2 ಪೂರ್ವಕಾಲ ವೃತ್ತಾಂತ 29:25 - ಕನ್ನಡ ಸತ್ಯವೇದವು C.L. Bible (BSI)25 ಇದಲ್ಲದೆ, ಅವನು ತಾಳ, ಸ್ವರಮಂಡಲ, ಕಿನ್ನರಿ ಇವುಗಳಿಂದ ಭಜಿಸುವುದಕ್ಕಾಗಿ ಲೇವಿಯರನ್ನು ನೇಮಿಸಿದನು. ದಾವೀದನ ರಾಜದರ್ಶಿಯಾದ ಗಾದ್ ಹಾಗು ಪ್ರವಾದಿ ನಾತಾನ್ ಇವರ ಆಜ್ಞಾನುಸಾರ ಸರ್ವೇಶ್ವರನ ಆಲಯದಲ್ಲಿ ಈ ಗಾಯಕರನ್ನು ಇರಿಸಿದ್ದನು. ಸರ್ವೇಶ್ವರಸ್ವಾಮಿಯೇ ಪ್ರವಾದಿಗಳ ಮುಖಾಂತರ ಹೀಗೆ ಆಜ್ಞಾಪಿಸಿದ್ದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201925 ಇದಲ್ಲದೆ, ಅವನು ತಾಳ, ಸ್ವರಮಂಡಲ, ಕಿನ್ನರಿ ಇವುಗಳಿಂದ ಭಜಿಸುವುದಕ್ಕೋಸ್ಕರ ಲೇವಿಯರನ್ನು, ದಾವೀದನ ರಾಜದರ್ಶಿಯಾದ ಗಾದ್ ಹಾಗು ಪ್ರವಾದಿಯಾದ ನಾತಾನ್ ಇವರ ಆಜ್ಞಾನುಸಾರವಾಗಿ ಯೆಹೋವನ ಆಲಯದಲ್ಲಿ ನಿಲ್ಲಿಸಿದನು. ಯೆಹೋವನು ತಾನೇ ಪ್ರವಾದಿಗಳ ಮುಖಾಂತರ ಹೀಗೆ ಆಜ್ಞಾಪಿಸಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)25 ಇದಲ್ಲದೆ ಅವನು ತಾಳ ಸ್ವರಮಂಡಲ ಕಿನ್ನರಿ ಇವುಗಳಿಂದ ಭಜಿಸುವದಕ್ಕೋಸ್ಕರ ಲೇವಿಯರನ್ನು ದಾವೀದ, ರಾಜದರ್ಶಿಯಾದ ಗಾದ್, ಪ್ರವಾದಿಯಾದ ನಾತಾನ್ ಇವರ ಆಜ್ಞಾನುಸಾರವಾಗಿ ಯೆಹೋವನ ಆಲಯದಲ್ಲಿ ಇರಿಸಿದನು. ಯೆಹೋವನು ತಾನೇ ಪ್ರವಾದಿಗಳ ಮುಖಾಂತರ ಹೀಗೆ ಆಜ್ಞಾಪಿಸಿದ್ದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್25 ದಾವೀದನೂ ಅರಸನ ದರ್ಶಿಯಾಗಿದ್ದ ಗಾದನೂ ಮತ್ತು ಪ್ರವಾದಿಯಾಗಿದ್ದ ನಾತಾನನೂ ಆಜ್ಞಾಪಿಸಿದಂತೆ, ಅರಸನಾದ ಹಿಜ್ಕೀಯನು ಲೇವಿಯರನ್ನು ತಾಳ, ತಂತಿವಾದ್ಯ ಮತ್ತು ಕಿನ್ನರಿಗಳೊಂದಿಗೆ ದೇವಾಲಯದಲ್ಲಿ ಇರಿಸಿದನು. ಈ ಆಜ್ಞೆಯು ಯೆಹೋವನಿಂದ ಪ್ರವಾದಿಗಳ ಮೂಲಕ ಬಂದಿತ್ತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ25 ಇದಲ್ಲದೆ ಅವನು ತಾಳಗಳನ್ನೂ, ವೀಣೆಗಳನ್ನೂ, ಕಿನ್ನರಿಗಳನ್ನೂ ಹಿಡಿದ ಲೇವಿಯರನ್ನು ದಾವೀದನೂ, ಅರಸನ ದರ್ಶಿಯಾದ ಗಾದನೂ, ಪ್ರವಾದಿಯಾದ ನಾತಾನನೂ ಇವರ ಆಜ್ಞೆಯ ಪ್ರಕಾರ, ಯೆಹೋವ ದೇವರ ಆಲಯದಲ್ಲಿ ನಿಲ್ಲಿಸಿದನು. ಏಕೆಂದರೆ ಯೆಹೋವ ದೇವರ ಆಜ್ಞೆಯು ಅವನ ಪ್ರವಾದಿಗಳ ಮುಖಾಂತರ ಹೀಗೆ ಇತ್ತು. ಅಧ್ಯಾಯವನ್ನು ನೋಡಿ |