Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಕೊರಿಂಥದವರಿಗೆ 1:15 - ಕನ್ನಡ ಸತ್ಯವೇದವು C.L. Bible (BSI)

15 ಈ ನಂಬಿಕೆಯಿಂದಲೇ ನಿಮಗೆ ಇಮ್ಮಡಿ ಸಂತೋಷ ಲಭಿಸಬೇಕೆಂದು ನಾನು ನಿಮ್ಮ ಬಳಿಗೆ ಈ ಮುಂಚಿತವಾಗಿಯೇ ಬರಬೇಕೆಂದಿದ್ದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ನಾನು ಇಂಥ ಭರವಸವುಳ್ಳವನಾಗಿದ್ದರಿಂದ ನೀವು ಎರಡನೆಯ ಸಾರಿ ಕೃಪಾರ್ಶೀವಾದವನ್ನು ಪಡೆದುಕೊಳ್ಳುವಂತೆ ನಿಮ್ಮ ಬಳಿಗೆ ಮೊದಲೇ ಬರಬೇಕೆಂದಿದ್ದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ನಾನು ಇಂಥ ಭರವಸವುಳ್ಳವನಾಗಿದ್ದು ನಿಮಗೆ ಎರಡು ಸಾರಿ ನಮ್ಮ ಮೂಲಕ ಕೃಪಾವರ ಉಂಟಾಗಬೇಕೆಂದು ಯೋಚಿಸಿದ್ದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ನಾನು ಈ ಎಲ್ಲಾ ವಿಷಯಗಳಲ್ಲಿ ಬಹು ಭರವಸೆ ಉಳ್ಳವನಾಗಿದ್ದೆನು. ಆದ್ದರಿಂದ ನಿಮ್ಮನ್ನು ಮೊದಲು ಸಂದರ್ಶಿಸಲು ನಾನು ಯೋಜನೆಗಳನ್ನು ಮಾಡಿದೆನು. ಆಗ ನಿಮಗೆ ಎರಡು ಸಲ ಆಶೀರ್ವಾದವಾಗಬಹುದಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಈ ಭರವಸೆಯಿಂದ, ನಾನು ನಿಮ್ಮನ್ನು ಮೊದಲು ಸಂದರ್ಶಿಸಿ, ನಿಮಗೆ ಎರಡರಷ್ಟು ಉಪಯುಕ್ತತೆಯನ್ನು ಹೊಂದುವಂತೆ ಯೋಚನೆ ಮಾಡಿದ್ದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

15 ಹ್ಯಾ ಸಗ್ಳ್ಯಾ ವಿಶಯಾಂಚಿ ಖಾತ್ರಿ ಮಾಕಾ ಹಾಯ್ ಮನುನುಚ್, ಮಿಯಾ ಅದ್ದಿ ತುಮ್ಕಾ ಭೆಟುಚೆ ಮನುನ್ ಚಿಂತಲ್ಲೊ. ಅಶೆ ತುಮ್ಕಾ ದೊನ್ ಮಾಪಾನ್ ಖುಶಿ ದಿವ್ಚೆ ಮನುನ್ ಮಿಯಾ ಚಿಂತಲ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಕೊರಿಂಥದವರಿಗೆ 1:15
9 ತಿಳಿವುಗಳ ಹೋಲಿಕೆ  

ಪ್ರಭುವಿನ ಚಿತ್ತವಾದರೆ ನಾನು ಬೇಗನೆ ಬರುತ್ತೇನೆ. ಬಂದು, ಆ ಅಹಂಕಾರಿಗಳು ಕೇವಲ ಮಾತಿನ ಮಲ್ಲರೋ ಅಥವಾ ಶಕ್ತಿವಂತರೋ ಎಂದು ಕಂಡುಹಿಡಿಯುತ್ತೇನೆ.


ನಾನು ನಿಮ್ಮನ್ನು ಕಂಡು, ನಿಮ್ಮೊಡನೆ ಅಧ್ಯಾತ್ಮಿಕ ವರಗಳನ್ನು ಹಂಚಿಕೊಂಡು, ನಿಮ್ಮನ್ನು ದೃಢಪಡಿಸಲು ಅತ್ಯಾಸಕ್ತಿಯಿಂದಿದ್ದೇನೆ.


ಹಾಗೆ ಬರುವಾಗ ನಿಮಗೆ ಕ್ರಿಸ್ತಯೇಸುವಿನ ಅಮೂಲ್ಯ ಆಶೀರ್ವಾದವನ್ನು ಹೇರಳವಾಗಿ ತರುತ್ತೇನೆಂಬ ಭರವಸೆ ನನಗಿದೆ.


ದೇವರೊಡನೆ ದುಡಿಯುತ್ತಿರುವ ನಾವು ನಿಮ್ಮಲ್ಲಿ ವಿಜ್ಞಾಪಿಸುವುದೇನೆಂದರೆ: ದೇವರಿಂದ ನೀವು ಪಡೆದ ವರಪ್ರಸಾದಗಳನ್ನು ವ್ಯರ್ಥಮಾಡಬೇಡಿ.


ನೀವು ಹಸಿವು ನೀಗಿಸಿಕೊಳ್ಳುವುದಕ್ಕಾಗಿ ಸಭೆಗೆ ಬರುವುದಾದರೆ ಮನೆಯಲ್ಲೇ ಊಟಮಾಡಿ. ಆಗ ಸಭೆಸೇರಿ ನೀವು ನ್ಯಾಯವಿಚಾರಣೆಗೆ ಗುರಿಯಾಗುವುದಿಲ್ಲ. ಇನ್ನುಳಿದ ವಿಷಯಗಳನ್ನು ನಾನು ಬಂದು ಇತ್ಯರ್ಥ ಮಾಡುತ್ತೇನೆ.


ಆಕೆಯ ಪತಿ ಜೋಸೆಫನು ನೀತಿವಂತನು. ಮರಿಯಳನ್ನು ಅವಮಾನಕ್ಕೆ ಗುರಿಮಾಡುವ ಉದ್ದೇಶ ಅವನದಲ್ಲವಾದ್ದರಿಂದ ಯಾರಿಗೂ ತಿಳಿಯದ ಹಾಗೆ ನಿಶ್ಚಿತಾರ್ಥವನ್ನು ಮುರಿದುಬಿಡಬೇಕೆಂದಿದ್ದನು.


ಪ್ರಯಾಣದ ನಡುವೆ ನಿಮ್ಮನ್ನು ನೋಡಿ ಹೋಗಲು ನನಗೆ ಇಷ್ಟವಿಲ್ಲ. ಪ್ರಭುವಿನ ಚಿತ್ತವಾದರೆ, ಕೊಂಚಕಾಲವಾದರೂ ನಿಮ್ಮೊಡನೆ ಕಾಲಕಳೆಯಬೇಕೆಂದಿದ್ದೇನೆ.


ಇಗೋ ಮೂರನೆಯ ಬಾರಿಗೆ ನಾನು ನಿಮ್ಮ ಬಳಿಗೆ ಬರಲು ಸಿದ್ಧನಿದ್ದೇನೆ. ಈ ಸಾರಿಯೂ ನಾನು ನಿಮಗೆ ಹೊರೆಯಾಗಿರಲಾರೆ. ನನಗೆ ಬೇಕಾದವರು ನೀವೇ ಹೊರತು ನಿಮ್ಮ ಹಣಕಾಸು ಅಲ್ಲ. ಮಕ್ಕಳು ಹೆತ್ತವರಿಗಾಗಿ ಅಲ್ಲ, ಹೆತ್ತವರು ಮಕ್ಕಳಿಗಾಗಿ ಆಸ್ತಿಪಾಸ್ತಿಯನ್ನು ಕೂಡಿಡುವುದು ನ್ಯಾಯ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು