Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 36:21 - ಕನ್ನಡ ಸತ್ಯವೇದವು C.L. Bible (BSI)

21 ಈ ಪ್ರಕಾರ ಸರ್ವೇಶ್ವರ ಯೆರೆಮೀಯನ ಮುಖಾಂತರ ಹೇಳಿಸಿದ ಮಾತು ನೆರವೇರಿತು; ನಾಡು ತನ್ನ ಸಬ್ಬತ್‍ಕಾಲವನ್ನು ಅನುಭವಿಸುವುದಕ್ಕೆ ಮಾರ್ಗವಾಯಿತು. ಅದು ಎಪ್ಪತ್ತು ವರ್ಷ ಹಾಳುಬಿದ್ದು ಆ ಕಾಲಾವಧಿಯಲ್ಲಿ ವಿಶ್ರಾಂತಿಯನ್ನು ಅನುಭವಿಸುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಈ ಪ್ರಕಾರ ಯೆರೆಮೀಯನ ಮುಖಾಂತರ ಹೇಳಿಸಿದ ಯೆಹೋವನ ಮಾತು ನೆರವೇರಿತು; ದೇಶವು ತನ್ನ ಸಬ್ಬತ್ ಕಾಲವನ್ನು ಅನುಭವಿಸುವವರೆಗೂ ಸಮಾಧಾನವಾಗಿತ್ತಷ್ಟೇ. ದೇಶವು ಎಪ್ಪತ್ತು ವರ್ಷಗಳು ಪೂರ್ಣವಾಗುವವರೆಗೂ ಅದು ಶೂನ್ಯವಾಗಿದ್ದ ಸಬ್ಬತ್ತನ್ನು ಅನುಭವಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಈ ಪ್ರಕಾರ ಯೆಹೋವನು ಯೆರೆಮೀಯನ ಮುಖಾಂತರ ಹೇಳಿಸಿದ ಮಾತು ನೆರವೇರಿ ದೇಶವು ತನ್ನ ಸಬ್ಬತ್‍ಕಾಲವನ್ನು ಅನುಭವಿಸುವದಕ್ಕೆ ಮಾರ್ಗವಾಯಿತು. ದೇಶವು ಎಪ್ಪತ್ತು ವರುಷ ಹಾಳುಬಿದ್ದು ಆ ಕಾಲದಲ್ಲೆಲ್ಲಾ ವಿಶ್ರಾಂತಿಯನ್ನು ಅನುಭವಿಸುತ್ತಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಹೀಗೆ ಯೆಹೋವನು ತನ್ನ ಪ್ರವಾದಿಯಾದ ಯೆರೆಮೀಯನ ಮೂಲಕ ಹೇಳಿಸಿದ ಮಾತುಗಳನ್ನು ನೆರವೇರಿಸಿದನು. “ಈ ಸ್ಥಳವು ಎಪ್ಪತ್ತು ವರ್ಷಗಳ ತನಕ ಪಾಳುಬೀಳುವದು. ಜನರು ಆಚರಿಸದೆಹೋದ ಸಬ್ಬತ್ ಹಬ್ಬಗಳಿಗೆ ಅದು ಪರಿಹಾರವಾಗಿರುವುದು” ಎಂದು ಯೆರೆಮೀಯನು ಹೇಳಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಹೀಗೆ ಯೆರೆಮೀಯನ ಮುಖಾಂತರವಾಗಿ ಹೇಳಿಸಿದ ಯೆಹೋವ ದೇವರ ವಾಕ್ಯವು ನೆರವೇರಿತು. ದೇಶವು ಅದರ ಸಬ್ಬತ್ ದಿನಗಳನ್ನು ಅನುಭವಿಸುವುದಕ್ಕೆ ಮಾರ್ಗವಾಯಿತು. ಅದು ಎಪ್ಪತ್ತು ವರ್ಷ ಹಾಳುಬಿದ್ದು, ಆ ಕಾಲಾವಧಿಯಲ್ಲಿ ವಿಶ್ರಾಂತಿಯನ್ನು ಅನುಭವಿಸುತ್ತಾ ಇತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 36:21
13 ತಿಳಿವುಗಳ ಹೋಲಿಕೆ  

“ಸರ್ವೇಶ್ವರ ಹೀಗೆನ್ನುತ್ತಾರೆ: ‘ಬಾಬಿಲೋನಿನ ರಾಜ್ಯ ಎಪ್ಪತ್ತು ವರ್ಷ ಪ್ರಬಲಿಸಿದ ಮೇಲೆ ನಾನು ನಿಮ್ಮನ್ನು ಸಂಧಿಸಿ ಈ ಸ್ಥಳಕ್ಕೆ ಮರಳಿ ಬರಮಾಡುವೆನು. ಈ ಶುಭವಾಕ್ಯವನ್ನು ನಿಮ್ಮ ಮೇಲ್ಮೆಗಾಗಿ ನೆರವೇರಿಸುವೆನು.


ಆಗ ದೇವದೂತನು: “ಸೇನಾಧಿಶ್ವರ ಸರ್ವೇಶ್ವರಾ, ಕಳೆದ ಎಪ್ಪತ್ತು ವರ್ಷಗಳಿಂದ ನೀವು ಕೋಪದಿಂದಿರುವಿರಿ, ಏಕೆ? ಇನ್ನೆಷ್ಟು ಕಾಲ ಜೆರುಸಲೇಮಿಗೂ ಜುದೇಯದ ಇತರ ಪಟ್ಟಣಗಳಿಗೂ ಕರುಣೆತೋರಿಸದೆ ಇರುವಿರಿ?” ಎಂದು ಕೇಳಿದ.


ದಾನಿಯೇಲನಾದ ನಾನು ಪವಿತ್ರಗ್ರಂಥಗಳನ್ನು ಪರೀಕ್ಷಿಸಿ, ಸರ್ವೇಶ್ವರಸ್ವಾಮಿ ಪ್ರವಾದಿ ಯೆರೆಮೀಯನಿಗೆ ದಯಪಾಲಿಸಿದ ವಾಕ್ಯಾನುಸಾರ ಜೆರುಸಲೇಮ್ ಪಾಳುಬಿದ್ದಿರಬೇಕಾದ ಪೂರ್ಣಕಾಲಾವಧಿ ಎಪ್ಪತ್ತು ವರ್ಷಗಳೆಂದು ತಿಳಿದುಕೊಂಡೆ.


ಆದರೆ ಅವರು ಬಿಟ್ಟುಹೋದ ಸ್ವಂತ ನಾಡು ಮೊಟ್ಟಮೊದಲು ನಿರ್ಜನವಾಗಬೇಕು; ಅದು ತನಗೆ ಸಲ್ಲಬೇಕಾದ ಸಬ್ಬತ್ ವಿಶ್ರಾಂತಿಯನ್ನು ಅನುಭವಿಸಬೇಕು; ಅವರು ಸರ್ವೇಶ್ವರನ ಆಜ್ಞೆ ಬೇಡವೆಂದು ಆತನ ವಿಧಿಗಳನ್ನು ತಾತ್ಸಾರ ಮಾಡಿದ ಕಾರಣ ತಮ್ಮ ಪಾಪದ ಫಲವನ್ನು ಸವಿಯಬೇಕು.


“ನೀವು ನನ್ನ ಮಾತನ್ನು ಕೇಳದ ಕಾರಣ ನಾನು ಉತ್ತರಭಾಗದ ರಾಷ್ಟ್ರಗಳನ್ನೆಲ್ಲ ಕರೆಯಿಸುವೆನು. ಬಾಬಿಲೋನಿನ ಅರಸ ಹಾಗು ನನ್ನ ಸೇವಕನಾದ ನೆಬೂಕದ್ನೆಚ್ಚರನನ್ನೂ ಬರಮಾಡುವೆನು. ಅವರು ಈ ನಾಡಿನ, ಇದರ ನಿವಾಸಿಗಳ, ಮತ್ತು ಸುತ್ತಮುತ್ತಲಿನ ನಾಡುಗಳ ಮೇಲೂ ಬೀಳುವರು. ಹೀಗೆ ಇವುಗಳನ್ನು ತೀರ ಹಾಳುಮಾಡುವೆನು. ನಿರಂತರ ಪರಿಹಾಸ್ಯಕ್ಕೂ ಪರಿವಿನಾಶಕ್ಕೂ ಇವನ್ನು ಗುರಿಪಡಿಸುವೆನು.


ಇವು ಯೆರೆಮೀಯನ ಪ್ರವಚನಗಳು. ಈತ ಬೆನ್ಯಮೀನ್ ಪ್ರಾಂತ್ಯಕ್ಕೆ ಸೇರಿದ ಅನಾತೋತ್ ಊರಿನ ಯಾಜಕ ವರ್ಗದವನು. ಇವನ ತಂದೆ ಹಿಲ್ಕೀಯನು.


ಬಿರುಗಾಳಿಯಂತೆ ಅವರನ್ನು ಅಪರಿಚಿತ ಜನಾಂಗಗಳ ಮಧ್ಯೆ ತೂರಿ ಚದರಿಬಿಟ್ಟೆ; ಹಾಗೆ ಅವರು ಚದರಿಹೋದ ಮೇಲೆ ನಾಡು ಹಾಳಾಯಿತು. ಅಲ್ಲಿ ಯಾರೂ ಉಳಿಯದಂತಾಯಿತು. ಅವರ ನಿಮಿತ್ತ ಚೆಲುವ ನಾಡು ನಿರ್ಜನ ಪ್ರದೇಶವಾಯಿತು.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು