Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 33:3 - ಕನ್ನಡ ಸತ್ಯವೇದವು C.L. Bible (BSI)

3 ತನ್ನ ತಂದೆ ಹಿಜ್ಕೀಯನು ತೆಗೆದುಹಾಕಿದ್ದ ಪೂಜಾಸ್ಥಳಗಳನ್ನು ಮತ್ತೆ ಸ್ಥಾಪಿಸಿದನು. ಬಾಳ್‍ದೇವತೆಗಳಿಗಾಗಿ ಬಲಿಪೀಠಗಳನ್ನು ಕಟ್ಟಿಸಿದನು; ಅಶೇರ ವಿಗ್ರಹಸ್ತಂಭಗಳನ್ನು ನಿಲ್ಲಿಸಿ, ನಕ್ಷತ್ರಮಂಡಲಕ್ಕೆ ಕೈಮುಗಿದು ಆರಾಧಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ತನ್ನ ತಂದೆಯಾದ ಹಿಜ್ಕೀಯನು ತೆಗೆದುಹಾಕಿದ ಪೂಜಾಸ್ಥಳಗಳನ್ನು ತಿರುಗಿ ಸ್ಥಾಪಿಸಿ, ಬಾಳ್ ದೇವತೆಗಳಿಗಾಗಿ ಯಜ್ಞವೇದಿಗಳನ್ನು ಕಟ್ಟಿಸಿ ಅಶೇರ ವಿಗ್ರಹ ಸ್ತಂಭಗಳನ್ನು ನಿಲ್ಲಿಸಿ ನಕ್ಷತ್ರಮಂಡಲಕ್ಕೆ ಕೈಮುಗಿದು ಆರಾಧಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ತನ್ನ ತಂದೆಯಾದ ಹಿಜ್ಕೀಯನು ತೆಗೆದುಹಾಕಿದ ಪೂಜಾಸ್ಥಳಗಳನ್ನು ತಿರಿಗಿ ಸ್ಥಾಪಿಸಿ ಬಾಳ್‍ದೇವತೆಗಳಿಗೋಸ್ಕರ ಯಜ್ಞವೇದಿಗಳನ್ನು ಕಟ್ಟಿಸಿ ಅಶೇರವಿಗ್ರಹ ಸ್ತಂಭಗಳನ್ನು ನಿಲ್ಲಿಸಿ ನಕ್ಷತ್ರಮಂಡಲಕ್ಕೆ ಕೈಮುಗಿದು ಆರಾಧಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಮನಸ್ಸೆಯ ತಂದೆಯಾದ ಹಿಜ್ಕೀಯನು ಕೆಡವಿದ ಉನ್ನತಸ್ಥಳಗಳನ್ನು ಅವನು ಮತ್ತೆ ಕಟ್ಟಿಸಿದನು. ಬಾಳ್ ದೇವರ ವೇದಿಕೆಯನ್ನು ಕಟ್ಟಿಸಿ ಅಶೇರಸ್ತಂಭಗಳನ್ನು ನಿಲ್ಲಿಸಿದನು. ಆಕಾಶದ ನಕ್ಷತ್ರಸಮೂಹಗಳನ್ನು ಪೂಜಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಅವನು ತನ್ನ ತಂದೆಯಾದ ಹಿಜ್ಕೀಯನು ನಾಶಮಾಡಿದ ಉನ್ನತ ಪೂಜಾಸ್ಥಳಗಳನ್ನು ಮತ್ತೆ ಸ್ಥಾಪಿಸಿ, ಬಾಳನಿಗೆ ಬಲಿಪೀಠಗಳನ್ನು ಕಟ್ಟಿಸಿ, ಅಶೇರ ವಿಗ್ರಹಸ್ತಂಭಗಳನ್ನು ನಿಲ್ಲಿಸಿ, ಸಮಸ್ತ ನಕ್ಷತ್ರಮಂಡಲಕ್ಕೆ ಅಡ್ಡಬಿದ್ದು ಅವುಗಳನ್ನು ಪೂಜಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 33:3
27 ತಿಳಿವುಗಳ ಹೋಲಿಕೆ  

“ನಿಮ್ಮ ದೇವರಾದ ಸರ್ವೇಶ್ವರನಿಗಾಗಿ ನೀವು ಕಟ್ಟಿಸಿಕೊಳ್ಳುವ ಬಲಿಪೀಠದ ಬಳಿ ಅಶೇರವೆಂಬ ವಿಗ್ರಹಸ್ತಂಭವನ್ನು, ಅದು ಯಾವ ವಿಧವಾದ ಮರದಿಂದ ಮಾಡಿರಲಿ, ಅದನ್ನು ನೆಡಬಾರದು.


ಅನ್ಯ ದೇವರುಗಳನ್ನಾಗಲಿ, ಪೂಜಿಸಬಾರದೆಂದು ನಿಷೇಧಿಸಿರುವ ಸೂರ್ಯಚಂದ್ರ ನಕ್ಷತ್ರಗಳನ್ನಾಗಲಿ, ಪೂಜಿಸಿ, ಆರಾಧಿಸಿ ಸರ್ವೇಶ್ವರನ ದೃಷ್ಟಿಯಲ್ಲಿ ದುಷ್ಟವಾದುದನ್ನು ನಡೆಸಿದ್ದಾರೆ ಎಂದೂ


ಇದಾದನಂತರ ನೆರೆದುಬಂದ ಇಸ್ರಯೇಲರೆಲ್ಲರು ಜುದೇಯ ನಾಡಿನ ಪಟ್ಟಣಗಳಿಗೆ ಹೋಗಿ ಕಲ್ಲುಕಂಬಗಳನ್ನು ಒಡೆದು, ಆಶೇರ ವಿಗ್ರಹಸ್ತಂಭಗಳನ್ನು ಕಡಿದುಹಾಕಿ, ಪೂಜಾಸ್ಥಳಗಳನ್ನೂ ಯಜ್ಞವೇದಿಗಳನ್ನೂ ಹಾಳುಮಾಡಿಬಿಟ್ಟರು. ಜುದೇಯ ಹಾಗು ಬೆನ್ಯಾಮೀನ್ ಪ್ರಾಂತಗಳಲ್ಲಿ ಮಾತ್ರವಲ್ಲ, ಎಫ್ರಯಿಮ್, ಮನಸ್ಸೆ ಪ್ರಾಂತಗಳಲ್ಲೂ ಯಾವುದೊಂದನ್ನೂ ಉಳಿಸಲಿಲ್ಲ. ಆಮೇಲೆ ಇಸ್ರಯೇಲರೆಲ್ಲರೂ ತಮ್ಮ ತಮ್ಮ ಆಸ್ತಿಪಾಸ್ತಿಯಿದ್ದ ಪಟ್ಟಣಗಳಿಗೆ ಹೋದರು.


ಅವರು ಜೆರುಸಲೇಮಿನಲ್ಲಿದ್ದ ಯಜ್ಞವೇದಿಗಳನ್ನೂ ಧೂಪವೇದಿಗಳನ್ನೂ ತೆಗೆದುಕೊಂಡು ಹೋಗಿ ಕಿದ್ರೋನ್ ಹಳ್ಳದಲ್ಲಿ ಬಿಸಾಡಿಬಿಟ್ಟರು.


ಮಾಳಿಗೆಗಳ ಮೇಲೆ ನಿಂತು ಆಕಾಶದ ಸೂರ್ಯ, ಚಂದ್ರ, ನಕ್ಷತ್ರಗಳನ್ನು ಆರಾಧಿಸುವವರನ್ನು ನಾಶಗೊಳಿಸುವೆನು; ಅಂತೆಯೇ ಸರ್ವೇಶ್ವರನ ಆರಾಧಕರೆಂದು ಪ್ರಮಾಣಮಾಡಿ, ಮಲ್ಕಾಮನ ಮೇಲೂ ಪ್ರಮಾಣ ಮಾಡುವವರನ್ನು ವಿನಾಶಗೊಳಿಸುವೆನು.


ಜೆರುಸಲೇಮಿನ ಮನೆಗಳೂ ಜುದೇಯದ ಅರಸರ ಮನೆಗಳೂ, ಅಂದರೆ ಯಾವ ಯಾವ ಮನೆಮಾಳಿಗೆಗಳ ಮೇಲೆ ಆಕಾಶದ ನಕ್ಷತ್ರಗಣಕ್ಕೆಲ್ಲ ಧೂಪಾರತಿ ಎತ್ತಿ ಅನ್ಯದೇವತೆಗಳಿಗೆ ಪಾನನೈವೇದ್ಯಗಳನ್ನು ಸುರಿದಿದ್ದಾರೋ ಆ ಮನೆಗಳೆಲ್ಲ ಹೊಲಸಾಗಿ ತೋಫೆತ್ ಸ್ಥಳಕ್ಕೆ ಸಮಾನವಾಗುವುವು.”


ಯುದ್ಧಾಯುಧಗಳಿಗಿಂತ ಜ್ಞಾನವೇ ಉತ್ತಮ; ಆದರೆ ಒಬ್ಬನೇ ಒಬ್ಬ ಪಾಪಿ ಸಾಕು ಪುಣ್ಯಕೋಟೆಯನ್ನು ಹಾಳುಮಾಡಲು!


ಪೂಜಾಸ್ಥಳಗಳನ್ನು ಹಾಳುಮಾಡಿದನು. ಕಲ್ಲುಗಂಬಗಳನ್ನು ಒಡೆದುಹಾಕಿದನು. ಅಶೇರ ವಿಗ್ರಹಸ್ಥಂಭಗಳನ್ನು ಕೆಡವಿಬಿಟ್ಟನು. ಮೋಶೆ ಮಾಡಿಸಿದ ತಾಮ್ರಸರ್ಪವನ್ನು ಚೂರುಚೂರು ಮಾಡಿದನು. ಇಸ್ರಯೇಲರು ಅದಕ್ಕೆ ಆವರೆಗೂ ಧೂಪಸುಡುತ್ತಿದ್ದರು. ಅದಕ್ಕೆ ‘ನೆಹುಷ್ಟಾನ್’ ಎಂಬ ಹೆಸರಿತ್ತು.


ಆಗ ದೇವರು ಅವರಿಗೆ ವಿಮುಖರಾದರು. ಆಕಾಶದ ಗ್ರಹಗಳನ್ನೇ ಅವರು ಪೂಜಿಸಲೆಂದು ಬಿಟ್ಟುಬಿಟ್ಟರು. ಇದನ್ನು ಕುರಿತೇ ಪ್ರವಾದಿಗಳ ಗ್ರಂಥದಲ್ಲಿ: ‘ಓ ಇಸ್ರಯೇಲರೇ, ನೀವು ಮರಳುಗಾಡಿನಲ್ಲಿ ನಾಲ್ವತ್ತು ವರ್ಷಗಳಕಾಲ ದಹನಬಲಿಗಳನ್ನು ಅರ್ಪಿಸಿದ್ದು ನನಗಲ್ಲ.


ನಿಮ್ಮ ಮಕ್ಕಳು ಸೊಂಪಾಗಿ ಬೆಳೆದ ಮರಗಳನ್ನಾಗಲಿ ಎತ್ತರವಾದ ಗುಡ್ಡಗಳನ್ನಾಗಲಿ, ಬೈಲಿನ ಬೆಟ್ಟಗಳನ್ನಾಗಲಿ ಕಂಡಾಗಲೆಲ್ಲ ಅವರ ಬಲಿಪೀಠಗಳನ್ನು ಹಾಗು ಅಶೇರ ವಿಗ್ರಹಸ್ತಂಭಗಳನ್ನು ಜ್ಞಾಪಿಸಿಕೊಳ್ಳುತ್ತಾರೆ.


ಅವರು ಪ್ರೀತಿಸಿ, ಸೇವಿಸಿ, ಹಿಂಬಾಲಿಸಿ, ಆಶ್ರಯಿಸಿ, ಪೂಜಿಸಿದ ಸೂರ್ಯ,‍ ಚಂದ್ರ, ತಾರಾಗಣಗಳ ಎದುರಿಗೇ ಆ ಎಲುಬುಗಳನ್ನು ಹರಡಿಬಿಡುವರು. ಅವುಗಳನ್ನು ಯಾರೂ ಕೂಡಿಸಿ ಮತ್ತೆ ಹೂಣಿಡುವುದಿಲ್ಲ. ಅವು ಭೂಮಿಯ ಮೇಲೆ ಗೊಬ್ಬರದಂತೆ ಬಿದ್ದಿರುವುವು.


ನನ್ನ ನಂತರ ಬರುವವನು ಜ್ಞಾನಿಯೋ ಮೂಢನೋ ಯಾರಿಗೆ ಗೊತ್ತು? ಅವನು ಎಂಥವನಾದರೂ ನಾನು ಲೋಕದಲ್ಲಿ ಬುದ್ಧಿ ಖರ್ಚುಮಾಡಿ ಗಳಿಸಿದ ದುಡಿಮೆಯ ಫಲಕ್ಕೆಲ್ಲ ಅವನು ಒಡೆಯನಾಗುತ್ತಾನೆ. ಇದು ಸಹ ವ್ಯರ್ಥವೇ.


ಹಿಜ್ಕೀಯನು ಒಂದೇ ಬಲಿಪೀಠದ ಮುಂದೆ ಆರಾಧನೆಮಾಡಿ ಅದರ ಮೇಲೆಯೇ ಧೂಪಹಾಕಬೇಕೆಂಬುದಾಗಿ ಯೆಹೂದ್ಯರಿಗೂ ಜೆರುಸಲೇಮಿಗೂ ಆಜ್ಞಾಪಿಸಿ, ದೇವರ ಬೇರೆ ಎಲ್ಲ ಪೂಜಾಸ್ಥಳಗಳನ್ನೂ ಯಜ್ಞವೇದಿಗಳನ್ನೂ ಹಾಳುಮಾಡಿದನು ಅಲ್ಲವೆ?


ಜುದೇಯದ ರಾಜರು ಸೂರ್ಯದೇವತೆಗಾಗಿ ಪ್ರತಿಷ್ಠಿಸಿದ್ದ ಕುದುರೆಗಳನ್ನು ತೆಗೆದುಹಾಕಿ ರಥಗಳನ್ನು ಸುಡಿಸಿಬಿಟ್ಟನು. ಅವು ಸರ್ವೇಶ್ವರನ ಆಲಯದ ಕಂಚುಕಿಯಾದ ನಾತಾನ್ ಮೆಲೆಕನ ಕೋಣೆಯ ಹತ್ತಿರ ಇಡಲಾಗಿದ್ದವು.


ತನ್ನ ತಂದೆ ಹಿಜ್ಕೀಯನು ತೆಗೆದುಹಾಕಿದ್ದ ಪೂಜಾಸ್ಥಳಗಳನ್ನು ಮತ್ತೆ ಸ್ಥಾಪಿಸಿ ಇಸ್ರಯೇಲರ ಅರಸನಾದ ಅಹಾಬನಂತೆ ಬಾಳ್ ದೇವತೆಗಾಗಿ ಬಲಿಪೀಠಗಳನ್ನು ಕಟ್ಟಿಸಿ, ಅಶೇರ ವಿಗ್ರಹಸ್ತಂಭವನ್ನು ನಿಲ್ಲಿಸಿ, ನಕ್ಷತ್ರಮಂಡಲಕ್ಕೆ ಕೈಮುಗಿದು, ಆರಾಧಿಸಿದನು.


ಪಿತೃಗಳಂತೆಯೇ ಅವರೂ ತಮಗಾಗಿ ಪೂಜಾಸ್ಥಳಗಳನ್ನು ಏರ್ಪಡಿಸಿಕೊಂಡರು. ಪ್ರತಿಯೊಂದು ದಿಣ್ಣೆಯ ಮೇಲೆ ಹಾಗು ಚೆನ್ನಾಗಿ ಬೆಳೆದಿದ್ದ ಪ್ರತಿಯೊಂದು ಮರದ ಕೆಳಗೆ, ಕಲ್ಲಿನ ಕಂಬಗಳನ್ನೂ ಅಶೇರ ವಿಗ್ರಹಸ್ತಂಭಗಳನ್ನೂ ನಿಲ್ಲಿಸಿದರು.


ನೀವು ಆಕಾಶದ ಕಡೆಗೆ ಕಣ್ಣೆತ್ತಿ ನೋಡುವಾಗ ಭ್ರಮೆಗೊಂಡು, ಸೂರ್ಯ, ಚಂದ್ರ, ನಕ್ಷತ್ರಗಳೆನಿಸಿಕೊಳ್ಳುವ ಆಕಾಶದ ಪರಿವಾರಗಳನ್ನು ಆರಾಧಿಸಬಾರದು, ಪೂಜಿಸಬಾರದು. ಏಕೆಂದರೆ ನಿಮ್ಮ ದೇವರಾದ ಸರ್ವೇಶ್ವರ ಅವುಗಳನ್ನು ಜಗದ ಬೇರೆ ಎಲ್ಲ ಜನಾಂಗಗಳಿಗಾಗಿ ಕೊಟ್ಟಿದ್ದಾರೆ.


ಅವರ ಬಲಿಪೀಠಗಳನ್ನು ಕೆಡವಿಬಿಡಿ; ಅವರ ಕಲ್ಲುಕಂಬದ ವಿಗ್ರಹಗಳನ್ನು ಒಡೆದುಬಿಡಿ; ‘ಅಶೇರ’ ಎಂಬ ಸ್ತಂಭಗಳನ್ನು ಕಡಿದುಬಿಡಿ.


ತರುವಾಯ ಅವನು ಪ್ರಧಾನ ಯಾಜಕ ಹಿಲ್ಕೀಯನ, ಮುಖ್ಯ ಯಾಜಕರ ಹಾಗು ದ್ವಾರಪಾಲಕರ ಮುಖಾಂತರ ಬಾಳ್, ಅಶೇರ ಎಂಬ ದೇವತೆಗಳಿಗಾಗಿ ಹಾಗು ಆಕಾಶಸೈನ್ಯಗಳಿಗಾಗಿ ಉಪಯೋಗಿಸುತ್ತಿದ್ದ ಎಲ್ಲಾ ವಸ್ತುಗಳನ್ನು ಸರ್ವೇಶ್ವರನ ಆಲಯದಿಂದ ತರಿಸಿ, ಜೆರುಸಲೇಮಿನ ಹೊರಗಿರುವ ಕಿದ್ರೋನ್ ಬೈಲಿನಲ್ಲಿ ಅವುಗಳನ್ನು ಸುಡಿಸಿ, ಆ ಬೂದಿಯನ್ನು ಬೇತೇಲಿಗೆ ಕಳುಹಿಸಿದನು.


ಇದಲ್ಲದೆ, ಅಹಾಜನು ದೇವಾಲಯದ ಸಾಮಗ್ರಿಗಳನ್ನು ಕೂಡಿಸಿ, ಅವುಗಳನ್ನು ಚೂರುಚೂರು ಮಾಡಿಬಿಟ್ಟನು; ಸರ್ವೇಶ್ವರನ ಆಲಯದ ಬಾಗಿಲುಗಳನ್ನು ಮುಚ್ಚಿ ಜೆರುಸಲೇಮಿನ ಪ್ರತಿಯೊಂದು ಮೂಲೆಯಲ್ಲೂ ಯಜ್ಞವೇದಿಗಳನ್ನು ಕಟ್ಟಿಸಿದನು.


ಅನ್ಯದೇವತಾ ಪ್ರತಿಮೆಗಳನ್ನು ಹಾಗು ತಾನು ಮಾಡಿಸಿದ್ದ ಸ್ತಂಭವನ್ನು ಸರ್ವೇಶ್ವರನ ಆಲಯದಿಂದ ತೆಗಿಸಿದನು. ಸರ್ವೇಶ್ವರನ ಮಂದಿರವಿರುವ ಗುಡ್ಡದಲ್ಲೂ ಜೆರುಸಲೇಮಿನಲ್ಲೂ ಕಟ್ಟಿಸಿದ್ದ ಎಲ್ಲ ಯಜ್ಞವೇದಿಗಳನ್ನು ಕೆಡವಿ, ಅವುಗಳನ್ನು ಪಟ್ಟಣದ ಹೊರಗೆ ಹಾಕಿಸಿದನು.


ಅವನು ದೇವರಿಗೆ ಮಾಡಿದ ಪ್ರಾರ್ಥನೆ, ಅದಕ್ಕೆ ದೊರೆತ ಸದುತ್ತರ ಹಾಗು ಅವನು ದೀನಮನಸ್ಕನಾಗುವುದಕ್ಕೆ ಮುಂಚೆ ಮಾಡಿದ ಅಪರಾಧ, ದ್ರೋಹಗಳು, ಹಾಗು ಅವನು ಅಲ್ಲಲ್ಲಿ ಪೂಜಾಸ್ಥಳಗಳನ್ನು ಏರ್ಪಡಿಸಿ, ಅಶೇರಸ್ತಂಭ ವಿಗ್ರಹ, ಇವುಗಳನ್ನು ನಿಲ್ಲಿಸಿದ್ದು, ಇವುಗಳು ದರ್ಶಿಗಳ ಚರಿತ್ರೆಯಲ್ಲಿ ಲಿಖಿತವಾಗಿವೆ.


ಅವರು ನನ್ನನ್ನು ಬಿಟ್ಟು ಅನ್ಯದೇವತೆಗಳಿಗೆ ಧೂಪಾರತಿ ಎತ್ತಿ ತಮ್ಮ ದುಷ್ಕೃತ್ಯಗಳಿಂದ ನನ್ನನ್ನು ರೇಗಿಸಿದ್ದಾರೆ; ನನ್ನ ಕೋಪಾಗ್ನಿ ಈ ನಾಡಿನ ಮೇಲೆ ಉರಿಯುತ್ತಿರುವುದು ಆರಿಹೋಗುವುದಿಲ್ಲ,” ಎನ್ನುತ್ತಾರೆ.


ಸರ್ವೇಶ್ವರನ ನುಡಿ : “ಯೆಹೂದ್ಯರು ನನ್ನ ಚಿತ್ತಕ್ಕೆ ವಿರುದ್ಧವಾದುದನ್ನೆ ಮಾಡಿದ್ದಾರೆ. ನನ್ನ ಹೆಸರಿನಿಂದ ಪ್ರಖ್ಯಾತಗೊಂಡ ದೇವಾಲಯದಲ್ಲಿ ತಮ್ಮ ಅಸಹ್ಯವಸ್ತುಗಳನ್ನು ಇಟ್ಟು ಅದನ್ನು ಹೊಲೆಮಾಡಿದ್ದಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು