Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 32:11 - ಕನ್ನಡ ಸತ್ಯವೇದವು C.L. Bible (BSI)

11 ಹಿಜ್ಕೀಯನು, ‘ನಮ್ಮ ದೇವರಾದ ಸರ್ವೇಶ್ವರಸ್ವಾಮಿ ಅಸ್ಸೀರಿಯಾದ ಅರಸನ ಕೈಯಿಂದ ನಮ್ಮನ್ನು ರಕ್ಷಿಸುವನು,’ ಎಂಬ ನಂಬಿಕೆಯನ್ನು ನಿಮ್ಮಲ್ಲಿ ಹುಟ್ಟಿಸುವುದಕ್ಕೆ ಪ್ರಯತ್ನಿಸುತ್ತಿರುವುದು ನಿಮ್ಮನ್ನು ಹಸಿವೆ ನೀರಡಿಕೆಗಳಿಂದ ಸಾಯಿಸುವುದಕ್ಕೇ ಅಲ್ಲದೆ ಮತ್ತೇನಕ್ಕೂ ಅಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಹಿಜ್ಕೀಯನು, ‘ನಮ್ಮ ದೇವರಾದ ಯೆಹೋವನು ಅಶ್ಶೂರದ ಅರಸನ ಕೈಯಿಂದ ನಮ್ಮನ್ನು ರಕ್ಷಿಸುವನು’ ಎಂಬ ನಂಬಿಕೆ ನಿಮ್ಮಲ್ಲಿ ಹುಟ್ಟಿಸುವುದಕ್ಕೆ ಪ್ರಯತ್ನಿಸುತ್ತಿರುವುದು ನಿಮ್ಮನ್ನು ಹಸಿವೆ ನೀರಡಿಕೆಗಳಿಂದ ಸಾಯಿಸುವುದಕ್ಕಾಗಿಯೇ ಅಲ್ಲದೆ ಮತ್ತ್ಯಾವುದಕ್ಕೂ ಅಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಹಿಜ್ಕೀಯನು - ನಮ್ಮ ದೇವರಾದ ಯೆಹೋವನು ಅಶ್ಶೂರದ ಅರಸನ ಕೈಯಿಂದ ನಮ್ಮನ್ನು ರಕ್ಷಿಸುವನು ಎಂಬ ನಂಬಿಕೆಯನ್ನು ನಿಮ್ಮಲ್ಲಿ ಹುಟ್ಟಿಸುವದಕ್ಕೆ ಪ್ರಯತ್ನಿಸುತ್ತಿರುವದು ನಿಮ್ಮನ್ನು ಹಸಿವೆ ನೀರಡಿಕೆಗಳಿಂದ ಸಾಯಿಸುವದಕ್ಕೇ ಅಲ್ಲವೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಹಿಜ್ಕೀಯನು ನಿಮ್ಮನ್ನು ಮೋಸಪಡಿಸುತ್ತಿದ್ದಾನೆ. ನೀವು ಜೆರುಸಲೇಮಿನಲ್ಲಿಯೇ ಇರುವಂತೆ ಹೇಳಿ ನಿಮಗೆ ಮೋಸಮಾಡುತ್ತಿದ್ದಾನೆ. ಹಾಗೆ ಮಾಡಿದರೆ ನೀವು ಅನ್ನನೀರಿಲ್ಲದೆ ಸಾಯುವಿರಿ. ನಿಮಗೆ ಹಿಜ್ಕೀಯನು, “ನಮ್ಮ ದೇವರಾದ ಯೆಹೋವನು ಅಶ್ಶೂರದ ರಾಜನಿಂದ ಕಾಪಾಡುವನು” ಎಂದು ಹೇಳುತ್ತಾನಲ್ಲಾ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ‘ನಮ್ಮ ದೇವರಾದ ಯೆಹೋವ ದೇವರು ಅಸ್ಸೀರಿಯದ ಅರಸನ ಕೈಯಿಂದ ನಮ್ಮನ್ನು ಬಿಡಿಸುವರು,’ ಎಂದು ಹಿಜ್ಕೀಯನು ಹೇಳಿ, ನಿಮ್ಮನ್ನು ಹಸಿವೆ ಮತ್ತು ದಾಹದಿಂದ ಸಾಯಿಸುವುದಕ್ಕೆ ಒಪ್ಪಿಸಿಕೊಡಲು ಪ್ರೇರೇಪಿಸುತ್ತಾನಲ್ಲವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 32:11
14 ತಿಳಿವುಗಳ ಹೋಲಿಕೆ  

ದೇವರಲ್ಲಿ ಭರವಸೆಯಿಟ್ಟಿದ್ದ; ತಾನು ‘ದೇವರ ಪುತ್ರ’ ಎಂದು ಹೇಳಿಕೊಳ್ಳುತ್ತಿದ್ದ; ದೇವರಿಗೆ ಇಷ್ಟವಾದವನು ಇವನಾಗಿದ್ದರೆ ದೇವರೇ ಬಂದು ಇವನನ್ನು ಬಿಡುಗಡೆಮಾಡಲಿ,” ಎಂದು ಅಪಹಾಸ್ಯಮಾಡುತ್ತಿದ್ದರು.


‘ಸರ್ವೇಶ್ವರ ನಮ್ಮನ್ನು ರಕ್ಷಿಸುವರು’ ಎಂಬ ನಂಬಿಕೆಯನ್ನು ಹಿಜ್ಕೀಯನು ನಿಮ್ಮಲ್ಲಿ ಮೂಡಿಸದಂತೆ ಎಚ್ಚರಿಕೆಯಾಗಿರಿ. ಯಾವ ರಾಷ್ಟ್ರದ ದೇವರುಗಳು ತಾನೇ ಅಸ್ಸೀರಿಯದ ಅರಸನ ಕೈಯಿಂದ ನಾಡನ್ನು ಬಿಡಿಸಿಕೊಂಡಿದ್ದಾರೆ?


ಅದಕ್ಕೆ ಆ ದಳಪತಿಯು, “ನನ್ನ ಯಜಮಾನನು, ನಿಮ್ಮ ಸಂಗಡವಾಗಲಿ ಮತ್ತು ನಿಮ್ಮ ಒಡೆಯರ ಸಂಗಡವಾಗಲಿ ಮಾತ್ರ ಮಾತನಾಡಬೇಕೆಂದು ನನ್ನನ್ನು ಕಳುಹಿಸಲಿಲ್ಲ. ಈ ಗೋಡೆಯ ಮೇಲೆ ಕುಳಿತಿರುವ ಜನರ ಸಂಗಡವೂ ಮಾತನಾಡುವುದಕ್ಕಾಗಿ ಕಳುಹಿಸಿದ್ದಾರೆ. ಈ ಜನರು ನಮಗೆ ವಿರುದ್ಧವಾಗಿ ಹೋರಾಡಿದರೆ ನಿಮ್ಮ ಹಾಗೆ ಇವರು ಕೂಡ ತಮ್ಮ ಸ್ವಂತ ಮಲಮೂತ್ರವನ್ನು ತಿಂದು ಕುಡಿಯಬೇಕಾಗುತ್ತದೆ” ಎಂದು ಉತ್ತರಕೊಟ್ಟನು.


“ಹಿಡಿಯಿರಿ ಬೆನ್ನಟ್ಟಿ, ದೇವನವನನ್ನು ಕೈಬಿಟ್ಟಿಹನು I ರಕ್ಷಿಸುವಂಥವರಾರು ಇನ್ನಿಲ್ಲ” ಎನ್ನುತಿಹರು II


“ನಿನ್ನ ದೇವನೆಲ್ಲಿ?” ಎಂದು ವಿರೋಧಿಗಳು ಸತತ ಹಂಗಿಸುವಾಗ I ನನ್ನೆಲುಬುಗಳು ಮುರಿದಂತಾಗುತ್ತದೆ ಆ ಜರೆಯ ಕೇಳಿದಾಗ II


“ಇತ್ತನಿವನು ಭರವಸೆ, ಪ್ರಭುವೆ ತನ್ನುದ್ಧಾರಕನೆಂದು I ಆತನಿಗಿವನು ಮೆಚ್ಚುಗೆಯಾದರೆ ರಕ್ಷಿಸಲಿ” - ಇಂತೆಂದು II


“ಈತನಿಗೆ ದೇವರ ನೆರವೆನಿತು?” I ಇಂತಿದೆ ಹಲವರ ಕೆಣಕು ಮಾತು II


ನೀವು ಹಿಜ್ಕೀಯನಿಂದ ಮರುಳಾಗಿ ಮೋಸಹೋಗಬೇಡಿ; ಅವನನ್ನು ನಂಬಲೂಬೇಡಿ. ಯಾವ ರಾಜ್ಯಜನಾಂಗಗಳ ದೇವತೆಯೂ ತನ್ನ ಪ್ರಜೆಯನ್ನು ನನ್ನ ಮತ್ತು ನನ್ನ ಪೂರ್ವಿಕರ ಕೈಯಿಂದ ಬಿಡಿಸಲಾರದೆಹೋದರು. ಅಂದ ಮೇಲೆ, ನಿಮ್ಮ ದೇವರಂಥವನು ನಿಮ್ಮನ್ನು ನನ್ನ ಕೈಗೆ ಸಿಕ್ಕದಂತೆ ತಪ್ಪಿಸಬಲ್ಲನೇ?".


“ಜೆರುಸಲೇಮ್ ನನ್ನ ವಶವಾಗುವುದಿಲ್ಲವೆಂದು ನೀನು ನಂಬುವ ದೇವರು ನಿನಗೆ ಹೇಳಿ ನಿನ್ನನ್ನು ಮೋಸಗೊಳಿಸಬಹುದು.


ಹಿಜ್ಕೀಯನು ನಿಮಗೆ, ‘ಸರ್ವೇಶ್ವರ ಸ್ವಾಮಿಯಲ್ಲೇ ನಂಬಿಕೆಯಿಡಿ; ಅವರು ನಿಮ್ಮನ್ನು ಹೇಗಾದರೂ ಮಾಡಿ ರಕ್ಷಿಸುವರು; ಈ ಪಟ್ಟಣವು ಅಸ್ಸೀರಿಯದ ರಾಜನ ವಶವಾಗುವುದಿಲ್ಲ,’ ಎಂಬುದಾಗಿ ಹೇಳಿದರೆ ಅವನಿಗೆ ಕಿವಿಗೊಡಬೇಡಿ, ಒಪ್ಪಿಕೊಳ್ಳಬೇಡಿ.


ಅದಕ್ಕೆ ರಬ್ಷಾಕೆಯು, “ನನ್ನ ಯಜಮಾನರು, ನಿಮ್ಮ ಸಂಗಡವಾಗಲಿ ಮತ್ತು ನಿಮ್ಮ ಒಡೆಯರ ಸಂಗಡವಾಗಲಿ ಮಾತನಾಡಬೇಕೆಂದು ನನ್ನನ್ನು ಕಳುಹಿಸಲಿಲ್ಲ. ಈ ಗೋಡೆಯ ಮೇಲೆ ಕುಳಿತಿರುವ ಜನರ ಸಂಗಡ ಮಾತನಾಡುವುದಕ್ಕಾಗಿಯೇ ಕಳುಹಿಸಿದ್ದಾರೆ. ಈ ಜನರು ನಿಮ್ಮೊಡನೆ ಇದ್ದರೆ ನಿಮ್ಮ ಹಾಗೆ ಇವರು ಕೂಡ ತಮ್ಮ ಸ್ವಂತ ಮಲಮೂತ್ರವನ್ನು ತಿಂದು ಕುಡಿಯಬೇಕಾಗುತ್ತದೆ,” ಎಂದು ಉತ್ತರಕೊಟ್ಟನು.


“ಅಸ್ಸೀರಿಯದ ಅರಸ ಸನ್ಹೇರೀಬನ ಮಾತಿಗೆ ಕಿವಿಗೊಡಿ; ನೀವು ಯಾವುದರ ಮೇಲೆ ಭರವಸೆಯಿಟ್ಟು ಮುತ್ತಿಗೆಗೆ ಗುರಿಯಾಗಲಿರುವ ಜೆರುಸಲೇಮಿನಲ್ಲಿ ನಿಂತಿದ್ದೀರಿ?


ಹಿಜ್ಕೀಯನು ಒಂದೇ ಬಲಿಪೀಠದ ಮುಂದೆ ಆರಾಧನೆಮಾಡಿ ಅದರ ಮೇಲೆಯೇ ಧೂಪಹಾಕಬೇಕೆಂಬುದಾಗಿ ಯೆಹೂದ್ಯರಿಗೂ ಜೆರುಸಲೇಮಿಗೂ ಆಜ್ಞಾಪಿಸಿ, ದೇವರ ಬೇರೆ ಎಲ್ಲ ಪೂಜಾಸ್ಥಳಗಳನ್ನೂ ಯಜ್ಞವೇದಿಗಳನ್ನೂ ಹಾಳುಮಾಡಿದನು ಅಲ್ಲವೆ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು