2 ಪೂರ್ವಕಾಲ ವೃತ್ತಾಂತ 19:2 - ಕನ್ನಡ ಸತ್ಯವೇದವು C.L. Bible (BSI)2 ಅವನು ಜೆರುಸಲೇಮಿಗೆ ಬಂದಾಗ ಹನಾನೀಯನ ಮಗ ಯೇಹೂ ಎಂಬ ದರ್ಶಿಯು ಅವನನ್ನು ಎದುರುಗೊಂಡು, “ನೀವು ಕೆಟ್ಟವನಿಗೆ ಸಹಾಯಮಾಡಬಹುದೇ? ಸರ್ವೇಶ್ವರನ ಹಗೆಗಾರರನ್ನು ಪ್ರೀತಿಸಬಹುದೇ? ನೀವು ಹೀಗೆ ಮಾಡಿದ್ದರಿಂದ ಸರ್ವೇಶ್ವರನ ಕೋಪ ನಿಮ್ಮ ಮೇಲಿರುತ್ತದೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20192 ಯೆಹೋಷಾಫಾಟನು ಯೆರೂಸಲೇಮಿಗೆ ಬಂದಾಗ ಹನಾನೀಯನ ಮಗನಾದ ಯೇಹೂ ಎಂಬ ದರ್ಶಕನು ಅರಸನನ್ನು ಎದುರುಗೊಂಡು ಅವನಿಗೆ, “ನೀನು ದುಷ್ಟರಿಗೆ ಸಹಾಯ ಮಾಡಬಹುದೇ? ಯೆಹೋವನ ಹಗೆಗಾರರನ್ನು ಪ್ರೀತಿಸಬಹುದೇ? ನೀನು ಹೀಗೆ ಮಾಡಿದ್ದರಿಂದ ಯೆಹೋವನ ಕೋಪವು ನಿನ್ನ ಮೇಲಿರುತ್ತದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)2 ಅವನು ಯೆರೂಸಲೇವಿುಗೆ ಬರಲು ಹನಾನೀಯನ ಮಗನಾದ ಯೇಹೂ ಎಂಬ ದರ್ಶಿಯು ಅವನನ್ನು ಎದುರುಗೊಂಡು ಅವನಿಗೆ - ನೀನು ಕೆಟ್ಟವನಿಗೆ ಸಹಾಯಮಾಡತಕ್ಕದ್ದೋ? ಯೆಹೋವನ ಹಗೆಗಾರರನ್ನು ಪ್ರೀತಿಸುವದೋ! ನೀನು ಹೀಗೆ ಮಾಡಿದ್ದರಿಂದ ಯೆಹೋವನ ಕೋಪವು ನಿನ್ನ ಮೇಲಿರುತ್ತದೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್2 ದೇವದರ್ಶಿಯಾದ ಯೇಹೂ ಅವನನ್ನು ಎದುರುಗೊಂಡನು. ಅವನು ಹನಾನೀಯನ ಮಗ. ರಾಜನಿಗೆ ಯೇಹುವು ಹೇಳಿದ್ದೇನೆಂದರೆ, “ನೀನು ದುಷ್ಟಜನರಿಗೆ ಸಹಾಯಮಾಡಿದ್ದೇಕೆ? ಯೆಹೋವನನ್ನು ದ್ವೇಷಿಸುವ ಜನರನ್ನು ನೀನು ಪ್ರೀತಿಸಿದ್ದೇಕೆ? ಆ ಕಾರಣಕ್ಕಾಗಿ ಯೆಹೋವನು ನಿನ್ನ ಮೇಲೆ ಕೋಪಗೊಂಡಿದ್ದಾನೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ2 ಆಗ ಪ್ರವಾದಿ ಹನಾನೀಯ ಮಗ ಯೇಹುವು ಅವನನ್ನು ಎದುರುಗೊಂಡು, ಅರಸನಾದ ಯೆಹೋಷಾಫಾಟನಿಗೆ ಅವನು, “ದುಷ್ಟನಿಗೆ ಸಹಾಯ ಕೊಡುವವನಾಗಿ ಯೆಹೋವ ದೇವರನ್ನು ದ್ವೇಷಮಾಡುವವರನ್ನು ಪ್ರೀತಿಮಾಡಬಹುದೋ? ಆದಕಾರಣ ನಿನ್ನ ಮೇಲೆ ಯೆಹೋವ ದೇವರ ಸನ್ನಿಧಿಯಿಂದ ಕೋಪಾಗ್ನಿ ಇದೆ. ಅಧ್ಯಾಯವನ್ನು ನೋಡಿ |
ಜುದೇಯದ ಪಟ್ಟಣಗಳಲ್ಲಿ ವಾಸಿಸುವ ನಿಮ್ಮ ಸಹೋದರರಲ್ಲಿ ಜೀವಹತ್ಯ ಸಂಬಂಧದಲ್ಲಿಯಾಗಲಿ ಧರ್ಮಶಾಸ್ತ್ರದ ಆಯಾ ಆಜ್ಞಾವಿಧಿನ್ಯಾಯಗಳ ಸಂಬಂಧದಲ್ಲಿಯಾಗಲಿ ವ್ಯಾಜ್ಯವುಂಟಾಗಿ, ಅದು ನಿಮ್ಮ ಮುಂದೆ ವಿಚಾರಣೆಗೆ ಬಂದರೆ, ನಿಮ್ಮ ಸಹೋದರರು ಸರ್ವೇಶ್ವರನ ದೃಷ್ಟಿಯಲ್ಲಿ ಅಪರಾಧಿಗಳಾಗದಂತೆ ಹಾಗೂ ನೀವು ಅವರೊಂದಿಗೆ ದೇವಕೋಪಕ್ಕೆ ಗುರಿಯಾಗದಂತೆ ಅವರನ್ನು ಎಚ್ಚರಿಸಿರಿ. ಹೀಗೆ ಮಾಡುವುದಾದರೆ ನೀವು ನಿರ್ದೋಷಿಗಳಾಗುವಿರಿ.