2 ಪೂರ್ವಕಾಲ ವೃತ್ತಾಂತ 30:15 - ಕನ್ನಡ ಸತ್ಯವೇದವು C.L. Bible (BSI)15 ಆಮೇಲೆ ಎರಡನೆಯ ತಿಂಗಳಿನ ಹದಿನಾಲ್ಕನೆಯ ದಿನ ಪಾಸ್ಕಹಬ್ಬಕ್ಕಾಗಿ ಕುರಿಮರಿಗಳನ್ನು ವಧಿಸಿದರು. ಯಾಜಕರೂ ಲೇವಿಯರೂ, ಮೊದಲನೆಯ ಸಾರಿ ತಪ್ಪಿದ್ದಕ್ಕಾಗಿ ನಾಚಿಕೆಪಟ್ಟು, ತಮ್ಮನ್ನು ಶುದ್ಧಪಡಿಸಿಕೊಂಡರು. ಸರ್ವೇಶ್ವರನ ಆಲಯದಲ್ಲಿ ದಹನಬಲಿಗಳನ್ನು ಸಮರ್ಪಿಸಿದರು; ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201915 ನಂತರ ಎರಡನೆಯ ತಿಂಗಳಿನ ಹದಿನಾಲ್ಕನೆಯ ದಿನದಲ್ಲಿ ಪಸ್ಕಹಬ್ಬಕ್ಕಾಗಿ ಕುರಿಮರಿಗಳನ್ನು ಕೊಯ್ದರು.ಆಗ ಯಾಜಕರೂ, ಲೇವಿಯರೂ ನಾಚಿಕೆಪಟ್ಟು, ತಮ್ಮನ್ನು ಶುದ್ಧಿಪಡಿಸಿಕೊಂಡು ಯೆಹೋವನ ಆಲಯದಲ್ಲಿ ಸರ್ವಾಂಗಹೋಮಗಳನ್ನ ಸಮರ್ಪಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)15 ಆಮೇಲೆ ಎರಡನೆಯ ತಿಂಗಳಿನ ಹದಿನಾಲ್ಕನೆಯ ದಿನದಲ್ಲಿ ಪಸ್ಕಹಬ್ಬಕ್ಕಾಗಿ ಕುರಿಮರಿಗಳನ್ನು ವಧಿಸಿದರು. ಯಾಜಕರೂ ಲೇವಿಯರೂ [ಮೊದಲನೆಯ ಸಾರಿ ತಪ್ಪಿದ್ದಕ್ಕಾಗಿ] ನಾಚಿಕೆಪಟ್ಟು ತಮ್ಮನ್ನು ಶುದ್ಧಿಪಡಿಸಿಕೊಂಡು ಯೆಹೋವನ ಆಲಯದಲ್ಲಿ ಸರ್ವಾಂಗಹೋಮಗಳನ್ನು ಸಮರ್ಪಿಸುತ್ತಾ ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್15 ಆ ಬಳಿಕ ಎರಡನೆಯ ತಿಂಗಳಿನ ಹದಿನಾಲ್ಕನೆಯ ದಿವಸದಲ್ಲಿ ಪಸ್ಕದ ಕುರಿಮರಿಯನ್ನು ಕೊಯ್ದರು. ಯಾಜಕರೂ ಲೇವಿಯರೂ ನಾಚಿಕೆಯಿಂದ ತಮ್ಮನ್ನು ಸೇವೆಗಾಗಿ ಸಿದ್ಧಪಡಿಸಿಕೊಂಡು ಸರ್ವಾಂಗಹೋಮಕ್ಕಾಗಿ ಕಾಣಿಕೆಗಳನ್ನು ಯೆಹೋವನ ಮಂದಿರಕ್ಕೆ ತಂದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ15 ಎರಡನೆಯ ತಿಂಗಳ ಹದಿನಾಲ್ಕನೆಯ ದಿವಸದಲ್ಲಿ ಪಸ್ಕದ ಕುರಿಮರಿಯನ್ನು ವಧಿಸಿದರು. ಯಾಜಕರೂ, ಲೇವಿಯರೂ ನಾಚಿಕೆಪಟ್ಟು ತಮ್ಮನ್ನು ಪ್ರತಿಷ್ಠೆ ಮಾಡಿಕೊಂಡು, ಯೆಹೋವ ದೇವರ ಆಲಯದೊಳಗೆ ದಹನಬಲಿಗಳನ್ನು ತಂದರು. ಅಧ್ಯಾಯವನ್ನು ನೋಡಿ |