Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 6:2 - ಕನ್ನಡ ಸತ್ಯವೇದವು C.L. Bible (BSI)

2 ನಾ ನಿರ್ಮಿಸಿರುವ ಈ ಭವ್ಯ ಮಂದಿರ ನಿಮಗಾಗಲಿ ಶಾಶ್ವತ ನಿವಾಸ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಆದರೆ ನಾನು ನಿನಗೋಸ್ಕರ ಒಂದು ಆಲಯವನ್ನು, ನೀನು ಶಾಶ್ವತವಾಗಿ ವಾಸಮಾಡತಕ್ಕ ಸ್ಥಳವಾಗಿರಲೆಂದು ನಾನು ಕಟ್ಟಿಸಿದ್ದೇನೆ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ನಾನು ನಿನಗೋಸ್ಕರ ಒಂದು ಮಂದಿರವನ್ನು ಕಟ್ಟಿಸಿದ್ದೇನೆ; ಅದು ನಿನಗೆ ಶಾಶ್ವತವಾದ ವಾಸಸ್ಥಳವಾಗಿರಲಿ ಎಂದು ಪ್ರಾರ್ಥನೆ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ನಾನು ನಿನಗೋಸ್ಕರ ಆಲಯವನ್ನು ಕಟ್ಟಿಸಿದ್ದೇನೆ. ಅದು ನಿನಗೆ ಶಾಶ್ವತವಾದ ವಾಸಸ್ಥಳವಾಗಲಿ” ಎಂದು ಪ್ರಾರ್ಥಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಆದರೆ ನಾನು ನಿಮಗೋಸ್ಕರ ಭವ್ಯವಾದ ಮಂದಿರವನ್ನು ಕಟ್ಟಿಸಿದ್ದೇನೆ, ಅದು ನಿಮಗೆ ಶಾಶ್ವತವಾದ ವಾಸಸ್ಥಳವಾಗಿರಲಿ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 6:2
19 ತಿಳಿವುಗಳ ಹೋಲಿಕೆ  

ಆಗ ಸಿಂಹಾಸನದ ಕಡೆಯಿಂದ ಬಂದ ಮಹಾಧ್ವನಿ ಇಂತೆಂದಿತು : ಇಗೋ ಮಾನವರ ಮಧ್ಯೆಯೇ ಇದೆ ದೇವಾಲಯ, ಆತನವರೊಡನೆ ವಾಸಿಸುವನು; ಅವರಾತನಿಗೆ ಪ್ರಜೆಗಳಾಗುವರು; ದೇವರೇ ಅವರುಗಳ ಜೊತೆಗಾರ; ಆತನಲ್ಲದೆ ಅವರಿಗಿಲ್ಲ ಬೇರಾವ ದೇವ.


ಜೆರುಸಲೇಮಿನಲ್ಲಿ ವಾಸಿಸುವ ಪ್ರಭು ಘನಹೊಂದಲಿ I ಆತನ ಕೀರ್ತಿ ಸಿಯೋನಿನಿಂದ ಹಬ್ಬಿಹರಡಲಿ I ಅಲ್ಲೆಲೂಯ! II


ಮುಚ್ಚೆನು ನಾನು ಕಣ್ಣುಗಳನು I ಕೂಡಿಸೆನು ನಾನು ರೆಪ್ಪೆಗಳನು” II


ಆಮೇಲೆ ದಾವೀದನು ತನ್ನ ಮಗ ಸೊಲೊಮೋನನಿಗೆ, “ಸ್ಥಿರಚಿತ್ತನಾಗಿರು, ಧೈರ್ಯದಿಂದಿರು, ಕೆಲಸಕ್ಕೆ ಕೈಹಾಕು; ಅಂಜಬೇಡ, ಕಳವಳಗೊಳ್ಳಬೇಡ. ನನ್ನ ದೇವರಾಗಿರುವ ಸರ್ವೇಶ್ವರಸ್ವಾಮಿ ನಿನ್ನೊಂದಿಗೆ ಇರುತ್ತಾರೆ; ಅವರು ತಮ್ಮ ಆಲಯದ ಎಲ್ಲಾ ಕೆಲಸ ತೀರುವವರೆಗೂ ನಿನ್ನನ್ನು ಕೈಬಿಡುವುದಿಲ್ಲ, ತೊರೆಯುವುದಿಲ್ಲ.


‘ನಿನ್ನ ಮಗ ಸೊಲೊಮೋನನೇ ನನ್ನ ಆಲಯವನ್ನೂ ಅದರ ಪ್ರಾಕಾರಗಳನ್ನೂ ಕಟ್ಟಿಸುವನು. ಅವನು ನನಗೆ ಮಗನಾಗಿ ಇರಬೇಕೆಂದು ಅವನನ್ನು ಆರಿಸಿಕೊಂಡಿದ್ದೇನೆ; ನಾನು ಅವನಿಗೆ ತಂದೆಯಾಗಿ ಇರುವೆನು.


ನನಗಾಗಿ ಒಂದು ದೇವಾಲಯವನ್ನು ಕಟ್ಟುವವನು ಅವನೇ. ನಾನು ಅವನ ಸಿಂಹಾಸನವನ್ನು ಸ್ಥಿರಪಡಿಸುವೆನು.


ಅವನು ನನ್ನ ಹೆಸರಿನಲ್ಲಿ ಒಂದು ದೇವಾಲಯವನ್ನು ಕಟ್ಟುವನು. ನಾನು ಅವನ ಸಿಂಹಾಸನವನ್ನು ಸ್ಥಿರಪಡಿಸುವೆನು.


ದಾವೀದನು ದೇವರ ಮಂಜೂಷವನ್ನು, ಈಗಾಗಲೇ ಕಿರ್ಯತ್ಯಾರೀಮಿನಿಂದ ತಾನು ಜೆರುಸಲೇಮಿನಲ್ಲಿ ಅದಕ್ಕೋಸ್ಕರ ಸಿದ್ಧಮಾಡಿದ್ದ ಗುಡಾರಕ್ಕೆ, ತೆಗೆದುಕೊಂಡು ಬಂದಿದ್ದನು.


ಆಗ ಸೊಲೊಮೋನನು ಹೀಗೆಂದು ಪ್ರಾರ್ಥಿಸಿದನು: “ಹೇ ಸರ್ವೇಶ್ವರಾ, ರವಿಯನ್ನು ಆಗಸದಲ್ಲಿ ಸ್ಥಿರವಾಗಿರಿಸಿದ ನೀವು ಆರಿಸಿಕೊಂಡಿರಿ ಕರಿಮೋಡದಲಿ ವಾಸಿಸಲು.


ಇದಾದ ಮೇಲೆ ಎದ್ದು ನಿಂತಿದ್ದ ಇಸ್ರಯೇಲ್ ಸಮಾಜದ ಕಡೆಗೆ ತಿರುಗಿಕೊಂಡು ಅವರನ್ನು ಆಶೀರ್ವದಿಸಿದನು.


ಅರಸನು ಮತ್ತು ಅವನ ಮಂತ್ರಿಗಳು ಜೆರುಸಲೇಮಿನಲ್ಲಿ ವಾಸಿಸುತ್ತಿರುವ ಇಸ್ರಯೇಲ್ ದೇವರಿಗೆ ಕಾಣಿಕೆಯಾಗಿ ಸಮರ್ಪಿಸಿದ ಬೆಳ್ಳಿಬಂಗಾರವನ್ನು,


ಬಾಬಿಲೋನ್ ಸಂಸ್ಥಾನದಲ್ಲಿ ನಿನಗೆ ಸಿಕ್ಕುವ ಬೆಳ್ಳಿಬಂಗಾರವನ್ನು, ಹಾಗು ಇಸ್ರಯೇಲ್ ಜನಸಾಮಾನ್ಯರೂ ಯಾಜಕರೂ ಜೆರುಸಲೇಮಿನಲ್ಲಿರುವ ತಮ್ಮ ದೇವರ ಆಲಯಕ್ಕಾಗಿ ಸ್ವಂತ ಇಚ್ಛೆಯಿಂದ ಕೊಡುವ ಕಾಣಿಕೆಗಳನ್ನು, ಅಲ್ಲಿಗೆ ಒಪ್ಪಿಸಬೇಕು. ಹೀಗೆಂದು ತಿಳಿಸಿ ನಾನೂ ಮತ್ತು ನನ್ನ ಏಳು ಮಂದಿ ಮಂತ್ರಿಗಳೂ ನಿನ್ನನ್ನು ಕಳುಹಿಸುತ್ತಿದ್ದೇವೆ.


ಜನರು ಪ್ರವೇಶಿಸುವಾಗ ರಾಜನು ಅವರ ಮಧ್ಯೆ ಪ್ರವೇಶಿಸಲಿ ಅವರು ಹೊರಡುವಾಗ ಅವನೂ ಹೊರಡಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು