Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 8:23 - ಕನ್ನಡ ಸತ್ಯವೇದವು C.L. Bible (BSI)

23 ತೀತನ ವಿಷಯವಾಗಿ ಹೇಳುವುದಾದರೆ, ಆತನು ನನ್ನ ಸಹೋದ್ಯೋಗಿ; ನಿಮ್ಮ ಸೇವೆಯಲ್ಲಿ ನನ್ನ ಸಹಕಾರಿ, ಆತನ ಸಂಗಡ ಬರುತ್ತಿರುವ ಇತರ ಸಹೋದರರು ಸಭೆಗಳ ಪ್ರತಿನಿಧಿಗಳು. ಕ್ರಿಸ್ತಯೇಸುವಿನ ಮಹಿಮೆಯನ್ನು ಬೆಳಗುವಂಥವರು ಅವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ತೀತನನ್ನು ಕುರಿತಾಗಿ ಹೇಳುವುದಾದರೆ, ಅವನು ನನ್ನ ಪಾಲುಗಾರನೂ ನಿಮ್ಮ ಪ್ರಯೋಜನಕ್ಕಾಗಿ ನನಗೆ ಸಹಕಾರಿಯೂ ಆಗಿದ್ದಾನೆ; ಆ ಸಹೋದರರನ್ನು ಕುರಿತಾಗಿ ಹೇಳುವುದಾದರೆ, ಅವರು ಸಭೆಗಳಿಂದ ಕಳುಹಿಸಲ್ಪಟ್ಟವರೂ ಮತ್ತು ಕ್ರಿಸ್ತನ ಮಹಿಮೆಯನ್ನು ಪ್ರಕಾಶಪಡಿಸುವವರೂ ಆಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ತೀತನನ್ನು ಕುರಿತು ಕೇಳುತ್ತೀರೋ, ಅವನು ನನ್ನ ಪಾಲುಗಾರನೂ ನಿಮ್ಮ ಪ್ರಯೋಜನಕ್ಕಾಗಿ ನನಗೆ ಸಹಕಾರಿಯೂ ಆಗಿದ್ದಾನೆ; ಆ ಸಹೋದರರನ್ನು ಕುರಿತು ಕೇಳುತ್ತೀರೋ, ಅವರು ಸಭೆಗಳಿಂದ ಕಳುಹಿಸಲ್ಪಟ್ಟವರೂ ಕ್ರಿಸ್ತನ ಮಹಿಮೆಯನ್ನು ಪ್ರಕಾಶಪಡಿಸುವವರೂ ಆಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ನಾನು ತೀತನ ಬಗ್ಗೆ ಹೇಳುವುದೇನೆಂದರೆ, ಅವನು ನನ್ನ ಜೊತೆಕೆಲಸಗಾರನಾಗಿದ್ದಾನೆ. ನಿಮಗೆ ಸಹಾಯ ಮಾಡಲು ಅವನು ನನ್ನೊಂದಿಗೆ ಕೆಲಸ ಮಾಡುತ್ತಿದ್ದಾನೆ. ಇತರ ಸಹೋದರರ ಬಗ್ಗೆ ನಾನು ಹೇಳುವುದೇನೆಂದರೆ, ಅವರು ಸಭೆಗಳಿಂದ ಕುಳುಹಿಸಲ್ಪಟ್ಟವರಾಗಿದ್ದಾರೆ ಮತ್ತು ಕ್ರಿಸ್ತನಿಗೆ ಮಹಿಮೆಯನ್ನು ಉಂಟುಮಾಡುವಂಥವರಾಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 ತೀತನು ನನ್ನ ಸಹೋದ್ಯೋಗಿ ಮತ್ತು ನಿಮ್ಮ ನಡುವೆಯಿರುವ ನನ್ನ ಸಹಕಾರಿಯಾಗಿರುತ್ತಾನೆ. ಇವನ ಸಂಗಡ ಬರುತ್ತಿರುವ ನಮ್ಮ ಸಹೋದರರು ಸಭೆಗಳ ಪ್ರತಿನಿಧಿಗಳಾಗಿದ್ದಾರೆ ಮತ್ತು ಕ್ರಿಸ್ತ ಯೇಸುವಿನ ಮಹಿಮೆಗೆ ಕಾರಣಸ್ಥರೂ ಆಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

23 ತಿತಾಚ್ಯಾ ವಿಶಯಾತ್ ಸಾಂಗುಚೆ ಹೊಲ್ಲ್ಯಾರ್, ತೊ ತುಮ್ಚಿ ಸೆವಾ ಕರ್‍ತಲ್ಯಾ ವಿಶಯಾತ್ ಮಾಜೊ ವಾಂಗ್ಡಿ ಅನಿ ಕಾಮ್ಗಾರಿ, ತೆಚ್ಯಾ ವಾಂಗ್ಡಾ ಜಾತಲ್ಯಾ ಭಾವಾಚ್ಯಾ ವಿಶಯಾತ್ ಸಾಂಗುಚೆ ಹೊಲ್ಯಾರ್, ತೆನಿ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಂಚಿ ದುತಾ ಅನಿ ಕ್ರಿಸ್ತಾಚಿ ಮಹಿಮಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 8:23
20 ತಿಳಿವುಗಳ ಹೋಲಿಕೆ  

ನನಗೆ ನೆರವಾಗಲು ನೀವು ಕಳುಹಿಸಿದ ಸಹೋದರ ಎಪಫ್ರೋದಿತನು ನಿಮ್ಮಲ್ಲಿಗೆ ಹಿಂದಿರುಗುವುದು ಅವಶ್ಯವೆಂದು ಭಾವಿಸುತ್ತೇನೆ. ಅವನು ನನ್ನೊಂದಿಗೆ ದುಡಿಯುತ್ತಾ, ಹೋರಾಡುತ್ತಾ ಬಂದಿದ್ದಾನೆ.


ಆದ್ದರಿಂದ ಕ್ರಿಸ್ತಯೇಸುವಿನಲ್ಲಿ ನಿನಗೂ ನನಗೂ ಅನ್ಯೋನ್ಯತೆ ಇದೆಯೆಂದು ನೀನು ಪರಿಗಣಿಸುವುದಾದರೆ ನನ್ನನ್ನು ಹೇಗೆ ಸ್ವಾಗತಿಸುತ್ತಿದ್ದೆಯೋ ಹಾಗೆಯೇ ಇವನನ್ನು ಸ್ವಾಗತಿಸು.


ಇಂಥ ಪ್ರೀತಿಮಯ ಸೇವಾಕಾರ್ಯವನ್ನು ನಿಮ್ಮಲ್ಲಿ ಪ್ರಾರಂಭಿಸಿದ ತೀತನು ಅದನ್ನು ಮುಂದುವರಿಸಿ, ಪೂರ್ಣಗೊಳಿಸಬೇಕೆಂದು ನಾವು ಆತನನ್ನು ಕೇಳಿಕೊಂಡಿದ್ದೇವೆ.


ಹೀಗೆ ಸತ್ಯಕ್ಕಾಗಿ ದುಡಿಯುವವರೊಂದಿಗೆ ನಾವು ಸಹಕರಿಸಬೇಕು.


ನಿಮಗೆ ತಿಳಿದಿರುವಂತೆ ನಾವು ನಿಮ್ಮಲ್ಲಿಗೆ ಬರುವ ಮೊದಲೇ ಫಿಲಿಪ್ಪಿ ಪಟ್ಟಣದಲ್ಲಿ ಹಿಂಸೆ, ಅವಮಾನಗಳನ್ನು ಸಹಿಸಿದೆವು. ತೀವ್ರವಾದ ವಿರೋಧವಿದ್ದರೂ ದೇವರ ನೆರವಿನಿಂದ ನಿರ್ಭೀತರಾಗಿ ಶುಭಸಂದೇಶವನ್ನು ನಿಮಗೆ ಸಾರಿದೆವು.


ಈ ಶುಭಸಂದೇಶವನ್ನು ಕ್ರಿಸ್ತಯೇಸುವಿನ ನಂಬಿಕಸ್ಥ ದಾಸನೂ ನಮ್ಮ ಜೊತೆಯ ಸೇವಕನೂ ಆದ ಎಪಫ್ರನಿಂದ ಕಲಿತುಕೊಂಡಿದ್ದೀರಿ.


ನನ್ನ ಜೊತೆ ಸೇವಕನಾದ ನೀನು ಈ ಮಹಿಳೆಯರಿಗೆ ನೆರವಾಗಬೇಕು. ಇವರು ಸಹ ಕ್ಲೇಮಂತನು ಮತ್ತು ಇತರ ಸಹಸೇವಕರೊಡನೆ ನನ್ನೊಂದಿಗೆ ಶುಭಸಂದೇಶದ ಪ್ರಚಾರಕಾರ್ಯದಲ್ಲಿ ಸಹಕರಿಸಿರುತ್ತಾರೆ. ಇವರೆಲ್ಲರ ಹೆಸರುಗಳು ನಿತ್ಯಜೀವಬಾಧ್ಯರ ಪಟ್ಟಿಯಲ್ಲಿವೆ.


ನನ್ನ ಕೋರಿಕೆಯಂತೆಯೇ ತೀತನು ನಿಮ್ಮ ಬಳಿಗೆ ಬಂದದ್ದು; ಆತನ ಸಂಗಡ ಒಬ್ಬ ಸಹೋದರನನ್ನೂ ಕಳುಹಿಸಿದೆ. ತೀತನು ನಿಮ್ಮನ್ನು ವಂಚಿಸಿ ಏನಾದರೂ ಪ್ರಯೋಜನ ಪಡೆದದ್ದುಂಟೇ? ಎಂದಿಗೂ ಇಲ್ಲ. ನಾವಿಬ್ಬರು ಒಂದೇ ಮನೋಭಾವನೆಯಿಂದ ವರ್ತಿಸಲಿಲ್ಲವೇ? ಒಂದೇ ರೀತಿಯಲ್ಲಿ ನಡೆದುಕೊಳ್ಳಲಿಲ್ಲವೇ?


ಇದಷ್ಟೇ ಅಲ್ಲದೆ, ಪ್ರಭುವಿನ ಮಹಿಮೆ ಬೆಳಗುವಂತೆಯೂ ಇತರರಿಗೆ ನೆರವಾಗಬೇಕೆಂಬ ಸದುದ್ದೇಶದಿಂದಲೂ ನಾವು ಕೈಗೊಂಡಿರುವ ಸೇವಾಕಾರ್ಯದಲ್ಲಿ ನಮ್ಮ ಸಂಗಡ ಪ್ರಯಾಣಮಾಡಲೆಂದು ಸಭೆಯವರು ಈತನನ್ನು ನೇಮಕಮಾಡಿದ್ದಾರೆ.


ನಿಮ್ಮ ಮೇಲೆ ನನಗಿರುವ ಅದೇ ಅಕ್ಕರೆಯನ್ನು ತೀತನಲ್ಲೂ ಮೂಡಿಸಿದ ದೇವರಿಗೆ ಕೃತಜ್ಞತೆ ಸಲ್ಲಬೇಕು.


ಆದರೂ ಎದೆಗುಂದಿದವರನ್ನು ಸಂತೈಸುವ ದೇವರು ತೀತನನ್ನು ಕಳುಹಿಸಿ ನಮ್ಮನ್ನು ಸಂತೈಸಿದರು.


ಸಿಮೋನನ ಪಾಲುಗಾರರಾದ ಜೆಬೆದಾಯನ ಮಕ್ಕಳು - ಯಕೋಬ ಮತ್ತು ಯೊವಾನ್ನರು - ಹಾಗೆಯೇ ಬೆರಗಾಗಿದ್ದರು. ಆಗ ಯೇಸು ಸಿಮೋನನಿಗೆ, “ಹೆದರಬೇಡ, ಇಂದಿನಿಂದ ನೀನು ಮೀನು ಹಿಡಿಯುವ ಬದಲು ಮನುಷ್ಯರನ್ನೇ ಹಿಡಿಯುವವನು ಆಗುವೆ,” ಎಂದರು.


ಆದುದರಿಂದ ಬೇರೆ ದೋಣಿಯಲ್ಲಿದ್ದ ತಮ್ಮ ಸಂಗಡಿಗರಿಗೆ ಸನ್ನೆಮಾಡಿ ಸಹಾಯಕ್ಕಾಗಿ ಕರೆದುಕೊಂಡರು. ಅವರೆಲ್ಲರೂ ಸೇರಿ ಮೀನುಗಳನ್ನು ತುಂಬಿಕೊಳ್ಳಲು, ದೋಣಿಗಳೆರಡೂ ಮುಳುಗಲು ಆರಂಭಿಸಿದವು.


ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ; ಧಣಿಗಿಂತ ದಾಸನು ದೊಡ್ಡವನಲ್ಲ. ಅಂತೆಯೇ ಕಳುಹಿಸಲಾದವನು ಕಳುಹಿಸುವವನಿಗಿಂತ ಶ್ರೇಷ್ಠನಲ್ಲ.


ಪುರುಷನು ತಲೆಯ ಮೇಲೆ ಮುಸುಕುಹಾಕಬೇಕಾಗಿಲ್ಲ. ಏಕೆಂದರೆ, ಅವನು ದೇವರ ರೂಪ ಹಾಗೂ ಅವರ ಮಹಿಮೆಯ ಪ್ರತಿಬಿಂಬ. ಸ್ತ್ರೀಯಾದರೋ, ಪುರುಷನ ಮಹಿಮೆಯ ಪ್ರತಿಬಿಂಬ.


ಆತನ ಸಂಗಡ ಇನ್ನೊಬ್ಬ ಸಹೋದರನನ್ನು ಕಳುಹಿಸುತ್ತಿದ್ದೇವೆ. ಈತನು ಶುಭಸಂದೇಶವನ್ನು ಸಾರುವುದರಲ್ಲಿ ಎಲ್ಲ ಸಭೆಗಳಿಂದ ಪ್ರಶಂಸೆ ಪಡೆದಿದ್ದಾನೆ.


ಇವರಿಬ್ಬರ ಸಂಗಡ ಮತ್ತೊಬ್ಬ ಸಹೋದರನನ್ನೂ ಕಳುಹಿಸುತ್ತಿದ್ದೇವೆ. ಈತನು ಆಸಕ್ತಿ ಉಳ್ಳವನೆಂದು ಅನುಭವದಿಂದ ಕಂಡುಕೊಂಡಿದ್ದೇವೆ. ನಿಮ್ಮಲ್ಲಿ ಪೂರ್ಣ ಭರವಸೆಯಿಟ್ಟು ನಿಮಗೆ ನೆರವಾಗಲು ಆತನು ಹೆಚ್ಚು ಉತ್ಸುಕನಾಗಿದ್ದಾನೆ.


ದೇಮನು ಇಹಲೋಕದ ಆಶಾಪಾಶಗಳಿಗೆ ಒಳಗಾಗಿ ನನ್ನನ್ನು ಬಿಟ್ಟು ಥೆಸಲೋನಿಕಕ್ಕೆ ಹೋದನು. ಕ್ರೆಸ್ಕನು ಗಲಾತ್ಯಕ್ಕೂ ತೀತನು ದಲ್ಮಾತ್ಯಕ್ಕೂ ಹೋಗಿದ್ದಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು