Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ತಿಮೊಥೆಯನಿಗೆ 1:15 - ಕನ್ನಡ ಸತ್ಯವೇದವು C.L. Bible (BSI)

15 ಏಷ್ಯಾ ಪ್ರಾಂತ್ಯದವರೆಲ್ಲ ನನ್ನನ್ನು ಕೈಬಿಟ್ಟುಹೋದರೆಂದು ನೀನು ಬಲ್ಲೆ. ಅವರೊಡನೆ ಫುಗೇಲನೂ ಹೆರ್ಮೊಗೇನನೂ ಸಹ ಹೊರಟುಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಆಸ್ಯಸೀಮೆಯಲ್ಲಿರುವವರೆಲ್ಲರೂ ನನ್ನನ್ನು ಕೈಬಿಟ್ಟರೆಂಬುದನ್ನು ನೀನು ಬಲ್ಲೆ. ಅವರಲ್ಲಿ ಪುಗೇಲನೂ ಹೆರ್ಮೊಗೇನನೂ ಸೇರಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಆಸ್ಯಸೀಮೆಯಲ್ಲಿರುವವರೆಲ್ಲರೂ ನನ್ನನ್ನು ಕೈಬಿಟ್ಟರೆಂಬದನ್ನು ನೀನು ಬಲ್ಲೆ; ಅವರಲ್ಲಿ ಫುಗೇಲನೂ ಹೆರ್ಮೊಗೇನನೂ ಸೇರಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಏಷ್ಯಾ ದೇಶದಲ್ಲಿರುವವರೆಲ್ಲರೂ ನನ್ನನ್ನು ತೊರೆದಿರುವರೆಂಬುದು ನಿನಗೆ ತಿಳಿದಿದೆ. ಪುಗೇಲನೂ, ಹೆರ್ಮೊಗೇನನೂ ನನ್ನನ್ನು ತೊರೆದಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಏಷ್ಯ ಸೀಮೆಯಲ್ಲಿ ಫುಗೇಲನೂ ಹರ್ಮೊಗೇನನೂ ಒಳಗೊಂಡು ಎಲ್ಲರೂ ನನ್ನನ್ನು ಬಿಟ್ಟು ಹೋದರೆಂಬುದನ್ನು ನೀನು ಬಲ್ಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

15 ಎಸ್ಯಾ ಪ್ರಾಂತ್ಯಾತ್ಲೆ ಸಗ್ಳೆಜಾನಾನಿ, ಮಾಕಾ ಸೊಡುನ್ ಗೆಲ್ಯಾತ್ ಮನುನ್ ತುಕಾ ಗೊತ್ತ್ ಹಾಯ್ ಫಿಗೆಲಸ್ ಅನಿ ಹೆರ್‍ಮೊಗೆನೆಸ್ ಸೈತ್ ತೆಂಚ್ಯಾ ವಾಂಗ್ಡಾ ಮಿಳ್ಲಾತ್ .

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ತಿಮೊಥೆಯನಿಗೆ 1:15
10 ತಿಳಿವುಗಳ ಹೋಲಿಕೆ  

ನಾನು ಮೊದಲನೆಯ ಸಾರಿ ವಿಚಾರಣೆಗೆ ಒಳಗಾಗಿ ಪ್ರತಿವಾದಿಸುತ್ತಿದ್ದಾಗ ಯಾರೂ ನನ್ನ ಪರವಾಗಿ ನಿಲ್ಲಲಿಲ್ಲ. ಎಲ್ಲರೂ ನನ್ನನ್ನು ಕೈಬಿಟ್ಟರು. ದೇವರು ಅವರನ್ನು ಕ್ಷಮಿಸಲಿ.


ಇತರರೆಲ್ಲರೂ ಸ್ವಕಾರ್ಯದಲ್ಲಿ ಮಗ್ನರಾಗಿರುವವರೇ ಹೊರತು ಯೇಸುಸ್ವಾಮಿಯ ಕಾರ್ಯದಲ್ಲಿ ನಿರತರಾಗಿಲ್ಲ.


ಹೀಗೆ ಎರಡು ವರ್ಷಗಳು ಕಳೆದವು. ಇದರ ಪರಿಣಾಮವಾಗಿ ಏಷ್ಯಾದಲ್ಲಿ ವಾಸವಾಗಿದ್ದ ಯೆಹೂದ್ಯರೂ ಗ್ರೀಕರೂ ಪ್ರಭುವಿನ ವಾಕ್ಯವನ್ನು ಕೇಳಲು ಅನುಕೂಲವಾಯಿತು.


ಏಷ್ಯ ಸೀಮೆಯಲ್ಲಿರುವ ಧರ್ಮಸಭೆಗಳ ಸಹೋದರರು ನಿಮಗೆ ವಂದನೆಗಳನ್ನು ತಿಳಿಸಿರುತ್ತಾರೆ. ಅಕ್ವಿಲನು ಮತ್ತು ಪ್ರಿಸಿಲ್ಲಳು ಹಾಗೂ ಅವರ ಮನೆಯಲ್ಲಿ ಸಭೆ ಸೇರುವ ಎಲ್ಲರೂ ಪ್ರಭುವಿನ ಹೆಸರಿನಲ್ಲಿ ನಿಮಗೆ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ.


ಇದರಿಂದಾಗಿ ನಮ್ಮ ಕಸಬಿಗೇ ಕೆಟ್ಟ ಹೆಸರು ಬರುವ ಅಪಾಯವಿದೆ. ಅಷ್ಟೇ ಏಕೆ, ಅರ್ತೆಮೀ ಮಹಾದೇವಿಯ ಗುಡಿ ಹೇಳಹೆಸರಿಲ್ಲದಂತಾಗುವ ಸಂಭವವಿದೆ. ಇಡೀ ಏಷ್ಯದಲ್ಲೂ ಜಗತ್ತಿನ ಎಲ್ಲೆಲ್ಲೂ ಪೂಜಿಸಲಾಗುವ ಆ ದೇವತೆಯ ವೈಭವ ಅಳಿದುಹೋಗುವ ಅಪಾಯವಿದೆ,” ಎಂದನು.


ಏಷ್ಯದಲ್ಲಿ ಅವರು ಶುಭಸಂದೇಶವನ್ನು ಸಾರಕೂಡದೆಂದು ಪವಿತ್ರಾತ್ಮ ನಿಷೇಧಿಸಿದ್ದರಿಂದ ಅವರು ಫ್ರಿಜಿಯ ಮತ್ತು ಗಲಾತ್ಯಪ್ರದೇಶಗಳ ಮಾರ್ಗವಾಗಿ ಪ್ರಯಾಣಮಾಡಿದರು.


ಸಾಧ್ಯವಾದರೆ ಪಂಚಾಶತ್ತಮ ಹಬ್ಬಕ್ಕೆ ಜೆರುಸಲೇಮಿನಲ್ಲಿರಬೇಕೆಂಬ ಆತುರ ಪೌಲನಿಗೆ ಇದ್ದುದರಿಂದ, ಏಷ್ಯದಲ್ಲಿ ಕಾಲ ವಿಳಂಬಮಾಡಲು ಮನಸ್ಸಿಲ್ಲದೆ, ಎಫೆಸವನ್ನು ದಾಟಿ ಹೋಗಬೇಕೆಂದು ಅವನು ತೀರ್ಮಾನಿಸಿದನು.


ಇದೂ ಅಲ್ಲದೆ, ಪೌಲನ ಸ್ನೇಹಿತರಾದ ಕೆಲವು ಸ್ಥಳೀಯ ಅಧಿಕಾರಿಗಳು, ಕ್ರೀಡಾಂಗಣಕ್ಕೆ ಹೋಗುವ ಸಾಹಸವನ್ನು ಮಾಡಕೂಡದೆಂದು ವಿನಂತಿಸಿ, ಪೌಲನಿಗೆ ಹೇಳಿಕಳುಹಿಸಿದರು.


ನಮ್ಮಲ್ಲಿ ಪಾರ್ಥಿಯರು, ಮೀಡಿಯರು ಮತ್ತು ಎಲಾಮಿನವರೂ, ಮೆಸಪೊಟೇಮಿಯ, ಜುದೇಯ ಮತ್ತು ಕಪ್ಪದೋಸಿಯದವರೂ ಇದ್ದಾರೆ. ಪೊಂತ ಮತ್ತು ಏಷ್ಯದವರೂ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು