Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 22:6 - ಕನ್ನಡ ಸತ್ಯವೇದವು C.L. Bible (BSI)

6 ಆ ಗಾಯಗಳನ್ನು ಮಾಯಿಸಿಕೊಳ್ಳುವುದಕ್ಕಾಗಿ ಅವನು ಜೆಸ್ರೀಲಿಗೆ ಬಂದನು. ಅವನು ಅಸ್ವಸ್ಥನಾಗಿದ್ದುದರಿಂದ ಯೆಹೂದ್ಯರ ಅರಸ ಯೆಹೋರಾಮನ ಮಗನಾದ ಅಹಜ್ಯನು ಅವನನ್ನು ನೋಡುವುದಕ್ಕೆ ಅಲ್ಲಿಗೆ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಅರಾಮ್ಯರು ಯೋರಾಮನಿಗೆ ರಾಮದಲ್ಲಿ ಮಾಡಿದ ಗಾಯಗಳಿಗೆ ಚಿಕಿತ್ಸೆ ಮಾಡಿಸಿಕೊಳ್ಳುವುದಕ್ಕಾಗಿ ಅವನು ಇಜ್ರೇಲಿಗೆ ಬಂದನು. ಯೋರಾಮನು ಅಸ್ವಸ್ಥನಾಗಿದ್ದುದರಿಂದ ಯೆಹೂದ್ಯರ ಅರಸನಾದ ಯೆಹೋರಾಮನ ಮಗನಾಗಿರುವ ಅಹಜ್ಯನು ಅವನನ್ನು ನೋಡುವುದಕ್ಕಾಗಿ ಅಲ್ಲಿಗೆ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಅವನು ಅಸ್ವಸ್ಥನಾಗಿದ್ದದರಿಂದ ಯೆಹೂದ್ಯರ ಅರಸನಾದ ಯೆಹೋರಾಮನಿಗೆ ಮಗನಾಗಿರುವ ಅಹಜ್ಯನು ಅವನನ್ನು ನೋಡುವದಕ್ಕೋಸ್ಕರ ಅಲ್ಲಿಗೆ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಗಾಯವನ್ನು ವಾಸಿಮಾಡಿಸಿಕೊಳ್ಳಲು ಯೋರಾಮನು ಇಜ್ರೇಲಿಗೆ ಹೋದನು. ಅರಾಮ್ಯರ ರಾಜನಾದ ಹಜಾಯೇಲನೊಡನೆ ಯುದ್ಧಮಾಡುತ್ತಿರುವಾಗ ಯೋರಾಮನು ಗಾಯಗೊಂಡಿದ್ದನು. ಇಜ್ರೇಲಿನಲ್ಲಿ ಅಸ್ವಸ್ಥನಾಗಿದ್ದ ಯೋರಾಮನನ್ನು ಸಂಧಿಸಲು ಯೆಹೂದ್ಯರ ಅರಸನೂ ಯೆಹೋರಾಮನ ಮಗನೂ ಆಗಿರುವ ಅಹಜ್ಯನು ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಆದ್ದರಿಂದ ಅವನು ಅರಾಮ್ಯ ದೇಶದ ಅರಸನಾದ ಹಜಾಯೇಲನ ಮೇಲೆ ಯುದ್ಧಮಾಡಿದಾಗ, ರಾಮೋತಿನಲ್ಲಿ ತನ್ನನ್ನು ಹೊಡೆದ ಗಾಯಗಳನ್ನು ಗುಣಪಡಿಸಿಕೊಳ್ಳುವುದಕ್ಕೆ ಇಜ್ರೆಯೇಲ್ ಪಟ್ಟಣಕ್ಕೆ ತಿರುಗಿಹೋದನು. ಆಗ ಅಹಾಬನ ಮಗ ಯೋರಾಮನು ಇಜ್ರೆಯೇಲಿನಲ್ಲಿ ಅಸ್ವಸ್ಥನಾಗಿದ್ದುದರಿಂದ ಯೆಹೂದದ ಅರಸನಾಗಿರುವ ಯೆಹೋರಾಮನ ಮಗ ಅಜರ್ಯನು ಅವನನ್ನು ನೋಡಲು ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 22:6
8 ತಿಳಿವುಗಳ ಹೋಲಿಕೆ  

ಆಗ ಗಾಯಗೊಂಡು ಅದನ್ನು ಮಾಗಿಸಿಕೊಳ್ಳುವುದಕ್ಕಾಗಿ ಹಿಂದಿರುಗಿ ಜೆಸ್ರೀಲಿಗೆ ಬಂದಿದ್ದನು.) ಯೇಹುವು ತನ್ನ ಜೊತೆಗಾರನಿಗೆ, “ನೀವು ನನ್ನವರಾಗಿದ್ದರೆ, ಈ ಸುದ್ದಿ ಜೆಸ್ರೀಲನ್ನು ಮುಟ್ಟದಂತೆ, ಒಬ್ಬನನ್ನೂ ಈ ಪಟ್ಟಣದಿಂದ ಹೊರಗೆ ಬಿಡಬೇಡಿ,” ಎಂದು ಹೇಳಿದನು.


ಅಹಜ್ಯನು ಯೋರಾಮನ ಬಳಿಗೆ ಹೋಗಿ ನಾಶವಾದದ್ದು ದೈವಸಂಕಲ್ಪದಿಂದಲೇ. ಅವನು ಆ ಸ್ಥಳವನ್ನು ಮುಟ್ಟಿದ ಕೂಡಲೆ ಯೋರಾಮನ ಜೊತೆಯಲ್ಲಿ ನಿಂಷಿಯ ಮಗ ಯೇಹುವನ್ನು ಎದುರುಗೊಳ್ಳುವುದಕ್ಕೆ ಹೋದನು. ಸರ್ವೇಶ್ವರ ಅಹಾಬನ ಮನೆಯನ್ನು ನಿರ್ನಾಮ ಮಾಡುವುದಕ್ಕಾಗಿಯೇ ಯೇಹುವಿಗೆ ರಾಜಾಭಿಷೇಕ ಮಾಡಿಸಿ ಇದ್ದರು.


ಜೆರುಸಲೇಮಿನವರು ಯೆಹೋರಾಮನಿಗೆ ಬದಲಾಗಿ ಅವನ ಕಿರಿಯಮಗ ಅಹಜ್ಯನನ್ನು ಅರಸನನ್ನಾಗಿ ಮಾಡಿದರು. ಅರೇಬಿಯರೊಡನೆ ಯೆಹೋರಾಮನ ಪಾಳೆಯಕ್ಕೆ ಬಂದ ಕೊಳ್ಳೆಗಾರರು ಅವನ ಹಿರಿಯ ಮಕ್ಕಳನ್ನೆಲ್ಲಾ ಕೊಂದುಬಿಟ್ಟಿದ್ದರು. ಆದುದರಿಂದ ಜುದೇಯದ ಅರಸ ಯೆಹೋರಾಮನ ಮಗ ಅಹಜ್ಯನು ಅರಸನಾದನು.


ಅವರು ಜುದೇಯದ ಮೇಲೆ ಯುದ್ಧಕ್ಕೆ ಬಂದು, ನಾಡಿನೊಳಗೆ ನುಗ್ಗಿ, ಅರಮನೆಯಲ್ಲಿ ಸಿಕ್ಕಿದ ಎಲ್ಲ ಸೊತ್ತನ್ನೂ ಅರಸನ ಮಡದಿ ಮಕ್ಕಳನ್ನೂ ಸೆರೆಗೆ ಒಯ್ದರು. ಅವನಿಗೆ ಕಿರಿಯಮಗ ಯೆಹೋವಾಹಾಜನ ಹೊರತು ಮಕ್ಕಳೇ ಉಳಿಯಲಿಲ್ಲ.


ಸಿರಿಯಾದವರು ಯೋರಾಮನನ್ನು ಗಾಯಪಡಿಸಿದರು. ಯುದ್ಧದಲ್ಲಾದ ಗಾಯಗಳನ್ನು ಮಾಗಿಸಿಕೊಳ್ಳುವುದಕ್ಕಾಗಿ ಅವನು ಜೆಸ್ರೀಲಿಗೆ ಬಂದನು. ಅವನು ಅಸ್ವಸ್ಥನಾಗಿದ್ದುದರಿಂದ ಯೆಹೂದ್ಯರ ಅರಸನಾದ ಯೆಹೋರಾಮನ ಮಗ ಅಹಜ್ಯನು ಅವನನ್ನು ನೋಡುವುದಕ್ಕಾಗಿ ಅಲ್ಲಿಗೆ ಹೋದನು.


ಇಜ್ರೇಲ್, ಯೊಗ್ದೆಯಾಮ್, ಜನೋಹ, ಕಯಿನ್, ಗಿಬೆಯಾ, ತಿಮ್ನಾ ಎಂಬ ಹತ್ತು ನಗರಗಳು ಮತ್ತು ಅವುಗಳ ಗ್ರಾಮಗಳು.


ಆ ಪ್ರೇರಣೆಯಿಂದಲೇ ಇಸ್ರಯೇಲರ ಅರಸನೂ ಅಹಾಬನ ಮಗನೂ ಆದ ಯೋರಾಮನ ಜೊತೆಯಲ್ಲಿ ಸಿರಿಯಾದ ಅರಸ ಹಜಾಯೇಲನಿಗೆ ವಿರುದ್ಧ ಯುದ್ಧಮಾಡುವುದಕ್ಕೆ ರಾಮೋತ್‍ಗಿಲ್ಯಾದಿಗೆ ಹೋದನು. ಸಿರಿಯಾದವರು ಯೋರಾಮನನ್ನು ಯುದ್ಧದಲ್ಲಿ ಗಾಯಪಡಿಸಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು