Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 25:26 - ಕನ್ನಡ ಸತ್ಯವೇದವು C.L. Bible (BSI)

26 ಉಳಿದ ಅವನ ಪೂರ್ವೋತ್ತರ ಚರಿತ್ರೆಯು ಯೆಹೂದ್ಯರ ಮತ್ತು ಇಸ್ರಯೇಲರ ರಾಜರ ಗ್ರಂಥದಲ್ಲಿ ಲಿಖಿತವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಅಮಚ್ಯನ ಉಳಿದ ಪೂರ್ವೋತ್ತರ ಚರಿತ್ರೆಯು ಯೆಹೂದ್ಯರ ಮತ್ತು ಇಸ್ರಾಯೇಲರ ರಾಜರ ಗ್ರಂಥಗಳಲ್ಲಿ ಬರೆಯಲ್ಪಟ್ಟಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಅವನ ಉಳಿದ ಪೂರ್ವೋತ್ತರಚರಿತ್ರೆಯು ಯೆಹೂದ್ಯರ ಮತ್ತು ಇಸ್ರಾಯೇಲ್ಯರ ರಾಜರ ಗ್ರಂಥದಲ್ಲಿ ಬರೆದಿರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ಅಮಚ್ಯನ ಬೇರೆ ಕಾರ್ಯಗಳು ಅಂದರೆ ಆರಂಭದಿಂದ ಕೊನೆಯವರೆಗಿನ ಕಾರ್ಯಗಳನ್ನು ಯೆಹೂದದ ಮತ್ತು ಇಸ್ರೇಲಿನ ರಾಜರ ಗ್ರಂಥದಲ್ಲಿ ಬರೆಯಲಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 ಅಮಚ್ಯನ ಆಳ್ವಿಕೆಯ ಇತರ ಕ್ರಿಯೆಗಳನ್ನು, ಮೊದಲನೆಯದಿಂದ ಕಡೆಯವರೆಗೆ ಯೆಹೂದ ಇಸ್ರಾಯೇಲರ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 25:26
12 ತಿಳಿವುಗಳ ಹೋಲಿಕೆ  

ಯೆಹೋಷಾಫಾಟನ ಉಳಿದ ಪೂರ್ವೋತ್ತರ ಚರಿತ್ರೆ ಇಸ್ರಯೇಲ್ ರಾಜರ ಗ್ರಂಥದಲ್ಲಿ ಹನಾನೀಯನ ಮಗ ಯೇಹುವಿನ ವೃತ್ತಾಂತದಲ್ಲಿ ದಾಖಲಾಗಿದೆ.


ಯೋವಾಷನ ಉಳಿದ ಚರಿತ್ರೆ, ಅವನ ಶೂರಕೃತ್ಯಗಳ ಮತ್ತು ಜುದೇಯದ ರಾಜನಾದ ಅಮಚ್ಯನೊಡನೆ ನಡೆಸಿದ ಯುದ್ಧದ ವಿವರ, ಇವು ಇಸ್ರಯೇಲ್ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಬರೆದಿರುತ್ತವೆ.


ಇಸ್ರಯೇಲರ ಅರಸನೂ ಯೆಹೋವಾಹಾಜನ ಮಗನೂ ಆದ ಯೋವಾಷನು ಸತ್ತ ನಂತರ, ಜುದೇಯದ ಅರಸ ಯೆಹೋವಾಷನ ಮಗ ಅಮಚ್ಯನು ಇನ್ನೂ ಹದಿನೈದು ವರ್ಷ ಬದುಕಿದ್ದನು.


ಅಮಚ್ಯನು ಸರ್ವೇಶ್ವರನ ಭಕ್ತಿಯನ್ನು ಬಿಟ್ಟಂದಿನಿಂದ ಜೆರುಸಲೇಮಿನವರು ಅವನಿಗೆ ವಿರುದ್ಧ ಒಳಸಂಚು ಮಾಡುತ್ತಿದ್ದರು. ಆದುದರಿಂದ ಅವನು ಲಾಕೀಷಿಗೆ ಓಡಿಹೋದನು. ಆದರೆ ಅವರು ಆಳುಗಳನ್ನು ಕಳುಹಿಸಿ ಅವನನ್ನು ಅಲ್ಲಿಯೇ ಕೊಲ್ಲಿಸಿದರು.


ಯಾರೊಬ್ಬಾಮನ ಇತರ ಕಾರ್ಯಕಲಾಪಗಳು, ಅವನ ಯುದ್ಧಗಳು ಹಾಗು ರಾಜ್ಯಭಾರಗಳ ವಿವರವು, ‘ಇಸ್ರಯೇಲ್ ರಾಜರ ಇತಿಹಾಸ’ ಎಂಬ ಗ್ರಂಥದಲ್ಲಿ ಬರೆದಿರುತ್ತವೆ.


ರೆಹಬ್ಬಾಮನ ಉಳಿದ ಚರಿತ್ರೆ ಹಾಗು ಅವನ ಎಲ್ಲಾ ಕೃತ್ಯಗಳು ಯೆಹೂದ ರಾಜರ ಇತಿಹಾಸ ಎಂಬ ಗ್ರಂಥದಲ್ಲಿ ಬರೆದಿರುತ್ತವೆ.


ದಾವೀದನ ಪೂರ್ವೋತ್ತರ ಚರಿತ್ರೆ, ಅವನ ಆಳ್ವಿಕೆ, ಪರಾಕ್ರಮ ಹಾಗೂ ಅವನಿಗೂ ಇಸ್ರಯೇಲರಿಗೂ ಸುತ್ತಣ ರಾಜ್ಯಗಳಿಗೂ ಸಂಭವಿಸಿದ ಸುಖ-ದುಃಖ, ಇವುಗಳ ವರದಿಯು


ಉಜ್ಜೀಯನ ಉಳಿದ ಪೂರ್ವೋತ್ತರ ಚರಿತ್ರೆಯನ್ನು ಆಮೋಚನ ಮಗ ಯೆಶಾಯನೆಂಬ ಪ್ರವಾದಿ ಬರೆದಿದ್ದಾನೆ.


ಯೋತಾಮನ ಉಳಿದ ಚರಿತ್ರೆ ಅವನ ಯುದ್ಧಗಳು ಹಾಗು ಪ್ರವರ್ತನೆಗಳು ಇಸ್ರಯೇಲರ ಮತ್ತು ಯೆಹೂದ್ಯರ ರಾಜಗ್ರಂಥದಲ್ಲಿ ದಾಖಲಾಗಿರುತ್ತವೆ.


ಹಿಜ್ಕೀಯನ ಉಳಿದ ಚರಿತ್ರೆಯನ್ನೂ ಅವನ ಭಕ್ತಿಕಾರ್ಯಗಳನ್ನೂ ಆಮೋಚನ ಮಗ ಯೆಶಾಯನ ದರ್ಶನ ಗ್ರಂಥದಲ್ಲಿ ಹಾಗು ಯೆಹೂದ್ಯರ ಮತ್ತು ಇಸ್ರಯೇಲರ ರಾಜಗ್ರಂಥದಲ್ಲಿ ಬರೆಯಲಾಗಿದೆ.


ಅವನ ಪೂರ್ವೋತ್ತರ ವೃತ್ತಾಂತ ಇವು, ಇಸ್ರಯೇಲರ ಮತ್ತು ಯೆಹೂದ್ಯರ ರಾಜಗ್ರಂಥದಲ್ಲಿ ದಾಖಲಾಗಿವೆ.


ಯೆಹೋಯಾಕೀಮನ ಉಳಿದ ಚರಿತ್ರೆ ಅವನು ನಡಿಸಿದ ಅಸಹ್ಯಕೃತ್ಯಗಳು ಹಾಗು ಅವನಲ್ಲಿ ಕಂಡುಬಂದದ್ದೆಲ್ಲವು ಇಸ್ರಯೇಲರ ಮತ್ತು ಯೆಹೂದ್ಯರ ರಾಜಗ್ರಂಥದಲ್ಲಿ ಬರೆದಿರುತ್ತವೆ. ಅವನಿಗೆ ಬದಲಾಗಿ ಅವನ ಮಗ ಯೆಹೋಯಾಕೀನನು ಅರಸನಾದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು