Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 15:16 - ಕನ್ನಡ ಸತ್ಯವೇದವು C.L. Bible (BSI)

16 ಅರಸನಾದ ಆಸನ ತಾಯಿ ಮಾಕಳು ಅಶೇರ ದೇವತೆಯ ಒಂದು ಅಸಹ್ಯ ಮೂರ್ತಿಯನ್ನು ಮಾಡಿಸಿದ್ದಳು. ಆದ್ದರಿಂದ ಅವನು ಆಕೆಯನ್ನು ‘ರಾಜಮಾತೆ’ ಎಂಬ ಪದವಿಯಿಂದ ತೆಗೆದುಹಾಕಿದನು. ಆ ಮೂರ್ತಿಯನ್ನು ತೆಗೆಸಿ ಕಿದ್ರೋನ್ ಹಳ್ಳದ ಬಳಿಯಲ್ಲಿ ಚೂರುಚೂರು ಮಾಡಿ ಸುಡಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಅರಸನಾದ ಆಸನ ಅಜ್ಜಿಯಾದ ಮಾಕಳು ಅಶೇರ ದೇವತೆಯ ಒಂದು ಅಸಹ್ಯ ಮೂರ್ತಿಯನ್ನು ಮಾಡಿಸಿಕೊಂಡಿದ್ದಳು. ಆದುದರಿಂದ ಅವನು ಆಕೆಯನ್ನು ರಾಜಮಾತೆಯ ಸ್ಥಾನದಿಂದ ತೆಗೆದುಹಾಕಿದನು. ಅಲ್ಲದೆ ಆ ಮೂರ್ತಿಯನ್ನು ತೆಗೆದು ಕಿದ್ರೋನ್ ಹಳ್ಳದ ಬಳಿಯಲ್ಲಿ ಚೂರು ಚೂರು ಮಾಡಿ ಸುಟ್ಟುಹಾಕಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಅರಸನಾದ ಆಸನ ತಾಯಿ ಮಾಕಳು ಅಶೇರದೇವತೆಯ ಒಂದು ಅಸಹ್ಯ ಮೂರ್ತಿಯನ್ನು ಮಾಡಿಸಿದದರಿಂದ ಅವನು ಆಕೆಯನ್ನು ಗದ್ದುಗೆಯಿಂದ ತಳ್ಳಿ ಆ ಮೂರ್ತಿಯನ್ನು ಕಡಿಸಿ ಕಿದ್ರೋನ್ ಹಳ್ಳದ ಬಳಿಯಲ್ಲಿ ಚೂರುಚೂರು ಮಾಡಿ ಸುಡಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಆಸನು ತನ್ನ ತಾಯಿಯಾದ ಮಾಕಳನ್ನು ರಾಜಮಾತೆ ಎಂಬ ಪದವಿಯಿಂದ ತಳ್ಳಿಬಿಟ್ಟನು. ಯಾಕೆಂದರೆ ಆಕೆಯು ಅಶೇರ್ ದೇವತೆಯ ಅಸಹ್ಯವಾದ ಕಂಬವನ್ನು ಮಾಡಿಸಿದ್ದಳು. ಆಸನು ಅದನ್ನು ಕಡಿದು ಚೂರುಚೂರಾಗಿ ಮಾಡಿಸಿದನು. ನಂತರ ಅದನ್ನು ಕಿದ್ರೋನ್ ಕಣಿವೆಯಲ್ಲಿ ಸುಟ್ಟುಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಅರಸನಾದ ಆಸನ ಅಜ್ಜಿ ಮಾಕ ಎಂಬವಳು ಅಶೇರ ದೇವತೆಯ ಒಂದು ಅಸಹ್ಯವಾದ ಮೂರ್ತಿಯನ್ನು ಮಾಡಿಸಿದ್ದರಿಂದ, ಅವಳನ್ನು ರಾಜಮಾತೆಯ ಸ್ಥಾನದಿಂದ ತೆಗೆದುಹಾಕಿದನು. ಇದಲ್ಲದೆ ಆಸನು ಆ ಮೂರ್ತಿಯನ್ನು ಕಡಿದು ಚೂರುಚೂರು ಮಾಡಿ, ಕಿದ್ರೋನ್ ಹಳ್ಳದ ಹತ್ತಿರ ಸುಟ್ಟುಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 15:16
26 ತಿಳಿವುಗಳ ಹೋಲಿಕೆ  

ಇದಲ್ಲದೆ ಇಸ್ರಯೇಲರನ್ನು ಪಾಪಕ್ಕೆ ಪ್ರೇರಿಸಿದ ನೆಬಾಟನ ಮಗ ಯಾರೊಬ್ಬಾಮನು ಬೇತೇಲಿನಲ್ಲಿ ಏರ್ಪಡಿಸಿದ ಪೂಜಾಸ್ಥಳವನ್ನೂ ಅದರಲ್ಲಿದ್ದ ಬಲಿಪೀಠವನ್ನೂ ಕೆಡವಿಬಿಟ್ಟನು. ಪೂಜಾಸ್ಥಳವನ್ನೂ ಅದರಲ್ಲಿದ್ದ ಅಶೇರ ವಿಗ್ರಹಸ್ತಂಭವನ್ನೂ ಸುಟ್ಟು ಬೂದಿಮಾಡಿದನು.


ಸರ್ವೇಶ್ವರನ ಆಲಯದಲ್ಲಿದ್ದ ಅಶೇರವಿಗ್ರಹಸ್ತಂಭವನ್ನು ತರಿಸಿ, ಜೆರುಸಲೇಮಿನ ಹೊರಗಿರುವ ಕಿದ್ರೋನ್ ಹಳ್ಳಕ್ಕೆ ತೆಗೆದುಕೊಂಡು ಹೋಗಿ, ಅಲ್ಲಿ ಅದನ್ನು ಸುಡಿಸಿ, ಪುಡುಪುಡಿಮಾಡಿಸಿ, ಆ ಪುಡಿಯನ್ನು ಸಾರ್ವಜನಿಕ ಸ್ಮಶಾನದಲ್ಲಿ ಹಾಕಿಸಿದನು.


ಇವನು ಜೆರುಸಲೇಮಿನಲ್ಲಿ ನಾಲ್ವತ್ತೊಂದು ವರ್ಷ ಆಳಿದನು. ಅಬ್ಷಾಲೋಮನ ಮಗಳಾದ ಮಾಕಾ ಎಂಬಾಕೆ ಇವನ ತಾಯಿ.


ಜುದೇಯದ ಅರಸನಾಗಿ ಜೆರುಸಲೇಮಿನಲ್ಲಿ ಮೂರು ವರ್ಷ ಆಳಿದನು. ಅಬೀಷಾಲೋಮನ ಮಗಳಾದ ಮಾಕಾ ಎಂಬಾಕೆ ಅವನ ತಾಯಿ.


ಅವರ ಬಲಿಪೀಠಗಳನ್ನು ಕೆಡವಿಬಿಡಿ; ಅವರ ಕಲ್ಲುಕಂಬದ ವಿಗ್ರಹಗಳನ್ನು ಒಡೆದುಬಿಡಿ; ‘ಅಶೇರ’ ಎಂಬ ಸ್ತಂಭಗಳನ್ನು ಕಡಿದುಬಿಡಿ.


ಇನ್ನು ಮುಂದೆ ನಾವು ಯಾರನ್ನೂ ಕೇವಲ ಮಾನವ ದೃಷ್ಟಿಯಿಂದ ಪರಿಗಣಿಸುವುದಿಲ್ಲ. ಒಂದು ಕಾಲದಲ್ಲಿ, ಕ್ರಿಸ್ತಯೇಸುವನ್ನು ನಾವು ಹಾಗೆ ಪರಿಗಣಿಸಿದ್ದುಂಟು. ಆದರೆ ಇನ್ನು ಮುಂದೆ ಹಾಗೆ ಮಾಡುವುದಿಲ್ಲ.


:ಈತನಿಗೆ ಹುಚ್ಚು ಹಿಡಿದಿದೆ,” ಎಂದು ಜನರು ಮಾತಾಡಿಕೊಳ್ಳುತ್ತಿದ್ದರು. ಆದ್ದರಿಂದ ಯೇಸುವಿನ ಬಂಧುಗಳು ಯೇಸುವನ್ನು ಹಿಡಿದುತರಲು ಹೊರಟರು.


ಯಾವನಾದರೂ ಪ್ರವಾದನೆ ಮಾಡಲು ಯತ್ನಿಸಿದರೆ, ಅವನ ತಾಯಿತಂದೆಗಳೇ, “ಇವನು ಸರ್ವೇಶ್ವರಸ್ವಾಮಿಯ ಹೆಸರೆತ್ತಿ ಸುಳ್ಳಾಡುವುದರಿಂದ ಅವನು ಬದುಕಬಾರದು,” ಎಂದು ಹೇಳುವರು. ಅಷ್ಟೇ ಅಲ್ಲ, ಅವನು ಮಾಡಿದ ಪ್ರವಾದನೆಯ ನಿಮಿತ್ತ ಅವರೇ ಅವನನ್ನು ತಿವಿದು ಕೊಂದುಹಾಕುವರು.


ಆಶೇರಸ್ತಂಭಗಳನ್ನೂ ವಿಗ್ರಹಗಳನ್ನೂ ಒಡೆಸಿದನು, ಇಸ್ರಯೇಲ್ ನಾಡಿನಲ್ಲಿದ್ದ ಸೂರ್ಯಸ್ತಂಭಗಳನ್ನು ಪುಡಿಪುಡಿಮಾಡಿಸಿ ಜೆರುಸಲೇಮಿಗೆ ಹಿಂದಿರುಗಿದನು.


ಇದಲ್ಲದೆ ಜುದೇಯದ ಅರಸರು ದೇವಸ್ಥಾನದ ಮಾಳಿಗೆಯ ಮೇಲೆ ಆಹಾಜನ ಉಪ್ಪರಿಗೆಯ ಹತ್ತಿರ ಕಟ್ಟಿಸಿದ್ದ ಬಲಿಪೀಠಗಳನ್ನು ಹಾಗು ಮನಸ್ಸೆಯು ಸರ್ವೇಶ್ವರನ ಆಲಯದ ಎರಡು ಪ್ರಾಕಾರಗಳಲ್ಲಿ ಕಟ್ಟಿಸಿದ್ದ ಬಲಿಪೀಠಗಳನ್ನು ಕೆಡವಿ ಪುಡಿಪುಡಿಮಾಡಿ ಅವುಗಳ ಧೂಳನ್ನು ಕಿದ್ರೋನ್ ಹಳ್ಳದಲ್ಲಿ ಹಾಕಿಸಿದನು.


ನಿನ್ನ ಆಜ್ಞೆಗಳನ್ನು ಕೈಗೊಳ್ಳಲೆಂದು ನಿನ್ನ ಒಡಂಬಡಿಕೆಯನು ಕಾದಿರಿಸಲೆಂದು ‘ತಂದೆತಾಯಿಗಳ ಪರಿಚಯವಿಲ್ಲ ಅಣ್ಣತಮ್ಮಂದಿರ ಅರಿವಿಲ್ಲ ಸ್ವಂತ ಮಕ್ಕಳ ಗುರುತಿಲ್ಲ’ ಎಂದನಿವನು.


ಮತ್ತು ನಿಮ್ಮ ಪಾಪಕ್ಕೆ ಕಾರಣವಾದ ಆ ಹೋರಿಕರುವನ್ನು ನಾನು ತೆಗೆದುಕೊಂಡು, ಬೆಂಕಿಯಿಂದ ಸುಟ್ಟು, ಒಡೆದು, ಅರೆದು, ಧೂಳುಮಾಡಿ ಬೆಟ್ಟದಿಂದ ಹರಿಯುವ ಹಳ್ಳದಲ್ಲಿ ಬಿಸಾಡಿಬಿಟ್ಟೆ.


ಆದುದರಿಂದ ನೀವು ಹೀಗೆ ಮಾಡಬೇಕು; ಅವರ ಯಜ್ಞವೇದಿಗಳನ್ನು ಕೆಡವಬೇಕು, ಅವರ ಪವಿತ್ರಶಿಲೆಗಳನ್ನು ಒಡೆಯಬೇಕು, ಅಶೇರವೆಂಬ ವಿಗ್ರಹಸ್ತಂಭಗಳನ್ನು ಬಡಿದು ಅವರ ದೇವತಾಪ್ರತಿಮೆಗಳನ್ನು ಬೆಂಕಿಯಿಂದ ಸುಟ್ಟುಬಿಡಬೇಕು.


ನಿಮ್ಮ ಪೂಜಾಸ್ಥಳಗಳನ್ನು ಇಲ್ಲದಂತೆ ಮಾಡುವೆನು. ನೀವು ಸೂರ್ಯನ ಪೂಜೆಗೆ ಇಟ್ಟಿರುವ ಕಂಬಗಳನ್ನು ಕಡಿದು ಹಾಕುವೆನು. ನಿಮ್ಮ ಬೊಂಬೆಗಳ ಬುರುಡೆಗಳ ಮೇಲೆ ನಿಮ್ಮ ಬುರುಡೆಗಳನ್ನು ಬಿಸಾಡುವೆನು; ನಿಮ್ಮ ಬಗ್ಗೆ ಅಸಹ್ಯಪಡುವೆನು.


ಜನರು ಮಾಡಿಸಿಕೊಂಡಿದ್ದ ಆ ಹೋರಿಕರುವನ್ನು ತೆಗೆದು ಬೆಂಕಿಯಿಂದ ಸುಟ್ಟು, ಅರೆದು, ಪುಡಿಪುಡಿಮಾಡಿ, ನೀರಿನಲ್ಲಿ ಕಲಸಿ, ಇಸ್ರಯೇಲರಿಗೆ ಆ ನೀರನ್ನು ಕುಡಿಸಿದನು.


ಯೇಸು ಸ್ವಾಮಿ ಹೀಗೆ ಹೇಳಿದ ಬಳಿಕ ತಮ್ಮ ಶಿಷ್ಯರೊಡನೆ ಹೊರಟು, ಕೆದ್ರೋನ್ ಹಳ್ಳವನ್ನು ದಾಟಿ, ಅಲ್ಲೇ ಇದ್ದ ತೋಟವನ್ನು ಹೊಕ್ಕರು.


ಇಸ್ರಯೇಲ್ ಪ್ರಾಂತ್ಯದಲ್ಲಿದ್ದ ಪೂಜಾಸ್ಥಳಗಳನ್ನು ಹಾಳುಮಾಡದೆ ಇದ್ದರೂ ಆಸನು ತನ್ನ ಜೀವಮಾನದಲ್ಲೆಲ್ಲಾ ಯಥಾರ್ಥಚಿತ್ತನಾಗಿ ನಡೆದುಕೊಂಡನು.


ಯಾಜಕರು ಸರ್ವೇಶ್ವರನ ಆಲಯವನ್ನು‍ ಶುದ್ಧಮಾಡುವುದಕ್ಕೆ ಒಳಗೆ ಹೋಗಿ ಪವಿತ್ರಸ್ಥಾನದಲ್ಲಿದ್ದ ಹೊಲಸನ್ನೆಲ್ಲಾ ಹೊರಗೆ ತಂದು ಪ್ರಾಕಾರದಲ್ಲಿ ಹಾಕಿದರು. ಲೇವಿಯರು ಅದನ್ನು ಕೂಡಿಸಿ ಹೊರಗೆ ಒಯ್ದು ಕಿದ್ರೋನ್ ಹಳ್ಳದಲ್ಲಿ ಹಾಕಿದರು.


ತರುವಾಯ ಅವನು ಪ್ರಧಾನ ಯಾಜಕ ಹಿಲ್ಕೀಯನ, ಮುಖ್ಯ ಯಾಜಕರ ಹಾಗು ದ್ವಾರಪಾಲಕರ ಮುಖಾಂತರ ಬಾಳ್, ಅಶೇರ ಎಂಬ ದೇವತೆಗಳಿಗಾಗಿ ಹಾಗು ಆಕಾಶಸೈನ್ಯಗಳಿಗಾಗಿ ಉಪಯೋಗಿಸುತ್ತಿದ್ದ ಎಲ್ಲಾ ವಸ್ತುಗಳನ್ನು ಸರ್ವೇಶ್ವರನ ಆಲಯದಿಂದ ತರಿಸಿ, ಜೆರುಸಲೇಮಿನ ಹೊರಗಿರುವ ಕಿದ್ರೋನ್ ಬೈಲಿನಲ್ಲಿ ಅವುಗಳನ್ನು ಸುಡಿಸಿ, ಆ ಬೂದಿಯನ್ನು ಬೇತೇಲಿಗೆ ಕಳುಹಿಸಿದನು.


ಅವರು ಜೆರುಸಲೇಮಿನಲ್ಲಿದ್ದ ಯಜ್ಞವೇದಿಗಳನ್ನೂ ಧೂಪವೇದಿಗಳನ್ನೂ ತೆಗೆದುಕೊಂಡು ಹೋಗಿ ಕಿದ್ರೋನ್ ಹಳ್ಳದಲ್ಲಿ ಬಿಸಾಡಿಬಿಟ್ಟರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು