Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 30:3 - ಕನ್ನಡ ಸತ್ಯವೇದವು C.L. Bible (BSI)

3 ಎರಡನೆಯ ತಿಂಗಳಿನಲ್ಲಿ ಅದನ್ನು ಆಚರಿಸಬೇಕೆಂದು ಅಭಿಪ್ರಾಯಪಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಯಾಕೆಂದರೆ ಯಾಜಕರಲ್ಲಿ ಸಾಕಷ್ಟು ಮಂದಿ ತಮ್ಮನ್ನು ಶುದ್ಧಿಪಡಿಸಿಕೊಂಡಿರಲಿಲ್ಲ. ಜನರು ಯೆರೂಸಲೇಮಿನಲ್ಲಿ ಇನ್ನೂ ಒಟ್ಟಾಗಿ ಸೇರಿ ಬಂದಿರಲಿಲ್ಲವಾದುದರಿಂದ ಕೂಡಲೆ ಪಸ್ಕಹಬ್ಬವನ್ನು ಆಚರಿಸಲು ಸಾಧ್ಯವಾಗುವುದಿಲ್ಲವೆಂದು ಅರಸನಿಗೂ ಅವನ ಸರದಾರರಿಗೂ ಯೆರೂಸಲೇಮಿನ ಸರ್ವಸಂಘದವರಿಗೂ ತಿಳಿದುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಎರಡನೆಯ ತಿಂಗಳಿನಲ್ಲಿ ಅದನ್ನು ಆಚರಿಸಬೇಕೆಂದು ಅಭಿಪ್ರಾಯಪಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಅದಕ್ಕೆ ಕಾರಣವೇನೆಂದರೆ, ನಿಯಮಿತ ದಿವಸದಲ್ಲಿ ಹಬ್ಬ ನಡೆಸಲು ಸಾಧ್ಯವಾಗಲಿಲ್ಲ. ಯಾಕೆಂದರೆ ಬೇಕಾದಷ್ಟು ಯಾಜಕರು ಆ ಪರಿಶುದ್ಧ ಸೇವೆಗಾಗಿ ತಮ್ಮನ್ನು ಸಿದ್ಧಪಡಿಸಿಕೊಂಡಿರಲಿಲ್ಲ. ಅಲ್ಲದೆ ಜೆರುಸಲೇಮಿನಲ್ಲಿಯೂ ಜನ ಸೇರಿ ಬರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಯಾಜಕರು ತಮ್ಮನ್ನು ತಕ್ಕ ಹಾಗೆ ಪ್ರತಿಷ್ಠೆ ಮಾಡಿಕೊಂಡಿರಲಿಲ್ಲ. ಜನರು ಯೆರೂಸಲೇಮಿನಲ್ಲಿ ಇನ್ನೂ ಕೂಡಿರಲಿಲ್ಲವಾದುದರಿಂದ ಆ ಕಾಲದಲ್ಲಿ ಪಸ್ಕಹಬ್ಬವನ್ನು ಆಚರಿಸಲಾರದೆ ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 30:3
8 ತಿಳಿವುಗಳ ಹೋಲಿಕೆ  

ಈ ಎಲ್ಲಾ ಪ್ರಾಣಿಗಳನ್ನು ವಧಿಸುವ ಕೆಲಸಕ್ಕೆ ಯಾಜಕರು ಸಾಲದೆಹೋದುದರಿಂದ ಆ ಕಾರ್ಯ ಮುಗಿವ ತನಕ, ಅವರ ಬಂಧುಗಳಾದ ಲೇವಿಯರು ಅವರಿಗೆ ಸಹಾಯ ಮಾಡುತ್ತಿದ್ದರು; ಅಷ್ಟರಲ್ಲಿ ಮಿಕ್ಕ ಯಾಜಕರು ತಮ್ಮನ್ನೇ ಶುದ್ಧೀಪಡಿಸಿಕೊಳ್ಳುತ್ತಿದ್ದರು. ತಮ್ಮನ್ನು ಶುದ್ಧಪಡಿಸಿಕೊಳ್ಳುವುದರಲ್ಲಿ ಯಾಜಕರಿಗಿಂತ ಲೇವಿಯರೇ ಹೆಚ್ಚು ಶ್ರದ್ಧೆಯುಳ್ಳವರಾಗಿದ್ದರು.


ಮೊದಲನೇ ತಿಂಗಳಿನ ಹದಿನಾಲ್ಕನೆಯ ದಿನದ ಸಂಜೆಯಿಂದ ಇಪ್ಪತ್ತೊಂದನೆಯ ದಿನದ ಸಂಜೆಯವರೆಗೂ ನೀವು ಹುಳಿಯಿಲ್ಲದ ರೊಟ್ಟಿಗಳನ್ನೇ ತಿನ್ನಬೇಕು.


ಈ ತಿಂಗಳಿನ ಹದಿನಾಲ್ಕನೆಯ ದಿನದವರೆಗೆ ಅವುಗಳನ್ನು ಇಟ್ಟುಕೊಂಡಿದ್ದು ಆ ದಿನದ ಸಂಜೆವೇಳೆಯಲ್ಲಿ ಇಸ್ರಯೇಲ್ ಸಮಾಜದವರೆಲ್ಲರು ತಮ್ಮ ತಮ್ಮ ಕೂಟಗಳಲ್ಲಿ ಕೊಯ್ಯಬೇಕು.


ಮೊದಲನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಈ ಶುದ್ಧೀಕರಣವನ್ನು ಪ್ರಾರಂಭಿಸಿದರು. ಎಂಟನೆಯ ದಿನದಲ್ಲಿ ಸರ್ವೇಶ್ವರನ ಆಲಯದ ಮಂಟಪಕ್ಕೆ ಕೈಹಾಕಿದರು; ಹೀಗೆ ಸರ್ವೇಶ್ವರನ ಆಲಯವನ್ನು ಶುದ್ಧಪಡಿಸುವುದರಲ್ಲಿ ಎಂಟು ದಿನಗಳು ಕಳೆದವು. ಮೊದಲನೆಯ ತಿಂಗಳಿನ ಹದಿನಾರನೆಯ ದಿನದಲ್ಲಿ ಕೆಲಸವೆಲ್ಲಾ ಮುಗಿಯಿತು.


ಈ ಅಭಿಪ್ರಾಯ ಅರಸನಿಗೂ ಸಾರ್ವಜನಿಕರಿಗೂ ಸರಿಕಂಡಿತು.


ಆಮೇಲೆ ಎರಡನೆಯ ತಿಂಗಳಿನ ಹದಿನಾಲ್ಕನೆಯ ದಿನ ಪಾಸ್ಕಹಬ್ಬಕ್ಕಾಗಿ ಕುರಿಮರಿಗಳನ್ನು ವಧಿಸಿದರು. ಯಾಜಕರೂ ಲೇವಿಯರೂ, ಮೊದಲನೆಯ ಸಾರಿ ತಪ್ಪಿದ್ದಕ್ಕಾಗಿ ನಾಚಿಕೆಪಟ್ಟು, ತಮ್ಮನ್ನು ಶುದ್ಧಪಡಿಸಿಕೊಂಡರು. ಸರ್ವೇಶ್ವರನ ಆಲಯದಲ್ಲಿ ದಹನಬಲಿಗಳನ್ನು ಸಮರ್ಪಿಸಿದರು;


ಈ ಕಾರಣ, ಸಮೂಹದವರು ಇನ್ನೂ ಏಳು ದಿವಸ ಹಬ್ಬಮಾಡಬೇಕೆಂದು ತೀರ್ಮಾನಿಸಿಕೊಂಡರು. ಆ ಏಳು ದಿನಗಳಲ್ಲಿಯೂ ಬಹಳವಾಗಿ ಸಂತೋಷದಿಂದ ಹಬ್ಬವನ್ನು ಆಚರಿಸಿದರು.


ಮೋಶೆಯಿಂದ ಪ್ರಕಟವಾದ ಸರ್ವೇಶ್ವರನ ವಿಧಿಗನುಸಾರ ನಿಮ್ಮ ಸಹೋದರರು ಪಾಸ್ಕಭೋಜನ ಮಾಡುವಂತೆ ನೀವು ನಿಮ್ಮನ್ನು ಶುದ್ಧಿಪಡಿಸಿಕೊಂಡು ಅವರಿಗಾಗಿ ಎಲ್ಲವನ್ನೂ ಸಿದ್ಧಮಾಡಿರಿ,” ಎಂದು ಆಜ್ಞಾಪಿಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು