Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 10:3 - ಕನ್ನಡ ಸತ್ಯವೇದವು C.L. Bible (BSI)

3 ನಾವು ಪ್ರಪಂಚದಲ್ಲಿ ಬಾಳುತ್ತಿದ್ದರೂ ನಮ್ಮ ಹೋರಾಟ ಪ್ರಾಪಂಚಿಕ ಉದ್ದೇಶದಿಂದ ಕೂಡಿದ್ದಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ನಾವು ಲೋಕದಲ್ಲಿದ್ದರೂ ಲೋಕಾನುಸಾರವಾಗಿ ಯುದ್ಧಮಾಡುವವರಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ನಾವು ಲೋಕದಲ್ಲಿದ್ದರೂ ಲೋಕಾನುಸಾರವಾಗಿ ಯುದ್ಧಮಾಡುವವರಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ನಾವು ಪ್ರಪಂಚದಲ್ಲಿ ಜೀವಿಸುತ್ತಿದ್ದೇವೆ. ಆದರೆ ಪ್ರಪಂಚದವರು ಹೊಡೆದಾಡುವ ರೀತಿಯಲ್ಲಿ ನಾವು ಹೊಡೆದಾಡುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ನಾವು ಈ ಲೋಕದಲ್ಲಿ ಜೀವಿಸುವವರಾದರೂ, ನಾವು ಲೋಕದವರಂತೆ ಹೋರಾಟ ಮಾಡುವವರಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

3 ಅಮಿ ಬಳ್ ನಸಲ್ಲ್ಯಾ ಸ್ವಬಾವಾತ್ ಜಿವನ್ ಕರ್ತಾಂವ್ ತೆ ಖರೆ ಹಾಯ್, ಸ್ವಬಾವಾಚ್ಯಾ ಅದಾರಾನ್ ಅಮಿ ಮಾರಾಮಾರಿ ಕರಿನಾವ್ .

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 10:3
11 ತಿಳಿವುಗಳ ಹೋಲಿಕೆ  

ನಾವು ಬಳಸುವ ಆಯುಧಗಳು ಮಾನವ ನಿರ್ಮಿತವಾದುವಲ್ಲ, ದೇವರ ಶಕ್ತಿಯಿಂದ ಕೂಡಿದುವು; ಕೋಟೆಕೊತ್ತಲಗಳನ್ನು ಕೆಡವಬಲ್ಲವು. ಅವುಗಳಿಂದ ನಾವು ಎಲ್ಲ ಕುತರ್ಕಗಳನ್ನು ನಿರ್ಮೂಲಮಾಡಬಲ್ಲೆವು.


ಕ್ರಿಸ್ತಯೇಸುವಿನೊಂದಿಗೆ ನಾನೂ ಶಿಲುಬೆಗೇರಿಸಲಾದವನು. ಈಗ ಜೀವಿಸುವವನು ನಾನಲ್ಲ. ಕ್ರಿಸ್ತಯೇಸು ನನ್ನಲ್ಲಿ ಜೀವಿಸುತ್ತಾರೆ, ನನ್ನನ್ನು ಪ್ರೀತಿಸಿ ನನಗಾಗಿ ಪ್ರಾಣಾರ್ಪಣೆ ಮಾಡಿದ ದೇವರ ಪುತ್ರನಲ್ಲಿ ನಾನು ಇರಿಸಿರುವ ವಿಶ್ವಾಸದಿಂದಲೇ ನಾನೀಗ ಈ ದೇಹದಲ್ಲಿ ಜೀವಿಸುತ್ತಿದ್ದೇನೆ.


ನೀವು ಶರೀರ ಸ್ವಭಾವಕ್ಕೆ ಅನುಸಾರವಾಗಿ ಬಾಳಿದರೆ ಖಂಡಿತವಾಗಿ ಸಾಯುವಿರಿ. ಪವಿತ್ರಾತ್ಮ ಅವರ ನೆರವಿನಿಂದ ದೈಹಿಕ ದುರಭ್ಯಾಸಗಳನ್ನು ದಮನಮಾಡಿದರೆ ಜೀವಿಸುವಿರಿ.


ಬಾಳಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ನನ್ನ ಓಟವನ್ನು ಮುಗಿಸಿದ್ದೇನೆ. ವಿಶ್ವಾಸವನ್ನು ಕಾಪಾಡಿಕೊಂಡಿದ್ದೇನೆ.


ತಿಮೊಥೇಯನೇ, ನನ್ನ ಕುಮಾರನೇ, ಹಿಂದೆ ನಿನ್ನ ಕುರಿತು ಮಾಡಲಾಗಿರುವ ಪ್ರವಾದನೆಗಳಿಗೆ ಅನುಗುಣವಾಗಿ ನಾನು ನಿನಗೆ ಕೊಡುವ ಆಜ್ಞೆ ಇದು: ಪ್ರವಾದನೆಗಳಿಂದ ಪ್ರೇರಣೆ ಪಡೆದು ದಿಟ್ಟಹೋರಾಟವನ್ನು ಮಾಡು.


ಆದಕಾರಣ ಇಷ್ಟುಮಂದಿ ಸಾಕ್ಷಿಗಳು ದೊಡ್ಡ ಮೇಘದಂತೆ ನಮ್ಮ ಸುತ್ತಲೂ ಆವರಿಸಿರುವಾಗ, ನಮಗೆ ಅಡ್ಡಿಯಾಗಬಲ್ಲ ಹೊರೆಯನ್ನೂ ಅಂಟಿಕೊಳ್ಳುವ ಪಾಪವನ್ನೂ ತೆಗೆದುಹಾಕಿ, ನಮಗಾಗಿ ನೇಮಿಸಿರುವ ಓಟದ ಸ್ಪರ್ಧೆಯಲ್ಲಿ ನಾವು‍ ಸ್ಥಿರಚಿತ್ತದಿಂದ ಭಾಗವಹಿಸೋಣ.


ನಾವು ಶರೀರ ಸ್ವಭಾವಕ್ಕನುಸಾರವಾಗಿ ಬಾಳುತ್ತಿದ್ದಾಗ ಪಾಪಕರವಾದ ದುರಿಚ್ಛೆಗಳು ಧರ್ಮಶಾಸ್ತ್ರದಿಂದಲೇ ಪ್ರಚೋದಿತವಾಗಿ ನಮ್ಮ ಇಂದ್ರಿಯಗಳಲ್ಲಿ ಕಾರ್ಯನಿರತವಾಗಿದ್ದವು. ಪರಿಣಾಮವಾಗಿ, ನಾವು ಮೃತ್ಯುವಿಗೆ ಫಲವನ್ನು ಈಯುತ್ತಿದ್ದೆವು.


ಶರೀರ ಸ್ವಭಾವಕ್ಕೆ ಅನುಸಾರವಾಗಿ ನಡೆಯದೆ ಪವಿತ್ರಾತ್ಮ ಅವರ ಚಿತ್ತಕ್ಕನುಸಾರವಾಗಿ ನಡೆಯುವ ನಮ್ಮಲ್ಲಿ ಧರ್ಮಶಾಸ್ತ್ರದ ನೀತಿನಿಯಮಗಳು ನೆರವೇರುವಂತೆ ದೇವರು ಹೀಗೆ ಮಾಡಿದರು.


ಹೀಗೆ ಆಲೋಚಿಸುತ್ತಿದ್ದಾಗ ನಾನು ಚಂಚಲಚಿತ್ತನಾಗಿದ್ದೆನೋ? ಕೇವಲ ಪ್ರಾಪಂಚಿಕನಂತೆ ಈ ಕ್ಷಣ ಹೌದು, ಮರುಕ್ಷಣ ಇಲ್ಲ ಎಂದು ಹೇಳುವವನಂತಿದ್ದೆನೋ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು