Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 29:28 - ಕನ್ನಡ ಸತ್ಯವೇದವು C.L. Bible (BSI)

28 ದಹನಬಲಿ ಸಮರ್ಪಣೆಯು ಮುಗಿಯುವವರೆಗೆ ಸಭೆಸೇರಿದವರು ಸಾಷ್ಟಾಂಗ ನಮಸ್ಕಾರ ಮಾಡುತ್ತಾ ಇದ್ದರು; ಗಾಯಕರು ಗಾನ ಮಾಡುತ್ತಾ ಇದ್ದರು; ತುತೂರಿ ಊದುವವರು ಊದುತ್ತಾ ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ಸರ್ವಾಂಗಹೋಮ ಸಮರ್ಪಣೆಯು ಮುಗಿಯುವವರೆಗೆ ಸರ್ವಸಮೂಹದವರು ಸಾಷ್ಟಾಂಗ ನಮಸ್ಕಾರ ಮಾಡುತ್ತಲೂ, ಗಾಯಕರೂ ಗಾನಮಾಡುತ್ತಲೂ, ತುತ್ತೂರಿ ಊದುವವರು ತುತ್ತೂರಿ ಊದುತ್ತಲೂ ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ಸರ್ವಾಂಗಹೋಮ ಸಮರ್ಪಣೆಯು ತೀರುವವರೆಗೆ ಸರ್ವಸಮೂಹದವರು ಸಾಷ್ಟಾಂಗನಮಸ್ಕಾರ ಮಾಡುತ್ತಲೂ ಗಾಯಕರು ಗಾನಮಾಡುತ್ತಲೂ ತುತೂರಿಯೂದುವವರು ತುತೂರಿಯೂದುತ್ತಲೂ ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ಸೇರಿ ಬಂದಿದ್ದ ಜನಸಮೂಹದವರು ಸಾಷ್ಟಾಂಗನಮಸ್ಕಾರ ಮಾಡಿದರು. ಯಜ್ಞವು ಮುಗಿಯುವ ತನಕ ದೇವರ ಸ್ತೋತ್ರಗಾನ ಮುಂದುವರಿಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ಆಗ ಸಭೆಯವರೆಲ್ಲರೂ ಆರಾಧಿಸಿದರು. ದಹನಬಲಿ ಅರ್ಪಿಸಿ ತೀರಿಸುವ ತನಕ ಹಾಡುಗಾರರು ಹಾಡಿದರು. ತುತೂರಿ ಊದುವವರು ಊದಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 29:28
9 ತಿಳಿವುಗಳ ಹೋಲಿಕೆ  

ಧನ್ಯರು ಪ್ರಭು, ನಿನಗೆ ಜಯಕಾರ ಹಾಡುವವರು I ನಿನ್ನ ಮುಖದ ಪ್ರಕಾಶದೊಳವರು ನಡೆಯುವರು II


ಹೀಗೆ ದಹನಬಲಿ ಸಮರ್ಪಣೆ ಪ್ರಾರಂಭಿಸಿದೊಡನೆ ಇಸ್ರಯೇಲ್ ಅರಸ ದಾವೀದನ ವಾದ್ಯಗಳಿಂದ ಸರ್ವೇಶ್ವರನನ್ನು ಭಜಿಸುವುದೂ ತುತೂರಿ ಊದುವುದೂ ಆರಂಭವಾಯಿತು.


ದಹನಬಲಿ ಸಮರ್ಪಣೆ ತೀರಿದ ಮೇಲೆ ಅರಸನೂ ಅವನ ಜೊತೆಯಲ್ಲಿದ್ದವರೆಲ್ಲರೂ ಸಾಷ್ಟಾಂಗ ನಮಸ್ಕಾರ ಮಾಡಿದರು.


ಇಸ್ರಯೇಲರೆಲ್ಲರು ಬೆಂಕಿ ಇಳಿದು ಬರುವುದನ್ನೂ ಸರ್ವೇಶ್ವರನ ತೇಜಸ್ಸು ಆಲಯದಲ್ಲಿರುವುದನ್ನೂ ನೋಡಿ ನೆಲಗಟ್ಟಿನ ಮೇಲೆ ಸಾಷ್ಟಾಂಗವೆರಗಿ ಆರಾಧಿಸಿದರು; “ಸರ್ವೇಶ್ವರ ಒಳ್ಳೆಯವರು; ಅವರ ಅಚಲ ಪ್ರೀತಿ ಶಾಶ್ವತ” ಎಂದು ಕೃತಜ್ಞತಾಸ್ತುತಿ ಮಾಡಿದರು.


ಬನ್ನಿ ಆರಾಧಿಸೋಣ ಬನ್ನಿ, ಬಾಗಿ ವಂದಿಸೋಣ I ನಮ್ಮನು ಸೃಜಿಸಿದಾ ಪ್ರಭುವಿಗೆ ಸಾಷ್ಟಾಂಗವೆರಗೋಣ II


ಪ್ರಭುವಿಗೆ ಮಣಿಯಿರಿ ಪವಿತ್ರ ವಸ್ತ್ರಧಾರಿಗಳಂತೆ I ಅಂಜಿಕೆಯಿಂದ ನಡುಗಲಿ ಜಗವಿಡೀ ಆತನ ಮುಂದೆ I


ಜನರು ಪ್ರವೇಶಿಸುವಾಗ ರಾಜನು ಅವರ ಮಧ್ಯೆ ಪ್ರವೇಶಿಸಲಿ ಅವರು ಹೊರಡುವಾಗ ಅವನೂ ಹೊರಡಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು