Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 26:10 - ಕನ್ನಡ ಸತ್ಯವೇದವು C.L. Bible (BSI)

10 ಅವನಿಗೆ ಇಳಕಲಿನ ಪ್ರದೇಶದಲ್ಲೂ ತಪ್ಪಲ ಸೀಮೆಯಲ್ಲೂ ಅಲ್ಲದೆ ಅಡವಿಯಲ್ಲೂ ಪಶುಪ್ರಾಣಿಗಳ ದೊಡ್ಡಮಂದೆಗಳು ಇದ್ದವು. ಆದುದರಿಂದ ಆ ಅಡವಿಯಲ್ಲಿ ಬುರುಜುಗಳನ್ನು ಕಟ್ಟಿಸಿ ಹಲವು ಬಾವಿಗಳನ್ನು ತೋಡಿಸಿದನು. ವ್ಯವಸಾಯದಲ್ಲಿ ಅವನಿಗೆ ಅಭಿರುಚಿ ಇದ್ದುದರಿಂದ ಗುಡ್ಡ, ಫಲವತ್ತಾದ ಬಯಲು, ಇವುಗಳಲ್ಲಿ ಹೊಲ ಹಾಗು ದ್ರಾಕ್ಷಿತೋಟಗಳ ಕೆಲಸಗಾರರನ್ನು ನೇಮಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಅವನಿಗೆ ಇಳಿಜಾರಿನ ಪ್ರದೇಶದಲ್ಲಿಯೂ, ತಪ್ಪಲ ಸೀಮೆಯಲ್ಲಿಯೂ ಅಲ್ಲದೆ ಅಡವಿಯಲ್ಲಿಯೂ ಪಶುಗಳ ದೊಡ್ಡ ಮಂದೆಗಳು ಇದ್ದವು. ಆದುದರಿಂದ ಆ ಅಡವಿಯಲ್ಲಿ ಗೋಪುರಗಳನ್ನು ಕಟ್ಟಿಸಿ ಅನೇಕ ಬಾವಿಗಳನ್ನು ತೋಡಿಸಿದನು. ಅವನಿಗೆ ವ್ಯವಸಾಯದಲ್ಲಿ ಬಹಳ ಅಭಿರುಚಿ ಇದ್ದುದರಿಂದ ಗುಡ್ಡ, ಫಲವತ್ತಾದ ಬಯಲು, ಇವುಗಳಲ್ಲಿ ಹೊಲ ಹಾಗು ದ್ರಾಕ್ಷಿ ತೋಟಗಳಲ್ಲಿ ಕೆಲಸಗಾರರನ್ನು ನೇಮಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಅವನಿಗೆ ಇಳಕಲಿನ ಪ್ರದೇಶದಲ್ಲಿಯೂ ತಪ್ಪಲ ಸೀಮೆಯಲ್ಲಿಯೂ ಅಲ್ಲದೆ ಅಡವಿಯಲ್ಲಿಯೂ ಪಶುಗಳ ದೊಡ್ಡ ಮಂದೆಗಳಿದ್ದದರಿಂದ ಆ ಅಡವಿಯಲ್ಲಿ ಬುರುಜುಗಳನ್ನು ಕಟ್ಟಿಸಿ ಹಲವು ಬಾವಿಗಳನ್ನು ತೋಡಿಸಿದನು. ಅವನು ವ್ಯವಸಾಯದಲ್ಲಿ ಇಷ್ಟವುಳ್ಳವನಾಗಿದ್ದದರಿಂದ ಗುಡ್ಡ, ಫಲವತ್ತಾದ ಬೈಲು ಇವುಗಳಲ್ಲಿ ಹೊಲ ದ್ರಾಕ್ಷೇತೋಟಗಳ ಕೆಲಸಮಾಡುವವರನ್ನು ನೇವಿುಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಮರುಭೂಮಿಯಲ್ಲಿಯೂ ಬುರುಜುಗಳನ್ನು ಕಟ್ಟಿಸಿದನು; ಅನೇಕ ಬಾವಿಗಳನ್ನು ತೋಡಿಸಿದನು. ಅವನಿಗೆ ಬಯಲಿನಲ್ಲಿಯೂ ಬೆಟ್ಟಪ್ರದೇಶಗಳಲ್ಲಿಯೂ ಅಸಂಖ್ಯಾತ ಪಶುಗಳಿದ್ದವು. ಪರ್ವತ ಪ್ರಾಂತ್ಯಗಳಲ್ಲಿ ಮತ್ತು ಬೇರೆ ಸ್ಥಳಗಳಲ್ಲಿ ಹುಲುಸಾದ ಬೆಳೆಯನ್ನು ಬೆಳೆಯಿಸಿದನು. ಬಯಲುಗಳಲ್ಲಿ ಕೆಲಸಮಾಡಲು ಅವನು ರೈತರನ್ನು ಕೂಲಿಗೆ ನೇಮಿಸಿಕೊಂಡನು; ಬೆಟ್ಟಗಳಲ್ಲಿಯೂ ಕಾರ್ಮೆಲಿನಲ್ಲಿಯೂ ಇದ್ದ ತನ್ನ ದ್ರಾಕ್ಷಿತೋಟಗಳನ್ನು ನೋಡಿಕೊಳ್ಳಲು ಕೆಲಸಗಾರರನ್ನು ಕೂಲಿಗೆ ತೆಗೆದುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ತಗ್ಗಿನ ದೇಶದಲ್ಲಿಯೂ, ಬಯಲು ದೇಶದಲ್ಲಿಯೂ ಅವನಿಗೆ ಬಹು ಪಶುಗಳಿದ್ದವು. ಆ ಅಡವಿಯಲ್ಲಿ ಬುರುಜುಗಳನ್ನು ಕಟ್ಟಿಸಿ ಅನೇಕ ಬಾವಿಗಳನ್ನು ತೋಡಿಸಿದನು. ಹಾಗೆಯೇ ಪರ್ವತಗಳಲ್ಲಿಯೂ, ಕರ್ಮೆಲಿನಲ್ಲಿಯೂ ಅವನಿಗೆ ಒಕ್ಕಲಿಗರೂ, ದ್ರಾಕ್ಷಿ ವ್ಯವಸಾಯದವರೂ ಇದ್ದರು. ಏಕೆಂದರೆ ಅವನು ವ್ಯವಸಾಯದಲ್ಲಿ ಇಷ್ಟವುಳ್ಳವನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 26:10
13 ತಿಳಿವುಗಳ ಹೋಲಿಕೆ  

ಕೊಂಚ ಕಾಲದೊಳಗೆ ಲೆಬನೋನ್ ಅರಣ್ಯವು ತೋಟವಾಗುವುದು. ಈಗಿನ ತೋಟವಾದರೋ ಅರಣ್ಯವಾಗಿ ಕಾಣಿಸುವುದು.


ನೀನು ನಿನ್ನ ದೂತರ ಮೂಲಕ ಸರ್ವೇಶ್ವರನನ್ನು ನಿಂದಿಸಿರುವೆ, ಅಲ್ಲದೆ ಈ ಮಾತುಗಳನ್ನಾಡಿ ಜಂಬಕೊಚ್ಚಿಕೊಂಡಿರುವೆ: ‘ಹತ್ತಿದ್ದೇನೆ ಗಿರಿಶಿಖರಗಳನ್ನು ರಥಸಮೂಹದೊಡನೆ ಸೇರಿದ್ದೇನೆ ಲೆಬನೋನಿನ ದುರ್ಗಮ ಸ್ಥಳಗಳನ್ನೇ! ಕಡಿದಿದ್ದೇನೆ ಅದರ ಎತ್ತರವಾದ ದೇವದಾರು ವೃಕ್ಷಗಳನ್ನೇ ಕತ್ತರಿಸಿದ್ದೇನೆ ಅದರ ಶ್ರೇಷ್ಠವಾದ ತುರಾಯಿ ಮರಗಳನ್ನೇ ಒಳಹೊಕ್ಕಿದ್ದೇನೆ ಅಲ್ಲಿನ ದೂರದ ನಿವಾಸಸ್ಥಳಗಳನ್ನೇ, ಶಿಖರವನ್ನೇ, ಪ್ರವೇಶಿಸಿದ್ದೇನೆ ದಟ್ಟವಾದ ಆ ಕಾಡು ಮೇಡುಗಳನ್ನೇ!


ಅನೇಕ ಕುರಿಹಿಂಡುಗಳುಳ್ಳವನಾಗಿದ್ದ ಮೋವಾಬ್ಯರ ಅರಸ ಮೇಷನೆಂಬವನು ಇಸ್ರಯೇಲರ ಅರಸನಿಗೆ ಒಂದು ಲಕ್ಷ ಕುರಿಗಳ ಮತ್ತು ಒಂದು ಲಕ್ಷ ಟಗರುಗಳ ಉಣ್ಣೆಯನ್ನು ಕಪ್ಪವಾಗಿ ಕೊಡುತ್ತಿದ್ದನು.


ಹೀಗೆ ಮೀಶೋರೆಂಬ ಎತ್ತರವಾದ ಬೈಲುಸೀಮೆಯ ಎಲ್ಲಾ ಪಟ್ಟಣಗಳನ್ನೂ ಗಿಲ್ಯಾದ್ ಸೀಮೆಯನ್ನೂ ಓಗನ ರಾಜ್ಯವಾದ ಸಲ್ಕಾ, ಎದ್ರೈ ಎಂಬ ಪಟ್ಟಣಗಳಿಂದ ಕೂಡಿರುವ ಬಾಷಾನ್ ಸೀಮೆಯನ್ನೂ ಸ್ವಾಧೀನಮಾಡಿಕೊಂಡೆವು.


ಇದಲ್ಲದೆ, ಯುದ್ಧಕ್ಕೆ ಬೇಕಾದ ಸೈನ್ಯವೂ ಉಜ್ಜೀಯನಿಗಿತ್ತು. ಲೇಖಕನಾದ ಯೆಗೀಯೇಲ್, ಅಧಿಕಾರಿಯಾದ ಮಾಸೇಯ, ಇವರು ಅರಸನ ಸರದಾರರಲ್ಲಿ ಒಬ್ಬನಾದ ಹನನ್ಯನ ಆಜ್ಞಾನುಸಾರ, ಅವನ ಪಟ್ಟಿಯನ್ನು ಬರೆದಿದ್ದರು. ಆಯಾ ಗುಂಪುಗಳು ಪಟ್ಟಿಯ ಕ್ರಮಾನುಸಾರ ಯುದ್ಧಕ್ಕೆ ಹೊರಡುತ್ತಿದ್ದವು.


ಮಾವೋನ್, ಕರ್ಮೆಲ್, ಜೀಫ್, ಯುಟ್ಟಾ,


ಬೆಳಿಗ್ಗೆ ಎದ್ದು ಸೌಲನನ್ನು ಕರ್ಮೆಲಿಗೆ ಹೋಗಿ ಅಲ್ಲಿ ತನಗಾಗಿ ಒಂದು ಜ್ಞಾಪಕಸ್ತಂಭವನ್ನು ನಿಲ್ಲಿಸಿ, ಅಲ್ಲಿಂದ ದಿಬ್ಬ ಇಳಿದು ಗಿಲ್ಗಾಲಿಗೆ ಹೋದನು ಎಂಬ ಸಮಾಚಾರ ಸಿಕ್ಕಿತು.


ಹೀಗೆ ಯೆಹೋಷಾಫಾಟನು ಅತ್ಯಧಿಕವಾಗಿ ಅಭಿವೃದ್ಧಿಹೊಂದಿ ಜುದೇಯ ನಾಡಿನಲ್ಲಿ ಕೋಟೆಗಳನ್ನು ಮತ್ತು ಉಗ್ರಾಣದ ಪಟ್ಟಣಗಳನ್ನು ಕಟ್ಟಿಸಿದನು.


ಜುದೇಯದ ಪಟ್ಟಣಗಳಲ್ಲಿ ದವಸಧಾನ್ಯಗಳ ದೊಡ್ಡ ಮಳಿಗೆಯಿತ್ತು. ಜೆರುಸಲೇಮಿನಲ್ಲಿ ರಣವೀರರಾದ ಯೋಧರು ಇದ್ದರು:


ಇದಲ್ಲದೆ, ಪಟ್ಟಣಗಳನ್ನು ಕಟ್ಟಿಸಿ ದನಕುರಿಗಳ ದೊಡ್ಡ ಹಿಂಡುಗಳನ್ನು ಸಂಪಾದಿಸಿಕೊಂಡನು. ದೇವರು ಅವನಿಗೆ ಕೊಟ್ಟ ಸಂಪತ್ತು ಅಪರಿಮಿತವಾಗಿತ್ತು.


ನಾಡಿನಲ್ಲಿ ಬಡವರ ಶೋಷಣೆಯನ್ನೂ ನ್ಯಾಯನೀತಿಯ ಉಲ್ಲಂಘನೆಯನ್ನೂ ನೀನು ನೋಡಿದರೆ ಆಶ್ಚರ್ಯಪಡಬೇಡ. ಒಬ್ಬ ಅಧಿಕಾರಿಯ ಮೇಲೆ ಇನ್ನೊಬ್ಬ ಅಧಿಕಾರಿ ಉಸ್ತುವಾರಿ ನಡೆಸುತ್ತಾನೆ. ಆ ಇಬ್ಬರು ಅಧಿಕಾರಿಗಳ ಮೇಲೆ ಇನ್ನೂ ಉನ್ನತ ಅಧಿಕಾರಿಗಳು ಇದ್ದಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು