Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಪೂರ್ವಕಾಲ ವೃತ್ತಾಂತ 11:12 - ಕನ್ನಡ ಸತ್ಯವೇದವು C.L. Bible (BSI)

12 ಹೀಗೆ ಇವುಗಳನ್ನು ಮತ್ತಷ್ಟು ಸುಭದ್ರಪಡಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಪ್ರತಿಯೊಂದು ಪಟ್ಟಣದಲ್ಲಿ ಗುರಾಣಿ ಬರ್ಜಿಗಳನ್ನೂ ಸಂಗ್ರಹಿಸಿ, ಅವುಗಳನ್ನು ಮತ್ತಷ್ಟು ಭದ್ರಪಡಿಸಿದನು. ಯೆಹೂದ ಬೆನ್ಯಾಮೀನ್ ಕುಲಗಳು ಅವನ ಸ್ವಾಧೀನದಲ್ಲಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಈ ಪ್ರಕಾರ ಇವುಗಳನ್ನು ಅತ್ಯಧಿಕವಾಗಿ ಭದ್ರಪಡಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಪ್ರತಿಯೊಂದು ಪಟ್ಟಣದಲ್ಲಿಯೂ ಈಟಿಗಳನ್ನು ಮತ್ತು ಗುರಾಣಿಗಳನ್ನು ಸಂಗ್ರಹಿಸಿಟ್ಟನು; ಹೀಗೆ ಈ ಎಲ್ಲಾ ಪಟ್ಟಣಗಳನ್ನು ಭದ್ರಪಡಿಸಿದನು. ರೆಹಬ್ಬಾಮನು ಯೆಹೂದದ ಮತ್ತು ಬೆನ್ಯಾಮೀನನ ಜನರನ್ನು ಮತ್ತು ಪಟ್ಟಣಗಳನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಪ್ರತಿ ಪಟ್ಟಣದಲ್ಲಿ ಖೇಡ್ಯಗಳನ್ನೂ, ಈಟಿಗಳನ್ನೂ ಇಟ್ಟು ಯೆಹೂದ ಬೆನ್ಯಾಮೀನವರು ಅವನ ಕಡೆ ಇದ್ದುದರಿಂದ, ಅವುಗಳನ್ನು ಭದ್ರಪಡಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಪೂರ್ವಕಾಲ ವೃತ್ತಾಂತ 11:12
10 ತಿಳಿವುಗಳ ಹೋಲಿಕೆ  

ಇದರಿಂದ ಅರಸನು ಧೈರ್ಯಗೊಂಡು, ಅಲ್ಲಲ್ಲಿ ಬಿದ್ದುಹೋಗಿದ್ದ ಪೌಳಿಗೋಡೆಯನ್ನು ದುರಸ್ತಿಮಾಡಿಸಿ, ಅದರ ಮೇಲೆ ಬುರುಜುಗಳನ್ನೂ ಹೊರಗೆ ಇನ್ನೊಂದು ಗೋಡೆಯನ್ನೂ ಕಟ್ಟಿಸಿದನು. ದಾವೀದ ನಗರದ ಮಿಲ್ಲೋ ಕೋಟೆಯನ್ನು ಭದ್ರಪಡಿಸಿದನು. ಅನೇಕ ಆಯುಧಗಳನ್ನೂ ಗುರಾಣಿಗಳನ್ನೂ ಮಾಡಿಸಿದನು.


ಅಬ್ಷಾಲೋಮನು ಅಮ್ನೋನನ ಸಂಗಡ ಒಳ್ಳೇಮಾತನ್ನಾಗಲಿ ಕೆಟ್ಟಮಾತನ್ನಾಗಲಿ ಆಡಲಿಲ್ಲ. ತನ್ನ ತಂಗಿಯಾದ ತಾಮಾರಳನ್ನು ಕೆಡಿಸಿದ್ದಕ್ಕಾಗಿ ಅವನು ಅಮ್ನೋನನನ್ನು ದ್ವೇಷಿಸಿದನು.


ತಾಮಾರಳು ತಲೆಯ ಮೇಲೆ ಬೂದಿ ಹಾಕಿಕೊಂಡು, ನಿಲುವಂಗಿಯನ್ನು ಹರಿದುಕೊಂಡು, ಕೈಗಳನ್ನು ತಲೆಯ ಮೇಲಿಟ್ಟು ಗೋಳಾಡುತ್ತಾ ಹೋದಳು.


ಅವನುಈ ಕೋಟೆಗಳನ್ನು ಬಲಪಡಿಸಿ, ನಾಯಕರ ವಶಕ್ಕೆ ಕೊಟ್ಟು, ಪ್ರತಿ ಒಂದರಲ್ಲಿ ಆಹಾರಪದಾರ್ಥ, ಎಣ್ಣೆ, ದ್ರಾಕ್ಷಾರಸ ಇವುಗಳನ್ನೂ ಗುರಾಣಿಬರ್ಜಿಗಳನ್ನೂ ಸಂಗ್ರಹಿಸಿಟ್ಟನು.


ಯೆಹೂದ, ಬೆನ್ಯಾಮೀನ್ ಕುಲಗಳವರು ಅವನ ಸ್ವಾಧೀನದಲ್ಲಿದ್ದುದಲ್ಲದೆ ಬೇರೆ ಎಲ್ಲ ಇಸ್ರಯೇಲ್ ಪ್ರಾಂತ್ಯಗಳಲ್ಲಿದ್ದ ಯಾಜಕರು ಹಾಗೂ ಲೇವಿಯರು ಅವನೊಡನೆ ಸೇರಿಕೊಂಡರು.


ಜುದೇಯ ಪ್ರಾಂತ್ಯದಲ್ಲಿದ್ದ ಇಸ್ರಯೇಲರಾದರೋ ಅರಸ ರೆಹಬ್ಬಾಮನ ಅಧೀನದಲ್ಲೆ ಉಳಿದರು.


ಅವನು ಆಸನನ್ನು ಭೇಟಿಯಾಗಲು ಬಂದು, ಅವನಿಗೆ, “ಆಸ ರಾಜನೇ, ಎಲ್ಲಾ ಯೆಹೂದ ಹಾಗೂ ಬೆನ್ಯಾಮೀನ್ ಕುಲಗಳವರೇ, ಕಿವಿಗೊಡಿ; ನೀವು ಸರ್ವೇಶ್ವರನನ್ನು ಹೊಂದಿಕೊಂಡಿರುವ ತನಕ ಅವರೂ ನಿಮ್ಮೊಂದಿಗಿರುವರು; ನೀವು ಅವರನ್ನು ಅರಸಿದರೆ ನಿಮಗೆ ಸಿಕ್ಕುವರು. ಅವರನ್ನು ಬಿಟ್ಟರೆ ಅವರೂ ನಿಮ್ಮನ್ನು ಬಿಟ್ಟುಬಿಡುವರು.


ಹೀಗೆ ಯೆಹೋಷಾಫಾಟನು ಅತ್ಯಧಿಕವಾಗಿ ಅಭಿವೃದ್ಧಿಹೊಂದಿ ಜುದೇಯ ನಾಡಿನಲ್ಲಿ ಕೋಟೆಗಳನ್ನು ಮತ್ತು ಉಗ್ರಾಣದ ಪಟ್ಟಣಗಳನ್ನು ಕಟ್ಟಿಸಿದನು.


“ನರಪುತ್ರನೇ, ನೀನು ಒಂದು ದಂಡವನ್ನು ತೆಗೆದು ಅದರಲ್ಲಿ ‘ಜುದೇಯದ್ದು, ಜುದೇಯಕ್ಕೆ ಸೇರಿದ ಇಸ್ರಯೇಲರದು’ ಎಂದು ಬರೆ; ಇನ್ನೊಂದು ದಂಡವನ್ನು ತೆಗೆದು ಅದರಲ್ಲಿ, ‘ಜೋಸೆಫನದು, ಎಫ್ರಯಿಮಿನದು, ಜೊಸೇಫಿಗೆ ಸೇರಿದ ಎಲ್ಲ ಇಸ್ರಯೇಲರದು’ ಎಂದು ಬರೆ;


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು