Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 3:15 - ಕನ್ನಡ ಸತ್ಯವೇದವು C.L. Bible (BSI)

15 ಇದಲ್ಲದೆ ಸೊಲೊಮೋನನು ದೇವಾಲಯದ ಮುಂದೆ ಎರಡು ಕಂಬಗಳನ್ನು ನಿಲ್ಲಿಸಿದನು. ಅವು 5:5 ಮೀಟರ್ ಎತ್ತರ ಇದ್ದವು. ಅವುಗಳ ತಲೆಗಳ ಮೇಲಣ ಕುಂಭಗಳು 2:2 ಮೀಟರ್ ಎತ್ತರವಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಇದಲ್ಲದೆ ದೇವಾಲಯದ ಮುಂದೆ ಎರಡು ಸ್ತಂಭಗಳನ್ನು ನಿಲ್ಲಿಸಿದನು, ಅವು ಮೂವತ್ತೈದು ಮೊಳ (5.5 ಮೀಟರ್) ಎತ್ತರವಾಗಿದ್ದವು. ಅವುಗಳ ತಲೆಗಳ ಮೇಲಣ ಕುಂಭಗಳು ಐದು ಮೊಳ ಎತ್ತರವಾಗಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಇದಲ್ಲದೆ ದೇವಾಲಯದ ಮುಂದೆ ಎರಡು ಕಂಬಗಳನ್ನು ನಿಲ್ಲಿಸಿದನು. ಅವು ಮೂವತ್ತೈದು ಮೊಳ ಎತ್ತರವಿದ್ದವು. ಅವುಗಳ ತಲೆಗಳ ಮೇಲಣ ಕುಂಭಗಳು ಐದು ಮೊಳ ಎತ್ತರವಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಸೊಲೊಮೋನನು ದೇವಾಲಯದ ಎದುರಿನಲ್ಲಿ ಮೂವತ್ತೈದು ಮೊಳ ಎತ್ತರದ ಎರಡು ಕಂಬಗಳನ್ನು ನಿಲ್ಲಿಸಿದನು. ಅದರ ಮೇಲಿನ ಭಾಗ ಐದು ಮೊಳ ಎತ್ತರವಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಇದಲ್ಲದೆ ಅವನು ಕಟ್ಟಡದ ಪ್ರವೇಶದ್ವಾರದಲ್ಲಿ ಎರಡು ಸ್ತಂಭಗಳನ್ನು ನಿರ್ಮಿಸಿದನು, ಪ್ರತಿಯೊಂದೂ ಹದಿನೈದು ಮೀಟರ್ ಎಪ್ಪತ್ತೈದು ಸೆಂಟಿಮೀಟರ್ ಎತ್ತರ, ಪ್ರತಿಯೊಂದರ ಮೇಲೆಯೂ ನಿರ್ಮಿಸಲಾದ ಪ್ರತಿಯೊಂದು ತಲೆಗಳು ಎರಡೂವರೆ ಮೀಟರ್ ಉದ್ದವಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 3:15
5 ತಿಳಿವುಗಳ ಹೋಲಿಕೆ  

ಬಾಬಿಲೋನಿಯದವರು ಸರ್ವೇಶ್ವರನ ಆಲಯದಲ್ಲಿದ್ದ ಕಂಚಿನ ಕಂಬಗಳನ್ನೂ ಚಕ್ರದ ಬಂಡಿಗಳನ್ನೂ, ಕಡಲಿನ ಆಕಾರದ ಕಂಚಿನ ಪಾತ್ರೆಯನ್ನೂ ಒಡೆದು ಅವುಗಳ ಕಂಚನ್ನೆಲ್ಲ ಕೊಂಡೊಯ್ದರು.


ಗರ್ಭಗುಡಿಯ ಸರಪಣಿಯಂಥ ಸರಪಣಿಗಳನ್ನು ಮಾಡಿಸಿ, ಆ ಕಂಬಗಳ ಮೇಲಣ ಕುಂಭಗಳಿಗೆ ಸಿಕ್ಕಿಸಿ, ಆ ಸರಪಣಿಗಳಲ್ಲಿ ನೂರು ನೂರು ತಾಮ್ರದ ದಾಳಿಂಬೆ ಹಣ್ಣುಗಳನ್ನು ಕಟ್ಟಿಸಿದನು.


ಇದಲ್ಲದೆ, ಹದರೆಜೆರನ ಪಟ್ಟಣಗಳಾದ ಟಿಭತಿನಿಂದಲೂ ಕೂನಿಂದಲೂ ಹೇರಳ ತಾಮ್ರವನ್ನು ತೆಗೆದುಕೊಂಡು ಬಂದನು. ಸೊಲೊಮೋನನು ‘ಕಂಚಿನ ಕಡಲೆಂಬ ಪಾತ್ರೆ’ಯನ್ನೂ ಕಂಬಗಳನ್ನೂ ಇನ್ನಿತರ ಸಾಮಾನುಗಳನ್ನೂ ಮಾಡಿಸಿದ್ದು ಆ ತಾಮ್ರದಿಂದಲೇ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು