Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 24:17 - ಕನ್ನಡ ಸತ್ಯವೇದವು C.L. Bible (BSI)

17 ಯೆಹೋಯಾದನು ಮೃತನಾದ ಮೇಲೆ, ಜುದೇಯದ ಪದಾಧಿಕಾರಿಗಳು ಅರಸ ಯೆಹೋವಾಷನ ಬಳಿಗೆ ಬಂದು, ಅವನಿಗೆ ಅಡ್ಡಬಿದ್ದು ಅವನನ್ನು ಒಲಿಸಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಯೆಹೋಯಾದನು ಮೃತನಾದ ಮೇಲೆ ಯೆಹೂದ ಪ್ರಭುಗಳು ಅರಸನ ಬಳಿಗೆ ಬಂದು ಅವನಿಗೆ ಅಡ್ಡಬಿದ್ದು ಅವನನ್ನು ಒಲಿಸಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಯೆಹೋಯಾದನು ಮೃತನಾದ ಮೇಲೆ ಯೆಹೂದಪ್ರಭುಗಳು ಅರಸನ ಬಳಿಗೆ ಬಂದು ಅವನಿಗೆ ಅಡ್ಡಬಿದ್ದು ಅವನನ್ನು ಒಲಿಸಿಕೊಂಡರು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಯೆಹೋಯಾದನು ಸತ್ತ ಬಳಿಕ ಯೆಹೂದದೇಶದ ಪ್ರಮುಖರು ಅರಸನಾದ ಯೆಹೋವಾಷನ ಬಳಿಗೆ ಬಂದು ನಮಸ್ಕರಿಸಿದರು. ಅರಸನು ಅವರ ಮಾತುಗಳನ್ನು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಯೆಹೋಯಾದಾವನ ಮರಣದ ತರುವಾಯ ಯೆಹೂದದ ಪ್ರಧಾನರು ಬಂದು ಅರಸನಿಗೆ ಅಡ್ಡಬಿದ್ದರು. ಆಗ ಅರಸನು ಅವರ ಮಾತನ್ನು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 24:17
18 ತಿಳಿವುಗಳ ಹೋಲಿಕೆ  

ಏಕೆಂದರೆ ನೀವು ಹಟಮಾರಿಗಳು, ಆಜ್ಞೆಗೆ ಒಳಗಾಗದವರೆಂಬುದು ನನಗೆ ತಿಳಿದೇ ಇದೆ. ನಾನು ಇನ್ನೂ ಜೀವದಿಂದಿರುವಾಗಲೇ ನೀವು ಸರ್ವೇಶ್ವರನಿಗೆ ವಿರುದ್ಧ ಪ್ರತಿಭಟಿಸಿದ್ದೀರಿ; ನಾನು ಹೋದ ತರುವಾಯ ನೀವು ಪ್ರತಿಭಟಿಸುವುದು ಮತ್ತಷ್ಟು ನಿಶ್ಚಯ.


ನನ್ನ ಮರಣಾ ನಂತರವೂ ಈ ವಿಷಯಗಳನ್ನು ನೀವು ಯಾವಾಗಲೂ ಜ್ಞಾಪಕಕ್ಕೆ ತಂದುಕೊಳ್ಳಲು ಸಾಧ್ಯವಾಗುವಂತೆ ಈಗಲೇ ನನ್ನಿಂದಾದಷ್ಟು ಪ್ರಯತ್ನಿಸುತ್ತೇನೆ.


ಒಡಂಬಡಿಕೆಯ ದ್ರೋಹಿಗಳು ಅವನ ನಯನುಡಿಗೆ ಮಾರುಹೋಗುವರು. ತಮ್ಮ ದೇವರನ್ನು ಅರಿತವರೋ ದೃಢಚಿತ್ತರಾಗಿ ಕೃತಾರ್ಥರಾಗುವರು.


ಸುಳ್ಳುವರದಿಗೆ ಕಿವಿಗೊಡುವ ರಾಜಸೇವಕರೆಲ್ಲರು ದುರುಳರು.


ನೆರೆಯವನನ್ನು ಅಳತೆಮೀರಿ ಹೊಗಳುವವನು ಅವನ ಕಾಲಿಗೆ ಬಲೆಯನ್ನು ಒಡ್ಡುವನು.


ಸುಳ್ಳುನಾಲಿಗೆ ಹಗೆಮಾಡುತ್ತದೆ ಸತ್ಯವನ್ನು; ಹೊಗಳುಭಟ್ಟನ ಬಾಯಿ ತರುತ್ತದೆ ನಷ್ಟವನ್ನು.


ಮೂಢನಿಗೆ ಕೊಡುವ ಮಾನ ಕವಣೆಗೆ ಕಟ್ಟಿದ ಕಲ್ಲು.


ಗುಟ್ಟನ್ನು ರಟ್ಟು ಮಾಡದಿರನು ಚಾಡಿಕೋರ; ತುಟಿ ಬಿಗಿಹಿಡಿಯದವನ ಗೊಡವೆ ನಿನಗೆ ಬೇಡ.


ಅವನು ಇಸ್ರಯೇಲರ ವಿಷಯದಲ್ಲೂ ದೇವರ ಮತ್ತು ದೇವಾಲಯದ ವಿಷಯದಲ್ಲೂ ಹಲವಾರು ಸತ್ಕಾರ್ಯಗಳನ್ನು ಮಾಡಿದ್ದರಿಂದ ಅವನ ಶವವನ್ನು ದಾವೀದ ನಗರದೊಳಗೆ ರಾಜಸ್ಮಶಾನದಲ್ಲಿ ಸಮಾಧಿ ಮಾಡಿದರು.


ಅಂದಿನಿಂದ ಅವರು ತಮ್ಮ ಪೂರ್ವಜರ ದೇವರಾದ ಸರ್ವೇಶ್ವರನ ಆಲಯವನ್ನು ನಿರಾಕರಿಸಿ, ಅಶೇರ ಸ್ತಂಭಗಳನ್ನೂ ವಿಗ್ರಹಗಳನ್ನೂ ಪೂಜಿಸ ತೊಡಗಿದರು. ಅವರ ಈ ಅಪರಾಧದಿಂದ ಜುದೇಯದ ಮೇಲೂ ಜೆರುಸಲೇಮಿನ ಮೇಲೂ ದೈವಕೋಪ ಎರಗಿತು.


ಆದರೆ ಶಿಷ್ಟನು ತನ್ನ ಶಿಷ್ಟತನವನ್ನು ಬಿಟ್ಟು, ಅಧರ್ಮಮಾಡಿ, ದುಷ್ಟನು ನಡೆಸುವ ದುರಾಚಾರಗಳನ್ನೆಲ್ಲಾ ನಡೆಸಿದರೆ, ಅವನು ಜೀವಿಸುವನೇ? ಅವನು ಮಾಡಿದ ಯಾವ ಸುಕೃತ್ಯವೂ ಅವನ ಲೆಕ್ಕಕ್ಕೆ ಸೇರಿಸಲ್ಪಡದು, ಅವನು ಮಾಡುತ್ತಿರುವ ಪಾಪಾಪರಾಧಗಳಿಂದಲೇ ಸಾಯುವನು.


ಗಿದ್ಯೋನನು ಸತ್ತನಂತರ ಇಸ್ರಯೇಲರು ದೇವದ್ರೋಹಿಗಳಾಗಿ ಬಾಳನ ಪ್ರತಿಮೆಗಳನ್ನು ಪೂಜಿಸಿದರು; ಬಾಳ್ ಬೆರೀತನನ್ನು ತಮ್ಮ ದೇವರನ್ನಾಗಿ ಮಾಡಿಕೊಂಡರು.


ಜುದೇಯದ ಅರಸ ಯೆಹೋವಾಷನು ಇದನ್ನು ಕೇಳಿ, ತಾನು ಮತ್ತು ತನ್ನ ಪೂರ್ವಿಕರಾದ ಯೆಹೋಷಾಫಾಟ್, ಯೆಹೋರಾಮ್, ಅಹಜ್ಯಾ ಎಂಬ ಯೆಹೂದರಾಜರು ದೇವಸ್ಥಾನಕ್ಕೆ ಕಾಣಿಕೆಯಾಗಿ ಕೊಟ್ಟ ಒಡವೆಗಳನ್ನು ಹಾಗು ಸರ್ವೇಶ್ವರನ ಆಲಯದ ಮತ್ತು ಅರಮನೆ ಭಂಡಾರಗಳಲ್ಲಿ ಇದ್ದ ಬಂಗಾರದ ವಸ್ತುಗಳನ್ನು ಸಿರಿಯಾದವರ ಅರಸನಾದ ಹಜಾಯೇಲನಿಗೆ ಕಳುಹಿಸಿದನು. ಆಗ ಅವನು ಜೆರುಸಲೇಮನ್ನು ಬಿಟ್ಟುಹೋದನು.


ಅದು ಮರಳಿ ಬಂದಾಗ, ಮನೆ ಗುಡಿಸಿರುವುದನ್ನೂ ಎಲ್ಲವೂ ಚೊಕ್ಕಟವಾಗಿರುವುದನ್ನೂ ಕಾಣುತ್ತದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು