2 ಪೂರ್ವಕಾಲ ವೃತ್ತಾಂತ 20:37 - ಕನ್ನಡ ಸತ್ಯವೇದವು C.L. Bible (BSI)37 ಆಗ ಮಾರೇಷಾ ಊರಿನ ದೋದಾವಾಹುವಿನ ಮಗ ಎಲೀಯೆಜರನು ಯೆಹೋಷಾಫಾಟನಿಗೆ ವಿರೋಧವಾಗಿ, “ನೀನು ಅಹಜ್ಯನೊಡನೆ ಒಪ್ಪಂದಮಾಡಿಕೊಂಡಿದ್ದರಿಂದ ಸರ್ವೇಶ್ವರ ನಿನ್ನ ಕೆಲಸವನ್ನು ಹಾಳುಮಾಡುವರು,” ಎಂದು ಪ್ರವಾದಿಸಿದನು. ಆ ಹಡಗುಗಳು ಒಡೆದುಹೋದುದರಿಂದ ತಾರ್ಷೀಷಿಗೆ ಹೊರಡಲೇ ಇಲ್ಲ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201937 ಆಗ ಮಾರೇಷಾ ಊರಿನ ದೋದಾವಾಹುವಿನ ಮಗನಾದ ಎಲೀಯೆಜರನು ಯೆಹೋಷಾಫಾಟನಿಗೆ ವಿರುದ್ಧವಾಗಿ, “ನೀನು ಅಹಜ್ಯನೊಡನೆ ಒಡಬಂಡಿಕೆ ಮಾಡಿಕೊಂಡದ್ದರಿಂದ ಯೆಹೋವನು ನಿನ್ನ ಕೆಲಸವನ್ನು ಹಾಳು ಮಾಡುವನು” ಎಂದು ಪ್ರವಾದಿಸಿದನು. ಆ ಹಡುಗುಗಳು ಒಡೆದು ಹೋದುದರಿಂದ ತಾರ್ಷೀಷಿಗೆ ಪ್ರಯಾಣ ಮಾಡಲು ಸಾಧ್ಯವಾಗಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)37 ಆಗ ಮಾರೇಷಾ ಊರಿನ ದೋದಾವಾಹುವಿನ ಮಗನಾದ ಎಲೀಯೆಜರನು ಯೆಹೋಷಾಫಾಟನಿಗೆ ವಿರೋಧವಾಗಿ - ನೀನು ಅಹಜ್ಯನೊಡನೆ ಒಡಂಬಡಿಕೆ ಮಾಡಿಕೊಂಡದ್ದರಿಂದ ಯೆಹೋವನು ನಿನ್ನ ಕೆಲಸವನ್ನು ಹಾಳುಮಾಡುವನು ಎಂದು ಪ್ರವಾದಿಸಿದನು. ಆ ಹಡಗುಗಳು ಒಡೆದುಹೋದದ್ದರಿಂದ ತಾರ್ಷೀಷಿಗೆ ಹೊರಡಲೇ ಇಲ್ಲ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್37 ಆಗ ಎಲಿಯೇಜರನು ಯೆಹೋಷಾಫಾಟನ ವಿರುದ್ಧವಾಗಿ ಪ್ರವಾದಿಸಿದನು. ಅವನು ದೋದಾವಾಹುವಿನ ಮಗನು. ಅವನು ಮಾರೇಷ ಎಂಬ ಪಟ್ಟಣದವನಾಗಿದ್ದನು. ಅವನು, “ಯೆಹೋಷಾಫಾಟನೇ, ನೀನು ಅಹಜ್ಯನೊಂದಿಗೆ ಸೇರಿಕೊಂಡಿರುವೆ. ಇದಕ್ಕಾಗಿ ಯೆಹೋವನು ನಿನ್ನ ಕೆಲಸಗಳನ್ನು ನಾಶಮಾಡುವನು” ಎಂದು ಹೇಳಿದನು. ಅವನ ಹಡಗುಗಳು ಸಮುದ್ರದಲ್ಲಿ ಒಡೆದುಹೋದದ್ದರಿಂದ ಅವುಗಳು ತಾರ್ಷೀಷಿಗೆ ಹೋಗಲಾಗಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ37 ಆಗ ಮಾರೇಷಾ ಊರಿನ ದೋದವಾಹುವಿನ ಮಗನಾದ ಎಲೀಯೆಜೆರನು ಯೆಹೋಷಾಫಾಟನಿಗೆ ವಿರೋಧವಾಗಿ ಪ್ರವಾದಿಸಿ, “ನೀನು ಅಹಜ್ಯನ ಸಂಗಡ ಒಪ್ಪಂದ ಮಾಡಿಕೊಂಡಿದ್ದರಿಂದ, ಯೆಹೋವ ದೇವರು ನೀನು ಮಾಡಿದವುಗಳನ್ನು ನಾಶಮಾಡುವರು,” ಎಂದು ಹೇಳಿದನು. ಅದರಂತೆಯೇ, ಆ ಹಡಗುಗಳು ತಾರ್ಷೀಷಿಗೆ ಹೋಗದೆ ಒಡೆದುಹೋದವು. ಅಧ್ಯಾಯವನ್ನು ನೋಡಿ |