2 ಪೂರ್ವಕಾಲ ವೃತ್ತಾಂತ 2:10 - ಕನ್ನಡ ಸತ್ಯವೇದವು C.L. Bible (BSI)10 ಮರ ಕಡಿಯುವ ನಿನ್ನ ಆಳುಗಳಿಗಾಗಿ ಎರಡು ಸಾವಿರ ಮೆಟ್ರಿಕ್ ಟನ್ ಗೋದಿ, ಎರಡು ಸಾವಿರ ಮೆಟ್ರಿಕ್ ಟನ್ ಜವೆಗೋದಿ, ನಾಲ್ಕು ಲಕ್ಷ ಲೀಟರ್ ದ್ರಾಕ್ಷಾರಸ ಹಾಗೂ ನಾಲ್ಕು ಲಕ್ಷ ಲೀಟರ್ ಎಣ್ಣೆ ಇವುಗಳನ್ನು ಕೊಡುವೆನು,” ಎಂದು ಹೇಳಿಸಿದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201910 ಮರ ಕಡಿಯುವ ನಿನ್ನ ಆಳುಗಳಿಗಾಗಿ ಇಪ್ಪತ್ತು ಸಾವಿರ ಕೋರ್ (ಎರಡು ಸಾವಿರ ಟನ್) ಗೋದಿಯನ್ನೂ, ಇಪ್ಪತ್ತು ಸಾವಿರ ಕೋರ್ (ಎರಡು ಸಾವಿರ ಟನ್) ಜವೆಗೋದಿಯನ್ನೂ, ಇಪ್ಪತ್ತು ಸಾವಿರ ಬತ್ (ನಾಲ್ಕು ಲಕ್ಷ ಲೀಟರ್) ದ್ರಾಕ್ಷಾರಸವನ್ನೂ, ಇಪ್ಪತ್ತು ಸಾವಿರ ಬತ್ (ನಾಲ್ಕು ಲಕ್ಷ ಲೀಟರ್) ಎಣ್ಣೆಯನ್ನೂ ಕೊಡುವೆನು” ಎಂದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)10 ಮರಕಡಿಯುವ ನಿನ್ನ ಆಳುಗಳಿಗಾಗಿ ಇಪ್ಪತ್ತು ಸಾವಿರ ಕೋರ್ ಗೋದಿ, ಇಪ್ಪತ್ತು ಸಾವಿರ ಕೋರ್ ಜವೆಗೋದಿ, ಇಪ್ಪತ್ತು ಸಾವಿರ ಬತ್ ದ್ರಾಕ್ಷಾರಸ, ಇಪ್ಪತ್ತು ಸಾವಿರ ಬತ್ ಎಣ್ಣೆ ಇವುಗಳನ್ನು ಕೊಡುವೆನೆಂದು ಹೇಳಿಸಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್10 ನಿನ್ನ ಜನರು ಮರಗಳನ್ನು ಕಡಿದು ಸಾಗಿಸುವ ಕಾರ್ಯಕ್ಕೆ ನಾನು ಒಂದು ಲಕ್ಷದ ಇಪ್ಪತ್ತೈದು ಸಾವಿರ ಕ್ವಿಂಟಾಲ್ ಗೋಧಿಯನ್ನೂ ಒಂದು ಲಕ್ಷದ ಇಪ್ಪತ್ತೈದು ಸಾವಿರ ಕ್ವಿಂಟಾಲ್ ಜವೆಗೋಧಿಯನ್ನೂ ಒಂದು ಲಕ್ಷದ ಹದಿನೈದು ಸಾವಿರ ಲೀಟರ್ ದ್ರಾಕ್ಷಾರಸವನ್ನೂ ಒಂದು ಲಕ್ಷದ ಹದಿನೈದು ಸಾವಿರ ಲೀಟರ್ ಎಣ್ಣೆಯನ್ನೂ ಕೊಡುವೆನು.” ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ10 ಮರ ಕಡಿಯುವ ನಿನ್ನ ಸೇವಕರಿಗಾಗಿ, ಎರಡು ಸಾವಿರ ಟನ್ ಗೋಧಿಯನ್ನೂ, ಮೂರು ಸಾವಿರ ಟನ್ ಜವೆಗೋಧಿಯನ್ನೂ, ನಾಲ್ಕು ಲಕ್ಷ ನಲವತ್ತು ಸಾವಿರ ಲೀಟರ್ ದ್ರಾಕ್ಷಾರಸವನ್ನೂ, ನಾಲ್ಕು ಲಕ್ಷ ನಲವತ್ತು ಸಾವಿರ ಲೀಟರ್ ಎಣ್ಣೆಯನ್ನೂ ಕೊಡುವೆನು,” ಎಂದು ಹೇಳಿಸಿದನು. ಅಧ್ಯಾಯವನ್ನು ನೋಡಿ |
ನಿಮ್ಮನ್ನು ಮೆಚ್ಚಿ, ತಮ್ಮ ಸಮ್ಮುಖದಲ್ಲಿ ಅರಸನಾಗಿಸಲು, ತಮ್ಮ ಸಿಂಹಾಸನದ ಮೇಲೆ ನಿಮ್ಮನ್ನು ಕುಳ್ಳಿರಿಸಿದ ಆ ದೇವರಾದ ಸರ್ವೇಶ್ವರನಿಗೆ ಸ್ತೋತ್ರವಾಗಲಿ! ನಿಮ್ಮ ದೇವರು ಇಸ್ರಯೇಲರನ್ನು ಪ್ರೀತಿಸಿ ಅವರನ್ನು ನಿರಂತರವಾಗಿ ಸ್ಥಿರಗೊಳಿಸಬೇಕೆಂದಿದ್ದಾರೆ. ಆದ್ದರಿಂದಲೇ ಈ ಜನರ ನೀತಿನ್ಯಾಯಗಳನ್ನು ಸ್ಥಾಪಿಸುವುದಕ್ಕಾಗಿ ನಿಮ್ಮನ್ನೇ ಅರಸನನ್ನಾಗಿ ನೇಮಿಸಿದ್ದಾರೆ,” ಎಂದು ಹೇಳಿದಳು.