2 ಪೂರ್ವಕಾಲ ವೃತ್ತಾಂತ 26:15 - ಕನ್ನಡ ಸತ್ಯವೇದವು C.L. Bible (BSI)15 ಇದಲ್ಲದೆ, ಅವನು ಬಾಣಗಳನ್ನೂ ದೊಡ್ಡ ಕಲ್ಲುಗಳನ್ನೂ ಎಸೆಯುವುದಕ್ಕಾಗಿ, ತಜ್ಞರ ಕಲ್ಪನೆಯ ಮೇರೆಗೆ ಯಂತ್ರಗಳನ್ನು ಮಾಡಿಸಿ, ಅವುಗಳನ್ನು ಜೆರುಸಲೇಮಿನ ಬುರುಜುಗಳ ಮೇಲೆಯೂ ಆಳುವೇರಿಗಳ ಮೇಲೆಯೂ ಇಡಿಸಿದ್ದನು. ಬಲಿಷ್ಠನಾಗುವವರೆಗೂ ಅವನ ದೇವರ ಸಹಾಯವನ್ನು ಆಶ್ಚರ್ಯಕರವಾದ ರೀತಿಯಲ್ಲಿ ಪಡೆಯುತ್ತಿದ್ದನು; ಅವನ ಕೀರ್ತಿ ಬಲು ದೂರದವರೆಗೆ ಹಬ್ಬಿತ್ತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201915 ಇದಲ್ಲದೆ, ಅವನು ಬಾಣಗಳನ್ನೂ, ದೊಡ್ಡ ಕಲ್ಲುಗಳನ್ನು ಬಳಸುವುದಕ್ಕಾಗಿ, ತಜ್ಞರ ಆಜ್ಞೆಯ ಮೇರೆಗೆ ಯಂತ್ರಗಳನ್ನೂ ಮಾಡಿಸಿ, ಅವುಗಳನ್ನು ಯೆರೂಸಲೇಮಿನ ಗೋಪುರಗಳ ಮೇಲೆಯೂ, ಕೋಟೆಕೊತ್ತಲಗಳನ್ನು ಮೇಲೆಯೂ ಇಡಿಸಿದ್ದನು. ಅವನು ಬಲಿಷ್ಠನಾಗುವ ಹಾಗೆ ದೇವರ ಅತಿಶಯವಾದ ಸಹಾಯವು ಆಶ್ಚರ್ಯವಾದ ರೀತಿಯಲ್ಲಿ ಅವನಿಗೆ ದೊರೆಯುತ್ತಿದ್ದುದರಿಂದ; ಅವನ ಕೀರ್ತಿಯೂ ಬಹು ದೂರದ ಮೇರೆಯವರೆಗೂ ಹಬ್ಬಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)15 ಇದಲ್ಲದೆ ಅವನು ಬಾಣಗಳನ್ನೂ ದೊಡ್ಡ ಕಲ್ಲುಗಳನ್ನೂ ಎಸೆಯುವದಕ್ಕಾಗಿ ಜಾಣರ ಕಲ್ಪನೆಯ ಮೇರೆಗೆ ಯಂತ್ರಗಳನ್ನು ಮಾಡಿಸಿ ಅವುಗಳನ್ನು ಯೆರೂಸಲೇವಿುನಲ್ಲಿ ಬುರುಜುಗಳ ಮೇಲೆಯೂ ಆಳುವೇರಿಗಳ ಮೇಲೆಯೂ ಇಡಿಸಿದನು. ಅವನು ಬಲಿಷ್ಠನಾಗುವವರೆಗೂ ದೇವರ ಆಶ್ಚರ್ಯವಾದ ಸಹಾಯವನ್ನು ಹೊಂದಿದನು; ಅವನ ಕೀರ್ತಿಯು ದೂರದವರೆಗೆ ಹಬ್ಬಿತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್15 ಜೆರುಸಲೇಮಿನಲ್ಲಿ ವಿಜ್ಞಾನಿಗಳು ರೂಪಿಸಿದ ಯಂತ್ರಗಳನ್ನು ಉಜ್ಜೀಯನು ತಯಾರಿಸಿದನು. ಇವುಗಳನ್ನು ಪೌಳಿಗೋಡೆಯ ಮೇಲೆ ಇರಿಸಿದನು. ಇವು ಬಾಣಗಳನ್ನೂ ದೊಡ್ಡ ಕಲ್ಲುಗಳನ್ನೂ ವೈರಿಗಳ ಮೇಲೆ ಹಾರಿಸಬಲ್ಲವಾಗಿದ್ದವು. ಉಜ್ಜೀಯನು ತುಂಬಾ ಪ್ರಸಿದ್ಧಿ ಹೊಂದಿದ್ದನು. ಬಹುದೂರದ ತನಕ ಅವನ ಹೆಸರು ಹಬ್ಬಿತು. ಅವನು ದೇವರ ವಿಶೇಷ ಸಹಾಯ ಪಡೆದುಕೊಂಡು ಬಲಿಷ್ಠನಾದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ15 ಇದಲ್ಲದೆ ಬಾಣಗಳನ್ನೂ, ದೊಡ್ಡ ಕಲ್ಲುಗಳನ್ನೂ ಎಸೆಯುವ ನಿಮಿತ್ತ ಬುರುಜುಗಳ ಮೇಲೆಯೂ, ಮಣ್ಣುದಿಬ್ಬಗಳ ಮೇಲೆಯೂ ಇರಲು, ಪ್ರವೀಣರಿಂದ ಮಾಡಿದ ಯಂತ್ರಗಳನ್ನೂ ಯೆರೂಸಲೇಮಿನಲ್ಲಿ ಮಾಡಿಸಿದನು. ಆದ್ದರಿಂದ ಅವನ ಹೆಸರು ಬಹಳ ದೂರದವರೆಗೆ ಪ್ರಸಿದ್ಧಿಯಾಯಿತು. ಬಹು ಬಲಿಷ್ಠನಾಗುವ ಪರ್ಯಂತರ ಅವನು ಬಹು ಆಶ್ಚರ್ಯಕರವಾಗಿ ಸಹಾಯ ಪಡೆಯುತ್ತಿದ್ದನು. ಅಧ್ಯಾಯವನ್ನು ನೋಡಿ |
ಇವನು ದಾನ್ ಕುಲದ ಒಬ್ಬ ಸ್ತ್ರೀಯ ಮಗ; ಅವನ ತಂದೆ ಟೈರಿನವನು. ಬಂಗಾರ, ಬೆಳ್ಳಿ, ತಾಮ್ರ, ಕಬ್ಬಿಣ, ಕಲ್ಲು, ಮರ ಇವುಗಳ ಕೆಲಸವನ್ನು ಮಾಡುವುದಕ್ಕೂ ಊದಾ, ನೀಲಿ, ಕೆಂಪುವರ್ಣಗಳುಳ್ಳ ನಾರುಬಟ್ಟೆಗಳನ್ನು ನೇಯುವುದಕ್ಕೂ ಎಲ್ಲಾ ತರದ ಕೆತ್ತನೆಯ ಕೆಲಸ ಮಾಡುವುದಕ್ಕೂ ತನಗೆ ಒಪ್ಪಿಸಲಾಗುವ ಎಲ್ಲಾ ಕಲಾತ್ಮಕ ಕೆಲಸಗಳನ್ನು ನಡೆಸುವುದಕ್ಕೂ ಇವನು ಸಮರ್ಥನು. ನೀನೂ ನಿನ್ನ ತಂದೆ ದಾವೀದನೂ ಗೊತ್ತುಮಾಡಿದ ಕಲಾಕುಶಲರೊಡನೆ ಇವನು ಕೆಲಸಮಾಡಲಿ.