2 ಅರಸುಗಳು 8:29 - ಕನ್ನಡ ಸತ್ಯವೇದವು C.L. Bible (BSI)29 ಸಿರಿಯಾದವರು ಯೋರಾಮನನ್ನು ಗಾಯಪಡಿಸಿದರು. ಯುದ್ಧದಲ್ಲಾದ ಗಾಯಗಳನ್ನು ಮಾಗಿಸಿಕೊಳ್ಳುವುದಕ್ಕಾಗಿ ಅವನು ಜೆಸ್ರೀಲಿಗೆ ಬಂದನು. ಅವನು ಅಸ್ವಸ್ಥನಾಗಿದ್ದುದರಿಂದ ಯೆಹೂದ್ಯರ ಅರಸನಾದ ಯೆಹೋರಾಮನ ಮಗ ಅಹಜ್ಯನು ಅವನನ್ನು ನೋಡುವುದಕ್ಕಾಗಿ ಅಲ್ಲಿಗೆ ಹೋದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201929 ಅರಾಮ್ಯರು ಯೋರಾಮನನ್ನು ಯುದ್ಧದಲ್ಲಿ ಗಾಯಪಡಿಸಲು ಅವನಿಗೆ ರಾಮದಲ್ಲಿ ಆದ ಗಾಯಗಳನ್ನು ಗುಣಪಡಿಸಿಕೊಳ್ಳುವುದಕ್ಕಾಗಿ ಇಜ್ರೇಲಿಗೆ ಬಂದನು. ಹಜಾಯೇಲನು ಅಸ್ವಸ್ಥನಾಗಿದ್ದುದರಿಂದ ಯೆಹೂದ್ಯರ ಅರಸನಾದ ಯೆಹೋರಾಮನ ಮಗ ಅಹಜ್ಯನು ಅಹಾಬನ ಮಗನಾದ ಯೋರಾಮನನ್ನು ನೋಡುವುದಕ್ಕಾಗಿ ಅಲ್ಲಿಗೆ ಹೋದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)29 ಅರಾಮ್ಯರು ಯೋರಾಮನನ್ನು ಗಾಯಪಡಿಸಲು ಅವನು ಯುದ್ಧದಲ್ಲಾದ ಗಾಯಗಳನ್ನು ಮಾಯಿಸಿಕೊಳ್ಳುವದಕ್ಕಾಗಿ ಇಜ್ರೇಲಿಗೆ ಬಂದನು. ಅವನು ಅಸ್ವಸ್ಥನಾಗಿದ್ದದರಿಂದ ಯೆಹೂದ್ಯರ ಅರಸನಾದ ಯೆಹೋರಾಮನ ಮಗ ಅಹಜ್ಯನು ಅವನನ್ನು ನೋಡುವದಕ್ಕೋಸ್ಕರ ಅಲ್ಲಿಗೆ ಹೋದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್29 ರಾಜ ಯೋರಾಮನು ಹಜಾಯೇಲನ ವಿರುದ್ಧವಾಗಿ ಹೋರಾಡಿದಾಗ ರಾಮಾದಲ್ಲಿ ಅರಾಮ್ಯದಿಂದ ತನಗಾದ ಗಾಯಗಳನ್ನು ಗುಣಪಡಿಸಿಕೊಳ್ಳಲು ಇಸ್ರೇಲಿನ ರಾಜನು ಇಜ್ರೇಲ್ ಎಂಬ ಪಟ್ಟಣಕ್ಕೆ ಹಿಂತಿರುಗಿದನು. ಯೆಹೂದದ ರಾಜನೂ ಯೆಹೋರಾಮನ ಮಗನೂ ಆದ ಅಹಜ್ಯನು, ಅಹಾಬನ ಮಗನಾದ ಯೋರಾಮನನ್ನು ನೋಡಲು ಇಜ್ರೇಲಿಗೆ ಹೋದನು. ಯಾಕೆಂದರೆ ಅವನಿಗೆ ಕಾಯಿಲೆಯಾಗಿತ್ತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ29 ಆದ್ದರಿಂದ ಅರಸನಾದ ಯೋರಾಮನು ಅರಾಮ್ಯ ದೇಶದ ಅರಸನಾದ ಹಜಾಯೇಲನ ಮೇಲೆ ಯುದ್ಧಮಾಡಿದಾಗ, ರಾಮೋತಿನಲ್ಲಿ ಅರಾಮ್ಯರು ತನ್ನನ್ನು ಹೊಡೆದ ಗಾಯಗಳನ್ನು ಗುಣಪಡಿಸಿಕೊಳ್ಳುವುದಕ್ಕೆ ಇಜ್ರೆಯೇಲ್ ಪಟ್ಟಣಕ್ಕೆ ತಿರುಗಿಹೋದನು. ಆಗ ಅಹಾಬನ ಮಗ ಯೋರಾಮನು ಇಜ್ರೆಯೇಲಿನಲ್ಲಿ ಅಸ್ವಸ್ಥನಾಗಿದ್ದುದರಿಂದ ಯೆಹೂದದ ಅರಸನಾಗಿರುವ ಯೆಹೋರಾಮನ ಮಗ ಅಹಜ್ಯನು ಅವನನ್ನು ನೋಡಲು ಹೋದನು. ಅಧ್ಯಾಯವನ್ನು ನೋಡಿ |