Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 28:25 - ಕನ್ನಡ ಸತ್ಯವೇದವು C.L. Bible (BSI)

25 ಅನ್ಯದೇವತೆಗಳಿಗೆ ಧೂಪಹಾಕುವುದಕ್ಕಾಗಿ ಜುದೇಯದ ಎಲ್ಲ ಪಟ್ಟಣಗಳಲ್ಲೂ ಪೂಜಾಸ್ಥಳಗಳನ್ನು ನಿರ್ಮಿಸಿದನು. ಹೀಗೆ ತನ್ನ ಪಿತೃಗಳ ದೇವರಾದ ಸರ್ವೇಶ್ವರನನ್ನು ರೇಗಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಅನ್ಯದೇವತೆಗಳಿಗೆ ಧೂಪಹಾಕುವುದಕ್ಕಾಗಿ ಯೆಹೂದದ ಎಲ್ಲಾ ಪಟ್ಟಣಗಳಲ್ಲಿಯೂ ಪೂಜಾಸ್ಥಳಗಳನ್ನು ಏರ್ಪಡಿಸಿದನು. ಹೀಗೆ ತನ್ನ ಪೂರ್ವಿಕರ ದೇವರಾದ ಯೆಹೋವನನ್ನು ರೇಗಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಅನ್ಯದೇವತೆಗಳಿಗೆ ಧೂಪಹಾಕುವದಕ್ಕಾಗಿ ಯೆಹೂದದ ಎಲ್ಲಾ ಪಟ್ಟಣಗಳಲ್ಲಿಯೂ ಪೂಜಾಸ್ಥಳಗಳನ್ನು ಏರ್ಪಡಿಸಿದನು. ಹೀಗೆ ತನ್ನ ಪಿತೃಗಳ ದೇವರಾದ ಯೆಹೋವನನ್ನು ರೇಗಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಯೆಹೂದದ ಪ್ರತಿಯೊಂದು ಪಟ್ಟಣಗಳಲ್ಲಿ ಆಹಾಜನು ಧೂಪಹಾಕಲು ಮತ್ತು ಬೇರೆ ದೇವರುಗಳನ್ನು ಪೂಜಿಸಲು ಉನ್ನತಸ್ಥಳಗಳನ್ನು ಮಾಡಿಸಿದನು; ಅನ್ಯ ದೇವರುಗಳಿಗೆ ಧೂಪಹಾಕಲು ಜನರನ್ನು ಪ್ರೋತ್ಸಾಹಿಸಿದನು. ಈ ರೀತಿಯಾಗಿ ತನ್ನ ಪೂರ್ವಿಕರು ಆರಾಧಿಸಿದ ದೇವರಾದ ಯೆಹೋವನನ್ನು ಆಹಾಜನು ರೇಗಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಯೆಹೂದದ ಸಮಸ್ತ ಪಟ್ಟಣಗಳಲ್ಲಿ ಅನ್ಯ ದೇವರುಗಳಿಗೆ ಧೂಪ ಸುಡುವುದಕ್ಕೆ ಎತ್ತರ ಸ್ಥಳಗಳನ್ನು ಕಟ್ಟಿಸಿ, ತನ್ನ ಪಿತೃಗಳ ದೇವರಾದ ಯೆಹೋವ ದೇವರಿಗೆ ಕೋಪವನ್ನೆಬ್ಬಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 28:25
9 ತಿಳಿವುಗಳ ಹೋಲಿಕೆ  

ಅವನು ಬೆನ್‍ಹಿನ್ನೋಮ್ ಎಂಬ ಕಣಿವೆಯಲ್ಲಿ ಧೂಪ ಹಾಕಿಸಿದ್ದಲ್ಲದೆ ಸರ್ವೇಶ್ವರಸ್ವಾಮಿ ಇಸ್ರಯೇಲರ ನಾಡಿನಿಂದ ಓಡಿಸಿಬಿಟ್ಟ ಜನಾಂಗಗಳ ಅಸಹ್ಯಕಾರ್ಯಗಳನ್ನು ಅನುಸರಿಸಿ ತನ್ನ ಮಕ್ಕಳನ್ನು ಬಲಿಯಗ್ನಿ ಪರೀಕ್ಷೆಗೆ ಗುರಿಪಡಿಸಿದ್ದನು.


ಪೂಜಾಸ್ಥಳಗಳಲ್ಲೂ, ದಿನ್ನೆಗಳ ಮೇಲೂ ಹಾಗು ಎಲ್ಲ ಹಸಿರು ಮರಗಳ ಕೆಳಗೂ ಬಲಿಗಳನ್ನೂ ಧೂಪಗಳನ್ನೂ ಸಮರ್ಪಿಸುತ್ತಿದ್ದನು.


ಇದಲ್ಲದೆ, ಅಹಾಜನು ದೇವಾಲಯದ ಸಾಮಗ್ರಿಗಳನ್ನು ಕೂಡಿಸಿ, ಅವುಗಳನ್ನು ಚೂರುಚೂರು ಮಾಡಿಬಿಟ್ಟನು; ಸರ್ವೇಶ್ವರನ ಆಲಯದ ಬಾಗಿಲುಗಳನ್ನು ಮುಚ್ಚಿ ಜೆರುಸಲೇಮಿನ ಪ್ರತಿಯೊಂದು ಮೂಲೆಯಲ್ಲೂ ಯಜ್ಞವೇದಿಗಳನ್ನು ಕಟ್ಟಿಸಿದನು.


ಅಹಾಜನ ಉಳಿದ ಪೂರ್ವೋತ್ತರ ಚರಿತ್ರೆ ಹಾಗು ಅವನ ಎಲ್ಲ ಪ್ರವರ್ತನೆಗಳು ಯೆಹೂದ್ಯರ ಮತ್ತು ಇಸ್ರಯೇಲರ ರಾಜಗ್ರಂಥದಲ್ಲಿ ಲಿಖಿತವಾಗಿವೆ.


ಅವರು ನನ್ನನ್ನು ಬಿಟ್ಟು ಅನ್ಯದೇವತೆಗಳಿಗೆ ಧೂಪಾರತಿಯೆತ್ತಿ ತಮ್ಮ ದುಷ್ಕೃತ್ಯಗಳಿಂದ ನನ್ನನ್ನು ರೇಗಿಸಿದ್ದಾರೆ. ಆದ್ದರಿಂದ ನನ್ನ ಕೋಪಾಗ್ನಿ ಈ ನಾಡಿನ ಮೇಲೆ ಉರಿಯಹತ್ತಿ ಆರಿಹೋಗುವುದೇ ಇಲ್ಲ,’ ಎನ್ನುತ್ತಾರೆ ಸರ್ವೇಶ್ವರ.


ಅರಸ ಆಹಾಜನು ಕಾಲವಾದ ವರುಷದಲಿ ಕೇಳಿಬಂದಿತು ಈ ದೈವೋಕ್ತಿ :


ಎಲೈ ಯೆಹೂದ ಜನರೇ, ನಿಮಗೆ ಎಷ್ಟು ನಗರಗಳಿವೆಯೋ ಅಷ್ಟೂ ದೇವರುಗಳಿದ್ದಾರೆ. ಜೆರುಸಲೇಮಿನಲ್ಲಿ ಹಾದಿಬೀದಿಗಳು ಎಷ್ಟಿವೆಯೋ ಅಷ್ಟೂ ಬಲಿಪೀಠಗಳಿವೆ, ಆ ತುಚ್ಛ ದೇವತೆ ಬಾಳನಿಗೆ ಧೂಪಾರತಿಯೆತ್ತಲು.


“ಸರ್ವಶಕ್ತ ಸರ್ವೇಶ್ವರನಾದ ನಾನೇ ಈ ಇಸ್ರಯೇಲನ್ನೂ ಜುದೇಯವನ್ನೂ ನೆಟ್ಟಿ ಬೆಳೆಸಿದೆ. ಆದರೆ ಈಗ ‘ನಿನಗೆ ಕೇಡು,’ ಎಂದು ಶಪಿಸುತ್ತಿದ್ದೇನೆ. ಏಕೆಂದರೆ ಬಾಳನಿಗೆ ಧೂಪಾರತಿಯೆತ್ತಿ, ನನ್ನನ್ನು ಕೆಣಕಿ, ತಮಗೇ ಕೆಡುಕನ್ನು ಮಾಡಿಕೊಂಡಿದ್ದಾರೆ.


“ನೀನು ಈ ದುಷ್ಕೃತ್ಯಗಳನ್ನೆಲ್ಲಾ ನಡೆಸಿದ್ದಲ್ಲದೆ ಪ್ರತಿಯೊಂದು ಚೌಕದಲ್ಲಿ ಮಂಟಪವನ್ನು ಮಾಡಿ ಜಗಲಿಯನ್ನು ಕಟ್ಟಿಕೊಂಡಿರುವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು