Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 13:14 - ಕನ್ನಡ ಸತ್ಯವೇದವು C.L. Bible (BSI)

14 ಯೆಹೂದ್ಯರು ತಮ್ಮ ಮುಂದೆಯೂ ಹಿಂದೆಯೂ ಯುದ್ಧ ಪ್ರಾರಂಭವಾಗಿರುವುದನ್ನು ಕಂಡು ಸರ್ವೇಶ್ವರನಿಗೆ ಅಭಿಮುಖರಾಗಿ ಮೊರೆಯಿಟ್ಟರು; ಯಾಜಕರು ಕಹಳೆಗಳನ್ನು ಊದಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಯೆಹೂದ್ಯರು ತಿರುಗಿಕೊಂಡು ತಮ್ಮ ಮುಂದೆಯೂ ಹಿಂದೆಯೂ ಯುದ್ಧ ಪ್ರಾರಂಭವಾಗಿರುವುದನ್ನು ಕಂಡು ಯೆಹೋವನಿಗೆ ಮೊರೆಯಿಟ್ಟರು, ಯಾಜಕರು ತುತ್ತೂರಿಗಳನ್ನು ಊದಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಯೆಹೂದ್ಯರು ತಿರುಗಿಕೊಂಡು ತಮ್ಮ ಮುಂದೆಯೂ ಹಿಂದೆಯೂ ಯುದ್ಧಪ್ರಾರಂಭವಾಗಿರುವದನ್ನು ಕಂಡು ಯೆಹೋವನಿಗೆ ಮೊರೆಯಿಟ್ಟರು, ಯಾಜಕರು ತುತೂರಿಗಳನ್ನು ಊದಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಅಬೀಯನ ಸೈನ್ಯವು ಸುತ್ತಲೂ ನೋಡಿದಾಗ ವೈರಿಗಳ ಸೈನ್ಯವು ಮುಂದೆಯೂ ಹಿಂದೆಯೂ ಯುದ್ಧಮಾಡುತ್ತಿರುವದನ್ನು ನೋಡಿ ಯೆಹೋವನನ್ನು ಕೂಗಿದರು. ಯಾಜಕರು ತುತ್ತೂರಿಯನ್ನೂದಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಯೆಹೂದದವರು ಹಿಂದಕ್ಕೆ ನೋಡಿದಾಗ, ಯುದ್ಧವು ಅವರ ಮುಂದೆಯೂ ಹಿಂದೆಯೂ ಇತ್ತು. ಆಗ ಯೆಹೋವ ದೇವರಿಗೆ ಅವರು ಮೊರೆಯಿಟ್ಟರು. ಯಾಜಕರು ತುತೂರಿಗಳನ್ನು ಊದಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 13:14
12 ತಿಳಿವುಗಳ ಹೋಲಿಕೆ  

ಆಸನು ತನ್ನ ದೇವರಾದ ಸರ್ವೇಶ್ವರನಿಗೆ, “ಸರ್ವೇಶ್ವರಾ, ಬಲಿಷ್ಠನು ಬಲಹೀನನ ಮೇಲೆ ಬೀಳುವಾಗ, ನಿಮ್ಮ ಹೊರತು ರಕ್ಷಕನಿಲ್ಲ. ನಿಮ್ಮಲ್ಲಿ ಭರವಸೆ ಇಟ್ಟು ನಿಮ್ಮ ಹೆಸರಿನಲ್ಲಿ ಈ ಮಹಾ ಸೇನೆಗೆ ವಿರುದ್ಧ ಯುದ್ಧಕ್ಕೆ ಬಂದಿದ್ದೇವೆ. ಸರ್ವೇಶ್ವರಾ, ನಮ್ಮ ದೇವರು ನೀವು; ನರರು ನಿಮ್ಮನ್ನು ಎದುರಿಸಿ ಗೆಲ್ಲಬಾರದು,” ಎಂದು ಮೊರೆ ಇಟ್ಟನು.


ಫರೋಹನು ಸಮೀಪಿಸುತ್ತಿರುವುದನ್ನು ಇಸ್ರಯೇಲರು ಕಣ್ಣೆತ್ತಿ ನೋಡಿದರು. ತಮ್ಮನ್ನು ಬೆನ್ನಟ್ಟಿ ಬಂದಿದ್ದ ಈಜಿಪ್ಟಿನವರನ್ನು ಕಂಡು ಬಹಳವಾಗಿ ಭಯಪಟ್ಟು ಸರ್ವೇಶ್ವರನಿಗೆ ಮೊರೆಯಿಟ್ಟರು.


ನೀನು ಅಂಜಬೇಕಾಗಿಲ್ಲ ಇರುಳಿನ ದುರಿತಕೆ I ಹಗಲಿನಲಿ ಹಾರಿಬರುವ ಬಿರುಸು ಬಾಣಕೆ II


ಕಷ್ಟದಲಿ ಮೊರೆಯಿಡೆ, ನೆರವಾಗುವೆ I ಆಗ ನೀ ನನ್ನನು ಕೊಂಡಾಡುವೆ II


ಆಯಿಯ ಜನರು ಹಿಂದಿರುಗಿ ನೋಡಿದಾಗ ನಗರದ ಹೊಗೆ ಆಕಾಶಕ್ಕೆ ಏರುತ್ತಿತ್ತು. ಯಾವ ಮಾರ್ಗದಿಂದಲೂ ಅವರಿಗೆ ತಪ್ಪಿಸಿಕೊಳ್ಳಲು ಆಗಲಿಲ್ಲ. ಏಕೆಂದರೆ ಅರಣ್ಯದ ಕಡೆಗೆ ಓಡಿಹೋಗುತ್ತಿದ್ದ ಇಸ್ರಯೇಲರು ಹಿಂದಟ್ಟಿ ಬರುವವರ ಕಡೆಗೆ ತಿರುಗಿದ್ದರು.


ರಥಬಲದ ಅಧಿಪತಿಗಳು ಯೆಹೋಷಾಫಾಟನನ್ನು ಕಂಡಾಗ ಅವನೇ ಇಸ್ರಯೇಲರ ಅರಸನೆಂದು ನೆನಸಿ, ಅವನಿಗೆ ವಿರುದ್ಧ ಯುದ್ಧಮಾಡುವುದಕ್ಕೆ ಅವನನ್ನು ಸುತ್ತಿಕೊಂಡರು. ಯೆಹೋಷಾಫಾಟನು ಕೂಗಿಕೊಂಡನು. ಆಗ ದೇವರಾದ ಸರ್ವೇಶ್ವರ ಅವನಿಗೆ ನೆರವಾಗಿ, ಶತ್ರುಗಳನ್ನು ಅವನ ಕಡೆಯಿಂದ ತೊಲಗಿಸಿದರು.


ಏಳನೆಯ ಸಾರಿ ಸುತ್ತುವಾಗ ಯಾಜಕರು ಕೊಂಬುಗಳನ್ನು ಊದಿದರು. ಯೆಹೋಶುವ ಜನರಿಗೆ, “ಆರ್ಭಟಿಸಿರಿ, ಸರ್ವೇಶ್ವರಸ್ವಾಮಿ ನಿಮಗೆ ಈ ನಗರವನ್ನು ಕೊಟ್ಟಿದ್ದಾರೆ.


ನೀವು ಸ್ವದೇಶವನ್ನು ಸೇರಿದ ಮೇಲೆ ನಿಮ್ಮನ್ನು ಪೀಡಿಸುವ ಶತ್ರುಗಳ ಮೇಲೆ ಯುದ್ಧಕ್ಕೆ ಹೊರಡುವಾಗ ಆ ಕಹಳೆಗಳನ್ನು ಆರ್ಭಟವಾಗಿ ಮೊಳಗಿಸಬೇಕು. ಆಗ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ನೆನಪಿಗೆ ತಂದುಕೊಂಡು ಶತ್ರುಗಳ ಕೈಯಿಂದ ನಿಮ್ಮನ್ನು ಬಿಡಿಸುವರು.


ಅವರು ದೇವರಲ್ಲಿ ನಂಬಿಕೆಯನ್ನಿಟ್ಟು ಸಹಾಯಕ್ಕಾಗಿ ಪ್ರಾರ್ಥಿಸಿದರು. ದೇವರು ಅವರ ಪ್ರಾರ್ಥನೆಯನ್ನು ಆಲಿಸಿ ಹಗ್ರೀಯರನ್ನೂ ಅವರೊಂದಿಗೆ ಒಪ್ಪಂದ ಮಾಡಿಕೊಂಡವರನ್ನೂ ಸೋಲಿಸಿ ಅವರ ಮೇಲೆ ಜಯಹೊಂದುವಂತೆ ಸಹಾಯ ಮಾಡಿದರು.


ಈ ಕಾರಣ ಅರಸ ಹಿಜ್ಕೀಯನು ಹಾಗು ಆಮೋಚನ ಮಗ ಯೆಶಾಯನೆಂಬ ಪ್ರವಾದಿಯು ಪರಲೋಕಕ್ಕೆ ಮೊರೆಯಿಟ್ಟು ಪ್ರಾರ್ಥಿಸಿದರು. ಸರ್ವೇಶ್ವರಸ್ವಾಮಿ ದೂತನನ್ನು ಕಳುಹಿಸಿ


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು