2 ಪೂರ್ವಕಾಲ ವೃತ್ತಾಂತ 4:2 - ಕನ್ನಡ ಸತ್ಯವೇದವು C.L. Bible (BSI)2 ಅನಂತರ ಅವನು ‘ಕಂಚಿನ ಕಡಲು’ ಎನಿಸಿಕೊಳ್ಳುವ ಎರಕದ ಒಂದು ದೊಡ್ಡ ಪಾತ್ರೆಯನ್ನು ಮಾಡಿಸಿದನು. ಅದರ ಬಾಯಿ ಚಕ್ರಾಕಾರವಾಗಿಯೂ ಅಂಚಿನಿಂದ ಅಂಚಿಗೆ 4:4 ಮೀಟರ್ ಇತ್ತು. ಅದರ ಎತ್ತರ 2:2 ಮೀಟರ್, ಸುತ್ತಳತೆ 13:2 ಮೀಟರ್, ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20192 ಸೊಲೊಮೋನನು ಒಂದು ಕಂಚಿನ ಕಡಲು ಎಂಬ ಪಾತ್ರೆಯನ್ನು ಮಾಡಿಸಿದನು. ಅದು ಚಕ್ರಾಕಾರವಾಗಿ ಅಂಚಿನಿಂದ ಅಂಚಿಗೆ ಹತ್ತು ಮೊಳವಾಗಿಯೂ ಇತ್ತು. ಅದರ ಎತ್ತರವು ಐದು ಮೊಳವಾಗಿಯೂ, ಸುತ್ತಳತೆ ಮೂವತ್ತು ಮೊಳ ನೂಲಳತೆಯಾಗಿತ್ತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)2 ಅನಂತರ ಅವನು ಸಮುದ್ರವೆನಿಸಿಕೊಳ್ಳುವ ಒಂದು ಎರಕದ ಪಾತ್ರೆಯನ್ನು ಮಾಡಿಸಿದನು. ಅದರ ಬಾಯಿ ಚಕ್ರಾಕಾರವಾಗಿಯೂ ಅಂಚಿನಿಂದ ಅಂಚಿಗೆ ಹತ್ತು ಮೊಳವಾಗಿಯೂ ಇತ್ತು. ಅದರ ಎತ್ತರ ಐದು ಮೊಳ, ಸುತ್ತಳತೆ ಮೂವತ್ತು ಮೊಳ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್2 ಅವನು ಎರಕಹೊಯ್ದ ದೊಡ್ಡ ಗಾತ್ರದ ನೀರಿನ ಪಾತ್ರೆಯನ್ನು ಮಾಡಿಸಿದನು. ಇದು ದುಂಡಾಕಾರವಾಗಿದ್ದು ಅದರ ಬಾಯಿಯ ಅಂಚಿನಿಂದ ಅಂಚಿಗೆ ಹತ್ತು ಮೊಳ ಅಗಲವಿತ್ತು; ಅದರ ಸುತ್ತಳತೆ ಮೂವತ್ತು ಮೊಳ; ಎತ್ತರ ಐದು ಮೊಳ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ2 ಅನಂತರ ಅವನು ಸಮುದ್ರಪಾತ್ರೆ ಎಂದು ಕರೆಯಲಾಗುವ ಎರಕದ ದೊಡ್ಡ ಪಾತ್ರೆಯನ್ನು ಮಾಡಿಸಿದನು; ಅದು ಚಕ್ರಾಕಾರವಾಗಿ ಅಂಚಿನಿಂದ ಅಂಚಿಗೆ ಸುಮಾರು ನಾಲ್ಕು ಮೀಟರ್; ಅದರ ಎತ್ತರ ಸುಮಾರು ಎರಡು ಮೀಟರ್; ಸುತ್ತಳತೆ ಸುಮಾರು ಹದಿನಾಲ್ಕು ಮೀಟರಾಗಿತ್ತು; ಅಧ್ಯಾಯವನ್ನು ನೋಡಿ |