Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 7:11 - ಕನ್ನಡ ಸತ್ಯವೇದವು C.L. Bible (BSI)

11 ದೇವರ ಚಿತ್ತಾನುಸಾರವಾದ ನಿಮ್ಮ ದುಃಖದಿಂದ ಎಂಥಾ ಶ್ರದ್ಧೆ ಉಂಟಾಗಿದೆ ಎಂಬುದನ್ನು ಗಮನಿಸಿನೋಡಿರಿ; ನಿಮ್ಮಲ್ಲಿ ಎಂಥ ಉತ್ಸಾಹ, ದೋಷವಿಮುಕ್ತರಾಗಲು ಎಂಥ ಪ್ರಯಾಸ, ಎಷ್ಟು ರೋಷ, ಎಷ್ಟು ಆವೇಶ, ಎಷ್ಟು ಎಚ್ಚರಿಕೆ, ಎಷ್ಟು ಹಂಬಲ, ತಪ್ಪಿತಸ್ಥರನ್ನು ಶಿಕ್ಷಿಸಲು ಎಷ್ಟು ಕಟ್ಟುನಿಟ್ಟು! ನೀವು ನಿರ್ದೋಷಿಗಳೆಂಬುದಕ್ಕೆ ಇವೆಲ್ಲವೂ ಸಾದೃಶ್ಯಗಳಾಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ನೀವು ದೇವರ ಚಿತ್ತಾನುಸಾರವಾಗಿ ಪಟ್ಟ ದುಃಖವು ನಿಮ್ಮಲ್ಲಿ ಎಂಥ ಶ್ರದ್ದೆಯನ್ನು ಉಂಟುಮಾಡಿತು ನೋಡಿರಿ. ನೀವು ನಿರ್ದೋಷಿಗಳೆಂದು ಸಾಬೀತುಪಡಿಸುವುದಕ್ಕೆ ಎಂಥ ಪ್ರಯಾಸ, ಎಂಥ ರೋಷ; ಎಂಥ ಭಯ; ಎಂಥ ಹಂಬಲ; ಎಂಥ ಉತ್ಸಾಹ; ತಪ್ಪಿತಸ್ಥರನ್ನು ಶಿಕ್ಷಿಸಲು ಎಂಥ ಬಯಕೆ. ನೀವು ಆ ಕಾರ್ಯದಲ್ಲಿ ನಿರ್ದೋಷಿಗಳೆಂದು ಎಲ್ಲಾ ವಿಧದಲ್ಲಿಯೂ ತೋರಿಸಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ನೀವು ದೇವರ ಚಿತ್ತಾನುಸಾರವಾಗಿ ಪಟ್ಟ ದುಃಖವು ನಿಮಗೆ ಎಂಥ ತಹತಹವನ್ನು ಉಂಟುಮಾಡಿತು ನೋಡಿರಿ. ನೀವು ನಿರ್ದೋಷಿಗಳೆಂದು ಸ್ಥಾಪಿಸುವದಕ್ಕೆ ಎಷ್ಟೋ ಪ್ರಯಾಸಪಟ್ಟಿರಿ, ಎಷ್ಟೋ ಮನೋವ್ಯಥೆಯನ್ನು ಅನುಭವಿಸಿದಿರಿ; ಎಂಥ ಭಯವನ್ನು ಎಂಥ ಹಂಬಲವನ್ನು ತೋರಿಸಿದಿರಿ; ಮಾನಹಾನಿಗಾಗಿ ಎಷ್ಟೋ ರೋಷಪಟ್ಟು ಶಿಕ್ಷೆಮಾಡಿದಿರಿ. ನೀವು ಆ ಕಾರ್ಯಕ್ಕೆ ಸೇರಿದವರಲ್ಲವೆಂಬದನ್ನು ಎಲ್ಲಾ ವಿಧದಲ್ಲಿಯೂ ತೋರಿಸಿದಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ನೀವು ಯಾವ ದುಃಖವನ್ನು ಹೊಂದಿರಬೇಕೆಂದು ದೇವರು ಬಯಸಿದ್ದನೋ ಅದೇ ದುಃಖವನ್ನು ನೀವು ಹೊಂದಿದ್ದೀರಿ. ಆ ದುಃಖವು ನಿಮ್ಮನ್ನು ಬಹು ಆಸಕ್ತಿಯುಳ್ಳವರನ್ನಾಗಿ ಮಾಡಿತು; ನೀವು ತಪ್ಪಿತಸ್ಥರಾಗಿರಲಿಲ್ಲವೆಂದು ನಿರೂಪಿಸಬೇಕೆಂಬ ಬಯಕೆಯನ್ನು ನಿಮ್ಮಲ್ಲಿ ಉಂಟುಮಾಡಿತು; ನಿಮ್ಮನ್ನು ಕೋಪಗೊಳಿಸಿತು ಮತ್ತು ಭಯಗೊಳಿಸಿತು; ನನ್ನನ್ನು ನೋಡಬೇಕೆಂಬ ಬಯಕೆಯನ್ನು ನಿಮ್ಮಲ್ಲಿ ಉಂಟುಮಾಡಿತು; ನನ್ನ ಬಗ್ಗೆ ಚಿಂತಿಸುವಂತೆ ಮಾಡಿತು; ತಪ್ಪಿತಸ್ಥರನ್ನು ದಂಡಿಸಬೇಕೆಂಬ ಬಯಕೆಯನ್ನು ಉಂಟು ಮಾಡಿತು. ಆ ಸಮಸ್ಯೆಯ ಯಾವ ವಿಷಯದಲ್ಲಿಯೂ ನೀವು ಅಪರಾಧಿಗಳಾಗಿರಲಿಲ್ಲವೆಂದು ನಿರೂಪಿಸಿದಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಈ ದೈವಿಕ ದುಃಖವು ನಿಮ್ಮಲ್ಲಿ ಏನು ಉಂಟುಮಾಡಿದೆ ಗಮನಿಸಿರಿ: ನಿಮ್ಮಲ್ಲಿ ಎಂಥಾ ಉತ್ಸಾಹ, ನಿರಪರಾಧಕ್ಕಾಗಿ ಎಂಥಾ ಪ್ರಯಾಸ, ಎಷ್ಟು ರೋಷ, ಎಷ್ಟು ಭಯ, ಎಷ್ಟು ಹಂಬಲ, ಎಷ್ಟು ಆಸಕ್ತಿ, ನ್ಯಾಯಕ್ಕಾಗಿ ಎಷ್ಟು ಆತುರ. ಪ್ರತಿಯೊಂದು ವಿಷಯದಲ್ಲಿಯೂ ನೀವು ನಿರ್ದೋಷಿಗಳೆಂದು ರುಜುಪಡಿಸುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

11 ಬಗಾ ತುಮಿ ದೆವಾಚ್ಯಾ ಇಚ್ಚಾ ಪರ್ಕಾರ್ ದುಖ್ ಸೊಸಲ್ಲ್ಯಾಕ್ ಕಾಯ್ ಸಗ್ಳೆ ಪ್ರತಿ ಫಳ್ ತುಮ್ಕಾ ಗಾವ್ಲಾ, ಕವ್ಡಿ ಉಮ್ಮೆದ್ ತುಮ್ಚ್ಯಾ ಮದ್ದಿ ಭರ್ಲಾ! ತುಮಿ ಚುಕೆತ್ ನಸಲ್ಲೆ ಮನುನ್ ದಾಕ್ವುಕ್ ಕವ್ಡೆ ಬಗುಲ್ಯಾಶಿ, ಕಸ್ಲೊ ಸಂತಾಪ್, ಕಸ್ಲೆ ಭಿಂಯೆ, ಅನಿ ಕಸ್ಲಿ ಉರ್ಬಾ, ನ್ಯಾಯ್‍ನಿತ್ ಹುರಿ ಸರ್ಕೆ ಕರುನ್ ತುಮಿ ಚುಕೆತ್ ನಾಶಿ ಮನುನ್ ತುಮಿ ದಾಕ್ವುನ್ ದಿಲ್ಯಾಶಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 7:11
54 ತಿಳಿವುಗಳ ಹೋಲಿಕೆ  

ಹೀಗೆ ಕ್ರಿಸ್ತಯೇಸುವಿಗೆ ಸೇವೆಮಾಡುವವನು, ದೇವರಿಂದ ಮೆಚ್ಚುಗೆಯನ್ನು ಮತ್ತು ಮನುಷ್ಯರಿಂದ ಮಾನ್ಯತೆಯನ್ನು ಪಡೆಯುತ್ತಾನೆ.


ನೀನಾದರೋ ದೇವರಿಗೆ ಮೆಚ್ಚುಗೆಯಾದವನಂತೆ, ತನ್ನ ಕೆಲಸಕ್ಕೆ ಹಿಂದೆಗೆಯದ ಕೆಲಸಗಾರನಂತೆ, ಸುವಾರ್ತೆಯನ್ನು ಸರಿಯಾಗಿ ಸಾರುವವನಂತೆ, ಸುವಾರ್ತೆಯನ್ನು ಸರಿಯಾಗಿ ಸಾರುವವನಂತೆ ಬಾಳಲು ಪ್ರಯತ್ನಪಡು.


ತೀತನ ಆಗಮನದಿಂದ ಮಾತ್ರವಲ್ಲ, ನೀವು ಆತನಿಗೆ ತೋರಿದ ಪ್ರೀತ್ಯಾದರದ ವರದಿಯಿಂದಲೂ ನಾವು ಪುನಃ ಚೇತನಗೊಂಡೆವು. ನನ್ನನ್ನು ನೋಡಲು ನಿಮಗಿರುವ ಹಂಬಲ, ನನ್ನ ಮೇಲೆ ನಿಮಗಿರುವ ಅನುಕಂಪ, ನನ್ನ ಬಗ್ಗೆ ನಿಮಗಿರುವ ಹಿತಚಿಂತನೆ, ಇವುಗಳನ್ನು ಕೇಳಿ ನಮಗೆ ಮತ್ತಷ್ಟು ಆನಂದವಾಯಿತು.


“ಭಯಭಕುತಿಯಿಂದ ಪ್ರಭುವಿಗೆ ಸೇವೆಮಾಡಿರಿ I ನಡುನಡುಗುತ ಆತನ ಪಾದಪೂಜೆ ಮಾಡಿರಿ” II


ನನ್ನ ಪ್ರೀತಿಪಾತ್ರರನ್ನು ನಾನು ಖಂಡಿಸುತ್ತೇನೆ ಮತ್ತು ದಂಡಿಸುತ್ತೇನೆ. ಆದುದರಿಂದ ಉತ್ಸಾಹದಿಂದಿರು, ದೇವರಿಗೆ ಅಭಿಮುಖನಾಗಿರು.


ಬೆಂಕಿಯ ಬಾಯಲ್ಲಿ ಇರುವವರನ್ನು ಎಳೆದು ಸಂರಕ್ಷಿಸಿರಿ. ಕೆಲವರಿಗೆ ದಯೆತೋರಿಸುವಾಗ ಭಯವಿರಲಿ. ಪಾಪದ ನಡತೆಯಿಂದ ಹೊಲಸಾದ ಅವರ ಬಟ್ಟೆಬರೆಗಳನ್ನೂ ಮುಟ್ಟದಿರಿ.


ಹೊಸ ಜನ್ಮಪಡೆದ ಶಿಶುಗಳಂತೆ, ಶುದ್ಧವಾದ ಆಧ್ಯಾತ್ಮಿಕ ಹಾಲಿಗಾಗಿ ಹಂಬಲಿಸಿರಿ; ಅದನ್ನು ಕುಡಿದು ಬೆಳೆಯುತ್ತಾ ಜೀವೋದ್ಧಾರವನ್ನು ಹೊಂದುವಿರಿ.


ನೀವು ದೇವರಿಗೆ ಪ್ರಾರ್ಥನೆಮಾಡುವಾಗ, ಅವರನ್ನು “ತಂದೆಯೇ” ಎಂದು ಸಂಬೋಧಿಸುತ್ತೀರಿ. ಅವರು ಪಕ್ಷಪಾತಿ ಅಲ್ಲ. ಎಲ್ಲರಿಗೂ ಅವರವರ ಕೃತ್ಯಗಳಿಗೆ ತಕ್ಕಂತೆ ನ್ಯಾಯತೀರ್ಪು ನೀಡುವವರು. ಆದ್ದರಿಂದ ನಿಮ್ಮ ಇಹಲೋಕದ ಯಾತ್ರೆಯನ್ನು ಭಯಭಕ್ತಿಯಿಂದ ಸಾಗಿಸಿರಿ.


ದೇವರು ತಮ್ಮ ವಿಶ್ರಾಂತಿಯ ನೆಲೆಯನ್ನು ನೀಡುವುದಾಗಿ ಮಾಡಿದ ವಾಗ್ದಾನ ಇನ್ನೂ ರದ್ದಾಗದೆ ಉಳಿದಿದೆ. ನಿಮ್ಮಲ್ಲಿ ಯಾರೂ ಆ ವಾಗ್ದಾನದ ಫಲವನ್ನು ಪಡೆಯದೆ ಇರಬಾರದು. ಎಂತಲೇ, ನಾವು ಭಯಭಕ್ತಿಯಿಂದ ಬಾಳೋಣ.


ದೇವರಲ್ಲಿ ವಿಶ್ವಾಸವಿಟ್ಟವರು ಸತ್ಕಾರ್ಯಗಳಲ್ಲಿ ನಿರತರಾಗುವಂತೆ ನೀನು ಇವೆಲ್ಲವನ್ನೂ ದೃಢವಾಗಿ ಬೋಧಿಸಬೇಕೆಂಬುದೇ ನನ್ನ ಅಪೇಕ್ಷೆ. ಇವು ಎಲ್ಲರಿಗೂ ಹಿತಕರವಾಗಿವೆ ಹಾಗೂ ಪ್ರಯೋಜನಕರವಾಗಿವೆ.


ಪ್ರಿಯ ಸಹೋದರರೇ, ನಾನು ನಿಮ್ಮಲ್ಲಿದ್ದಾಗ ನೀವು ಯಾವಾಗಲೂ ನನ್ನ ಮಾತಿನಂತೆ ನಡೆದುಕೊಂಡಿರಿ. ಈಗ, ನಾನು ದೂರವಿರುವಾಗ ಇನ್ನೂ ಹೆಚ್ಚಿನ ಆಸಕ್ತಿಯಿಂದ ನಡೆದುಕೊಳ್ಳಿ. ನಿಮ್ಮ ಜೀವೋದ್ಧಾರಕ್ಕಾಗಿ ಭಯಭಕ್ತಿಯಿಂದ ಶ್ರಮಿಸಿರಿ.


ನಿಷ್ಪ್ರಯೋಜಕವಾದ ಕತ್ತಲುಮಯ ಕಾರ್ಯಗಳಿಗೆ ಕೈಹಾಕದಿರಿ. ಅಂಥವುಗಳನ್ನು ಬಯಲಿಗೆಳೆದು ಖಂಡಿಸಿರಿ.


ಕೋಪಮಾಡಬೇಕಾಗಿ ಬಂದರೂ ಪಾಪಮಾಡಬೇಡಿರಿ; ಸೂರ್ಯನು ಮುಳುಗುವ ಮುನ್ನ ನಿಮ್ಮ ಕೋಪವು ಇಳಿಯಲಿ.


ನೀವು ಯಾವ ಕೇಡನ್ನೂ ಮಾಡಬಾರದೆಂದು ದೇವರಲ್ಲಿ ನಾವು ಪ್ರಾರ್ಥಿಸುತ್ತೇವೆ. ಇದರಲ್ಲಿ ನಾವು ಮಾತ್ರ ಯೋಗ್ಯರೆಂದು ತೋರಿಸಿಕೊಳ್ಳುವ ಉದ್ದೇಶ ನಮಗಿಲ್ಲ. ನಾವು ಅಯೋಗ್ಯರೆನಿಸಿಕೊಂಡಿದ್ದರೂ ನೀವು ಒಳಿತನ್ನೇ ಮಾಡಬೇಕೆಂಬುದು ನಮ್ಮ ಉದ್ದೇಶ.


ನೆರವು ನೀಡಲು ಸಿದ್ಧರಿದ್ದೀರೆಂದು ನನಗೆ ಚೆನ್ನಾಗಿ ಗೊತ್ತಿದೆ. “ಅಖಾಯದ ಸಹೋದರರು ಕಳೆದ ವರ್ಷದಿಂದಲೂ ನೆರವು ನೀಡಲು ಏರ್ಪಾಡುಮಾಡುತ್ತಿರುವರು,” ಎಂದು ಮಕೆದೋನಿಯರ ಮುಂದೆ ನಾನು ನಿಮ್ಮನ್ನು ಹೊಗಳಿದ್ದೇನೆ. ನಿಮ್ಮ ಉತ್ಸಾಹ ಅವರಲ್ಲಿ ಅನೇಕರನ್ನು ಹುರಿದುಂಬಿಸಿದೆ.


ಪ್ರಿಯ ಸಹೋದರರೇ, ಇಂಥ ವಾಗ್ದಾನಗಳನ್ನು ಪಡೆದಿರುವ ನಾವು ಎಲ್ಲಾ ವಿಧವಾದ ಮಲಿನತೆಯಿಂದ ದೂರವಿದ್ದು ದೇಹಾತ್ಮಗಳಲ್ಲಿ ಶುದ್ಧರಾಗಿರೋಣ. ದೇವರಲ್ಲಿ ಭಯಭಕ್ತಿಯುಳ್ಳವರಾಗಿ ಪರಿಶುದ್ಧತೆಯಲ್ಲಿ ಪರಿಣತಿಯನ್ನು ಪಡೆಯೋಣ.


ಬದಲಿಗೆ, ಎಲ್ಲ ವಿಷಯಗಳಲ್ಲೂ ದೇವರ ದಾಸರೆಂದು ತೋರಿಸಿಕೊಳ್ಳುತ್ತೇವೆ. ಕಷ್ಟಸಂಕಟಗಳಲ್ಲೂ ದುಃಖದುರಿತಗಳಲ್ಲೂ ತಾಳ್ಮೆಯಿಂದ ವರ್ತಿಸಿದ್ದೇವೆ.


ನಿಮ್ಮಲ್ಲಿ ಬಹುಮಂದಿ ಅವನಿಗೆ ವಿಧಿಸಿರುವ ಶಿಕ್ಷೆಯೇ ಸಾಕಾಗಿದೆ.


ದೇಹದಲ್ಲಿ ಭಿನ್ನಭೇದವಿಲ್ಲದೆ ಅಂಗಗಳು ಒಂದಕ್ಕೊಂದರ ಹಿತವನ್ನು ಗಮನಿಸುವಂತೆ ಮಾಡಿದ್ದಾರೆ.


ಹೀಗಿರಲು, ನೀವು ಸೊಕ್ಕಿನಿಂದ ಮೆರೆಯಲು ಕಾರಣವಾದರೂ ಎಲ್ಲಿದೆ? ಬದಲಿಗೆ, ನೀವು ವ್ಯಸನಪಟ್ಟು ಅವನನ್ನು ನಿಮ್ಮ ಸಭಾಕೂಟದಿಂದ ಬಹಿಷ್ಕರಿಸಬೇಕಾಗಿತ್ತಲ್ಲವೆ?


ಅದು ಸರಿಯೆ. ಅವರ ಅವಿಶ್ವಾಸದ ಕಾರಣದಿಂದ ಅವರನ್ನು ಕಡಿದುಹಾಕಲಾಯಿತು. ನೀನು ದೃಢವಾಗಿ ನಿಂತಿರುವುದಾದರೋ ವಿಶ್ವಾಸದ ಪ್ರಯುಕ್ತವೇ. ಆದ್ದರಿಂದ ಗರ್ವಪಡಬೇಡ. ಭಯಭಕ್ತಿಯಿಂದಿರು.


ಅಥೆನ್ಸಿನಲ್ಲಿ ಪೌಲನು, ಸೀಲ ಮತ್ತು ತಿಮೊಥೇಯರನ್ನು ಎದುರುನೋಡುತ್ತಿದ್ದನು. ಆ ಪಟ್ಟಣದಲ್ಲಿ ಎಲ್ಲಿ ನೋಡಿದರಲ್ಲಿ ವಿಗ್ರಹಗಳಿರುವುದನ್ನು ಕಂಡು, ಅವನ ಮನಸ್ಸು ಕುದಿಯಿತು.


‘ನಿನ್ನ ಆಲಯದ ಮೇಲಿನ ಅಭಿಮಾನವು ನನ್ನನ್ನು ಬೆಂಕಿಯಂತೆ ದಹಿಸುತ್ತದೆ,’ ಎಂದು ಪವಿತ್ರಗ್ರಂಥದಲ್ಲೇ ಬರೆದಿರುವ ವಾಕ್ಯವು ಶಿಷ್ಯರಿಗೆ ಆಗ ನೆನಪಾಯಿತು.


ಯೇಸು ಸುತ್ತಲೂ ಇದ್ದವರನ್ನು ಕೋಪದಿಂದ ದಿಟ್ಟಿಸಿ, ಅವರ ಹೃದಯ ಕಲ್ಲಾಗಿರುವುದನ್ನು ಕಂಡು, ಮನನೊಂದು, ಬತ್ತಿದ ಕೈಯುಳ್ಳವನಿಗೆ, “ನಿನ್ನ ಕೈಯನ್ನು ಚಾಚು,” ಎಂದರು. ಅವನು ಚಾಚಿದನು, ಅದು ಸಂಪೂರ್ಣವಾಗಿ ಸ್ವಸ್ಥವಾಯಿತು.


ಆದರೆ ರಾಜನು ಈ ಮಾತುಗಳನ್ನು ಕೇಳಿ ಬಹಳ ವ್ಯಸನಗೊಂಡನು. ದಾನಿಯೇಲನನ್ನು ಈ ಇಕ್ಕಟ್ಟಿನಿಂದ ತಪ್ಪಿಸಲು ಮನಸ್ಸು ಮಾಡಿಕೊಂಡನು. ಆದರೆ ಹೇಗೆ ರಕ್ಷಿಸುವುದೆಂದು ಸೂರ್ಯಾಸ್ತಮದವರೆಗೂ ಆಲೋಚಿಸುತ್ತಾ ಇದ್ದನು.


ಇವುಗಳನ್ನೆಲ್ಲ ನಿರ್ಮಿಸಿದ್ದು ನನ್ನ ಕೈಯೇ. ಹೌದು, ಇವುಗಳೆಲ್ಲ ಆದುವು ನನ್ನಿಂದಲೇ . ವಿನಮ್ರನು, ಪಶ್ಚಾತ್ತಾಪ ಪಡುವವನು, ನನ್ನ ಮಾತಿನಲ್ಲಿ ಭಯಭಕ್ತಿಯುಳ್ಳವನು, ಇಂಥವರೇ ನನಗೆ ಮೆಚ್ಚುಗೆಯಾದವರು.


ನಡೆವೆವು ನಾವು, ಸರ್ವೇಶ್ವರಾ, ನಿನ್ನ ನೀತಿಮಾರ್ಗದೊಳು ಕಾದಿರುವೆವು ನಿನಗಾಗಿ ಭರವಸೆಯಿಟ್ಟು ನಿನ್ನೊಳು ನಿನ್ನ ನಾಮಸ್ಮರಣೆಯ ಬಯಕೆ ನಮ್ಮ ಅಂತರಾತ್ಮದೊಳು.


ನಿನ್ನ ವೃಕ್ಷದಲಿ, ನಿನ್ನ ಹಸ್ತಗಳಲಿ ಧರಿಸಿಕೊ ನನ್ನನ್ನು ಪ್ರೇಮ ಮುದ್ರೆಯಾಗಿ. ಪ್ರೀತಿ ಮೃತ್ಯುವಿನಷ್ಟು ಶಕ್ತಿಶಾಲಿ ! ಮತ್ಸರ ಪಾತಾಳದಷ್ಟು ಕ್ರೂರಿ ಅದರ ಜ್ವಾಲೆ ಬೆಂಕಿಯ ಉರಿ ಧಗಧಗಿಸುವ ಕೋಪಾಗ್ನಿ.


ಭಯದಿಂದ ನಡೆದುಕೊಳ್ಳುವವನು ಭಾಗ್ಯವಂತನು; ಕಠಿಣ ಹೃದಯನು ಕೇಡಿಗೆ ತುತ್ತಾಗುವನು.


ಬುದ್ಧಿವಂತನು ಕೇಡಿಗೆ ಅಂಜಿ ಓರೆಯಾಗುವನು; ಬುದ್ಧಿಹೀನನು ಸೊಕ್ಕಿನಿಂದ ಅದರತ್ತ ಧಾವಿಸುವನು.


ಹತ್ತಿರ ಇಹನು ಪ್ರಭು ಕರೆಯುವವರೆಲ್ಲರಿಗೆ I ಯಥಾರ್ಥವಾಗಿ ಆತನನು ಅರಸುವವರಿಗೆ II


ಸೂರ್ಯೋದಯಕ್ಕಾಗಿ ಕಾವಲುಗಾರ ಕಾದಿರುವುದಕ್ಕಿಂತ I ಆತುರದಿಂದ ಬೆಳಗಾಗುವುದನು ಎದುರು ನೋಡುವುದಕ್ಕಿಂತ I ಅತಿಯಾಗಿ ಪ್ರಭುವನು ನಿರೀಕ್ಷಿಸುತಿದೆ ಎನ್ನ ಮನ ನಿರುತ II


ಮರೆತುಬಿಟ್ಟರು ವಿರೋಧಿಗಳು ನಿನ್ನ ವಾಕ್ಯವನು I ಎಂತಲೆ ದಹಿಸುತಿದೆ ಧರ್ಮಾಸಕ್ತಿ ಎನ್ನನು II


ಅಗ್ನಿಯಂತೆನ್ನ ದಹಿಸುತ್ತಿದೆ ನಿನ್ನಾಲಯದಭಿಮಾನ I ಎನ್ನ ಮೇಲೆರಗಿದೆ ನಿನ್ನ ಕಡುದ್ರೋಹಿಗಳ ದೂಷಣ II


ಬಾಯಾರಿದ ಜಿಂಕೆ ಹಾತೊರೆಯುವಂತೆ ತೊರೆಗಾಗಿ I ದಣಿದೆನ್ನ ಮನ ದೇವಾ, ಹಂಬಲಿಸುತಿದೆ ನಿನಗಾಗಿ II


ನನ್ನ ಗೋಳಾಟ ಪ್ರಭು, ನಿನಗೆ ಗೊತ್ತಿದೆಯಯ್ಯಾ I ನನ್ನ ಮನದಾಸೆ ನಿನಗೆ ಬಯಲಾಗಿದೆಯಯ್ಯಾ II


ಅವರು ಅಸ್ವಸ್ಥರಾಗಿರಲು ಶೋಕವಸ್ತ್ರಧಾರಿಯಾದೆ I ತಲೆಬಾಗಿ ಜಪಿಸಿದೆ, ನಾ ಮನನೊಂದು ಉಪವಾಸವಿದ್ದೆ II


ಕೋಪಗೊಂಡು ಅವರನ್ನು ಶಪಿಸಿದೆ; ಅವರಲ್ಲಿ ಕೆಲವರನ್ನು ಹೊಡೆದು ಅವರ ಕೂದಲುಗಳನ್ನು ಕೀಳಿಸಿದೆ.


ನಿಮಗೆ ದುಃಖ ಉಂಟಾಯಿತೆಂಬ ಕಾರಣದಿಂದ ಅಲ್ಲ, ಆ ದುಃಖದಿಂದ ನಿಮಗೆ ಮನಪರಿವರ್ತನೆ ಆಯಿತೆಂಬ ಕಾರಣದಿಂದ ಸಂತೋಷಪಡುತ್ತೇನೆ. ನಿಮಗೆ ದುಃಖ ಉಂಟಾದುದು ದೇವರ ಚಿತ್ತವೇ ಸರಿ. ಆದರೆ ನನ್ನಿಂದ ನಿಮಗೆ ಅನ್ಯಾಯವೇನೂ ಆಗಲಿಲ್ಲ.


ಆದುದರಿಂದ ನಾನು ಹೇಳಿದ್ದೆಲ್ಲಕ್ಕಾಗಿ ವಿಷಾದಿಸುತ್ತೇನೆ ಬೂದಿಯಲು, ಧೂಳಿನಲು ಕುಳಿತು ಪಶ್ಚಾತ್ತಾಪಪಡುತ್ತೇನೆ.”


ನಮ್ಮ ಅಕ್ರಮ ನಡತೆ ದೇವರ ನ್ಯಾಯನೀತಿಯನ್ನು ಮತ್ತಷ್ಟು ಸ್ಪಷ್ಟವಾಗಿ ತೋರಿಸುವ ಸಾಧನವಾದರೆ ಆಗ ಏನು ಹೇಳುವುದು? ಆ ಅಕ್ರಮವಾಗಿ ದೇವರು ನಮ್ಮ ಮೇಲೆ ಕೋಪ ಕಾರಿದರೆ ಅದು ಅನ್ಯಾಯವೆಂದು ನಾವು ಹೇಳಬಹುದೆ? (ಮನುಷ್ಯನಿಗೆ ಸಹಜವಾಗಿ ಏಳುವ ಪ್ರಶ್ನೆಯಿದು)


ಈ ವಿಷಯದಲ್ಲಿ ಯಾರೂ ತನ್ನ ಸಹೋದರನನ್ನು ವಂಚಿಸಿ ಅತಿಕ್ರಮಿಸದಿರಲಿ. ಹೀಗೆ ವರ್ತಿಸುವವರು ಪ್ರಭುವಿನ ಪ್ರತೀಕಾರಕ್ಕೆ ಒಳಗಾಗುವರೆಂದು ನಾವು ನಿಮಗೆ ಮುನ್ನೆಚ್ಚರಿಕೆ ಕೊಟ್ಟಿದ್ದೇವೆ.


ಯಾರಾದರೂ ಪಾಪದಲ್ಲಿಯೇ ಮುಂದುವರಿಯುತ್ತಾ ಇದ್ದರೆ, ಅಂಥವರನ್ನು ಬಹಿರಂಗವಾಗಿಯೇ ಖಂಡಿಸು. ಇದು ಇತರರಿಗೂ ಎಚ್ಚರಿಕೆಯಾಗಿರಲಿ.


ದೇವರಿಂದ ಬರುವ ಜ್ಞಾನವಾದರೋ ಮೊಟ್ಟಮೊದಲನೆಯದಾಗಿ ಪವಿತ್ರವಾದುದು. ಅದು ಶಾಂತಿಸಮಾಧಾನ ಉಳ್ಳದ್ದು. ಸಹನೆ ಸಂಯಮವುಳ್ಳದ್ದು, ನ್ಯಾಯಸಮ್ಮತವಾದದ್ದು, ದಯೆದಾಕ್ಷಿಣ್ಯಗಳಿಂದಲೂ ಸತ್ಕಾರ್ಯಗಳಿಂದಲೂ ಫಲಭರಿತವಾದದ್ದು. ವಂಚನೆಯಾಗಲಿ, ಚಂಚಲತೆಯಾಗಲಿ ಅದರಲ್ಲಿ ಇರುವುದಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು