Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ತಿಮೊಥೆಯನಿಗೆ 3:8 - ಕನ್ನಡ ಸತ್ಯವೇದವು C.L. Bible (BSI)

8 ಯನ್ನ ಮತ್ತು ಯಂಬ್ರ ಎಂಬವರು ಮೋಶೆಯನ್ನು ವಿರೋಧಿಸಿದಂತೆ, ಇವರು ಸತ್ಯವನ್ನು ಪ್ರತಿಭಟಿಸುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಯನ್ನ, ಯಂಬ್ರ ಎಂಬವರು ಮೋಶೆಯನ್ನು ವಿರೋಧಿಸಿದಂತೆಯೇ ಈ ಮನುಷ್ಯರು ಸಹ ಸತ್ಯಕ್ಕೆ ವಿರೋಧಿಗಳಾಗಿದ್ದು, ಬುದ್ಧಿಹೀನರೂ ನಂಬಿಕೆಯ ವಿಷಯದಲ್ಲಿ ನಿಷ್ಪ್ರಯೋಜಕರೂ ಆಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಯನ್ನ ಯಂಬ್ರ ಎಂಬವರು ಮೋಶೆಯನ್ನು ವಿರೋಧಿಸಿದಂತೆಯೇ ಆ ಮನುಷ್ಯರು ಸಹ ಸತ್ಯವನ್ನು ವಿರೋಧಿಸುತ್ತಾರೆ; ಬುದ್ಧಿಗೆಟ್ಟವರೂ ಕ್ರಿಸ್ತ ನಂಬಿಕೆಯಿಂದ ಭ್ರಷ್ಟರೂ ಆಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಯನ್ನ ಮತ್ತು ಯಂಬ್ರರನ್ನು ನೆನಪುಮಾಡಿಕೊ. ಅವರು ಮೋಶೆಯನ್ನು ವಿರೋಧಿಸಿದರು. ಈ ಜನರೂ ಅವರಂತೆಯೇ. ಅವರು ಸತ್ಯವನ್ನು ವಿರೋಧಿಸುತ್ತಾರೆ. ಆ ಜನರ ಆಲೋಚನೆಗಳೆಲ್ಲ ಗಲಿಬಿಲಿಗೊಂಡಿವೆ. ಅವರು ನಂಬಿಕೆಯನ್ನು ಅನುಸರಿಸುವ ತಮ್ಮ ಪ್ರಯತ್ನದಲ್ಲಿ ಸೋತುಹೋಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಯನ್ನ, ಯಂಬ್ರ ಎಂಬವರು ಮೋಶೆಯನ್ನು ವಿರೋಧಿಸಿದಂತೆಯೇ, ಈ ಸುಳ್ಳು ಬೋಧಕರು ಸಹ ಸತ್ಯವನ್ನು ವಿರೋಧಿಸುತ್ತಾರೆ. ಇದಲ್ಲದೆ ಇವರು ಬುದ್ಧಿಗೆಟ್ಟವರೂ ವಿಶ್ವಾಸದ ವಿಷಯದಲ್ಲಿ ಭ್ರಷ್ಠರೂ ಆಗಿ, ತಿರಸ್ಕಾರ ಹೊಂದಿರುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

8 ಕಶೆ ಜಾನ್ನೆಸ್ ಅನಿ ಜಾಂಬ್ರೆಸ್ ಮೊಯ್ಜೆಚ್ಯಾ ವಿರೊದ್ ಹೊತ್ತೆ ತಸೆ ಹಿ ಲೊಕಾಬಿ ಖರ್‍ಯಾಚ್ಯಾ ವಿರೊದ್ ಹಾತ್. ಬುದ್ದನಸಲ್ಲಿ ಅನಿ ವಿಶ್ವಾಸಾಚ್ಯಾ ವಿಶಯಾತ್ ನಾಪಾಸ್ ಹೊಲ್ಲಿ ಲೊಕಾ ಹಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ತಿಮೊಥೆಯನಿಗೆ 3:8
31 ತಿಳಿವುಗಳ ಹೋಲಿಕೆ  

ಆದರೂ ನಿನಗೆ ವಿರುದ್ಧವಾದ ಆಪಾದನೆ ಒಂದಿದೆ: ಈಜೆಬೆಲ್ ಎಂಬ ಸ್ತ್ರೀ ತಾನು ಪ್ರವಾದಿನಿಯೆಂದು ಹೇಳಿಕೊಂಡು ಮೆರೆಯುತ್ತಿದ್ದಾಳೆ. ಲೈಂಗಿಕ ಅನೈತಿಕತೆಯಲ್ಲಿ ತೊಡಗಬಹುದೆಂದೂ ವಿಗ್ರಹಗಳಿಗೆ ನೈವೇದ್ಯಮಾಡಿದ ಪದಾರ್ಥವನ್ನು ತಿನ್ನಬಹುದೆಂದೂ ಬೋಧಿಸುತ್ತಾ ನನ್ನ ಸೇವಕರನ್ನು ಅಡ್ಡದಾರಿಗೆ ಎಳೆಯುತ್ತಿದ್ದಾಳೆ. ಆದರೂ ನೀನು ಅವಳನ್ನು ತಡೆಯದೆ ಬಿಟ್ಟಿರುವೆ.


ಮತಿಗೆಟ್ಟ ಅಂಥವರಲ್ಲಿ ಸತ್ಯವೆಂಬುದು ಇರದು. ಧಾರ್ಮಿಕ ಸೇವೆಯು ಧನಗಳಿಕೆಯ ಸಾಧನವೆಂದೇ ಇವರ ನಂಬಿಕೆ.


ಫರೋಹನು ಈಜಿಪ್ಟ್ ದೇಶದ ವಿದ್ವಾಂಸರನ್ನೂ ಮಂತ್ರಗಾರರನ್ನೂ ಕರೆಸಿದನು. ಆ ಮಾಟಗಾರರು ತಮ್ಮ ಮಂತ್ರತಂತ್ರಗಳಿಂದ ಅದೇ ರೀತಿಯಾಗಿ ಮಾಡಿದರು.


ತಾವು ದೇವರನ್ನು ಬಲ್ಲವರೆಂದು ಹೇಳಿಕೊಳ್ಳುತ್ತಾರೆ. ಆದರೆ ಅವರ ನಡತೆ ತದ್ವಿರುದ್ಧವಾಗಿರುತ್ತದೆ. ಇಂಥವರು ಅವಿಧೇಯರೂ ಅಸಹ್ಯರೂ ಆಗಿರುವುದರಿಂದ ಯಾವುದೇ ಸತ್ಕಾರ್ಯವನ್ನು ಮಾಡಲು ಅಯೋಗ್ಯರಾಗಿದ್ದಾರೆ.


ಪ್ರಿಯರೇ, “ನಾವು ಪವಿತ್ರಾತ್ಮ ಪ್ರೇರಿತರು” ಎಂದು ಹೇಳುವ ಎಲ್ಲರನ್ನೂ ನಂಬಬಾರದು. ಆ ಪ್ರೇರಣೆ ದೇವರಿಂದ ಬಂದಿದೆಯೇ ಎಂದು ಪರೀಕ್ಷಿಸಿ ನೋಡಬೇಕು. ಏಕೆಂದರೆ, ಎಷ್ಟೋ ಮಂದಿ ಕಪಟ ಪ್ರವಾದಿಗಳು ಎಲ್ಲೆಡೆಯಲ್ಲೂ ಹರಡಿದ್ದಾರೆ.


ಇವರದು ಬರೀ ಕಾಮುಕ ಕಣ್ಣು; ಇವರು ಎಂದಿಗೂ ಇಂಗದ ಪಾಪಬಯಕೆಯುಳ್ಳವರು; ದುರ್ಬಲರನ್ನು ವಂಚಿಸಿ ವಶಪಡಿಸಿಕೊಳ್ಳುವುದೇ ಇವರ ಹವ್ಯಾಸ; ಲೋಭದಲ್ಲೇ ಪಳಗಿದ ಮನಸ್ಸುಳ್ಳವರು ಹಾಗೂ ಶಾಪಗ್ರಸ್ತ ಸಂತಾನದವರು ಇವರು!


ನೀನು ಅವನ ವಿಷಯದಲ್ಲಿ ಎಚ್ಚರಿಕೆಯಿಂದಿರು. ನಮ್ಮ ಬೋಧನೆಗೆ ಅವನು ಕಟುವಾದ ವಿರೋಧಿ ಆಗಿದ್ದಾನೆ.


ಇನ್ನು ಮೇಲೆ ನಾವು ಸಣ್ಣ ಮಕ್ಕಳಂತೆ ದುರ್ಜನರ ವಂಚನೆಗೂ ದುರ್ಬೋಧಕರ ಕುಯುಕ್ತಿಗೂ ಒಳಪಟ್ಟು ಅತ್ತಿತ್ತ ಅಲೆದಾಡುವುದಿಲ್ಲ. ಗಾಳಿ ಬಂದಂತೆ ತೂರಾಡುವುದಿಲ್ಲ.


ಕಪಟಿಗಳು ದುರ್ಬೋಧನೆಗಳನ್ನು ಪ್ರಸರಿಸುತ್ತಾರೆ. ಬರೆಹಾಕಿದ ಚರ್ಮದಂತೆ ಅವರ ಮನಸ್ಸಾಕ್ಷಿಯು ಸುಟ್ಟುಹೋಗಿದೆ.


ವಿಶ್ವಾಸವನ್ನೂ ಒಳ್ಳೆಯ ಮನಸ್ಸಾಕ್ಷಿಯನ್ನೂ ಸುರಕ್ಷಿತವಾಗಿ ಇಟ್ಟುಕೋ. ಕೆಲವರು ತಮ್ಮ ಮನಸ್ಸಾಕ್ಷಿಗೆ ವ್ಯತಿರಿಕ್ತವಾಗಿ ನಡೆದು ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ.


ಅಂಥವರು ಮಾಡುವುದು ತಮ್ಮ ಉದರಸೇವೆಯನ್ನೇ ಹೊರತು ಪ್ರಭುವಿನ ಸೇವೆಯನ್ನಲ್ಲ, ತಮ್ಮ ನಯನಾಜೂಕಿನ ನುಡಿಗಳಿಂದಲೂ ಮುಖಸ್ತುತಿಯ ಮಾತುಗಳಿಂದಲೂ ನಿಷ್ಕಪಟ ಮನಸ್ಕರನ್ನು ಮರುಳುಗೊಳಿಸುತ್ತಾರೆ.


ಆದರೆ ನಿನ್ನಲ್ಲಿ ಒಂದು ಒಳ್ಳೆಯ ಗುಣವಿದೆ. ನಾನು ದ್ವೇಷಿಸುವಂತೆ ನೀನು ಸಹ ನಿಕೊಲಾಯಿತರ ದುಷ್ಕೃತ್ಯಗಳನ್ನು ದ್ವೇಷಿಸುತ್ತಿರುವೆ.


ನನ್ನ ಪ್ರಿಯ ಮಕ್ಕಳೇ, ಅಂತಿಮ ಕಾಲ ಸಮೀಪಿಸಿತು. ಕ್ರಿಸ್ತವಿರೋಧಿ ಬರುವನೆಂದು ನೀವು ಕೇಳಿದ್ದೀರಿ. ಈಗಾಗಲೇ ಅನೇಕ ಕ್ರಿಸ್ತವಿರೋಧಿಗಳು ತಲೆದೋರಿದ್ದಾರೆ. ಇದರಿಂದ ಅಂತಿಮಕಾಲ ಸನ್ನಿಹಿತವಾಯಿತೆಂದು ನಮಗೆ ತಿಳಿದುಬರುತ್ತದೆ.


ಇತ್ತೀಚೆಗೆ ಅವಿಧೇಯರು, ಜೊಳ್ಳು ಮಾತಿನವರು ಹಾಗೂ ವಂಚಕಬೋಧಕರು ತಲೆ ಎತ್ತಿದ್ದಾರೆ. ಅವರಲ್ಲಿ ಕ್ರೈಸ್ತರಾಗಿರುವ ಯೆಹೂದ್ಯರು ಸಾಕಷ್ಟು ಮಂದಿ ಇದ್ದಾರೆ.


ಮಾಟಗಾರರು ತಮ್ಮ ತಂತ್ರ ಮಂತ್ರಗಳಿಂದ ಹಾಗೆಯೇ ಹೇನುಗಳನ್ನು ಉಂಟುಮಾಡಲು ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ. ಆ ಹೇನುಗಳು ನರಮಾನವರ ಮೇಲೂ ಪಶುಪ್ರಾಣಿಗಳ ಮೇಲೂ ಮುತ್ತಿದ್ದವು.


ಆದರೆ ಈಜಿಪ್ಟ್ ದೇಶದ ಮಾಟಗಾರರು ಕೂಡ ತಮ್ಮ ಮಂತ್ರತಂತ್ರಗಳಿಂದ ಅದೇ ರೀತಿ ಮಾಡಿದರು. ಆದ್ದರಿಂದ ಫರೋಹನ ಹೃದಯ ಕಠಿಣವಾಯಿತು. ಸರ್ವೇಶ್ವರ ಈ ಮೊದಲೇ ತಿಳಿಸಿದ್ದಂತೆ ಅವನು ಮೋಶೆ ಮತ್ತು ಆರೋನರ ಮಾತನ್ನು ಕೇಳದೆಹೋದನು.


ಅವರು ತಮಗಿದ್ದ ದೇವರ ಜ್ಞಾನವನ್ನು ತಿರಸ್ಕರಿಸಿದ್ದರಿಂದ, ದೇವರು ಅವರನ್ನು ಅಶ್ಲೀಲ ನಡವಳಿಕೆಗೆ ಬಿಟ್ಟುಬಿಟ್ಟರು.


ನಮ್ಮ ಕಡೆಯ ಕೆಲವು ಜನರು ನಮ್ಮಿಂದ ಯಾವ ಆದೇಶವನ್ನೂ ಪಡೆಯದೆ ನಿಮ್ಮನ್ನು ತೊಂದರೆಗೆ ಈಡುಮಾಡಿ ನಿಮ್ಮ ಮನಸ್ಸನ್ನು ಕಲಕಿದರೆಂಬ ಸಮಾಚಾರ ನಮ್ಮ ಗಮನಕ್ಕೆ ಬಂದಿದೆ.


ಮಾಟಗಾರರು ತಮ್ಮ ಮಂತ್ರತಂತ್ರಗಳಿಂದ ಹಾಗೆಯೇ ಮಾಡಿ ಈಜಿಪ್ಟ್ ದೇಶದ ಮೇಲೆ ಕಪ್ಪೆಗಳನ್ನು ಬರಮಾಡಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು