10 - ಕನ್ನಡ ಸತ್ಯವೇದವು C.L. Bible (BSI)

10 ಸಹೋದರರೇ, ನೀವು ದೇವರಿಂದ ಕರೆಹೊಂದಿದವರು; ದೇವರಿಂದ ಆಯ್ಕೆಯಾದವರು. ಈ ವರದಲ್ಲಿ ದೃಢವಾಗಿರಲು ಮತ್ತಷ್ಟು ಪ್ರಯತ್ನಿಸಿರಿ. ಹೀಗೆ ಮಾಡಿದರೆ, ನೀವೆಂದಿಗೂ ವಿಶ್ವಾಸಭ್ರಷ್ಟರಾಗಲಾರಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಆದ್ದರಿಂದ ಸಹೋದರರೇ, ದೇವರಲ್ಲಿ ನಿಮ್ಮ ಕರೆಯುವಿಕೆಯನ್ನೂ, ಆಯ್ಕೆಯನ್ನೂ ದೃಢಪಡಿಸಿಕೊಳ್ಳುವುದಕ್ಕೆ ಮತ್ತಷ್ಟು ಪ್ರಯಾಸಪಡಿರಿ. ಏಕೆಂದರೆ ನೀವು ಹೀಗೆ ಮಾಡುವುದಾದರೆ ಎಂದಿಗೂ ಎಡುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಆದದರಿಂದ ಸಹೋದರರೇ, ದೇವರು ನಿಮ್ಮನ್ನು ಕರೆದದ್ದನ್ನೂ ಆದುಕೊಂಡದ್ದನ್ನೂ ದೃಢಪಡಿಸಿಕೊಳ್ಳುವದಕ್ಕೆ ಮತ್ತಷ್ಟು ಪ್ರಯಾಸಪಡಿರಿ. ಹೀಗೆ ನೀವು ಮಾಡಿದರೆ ಎಂದಿಗೂ ಎಡಹುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ನನ್ನ ಸಹೋದರ ಸಹೋದರಿಯರೇ, ದೇವರು ನಿಮ್ಮನ್ನು ತನ್ನವರನ್ನಾಗಿ ಆರಿಸಿಕೊಳ್ಳಲು ಕರೆದನು. ಆದ್ದರಿಂದಲೇ ನೀವು ದೇವರಿಂದ ನಿಜವಾಗಿಯೂ ಕರೆಯಲ್ಪಟ್ಟವರೆಂದೂ ಆರಿಸಲ್ಪಟ್ಟವೆರೆಂದೂ ತೋರಿಸಲು ಬಹಳವಾಗಿ ಪ್ರಯತ್ನಿಸಿರಿ. ಹೀಗೆ ನೀವು ಮಾಡಿದರೆ ಎಂದಿಗೂ ಎಡವಿಬೀಳುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಆದ್ದರಿಂದ ಪ್ರಿಯರೇ, ನಿಮ್ಮ ಕರೆಯುವಿಕೆಯನ್ನೂ ಆಯ್ಕೆಯನ್ನೂ ದೃಢಪಡಿಸಿಕೊಳ್ಳಲು ಸರ್ವ ಪ್ರಯತ್ನವನ್ನು ಮಾಡಿರಿ. ಏಕೆಂದರೆ ಇವುಗಳನ್ನು ನೀವು ಮಾಡಿದರೆ ಎಂದಿಗೂ ಪಾಪದಲ್ಲಿ ಬಿದ್ದುಹೋಗುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

10 ಅಸೆ ರ್‍ಹಾತಾನಾ, ಮಾಜ್ಯಾ ಭಾವಾನು ಅನಿ ಭೆನಿಯಾನು, ತುಮ್ಚೆ ಎಚುನ್ ಘೆಟ್ನೆ ಘಟ್ ಕರ್‍ತಲ್ಯಾ ಹುಕುಮಾಕ್ನಿ ಲೈ ಉಮ್ಮೆದ್ ಥವಾ, ಅಸೆ ಕರ್ಲ್ಯಾರ್ ತುಮಿ ಕನ್ನಾಬಿ ಅಟ್ಕಳುನ್ ಪಡಿನ್ಯಾಸಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೇತ್ರನು 1:10
31 ತಿಳಿವುಗಳ ಹೋಲಿಕೆ  

ಆದಕಾರಣ ಪ್ರಿಯರೇ, ಈ ವಿಷಯಗಳನ್ನು ಮುಂಚಿತವಾಗಿಯೇ ತಿಳಿದುಕೊಂಡಿರುವ ನೀವು ಎಚ್ಚರಿಕೆಯಿಂದಿರಿ. ದುರ್ಜನರ ದುರ್ಬೋಧನೆಗೆ ಮರುಳಾಗದಿರಿ. ನಿಮ್ಮ ಸ್ಥಿರವಿಶ್ವಾಸವನ್ನು ಬಿಟ್ಟು ಭ್ರಷ್ಟರಾಗದಿರಿ.


ನೀವು ಹೊಂದಿರುವ ನಿರೀಕ್ಷೆ ಪೂರ್ಣವಾಗಿ ಕೈಗೂಡುವಂತೆ ನಿಮ್ಮಲ್ಲಿ ಪ್ರತಿಯೊಬ್ಬನೂ ಮೊದಲಿನ ಆಸಕ್ತಿಯನ್ನು ಕಡೆಯತನಕವೂ ತೋರಿಸಬೇಕೆಂದು ಹಾರೈಸುತ್ತೇನೆ.


ನಿನ್ನ ಕಾಲೆಡವದಂತೆ ನೋಡುವನಾತ I ತೂಕಡಿಸಲಾರನು ನಿನ್ನ ಕಾಯುವಾತ II


ನನ್ನ ಶತ್ರುಗಳೇ, ನನ್ನನ್ನು ನೋಡಿ ಹಿಗ್ಗಬೇಡಿ. ನಾನು ಬಿದ್ದುಹೋದರೂ, ಎದ್ದೇಳುವೆನು; ಕತ್ತಲೆಯಲ್ಲಿ ಕುಳಿತಿದ್ದರೂ ಸರ್ವೇಶ್ವರ ನನಗೆ ಬೆಳಕಾಗುವರು.


ಅಚಲನಾಗಿರುವನು ನೀತಿವಂತನು I ಮರೆಯಲಾರರು ಎಂದಿಗೂ ಆತನನು II


ಈ ಕಾರಣ, ನೀವು ಪೂರ್ಣಾಸಕ್ತಿಯಿಂದ ನಿಮ್ಮ ವಿಶ್ವಾಸಕ್ಕೆ ಸದ್ಗುಣವನ್ನು, ಸದ್ಗುಣಕ್ಕೆ ಸುಜ್ಞಾನವನ್ನು ಸೇರಿಸಿರಿ.


ಆದರೆ ದೇವರು ಹಾಕಿದಂಥ ಸುಸ್ಥಿರವಾದ ಅಸ್ತಿವಾರವನ್ನು ಯಾರಿಂದಲೂ ಕದಲಿಸಲಾಗದು. ಅದರಲ್ಲಿ “ತನ್ನವರು ಯಾರು ಎಂದು ಪ್ರಭು ಅರಿತಿದ್ದಾರೆ; ಮತ್ತು ತಾನು ಪ್ರಭುವಿನವನೆಂದು ಹೇಳಿಕೊಳ್ಳುವವರೆಲ್ಲರೂ ದುರ್ಮಾರ್ಗದಿಂದ ದೂರವಿರಲಿ,” ಎಂದು ಲಿಖಿತವಾಗಿದೆ.


ಆತನೆನಗೆ ದುರ್ಗ, ರಕ್ಷಕ, ಶರಣು I ನಾನೆಂದಿಗೂ ಕದಲಿ ಬೀಳೆನು II


“ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರವಾಗಿಟ್ಟುಕೊಂಡಿರುವವರು ಭಾಗ್ಯವಂತರು. ಜೀವವೃಕ್ಷದ ಫಲವನ್ನು ಸವಿಯುವ ಹಕ್ಕು ಅವರಿಗಿರುತ್ತದೆ. ಹೆಬ್ಬಾಗಿಲಿನ ಮೂಲಕ ಅವರು ಆ ನಗರವನ್ನು ಸೇರುವರು.


ಅಂತ್ಯಕಾಲದಲ್ಲಿ ಪ್ರತ್ಯಕ್ಷವಾಗಲಿರುವ ಜೀವೋದ್ಧಾರವು ವಿಶ್ವಾಸಿಗಳಾದ ನಿಮಗೆ ಲಭಿಸುವಂತೆ ದೇವರು ತಮ್ಮ ಶಕ್ತಿಯಿಂದ ನಿಮ್ಮನ್ನು ಕಾಪಾಡುತ್ತಾರೆ.


ನೀವು ಯೇಸುಕ್ರಿಸ್ತರಿಗೆ ಶರಣಾಗಿ ಅವರ ರಕ್ತದಿಂದ ಶುದ್ಧೀಕರಣಹೊಂದಲು ತಂದೆಯಾದ ದೇವರ ಸಂಕಲ್ಪಾನುಸಾರ ಆಯ್ಕೆಯಾದವರು; ಅವರ ಆತ್ಮದ ಮುಖಾಂತರ ಪವಿತ್ರೀಕರಿಸಲಾದವರು. ನಿಮಗೆ ಕೃಪಾಶೀರ್ವಾದವೂ ಶಾಂತಿಸಮಾಧಾನವೂ ಸಮೃದ್ಧಿಯಾಗಿ ಲಭಿಸಲಿ!


ಅದನ್ನು ಕೈಗೊಳ್ಳುವವನು ಧನ್ಯನು! ಅದನ್ನು ಸುಭದ್ರವಾಗಿ ಕಾದಿರಿಸಿಕೊಂಡು ಸಬ್ಬತ್ ದಿನವನ್ನು ಹೊಲೆಮಾಡದೆ ಆಚರಿಸುತ್ತಾ ಬರುವವನು ಹಾಗೂ ಯಾವ ಕೇಡಿಗೂ ಕೈಹಾಕದವನು ಭಾಗ್ಯವಂತನು!


ಆತನೆನಗೆ ದುರ್ಗ, ರಕ್ಷಕ, ಶರಣು I ನಾನೆಂದಿಗೂ ಕದಲಿ ಬೀಳೆನು II


ಬಿದ್ದರೂ ಅವನೆದ್ದೇ ತೀರುವನು I ಪ್ರಭು ಅವನಿಗೆ ಊರುಗೋಲಾಗಿಹನು II


ಈ ನಂಬಿಕೆ, ನಿರೀಕ್ಷೆ, ನಮ್ಮ ಬಾಳನೌಕೆಯ ಸ್ಥಿರವಾದ ಹಾಗೂ ಸುರಕ್ಷಿತವಾದ ಲಂಗರಿನಂತಿದೆ. ಇದು ತೆರೆಯ ಹಿಂದಿರುವ ಸ್ವರ್ಗೀಯ ಗರ್ಭಗುಡಿಯನ್ನು ಪ್ರವೇಶಿಸುವಂಥದ್ದು.


ಕೊಡುವನು ಕಡವನು, ಬಯಸನು ಬಡ್ಡಿಯನು I ಎಡವರ ಕೇಡಿಗೆ ಪಡೆಯನು ಲಂಚವನು I ಕದಲನೆಂದಿಗೂ ಈಪರಿ ನಡೆವವನು II


“ಹೀಗೆ, ಆಹ್ವಾನಿತರು ಅನೇಕರಾದರೂ ಆರಿಸಲಾದವರು ಕೆಲವರು ಮಾತ್ರ,” ಎಂದರು ಸ್ವಾಮಿ.


ದೇವರು ತಾವೇ ನೀಡುವ ವರಗಳನ್ನಾಗಲಿ, ಕೊಡುವ ಕರೆಯನ್ನಾಗಲಿ ಹಿಂತೆಗೆದುಕೊಳ್ಳುವವರಲ್ಲ.


ಒಬ್ಬನು ಇಡೀ ಧರ್ಮಶಾಸ್ತ್ರವನ್ನೇ ಕೈಗೊಂಡು ಒಂದೇ ಒಂದು ನಿಯಮವನ್ನು ಮೀರಿ ನಡೆದರೂ ಅವನು ಇಡೀ ಧರ್ಮಶಾಸ್ತ್ರವನ್ನೇ ಮೀರಿ ನಡೆದಂತಾಗುತ್ತದೆ.


ತಮ್ಮ ಸ್ವಂತ ಮಹಿಮೆಯಲ್ಲೂ ಸೌಭಾಗ್ಯದಲ್ಲೂ ಭಾಗಿಗಳಾಗಲು ದೇವರು ನಮ್ಮನ್ನು ಕರೆದಿದ್ದಾರೆ. ಅವರನ್ನು ಅರಿತುಕೊಳ್ಳುವುದರ ಮೂಲಕ ನಾವು ಭಕ್ತಿಯುತ ಜೀವನವನ್ನು ನಡೆಸಲು ಬೇಕಾದುದೆಲ್ಲವನ್ನೂ ಆ ಯೇಸುವಿನ ದಿವ್ಯಶಕ್ತಿಯಿಂದ ಪಡೆದಿದ್ದೇವೆ.


ಪ್ರಿಯರೇ, ಇವುಗಳನ್ನು ಎದುರುನೋಡುವವರಾಗಿರುವ ನೀವು ದೇವರ ದೃಷ್ಟಿಯಲ್ಲಿ ನಿರ್ಮಲರೂ ನಿರ್ದೋಷಿಗಳೂ ಆಗಿದ್ದು ಶಾಂತಿಸಮಾಧಾನದಿಂದಿರಲು ಪ್ರಯತ್ನಿಸಿರಿ.


ಪಾಪದಲ್ಲಿ ಎಡವಿ ಬೀಳದಂತೆ ನಿಮ್ಮನ್ನು ಕಾಪಾಡುವ ತಮ್ಮ ಮಹಿಮಾಸನ್ನಿಧಿಯಲ್ಲಿ ನಿಮ್ಮನ್ನು ನಿರ್ದೋಷಿಗಳನ್ನಾಗಿಯೂ ಹರ್ಷಭರಿತರನ್ನಾಗಿಯೂ ನಿಲ್ಲಿಸಲು ಶಕ್ತರಾಗಿರುವ


ಬಂದ ಬಳಿಕ ಯೆಹೋಶುವನಿಗೆ, “ಎಲ್ಲಾ ಜನರು ಹೋಗುವುದು ಅವಶ್ಯವಿಲ್ಲ, ಎರಡು ಅಥವಾ ಮೂರು ಸಾವಿರ ಮಂದಿ ಹೋದರೆ ಸಾಕು. ಅವರೇ ಆ ನಗರವನ್ನು ಜಯಿಸಬಹುದು. ಎಲ್ಲರನ್ನು ಕಳುಹಿಸಿ ಸುಮ್ಮನೆ ದಣಿಸುವುದೇಕೆ? ಅಲ್ಲಿ ಸ್ವಲ್ಪಮಂದಿ ಮಾತ್ರ ಇದ್ದಾರೆ,” ಎಂದು ವರದಿ ಮಾಡಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು