Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 5:12 - ಕನ್ನಡ ಸತ್ಯವೇದವು C.L. Bible (BSI)

12 ಮತ್ತೊಮ್ಮೆ ನಮ್ಮನ್ನು ನಾವೇ ಹೊಗಳಿಕೊಳ್ಳುತ್ತೇವೆಂದು ನೀವು ಭಾವಿಸಬಾರದು. ನಮ್ಮನ್ನು ಕುರಿತು ನೀವೇ ಹೆಚ್ಚಳಪಡುವಂತೆ ಒಂದು ಅವಕಾಶವನ್ನು ಒದಗಿಸುತ್ತಿದ್ದೇವೆ, ಅಷ್ಟೆ. ಹೀಗೆ, ಮನುಷ್ಯನ ಅಂತರಂಗವನ್ನು ಅರಿಯದೆ ಅವನ ಹೊರ ತೋರಿಕೆಗಳನ್ನೇ ನೆಚ್ಚಿ ನಲಿಯುವವರಿಗೆ ಸೂಕ್ತ ಪ್ರತ್ಯುತ್ತರವನ್ನು ಕೊಡಲು ನೀವು ಶಕ್ತರಾಗುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ನಾವು ನಮ್ಮನ್ನು ಮತ್ತೆ, ಮತ್ತೆ ನಿಮ್ಮೆದುರು ಹೊಗಳಿಕೊಳ್ಳುವುದಿಲ್ಲ; ಅಂತರಂಗವನ್ನು ಅರಿಯದೆ ಅವನ ಹೊರ ತೋರಿಕೆಯನ್ನೇ ನೆಚ್ಚಿ ನಲಿಯುವವರಿಗೆ ಸೂಕ್ತ ಪ್ರತ್ಯುತ್ತರವನ್ನು ಕೊಡಲು ನೀವು ಶಕ್ತರಾಗುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ನಾವು ನಮ್ಮನ್ನು ತಿರಿಗಿ ನಿಮ್ಮ ಮುಂದೆ ಹೊಗಳಿಕೊಳ್ಳುವದಿಲ್ಲ; ಆದರೆ ಯಾರು ಹೃದಯದ ವಿಷಯದಲ್ಲಿ ಹಿಗ್ಗದೆ ತೋರಿಕೆಯ ವಿಷಯದಲ್ಲಿ ಮಾತ್ರ ಹಿಗ್ಗುತ್ತಾರೋ ಅವರಿಗೆ ಪ್ರತ್ಯುತ್ತರ ಹೇಳುವದಕ್ಕೆ ನಿಮಗೆ ಆಧಾರವಿರಬೇಕೆಂದು ನಮ್ಮ ವಿಷಯದಲ್ಲಿ ಹಿಗ್ಗುವದಕ್ಕೆ ನಿಮಗೆ ಆಸ್ಪದಕೊಡುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ನಾವು ನಮ್ಮನ್ನು ನಿಮ್ಮ ಮುಂದೆ ಮತ್ತೊಮ್ಮೆ ನಿರೂಪಿಸಿಕೊಳ್ಳುತ್ತಿಲ್ಲ. ಆದರೆ ನಮ್ಮ ಬಗ್ಗೆ ನಿಮಗೆ ಹೇಳುತ್ತಿದ್ದೇವೆಯಷ್ಟೆ. ನೀವು ನಮ್ಮ ವಿಷಯದಲ್ಲಿ ಹೆಮ್ಮೆಪಡುವುದಕ್ಕೆ ನಿಮಗೆ ಕಾರಣಗಳನ್ನು ಕೊಡುತ್ತಿದ್ದೇವೆ. ಆಗ, ಕಣ್ಣಿಗೆ ಕಾಣುವ ಸಂಗತಿಗಳ ಬಗ್ಗೆ ಹೆಮ್ಮೆಪಡುವ ಜನರಿಗೆ ಕೊಡತಕ್ಕ ಉತ್ತರವು ನಿಮ್ಮಲಿರುವುದು. ಆ ಜನರು ಒಬ್ಬ ವ್ಯಕ್ತಿಯ ಹೃದಯದ ಸ್ಥಿತಿಯ ಬಗ್ಗೆ ಚಿಂತಿಸುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಮತ್ತೊಮ್ಮೆ ನಮ್ಮನ್ನು ನಾವೇ ಹೊಗಳಿಕೊಳ್ಳುತ್ತೇವೆಂದು ನೀವು ಭಾವಿಸಬೇಡಿ. ನಮ್ಮನ್ನು ಕುರಿತು ನೀವು ಹೆಮ್ಮೆ ಪಡುವಂತೆ ಒಂದು ಅವಕಾಶವನ್ನು ನಾವು ನಿಮಗೆ ಒದಗಿಸುತ್ತೇವೆ ಅಷ್ಟೇ. ಹೀಗೆ ಮನುಷ್ಯರ ಹೃದಯವನ್ನಲ್ಲಾ, ಹೊರತೋರಿಕೆಯನ್ನು ಕಂಡು ಹೆಮ್ಮೆ ಪಡುವವರಿಗೆ ನೀವು ಉತ್ತರ ಕೊಡುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

12 ತುಮ್ಚ್ಯಾ ಇದ್ರಾಕ್ ಅಮ್ಚ್ಯಾಚ್ ವಿಶಯಾತ್ ಅನಿಪರ್ತುನ್ ಬೊಲುಕ್ ಮಿಯಾ ಬಗಿನಾ, ಅಮ್ಚ್ಯಾ ವಿಶಯಾತ್ ಅಭಿಮಾನ್ ಸಾಂಗುಕ್ ತುಮ್ಕಾ ಎಕ್ ಅವ್ಕಾಸ್ ದಿವ್ಚೆ ಮನುನ್ ಮಿಯಾ ಬಗುಕ್ ಲಾಗ್ಲಾ. ಹೆಚ್ಯಾ ವೈನಾ ಎಕ್ಲ್ಯಾಚ್ಯಾ ಮನಾಚೆ ಖರೆ ಮಹತ್ವ್ ಸೊಡುನ್, ತೆಚ್ಯಾ ಭಾಯ್ಲ್ಯಾ ದರ್ಬಾರಾಚೆ ಮೊಟೆಪಾನ್ ಚಿಂತ್ತಲ್ಯಾಕ್ನಿ ಪಾಜೆ ಹೊಲ್ಲೊ ಜಬಾಬ್ ತುಮ್ಚೆನ್ ದಿವ್ಕ್ ಹೊತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 5:12
13 ತಿಳಿವುಗಳ ಹೋಲಿಕೆ  

ನಾವೀಗ ಆತ್ಮಸ್ತುತಿಯನ್ನು ಮಾಡಲು ಆರಂಭಿಸಿದಂತೆ ತೋರುತ್ತದೆಯೇ? ಅಥವಾ ನಿಮಗೆ ತೋರಿಸಲು ಯೋಗ್ಯತಾಪತ್ರ ಇತರರಿಗೆ ಬೇಕಾಗಿರುವಂತೆ ನಮಗೂ ಬೇಕಾಗಿದೆಯೇ? ಇಲ್ಲವೆ, ಯೋಗ್ಯತಾಪತ್ರವನ್ನು ನಿಮ್ಮಿಂದ ಪಡೆಯುವ ಅವಶ್ಯಕತೆ ನಮಗೂ ಇದೆಯೇ?


ಅಂತೆಯೇ, ತನ್ನನ್ನು ತಾನೇ ಹೊಗಳಿಕೊಳ್ಳುವವನು ಅಲ್ಲ, ಪ್ರಭು ಯಾರನ್ನು ಹೊಗಳುತ್ತಾರೋ, ಅವನೇ ಧನ್ಯನು.


ಹೀಗೆ ಹೊಗಳಿಕೊಳ್ಳುವ ನಾನು ಹುಚ್ಚನೇ ಸರಿ. ಆದರೆ ಇದಕ್ಕೆ ಒತ್ತಾಯಪಡಿಸಿದವರು ನೀವೇ. ನೀವೇ ನನ್ನನ್ನು ಹೊಗಳಬೇಕಾಗಿತ್ತು. ಏಕೆಂದರೆ, ನಾನು ಶೂನ್ಯಸಮಾನನಾದರೂ ಆ “ಮಹಾಪ್ರೇಷಿತರು” ಎಂದು ಹೇಳಿಕೊಳ್ಳುವವರಿಗಿಂತ ಕೀಳಾದವನಲ್ಲ.


ಕೆಲವರು ತಮ್ಮನ್ನು ತಾವೇ ಹೊಗಳಿಕೊಳ್ಳುತ್ತಾರೆ. ಅವರಂತೆ ಕೊಚ್ಚಿಕೊಳ್ಳುವುದಕ್ಕೂ ಅವರೊಡನೆ ಹೋಲಿಸಿಕೊಳ್ಳುವುದಕ್ಕೂ ನಾವು ಯತ್ನಿಸುವುದಿಲ್ಲ. ಅವರಿಗೆ ತಾವು ಹಾಕಿಕೊಂಡದ್ದೇ ಅಳತೆಗೋಲು. ತಮಗೆ ತಾವೇ ತಾಳೆಹಾಕಿಕೊಳ್ಳುವಂಥ ಅವಿವೇಕಿಗಳು.


ಪ್ರಭು ನಮಗೆ ಅಧಿಕಾರವನ್ನು ಕೊಟ್ಟಿರುವುದು ನಿಮ್ಮನ್ನು ಕೆಡವಿ ಹಾಳುಮಾಡುವುದಕ್ಕಲ್ಲ, ಕಟ್ಟಿ ಎಬ್ಬಿಸುವುದಕ್ಕಾಗಿ. ಈ ಅಧಿಕಾರವನ್ನು ಕುರಿತು ಒಂದು ವೇಳೆ, ನಾವು ಕೊಂಚ ಹೆಚ್ಚಾಗಿ ಹೊಗಳಿಕೊಂಡಿದ್ದರೂ ಅದಕ್ಕಾಗಿ ಸಂಕೋಚಪಡುವುದಿಲ್ಲ.


ಬದಲಿಗೆ, ಎಲ್ಲ ವಿಷಯಗಳಲ್ಲೂ ದೇವರ ದಾಸರೆಂದು ತೋರಿಸಿಕೊಳ್ಳುತ್ತೇವೆ. ಕಷ್ಟಸಂಕಟಗಳಲ್ಲೂ ದುಃಖದುರಿತಗಳಲ್ಲೂ ತಾಳ್ಮೆಯಿಂದ ವರ್ತಿಸಿದ್ದೇವೆ.


ನಿನ್ನ ಬಾಯಿ ಅಲ್ಲ, ಬೇರೆಯವರು ಹೊಗಳಲಿ ನಿನ್ನ; ಆತ್ಮಸ್ತುತಿ ಸಲ್ಲ, ಅನ್ಯರು ಸ್ತುತಿಸಲಿ ನಿನ್ನ.


ನೀವು ಹೊರಗಿನ ತೋರಿಕೆಗಳನ್ನು ಗಮನಿಸುವಂತವರು. ಯಾರಾದರೂ ತಾನು ಕ್ರಿಸ್ತಯೇಸುವಿಗೆ ಸೇರಿದವನು ಎಂದು ದೃಢವಾಗಿ ನಂಬುವುದಾದರೆ, ಅವನು ಮತ್ತೆ ತನ್ನನ್ನೇ ಪರೀಕ್ಷಿಸಿ ನೋಡಲಿ. ಏಕೆಂದರೆ, ಅವನಂತೆಯೇ ನಾವೂ ಕ್ರಿಸ್ತಯೇಸುವಿಗೆ ಸೇರಿದವರು.


ನಿಮ್ಮಲ್ಲಿಗೆ ನಾನು ಮರಳಿಬಂದಾಗ ಕ್ರಿಸ್ತಯೇಸುವಿನಲ್ಲಿ ನೀವು ಹಿರಿಹಿಗ್ಗುವುದಕ್ಕೆ ಮಹದವಕಾಶ ದೊರಕುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು