2 ಪೂರ್ವಕಾಲ ವೃತ್ತಾಂತ 32:8 - ಕನ್ನಡ ಸತ್ಯವೇದವು C.L. Bible (BSI)8 ಅವನಿಗಿರುವ ಸಹಾಯ ಮೂಳೆ ಮಾಂಸದ ತಡಿಕೆಯ ಬಲ; ನಮಗಿದ್ದಾರೆ ನಮ್ಮ ದೇವರಾದ ಸರ್ವೇಶ್ವರ. ಅವರೇ ನಮಗೆ ನೆರವಾಗಿ, ಯುದ್ಧಗಳಲ್ಲಿ ನಮ್ಮ ಪರವಾಗಿ ಕಾದಾಡುವರು,” ಎಂದು ಹೇಳಿ ಹುರಿದುಂಬಿಸಿದನು. ಜನರು ಜುದೇಯದ ಅರಸ ಹಿಜ್ಕೀಯನ ಮಾತುಗಳನ್ನು ಕೇಳಿ ಭರವಸೆಯುಳ್ಳವರಾದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಅವನಿಗಿರುವ ಸಹಾಯವು ನಶ್ವರವಾದ ತೋಳುಬಲ; ನಮಗಾದರೋ ನಮ್ಮ ಸಹಾಯಕನು ದೇವರಾದ ಯೆಹೋವನೇ. ಆತನು ನಮಗೆ ನೆರವಾಗಿ, ಯುದ್ಧಗಳಲ್ಲಿ ನಮಗೋಸ್ಕರ ಕಾದಾಡುವನು” ಎಂದು ಹೇಳಿ ಧೈರ್ಯಪಡಿಸಿದನು. ಜನರು ಯೆಹೂದದ ಅರಸನಾದ ಹಿಜ್ಕೀಯನ ಮಾತುಗಳನ್ನು ಕೇಳಿ ಭರವಸೆಯುಳ್ಳವರಾದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ಅವನಿಗಿರುವ ಸಹಾಯವು ಮಾಂಸದ ತೋಳು; ನಮಗಾದರೋ ನಮ್ಮ ದೇವರಾದ ಯೆಹೋವನೇ. ಆತನು ನಮಗೆ ನೆರವಾಗಿ ಯುದ್ಧಗಳಲ್ಲಿ ನಮಗೋಸ್ಕರ ಕಾದಾಡುವನು ಎಂದು ಹೇಳಿ ಧೈರ್ಯಪಡಿಸಿದನು. ಜನರು ಯೆಹೂದದ ಅರಸನಾದ ಹಿಜ್ಕೀಯನ ಮಾತುಗಳನ್ನು ಕೇಳಿ ಭರವಸವುಳ್ಳವರಾದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 ಅಶ್ಶೂರದ ರಾಜನ ಬಳಿಯಲ್ಲಿ ಮನುಷ್ಯರು ಮಾತ್ರ ಇರುವರು. ಆದರೆ ನಮ್ಮೊಂದಿಗೆ ದೇವರಾದ ಯೆಹೋವನಿದ್ದಾನೆ. ನಮ್ಮ ದೇವರು ನಮಗೆ ಸಹಾಯ ಮಾಡುತ್ತಾನೆ. ನಮ್ಮ ಯುದ್ಧದಲ್ಲಿ ಆತನು ನಮಗೋಸ್ಕರ ಕಾದಾಡುವನು” ಎಂದು ಹೇಳಿ ಹಿಜ್ಕೀಯ ಅರಸನು ತನ್ನ ಜನರನ್ನು ಪ್ರೋತ್ಸಾಹಿಸಿ ಬಲಗೊಳಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ8 ನಮಗಾದರೋ ಸಹಾಯ ಮಾಡುವುದಕ್ಕೂ, ನಮ್ಮ ಯುದ್ಧಗಳನ್ನು ನಡಿಸುವುದಕ್ಕೂ ನಮ್ಮ ದೇವರಾದ ಯೆಹೋವ ದೇವರು ತಾವೇ ಇದ್ದಾರೆ,” ಎಂದು ಹೇಳಿದನು. ಆದ್ದರಿಂದ ಜನರು ಯೆಹೂದದ ಅರಸನಾದ ಹಿಜ್ಕೀಯನ ಮಾತುಗಳಲ್ಲಿ ಭರವಸೆಯುಳ್ಳವರಾದರು. ಅಧ್ಯಾಯವನ್ನು ನೋಡಿ |