Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 3:1 - ಕನ್ನಡ ಸತ್ಯವೇದವು C.L. Bible (BSI)

1 ಸೊಲೊಮೋನನು ಜೆರುಸಲೇಮ್ ಪಟ್ಟಣದಲ್ಲಿ ತನ್ನ ತಂದೆ ದಾವೀದನಿಗೆ ದೇವದರ್ಶನ ಉಂಟಾದ ಮೋರೀಯಾ ಗುಡ್ಡದಲ್ಲಿ, ಸರ್ವೇಶ್ವರನ ಆಲಯವನ್ನು ಕಟ್ಟಿಸ ತೊಡಗಿದನು. ಈ ಮೊದಲು, ಯೆಬೂಸಿಯನಾದ ಒರ್ನಾನನ ಕಣವಾಗಿದ್ದ ಆ ಸ್ಥಳವನ್ನು, ದಾವೀದನು ಇದಕ್ಕಾಗಿ ಸಿದ್ಧಮಾಡಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಸೊಲೊಮೋನನು ಯೆರೂಸಲೇಮಿನಲ್ಲಿ ತನ್ನ ತಂದೆಯಾದ ದಾವೀದನಿಗೆ, ಯೆಹೋವನು ಕಾಣಿಸಿಕೊಂಡ ಸ್ಥಳವಾದ ಮೋರೀಯಾ ಬೆಟ್ಟದ ಮೇಲೆ ಆಲಯವನ್ನು ಕಟ್ಟಿಸುವುದಕ್ಕೆ ಪ್ರಾರಂಭಿಸಿದನು. ಇದು ಮುಂಚೆ ಯೆಬೂಸಿಯನಾದ ಒರ್ನಾನನ ಕಣವಾಗಿದ್ದ ಆ ಸ್ಥಳವನ್ನು ದಾವೀದನು ಇದಕ್ಕೋಸ್ಕರ ಸಿದ್ಧಮಾಡಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಸೊಲೊಮೋನನು ಯೆರೂಸಲೇಮ್ ಪಟ್ಟಣದೊಳಗೆ ತನ್ನ ತಂದೆಯಾದ ದಾವೀದನಿಗೆ ದೇವದರ್ಶನವುಂಟಾದ ಮೋರೀಯಾ ಗುಡ್ಡದಲ್ಲಿ ಯೆಹೋವನ ಆಲಯವನ್ನು ಕಟ್ಟಿಸ ತೊಡಗಿದನು. ಮುಂಚೆ ಯೆಬೂಸಿಯನಾದ ಒರ್ನಾನನ ಕಣವಾಗಿದ್ದ ಆ ಸ್ಥಳವನ್ನು ದಾವೀದನು ಇದಕ್ಕೋಸ್ಕರ ಸಿದ್ಧಮಾಡಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಜೆರುಸಲೇಮಿನಲ್ಲಿರುವ ಮೋರೀಯಾ ಬೆಟ್ಟದ ಮೇಲೆ ಸೊಲೊಮೋನನು ದೇವಾಲಯವನ್ನು ಕಟ್ಟಲು ಪ್ರಾರಂಭಿಸಿದನು. ಅದೇ ಸ್ಥಳದಲ್ಲಿ ಸೊಲೊಮೋನನ ತಂದೆಯಾದ ದಾವೀದನಿಗೆ ಯೆಹೋವನು ದರ್ಶನ ಕೊಟ್ಟಿದ್ದನು. ಅದು ಯೆಬೂಸಿಯನಾದ ಒರ್ನಾನನ ಕಣವಾಗಿತ್ತು. ಆಲಯವನ್ನು ಕಟ್ಟಲು ದಾವೀದನು ಆ ಸ್ಥಳವನ್ನು ತಯಾರು ಮಾಡಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಸೊಲೊಮೋನನು ಯೆರೂಸಲೇಮಿನಲ್ಲಿ ತನ್ನ ತಂದೆ ದಾವೀದನಿಗೆ ಯೆಹೋವ ದೇವರು ಕಾಣಿಸಿಕೊಂಡ ಸ್ಥಳವಾದ ಮೊರೀಯಾ ಬೆಟ್ಟದ ಮೇಲೆ, ದಾವೀದನು ಸಿದ್ಧಮಾಡಿದ ಸ್ಥಳವಾದ ಯೆಬೂಸಿಯನಾದ ಒರ್ನಾನನ ಕಣದಲ್ಲಿ ಯೆಹೋವ ದೇವರ ಆಲಯವನ್ನು ಕಟ್ಟಿಸಲು ಪ್ರಾರಂಭಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 3:1
10 ತಿಳಿವುಗಳ ಹೋಲಿಕೆ  

ಆಗ ಸರ್ವೇಶ್ವರನ ದೂತನು ಗಾದನಿಗೆ, “ಯೆಬೂಸಿಯನಾದ ಒರ್ನಾನನ ಕಣದಲ್ಲಿ ಸರ್ವೇಶ್ವರನಿಗಾಗಿ ಒಂದು ಬಲಿಪೀಠವನ್ನು ಕಟ್ಟಿಸುವುದಕ್ಕೆ ಹೋಗಬೇಕೆಂದು ದಾವೀದನಿಗೆ ಹೇಳು,” ಎಂದು ಆಜ್ಞಾಪಿಸಿದನು.


ಆ ಸ್ಥಳಕ್ಕೆ “ಯೆಹೋವ ಯೀರೆ" ಎಂದು ಹೆಸರಿಟ್ಟ.


ಆಗ ದೇವರು, “ನಿನಗೆ ಒಬ್ಬನೇ ಒಬ್ಬನೂ ಮುದ್ದುಮಗನೂ ಆದ ಇಸಾಕನನ್ನು ಕರೆದುಕೊಂಡು ಮೊರೀಯ ಪ್ರಾಂತಕ್ಕೆ ಹೋಗು. ಅಲ್ಲಿ ನಾನು ತೋರಿಸುವ ಬೆಟ್ಟದ ಮೇಲೆ ಅವನನ್ನು ದಹನಬಲಿಯಾಗಿ ಅರ್ಪಿಸು” ಎಂದರು.


“ಇದೇ ದೇವರಾದ ಸರ್ವೇಶ್ವರನ ಆಲಯ; ಇದೇ ಇಸ್ರಯೇಲರು ಬಲಿ ಅರ್ಪಿಸತಕ್ಕ ಪೀಠ,” ಎಂದು ಹೇಳಿದನು.


ಸಾಕ್ಷಾತ್ ಆ ಆಲಯವನ್ನು ಕಟ್ಟಿಸಿದವನು ಸೊಲೊಮೋನನು.


ಜೆರುಸಲೇಮಿನಲ್ಲಿ ಅರಸ ಸೊಲೊಮೋನನು ಕಟ್ಟಿಸಿದ ದೇವಾಲಯದಲ್ಲಿ ಸೇವೆಮಾಡಿದವರು: ಅಜರ್ಯ,


ಸೊಲೊಮೋನನು ತನ್ನ ಆಳ್ವಿಕೆಯ ನಾಲ್ಕನೆಯ ವರ್ಷದ ಎರಡನೆಯ ತಿಂಗಳಿನ ಎರಡನೆಯ ದಿನದಲ್ಲಿ ಕಟ್ಟಡದ ಕೆಲಸವನ್ನು ಪ್ರಾರಂಭಿಸಿದನು.


ದೇವದೂತನು ಜೆರುಸಲೇಮನ್ನೂ ಸಂಹರಿಸುವುದಕ್ಕೆ ಕೈಚಾಚಿದಾಗ ಸರ್ವೇಶ್ವರ ಆ ಕೇಡಿನ ವಿಷಯದಲ್ಲಿ ನೊಂದುಕೊಂಡು, ಸಂಹಾರಕ ದೂತನಿಗೆ, “ಈಗ ಸಾಕು, ನಿನ್ನ ಕೈಯನ್ನು ಹಿಂತೆಗೆ,” ಎಂದು ಆಜ್ಞಾಪಿಸಿದರು. ಆಗ ಆ ದೂತನು ಯೆಬೂಸಿಯನಾದ ಅರೌನನ ಕಣದಲ್ಲಿದ್ದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು