Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 7:14 - ಕನ್ನಡ ಸತ್ಯವೇದವು C.L. Bible (BSI)

14 ನನ್ನವರೆಂದು ಹೆಸರುಗೊಂಡ ನನ್ನ ಪ್ರಜೆಗಳು ತಮ್ಮನ್ನೇ ತಗ್ಗಿಸಿಕೊಂಡು, ನನ್ನ‍ನ್ನು ಪ್ರಾರ್ಥಿಸಿ, ನನ್ನ ದರ್ಶನವನ್ನು ಬಯಸುವುದಾದರೆ ನಾನು ಪರಲೋಕದಿಂದ ಆಲಿಸಿ, ಅವರ ಪಾಪಗಳನ್ನು ಕ್ಷಮಿಸಿ, ಅವರ ನಾಡಿಗೆ ಆರೋಗ್ಯಭಾಗ್ಯವನ್ನು ದಯಪಾಲಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಈಗ ನನ್ನವರೆಂದು ಹೆಸರುಗೊಂಡಿರುವ ನನ್ನ ಪ್ರಜೆಗಳು ತಮ್ಮನ್ನು ತಗ್ಗಿಸಿಕೊಂಡು ತಮ್ಮ ಕೆಟ್ಟ ನಡತೆಯನ್ನು ಬಿಟ್ಟು ನನ್ನ ಕಡೆಗೆ ತಿರುಗಿಕೊಂಡು, ನನ್ನನ್ನು ಕುರಿತು ಪ್ರಾರ್ಥಿಸಿ, ನನ್ನ ದರ್ಶನವನ್ನು ಬಯಸುವುದಾದರೆ, ನಾನು ಪರಲೋಕದಿಂದ ಆಲಿಸಿ, ಅವರ ಪಾಪಗಳನ್ನು ಕ್ಷಮಿಸಿ, ಅವರ ದೇಶಕ್ಕೆ ಆರೋಗ್ಯವನ್ನು ದಯಪಾಲಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ನನ್ನವರೆಂದು ಹೆಸರುಗೊಂಡ ನನ್ನ ಪ್ರಜೆಗಳು ತಮ್ಮನ್ನು ತಗ್ಗಿಸಿಕೊಂಡು ತಮ್ಮ ಕೆಟ್ಟ ನಡತೆಯನ್ನು ಬಿಟ್ಟು ತಿರುಗಿಕೊಂಡು ನನ್ನನ್ನು ಪ್ರಾರ್ಥಿಸಿ ನನ್ನ ದರ್ಶನವನ್ನು ಬಯಸುವದಾದರೆ ನಾನು ಪರಲೋಕದಿಂದ ಲಾಲಿಸಿ ಅವರ ಪಾಪಗಳನ್ನು ಕ್ಷವಿುಸಿ ಅವರ ದೇಶದಲ್ಲಿ ಆರೋಗ್ಯವನ್ನು ದಯಪಾಲಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ನನ್ನ ಹೆಸರಿನಿಂದ ಕರೆಯಲ್ಪಡುವ ನನ್ನ ಜನರು ದೀನತೆಯಿಂದ ಪ್ರಾರ್ಥಿಸಿ, ತಮ್ಮ ಪಾಪಗಳನ್ನು ಬಿಟ್ಟು ನನ್ನ ಕಡೆಗೆ ತಿರುಗಿದರೆ ನಾನು ಪರಲೋಕದಿಂದ ಅವರನ್ನು ಆಲೈಸಿ, ಅವರ ಪಾಪಗಳನ್ನು ಮನ್ನಿಸಿ ಅವರ ದೇಶವನ್ನು ಗುಣಪಡಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ನನ್ನ ಹೆಸರಿನಿಂದ ಕರೆಯಲಾದ ನನ್ನ ಜನರು ತಮ್ಮನ್ನು ತಗ್ಗಿಸಿಕೊಂಡು ಪ್ರಾರ್ಥನೆಮಾಡಿ, ನನ್ನನ್ನು ಹುಡುಕಿ ತಮ್ಮ ದುರ್ಮಾರ್ಗಗಳಿಂದ ತಿರುಗಿದರೆ, ಆಗ ನಾನು ಪರಲೋಕದಿಂದ ಕೇಳಿ ಅವರ ಪಾಪವನ್ನು ಮನ್ನಿಸಿ, ಅವರ ದೇಶವನ್ನು ಗುಣ ಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 7:14
31 ತಿಳಿವುಗಳ ಹೋಲಿಕೆ  

ಪಾಪಗಳನ್ನು ಮುಚ್ಚಿಟ್ಟುಕೊಳ್ಳುವವನಿಗೆ ಮುಕ್ತಿ ದೊರಕದು; ಅವುಗಳನ್ನು ಒಪ್ಪಿಕೊಂಡು ಬಿಟ್ಟರೆ ಕರುಣೆ ದೊರಕುವುದು.


ಆದರೂ ಈ ನಗರವನ್ನು ಉದ್ಧಾರಮಾಡಿ, ಸುಧಾರಿಸಿ, ಇದರ ನಿವಾಸಿಗಳನ್ನು ಗುಣಪಡಿಸುವೆನು. ಸಮೃದ್ಧಿಯಾದ ಸೌಭಾಗ್ಯವನ್ನು ಹಾಗೂ ಶಾಂತಿಸಮಾಧಾನವನ್ನು ಇವರಿಗೆ ಅನುಗ್ರಹಿಸುವೆನು.


ನನ್ನ ಜೀವದಾಣೆ, ದುಷ್ಟನ ಸಾವಿನಲ್ಲಿ ನನಗೆ ಲವಲೇಶವೂ ಸಂತೋಷವಿಲ್ಲ; ಅವನು ತನ್ನ ದುರ್ಮಾರ್ಗವನ್ನು ಬಿಟ್ಟು ಬಾಳುವುದೇ ನನಗೆ ಸಂತೋಷ. ಇಸ್ರಯೇಲ್ ವಂಶದವರೇ, ನಿಮ್ಮ ದುರ್ಮಾರ್ಗಗಳನ್ನು ಬಿಟ್ಟು ಬಾಳುವುದೇ ನನಗೆ ಸಂತೋಷ. ಇಸ್ರಯೇಲ್ ವಂಶದವರೇ, ನಿಮ್ಮ ದುರ್ಮಾರ್ಗಗಳನ್ನು ಬಿಡಿ, ಬಿಟ್ಟುಬಿಡಿ; ನೀವು ಏಕೆ ಸಾಯಬೇಕು?” ಇದು ಸರ್ವೇಶ್ವರನಾದ ದೇವರ ನುಡಿ.


ಪರಲೋಕದಲ್ಲಿರುವ ನೀವು ಆಲಿಸಿ ನಿಮ್ಮ ಭಕ್ತರೂ ಪ್ರಜೆಗಳೂ ಆದ ಇಸ್ರಯೇಲರ ಪಾಪಗಳನ್ನು ಕ್ಷಮಿಸಿ, ಅವರು ನಡೆಯಬೇಕಾದ ಸನ್ಮಾರ್ಗವನ್ನು ತೋರಿಸಿ, ನಿಮ್ಮ ಪ್ರಜೆಗೆ ಸ್ವಂತ ಸೊತ್ತಾಗಿ ಕೊಟ್ಟ ಈ ನಾಡಿಗೆ ಮಳೆಯನ್ನು ಅನುಗ್ರಹಿಸಿರಿ.


ಗಿಲ್ಯಾದಿನಲ್ಲಿ ಔಷಧವಿಲ್ಲವೆ? ಅಲ್ಲಿ ವೈದ್ಯನು ಸಿಕ್ಕನೆ? ಮತ್ತೇಕೆ ಗುಣವಾಗಲಿಲ್ಲ ನನ್ನ ಜನತೆಗೆ?


ನಾವಾದರೋ, ನಿಮ್ಮ ದೊರೆತನಕ್ಕೆ ಎಂದಿಗೂ ಒಳಗಾಗದ, ನಿಮ್ಮ ನಾಮವನ್ನು ಧರಿಸದ, ಪರಕೀಯರಂತೆ ಆಗಿದ್ದೇವಲ್ಲಾ !


ಸರ್ವೇಶ್ವರ ಸ್ವಾಮಿ ಜನರಿಗೆ ಹೀಗೆನ್ನುತ್ತಾರೆ : “ಸಿಯೋನಿಗೆ ಹಾಗೂ ಪಾಪವನ್ನು ತೊರೆದುಬಿಟ್ಟ ಯಕೋಬ್ಯರ ಬಳಿಗೆ ನಾನು ಉದ್ಧಾರಕನಾಗಿ ಬರುವೆನು.


ಮನುಷ್ಯರ ಹೃದಯಗಳನ್ನು ಬಲ್ಲಂಥ ನೀವು ನಿಮ್ಮ ನಿವಾಸವಾಗಿರುವ ಪರಲೋಕದಿಂದ ಆಲಿಸಿರಿ; ಅವರಿಗೆ ಪಾಪಪರಿಹಾರವನ್ನು ಅನುಗ್ರಹಿಸಿರಿ. ಮನುಷ್ಯರ ಅಂತರಂಗಗಳನ್ನು ಬಲ್ಲವರು ನೀವೊಬ್ಬರೇ. ಪ್ರತಿಯೊಬ್ಬನಿಗೂ ಅವನವನು ಹಿಡಿಯುವ ಮಾರ್ಗಕ್ಕೆ ತಕ್ಕಹಾಗೆ ಫಲವನ್ನು ಕೊಡಿ.


ನಾನು ಗುಟ್ಟುಗುಟ್ಟಾಗಿ ಮಾತಾಡಿದವನಲ್ಲ ಕಗ್ಗತ್ತಲೆಯೊಳಗಿನಿಂದ ನುಡಿದವನಲ್ಲ ಶೂನ್ಯದಲ್ಲಿ ನನ್ನ ಹುಡುಕಿರಿ ಎಂದು ಯಕೋಬ ವಂಶಕ್ಕೆ ಹೇಳಿದವನಲ್ಲ. ಸರ್ವೇಶ್ವರನಾದ ನಾನು ಸತ್ಯಾನುಸಾರ ನುಡಿಯುವವನು, ನೆಟ್ಟನೆಯ ಮಾತುಗಳನ್ನೆ ಸ್ಪಷ್ಟವಾಗಿ ಹೇಳುವವನು.”


ಪ್ರಭು ಅವನಿಗೆ, “ನೀನೆದ್ದು ‘ನೇರಬೀದಿ’ ಎಂಬ ಹಾದಿಗೆ ಹೋಗು; ತಾರ್ಸದ ಸೌಲ ಎಂಬ ವ್ಯಕ್ತಿಗಾಗಿ ಯೂದನ ಮನೆಯಲ್ಲಿ ವಿಚಾರಿಸು. ಆ ಸೌಲನು ಪ್ರಾರ್ಥನೆಯಲ್ಲಿರುವುದನ್ನು ಕಾಣುವೆ.


ಅಲ್ಲಿರುವ ಹೊರನಾಡಿಗರು, ‘ಬಾಬಿಲೋನನ್ನು ಸ್ವಸ್ಥಮಾಡಲು ನಾವು ಪ್ರಯತ್ನಿಸಿದೆವು. ಆದರೆ ಅದು ಸ್ವಸ್ಥವಾಗಲಿಲ್ಲ. ಬಾಬಿಲೋನನ್ನು ಬಿಟ್ಟು ನಾವೆಲ್ಲರು ನಮ್ಮ ನಮ್ಮ ನಾಡುಗಳಿಗೆ ಹೋಗೋಣ. ಅದು ಪಡೆಯಬೇಕಾದ ದಂಡನೆ ಆಕಾಶ ಮುಟ್ಟುವಷ್ಟು ದೊಡ್ಡದು, ಹೌದು, ಅದು ಗಗನದವರೆಗೂ ಬೆಳೆದಿದೆ,” ಎನ್ನುವರು.


ನಾಡನು ನಡುಗಿಸಿ ಬಿಡಿಬಿಡಿಯಾಗಿಸಿದೆ I ಅದರೊಡಕನು ಸರಿಮಾಡು ತಡವರಿಸದೆ II


ಹೀಗೆ ಅವರು ಇಸ್ರಯೇಲರ ಮೇಲೆ ನನ್ನ ಹೆಸರನ್ನು ಉಚ್ಛರಿಸುವಾಗ ನಾನು ಅವರನ್ನು ಆಶೀರ್ವದಿಸುವೆನು.”


ಜಗದ ಜನರೆಲ್ಲರು ನಿಮ್ಮನ್ನು ಸರ್ವೇಶ್ವರನ ಜನರೆಂದು ತಿಳಿದುಕೊಂಡು ನಿಮಗೆ ಭಯಪಡುವರು.


ಪರಲೋಕದಿಂದ ಅವನ ಪ್ರಾರ್ಥನೆಯನ್ನು ಕೇಳಿ ಅವನು ಬೇಡಿಕೊಂಡದ್ದನ್ನು ಅನುಗ್ರಹಿಸಿರಿ. ಆಗ ಲೋಕದ ಎಲ್ಲ ಜನರೂ ನಿಮ್ಮ ನಾಮಮಹತ್ತನ್ನು ತಿಳಿದು, ನಿಮ್ಮ ಜನರಾದ ಇಸ್ರಯೇಲರಂತೆ, ನಿಮ್ಮಲ್ಲಿ ಭಯಭಕ್ತಿಯುಳ್ಳವರಾಗಿ ನಾನು ನಿಮ್ಮ ಹೆಸರಿಗಾಗಿ ಈ ಆಲಯವನ್ನು ಕಟ್ಟಿಸಿದ್ದೇನೆಂದು ತಿಳಿದುಕೊಳ್ಳುವರು.


“ನರಪುತ್ರನೇ, ನಿನ್ನ ಜನರಿಗೆ ಹೀಗೆ ಹೇಳು: ಶಿಷ್ಟನು ದ್ರೋಹಮಾಡಿದ್ದಲ್ಲಿ ಅವನ ಪುಣ್ಯ ಅವನನ್ನು ಉದ್ಧರಿಸದು; ದುಷ್ಟನು ತನ್ನ ದುಷ್ಟತನವನ್ನು ಬಿಟ್ಟಲ್ಲಿ ಅವನ ಪಾಪ ಅವನನ್ನು ಬೀಳಿಸದು; ಶಿಷ್ಟನು ಪಾಪಮಾಡಿದಲ್ಲಿ ಅವನ ಪುಣ್ಯ ಅವನನ್ನು ಉಳಿಸಲಾರದು.


ಯೆಹೋಷಾಫಾಟನು ಇದನ್ನು ಕೇಳಿ ಭಯಪಟ್ಟು, ಸರ್ವೇಶ್ವರನನ್ನೇ ಆಶ್ರಯಿಸಿಕೊಳ್ಳಬೇಕೆಂದು ನಿರ್ಣಯಿಸಿಕೊಂಡನು. ಯೆಹೂದ್ಯರೆಲ್ಲರೂ ಉಪವಾಸಮಾಡಬೇಕೆಂದು ಪ್ರಕಟಿಸಿದನು.


ಆಗ ಯೆಹೂದ್ಯರು ಸರ್ವೇಶ್ವರನ ಸಹಾಯವನ್ನು ಕೇಳಿಕೊಳ್ಳುವುದಕ್ಕಾಗಿ ತಮ್ಮ ಎಲ್ಲಾ ಪಟ್ಟಣಗಳಿಂದ ಆತನ ಸನ್ನಿಧಿಯಲ್ಲಿ ಕೂಡಿಬಂದರು.


“ಅರಸೆನ್ನ ಮುಖದರುಶನವನು", ಎಂದೆ ನೀನು I “ಅರಸುವೆನು ಅದನೆ", ಎಂದು ಮರುನುಡಿದೆ ನಾನು II


ದಿಕ್ಕು ತೋಚದವನಂತೆ ನಿಶ್ಚಲರಾಗಿರುವಿರಿ, ಏಕೆ? ರಕ್ಷಿಸಲಾಗದ ರಣಧೀರನಂತಿರುವಿರಿ, ಏಕೆ? ಆದರೂ ಸರ್ವೇಶ್ವರಾ, ನೀವು ನಮ್ಮ ಮಧ್ಯೆ ಇರುವಿರಿ; ನಾವು ನಿಮ್ಮ ಹೆಸರಿನವರು, ನಮ್ಮನ್ನು ಕೈಬಿಡಬೇಡಿ.


ಸರ್ವೇಶ್ವರ ಹೀಗೆನ್ನುತ್ತಾರೆ: “ಆ ದಿನಗಳಲ್ಲಿ, ಆ ಕಾಲದಲ್ಲಿ ಇಸ್ರಯೇಲರೂ ಯೆಹೂದ್ಯರೂ ಒಟ್ಟಿಗೆ ಹಿಂದಿರುಗಿ ಬರುವರು. ದಾರಿಯುದ್ದಕ್ಕೂ ಅಳುತ್ತಾ ಬಂದು ತಮ್ಮ ದೇವರಾದ ಸರ್ವೇಶ್ವರನನ್ನು ಮರೆಹೋಗುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು