Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 8:1 - ಕನ್ನಡ ಸತ್ಯವೇದವು C.L. Bible (BSI)

1 ಎಲೀಷನು ತಾನು ಬದುಕಿಸಿದ ಹುಡುಗನ ತಾಯಿಗೆ, “ಸರ್ವೇಶ್ವರಸ್ವಾಮಿ ಈ ನಾಡಿಗೆ ಏಳು ವರ್ಷಗಳ ಬರಗಾಲವನ್ನು ಕಳುಹಿಸಲಿದ್ದಾರೆ. ಆದುದರಿಂದ ನೀನು ನಿನ್ನ ಮನೆಯವರೊಡನೆ ಯಾವುದಾದರೊಂದು ಪರದೇಶಕ್ಕೆ ಹೋಗಿ ಅಲ್ಲಿ ವಾಸಿಸು,” ಎಂದು ಭವಿಷ್ಯ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಎಲೀಷನು ತಾನು ಬದುಕಿಸಿದ ಹುಡುಗನ ತಾಯಿಗೆ, “ಯೆಹೋವನು ಈ ದೇಶಕ್ಕೆ ಏಳು ವರ್ಷಗಳ ಕಾಲ ಕ್ಷಾಮವನ್ನು ಬರಮಾಡುವುದಕ್ಕಿದ್ದಾನೆ. ಆದುದರಿಂದ ನೀನು ನಿನ್ನ ಮನೆಯವರೊಡನೆ ಯಾವುದಾದರೊಂದು ಪರದೇಶಕ್ಕೆ ಹೋಗಿ ಅಲ್ಲಿ ವಾಸಿಸು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಎಲೀಷನು ತಾನು ಬದುಕಿಸಿದ ಹುಡುಗನ ತಾಯಿಗೆ - ಯೆಹೋವನು ಈ ದೇಶಕ್ಕೆ ಏಳು ವರುಷಗಳ ಬರವನ್ನು ಕಳುಹಿಸುವದಕ್ಕಿರುತ್ತಾನೆ. ಆದದರಿಂದ ನೀನು ನಿನ್ನ ಮನೆಯವರೊಡನೆ ಯಾವದಾದರೊಂದು ಪರದೇಶಕ್ಕೆ ಹೋಗಿ ಅಲ್ಲಿ ವಾಸಿಸು ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಎಲೀಷನು ತಾನು ಮರಳಿ ಜೀವಿಸುವಂತೆ ಮಾಡಿದ ಬಾಲಕನ ತಾಯಿಯೊಂದಿಗೆ ಮಾತನಾಡಿದನು. ಎಲೀಷನು, “ನೀನು ಮತ್ತು ನಿನ್ನ ಕುಟುಂಬವು ಬೇರೆ ದೇಶಕ್ಕೆ ಹೋಗಬೇಕು. ಏಕೆಂದರೆ ಈ ದೇಶದಲ್ಲಿ ಬರಗಾಲವು ಏಳು ವರ್ಷಗಳವರೆಗೆ ಇರಬೇಕೆಂದು ಯೆಹೋವನು ತೀರ್ಮಾನಿಸಿದ್ದಾನೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಎಲೀಷನು ತಾನು ಬದುಕಿಸಿದ ಹುಡುಗನ ತಾಯಿಗೆ, “ನೀನು, ನಿನ್ನ ಮನೆಯವರು ಎದ್ದು ಎಲ್ಲಿ ಇಳಿದುಕೊಳ್ಳುವ ಸ್ಥಳ ಉಂಟೋ ಅಲ್ಲಿ ಹೋಗಿ ವಾಸಿಸಿರಿ. ಏಕೆಂದರೆ ಯೆಹೋವ ದೇವರು ಬರವನ್ನು ಕಳುಹಿಸಲಿದ್ದಾರೆ. ಅದು ದೇಶದ ಮೇಲೆ ಏಳು ವರ್ಷದವರೆಗೂ ಬರುವುದು,” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 8:1
31 ತಿಳಿವುಗಳ ಹೋಲಿಕೆ  

ಭೂಮಿ, ಬೆಟ್ಟ, ಧಾನ್ಯ, ದ್ರಾಕ್ಷಾರಸ, ತೈಲಗಿಡಗಳ ತೋಟ, ಹೊಲಗದ್ದೆಗಳ ಉತ್ಪನ್ನ ಇವುಗಳ ಮೇಲೂ ಹಾಗೂ ಜನ, ದನಕರುಗಳು ಮತ್ತು ನಿಮ್ಮ ಕೈಕಸುಬುಗಳ ಮೇಲೂ ಅನಾವೃಷ್ಟಿಯನ್ನು ತಂದಿದ್ದೇನೆ.”


ತದನಂತರ ಬರಮಾಡಿದನಾ ನಾಡಿನಲಿ ಕ್ಷಾಮವನು I ಮುರಿದುಬಿಟ್ಟನು ಆಹಾರವೆಂಬಾ ಊರುಗೋಲನು II


ಇಸ್ರಯೇಲ್ ನಾಡಿನಲ್ಲಿ ನ್ಯಾಯಸ್ಥಾಪಕರು ಆಳುತ್ತಿದ್ದಾಗ, ಒಮ್ಮೆ ಕಠಿಣವಾದ ಬರಗಾಲವು ತಲೆದೋರಿತು. ಈ ಕಾರಣ ಜುದೇಯ ಪ್ರಾಂತ್ಯದ ಬೆತ್ಲೆಹೇಮ್ ಎಂಬ ಊರಿನವನೊಬ್ಬನು ತನ್ನ ಪತ್ನಿ ಮತ್ತು ಪುತ್ರರಿಬ್ಬರನ್ನು ಕರೆದುಕೊಂಡು ಮೋವಾಬ್ ಎಂಬ ನಾಡಿಗೆ ವಲಸೆ ಹೋದನು.


ಹುಡುಗನು ದೊಡ್ಡವನಾದ ಮೇಲೆ, ಒಂದು ದಿನ ಹೊಲದಲ್ಲಿ ಬೆಳೆ ಕೊಯ್ಯುವವರ ಸಂಗಡ ಇದ್ದ ತನ್ನ ತಂದೆಯ ಬಳಿಗೆ ಹೋದನು.


ಕಾನಾನ್ ನಾಡಿನಲ್ಲಿ ಕ್ಷಾಮ ತಲೆದೋರಿತು. ಅದು ಘೋರವಾಗಿದ್ದುದರಿಂದ ಅಬ್ರಾಮನು ಕೆಲವು ಕಾಲ ಈಜಿಪ್ಟಿನಲ್ಲಿರಲು ಅಲ್ಲಿಗೆ ಇಳಿದುಹೋದನು.


ಹಿಂದೆ ನಡೆದ ಒಂದು ಸಂಗತಿಯನ್ನು ಕೇಳಿ: ಎಲೀಯನ ಕಾಲದಲ್ಲಿ ಮೂರು ವರ್ಷ ಆರು ತಿಂಗಳು ಮಳೆ ಬಾರದೆ ದೇಶದಲ್ಲೆಲ್ಲಾ ದೊಡ್ಡ ಕ್ಷಾಮ ಬಂದೊದಗಿತ್ತು. ಆಗ ಇಸ್ರಯೇಲ್ ನಾಡಿನಲ್ಲಿ ಎಷ್ಟೋ ಮಂದಿ ವಿಧವೆಯರಿದ್ದರು.


ಎಲೀಯನು ಅಹಾಬನನ್ನು ನೋಡುವುದಕ್ಕೆ ಹೊರಟನು. ಆಗ ಸಮಾರಿಯದಲ್ಲಿ ಕ್ಷಾಮ ಬಹಳ ಭೀಕರವಾಗಿತ್ತು.


ಗಿಲ್ಯಾದಿನ ಪ್ರವಾಸಿಗಳಲ್ಲಿ ತಿಷ್ಬೀಯನಾದ ಎಲೀಯ ಎಂಬವನು ಅಹಾಬನಿಗೆ, “ನಾನು ಸನ್ನಿಧಿಸೇವೆ ಮಾಡುತ್ತಿರುವ ಇಸ್ರಯೇಲ್ ದೇವರಾದ ಸರ್ವೇಶ್ವರನಾಣೆ, ನಾನು ಸೂಚಿಸಿದ ಹೊರತು, ಇಂದಿನಿಂದ ಕೆಲವು ವರ್ಷಗಳವರೆಗೆ ಮಳೆಯಾಗಲಿ, ಮಂಜಾಗಲಿ ಬೀಳುವುದಿಲ್ಲ,” ಎಂದನು.


ನಿಮ್ಮ ನಿಮ್ಮ ಜೀವನಾಧಾರವನ್ನು ನಾನು ತೆಗೆದುಬಿಟ್ಟಾಗ ಹತ್ತು ಮಂದಿ ಹೆಂಗಸರು ಒಂದೇ ಒಲೆಯಲ್ಲಿ ರೊಟ್ಟಿ ಸುಟ್ಟು, ಅದನ್ನು ಪಡಿ ಪ್ರಕಾರ ಹಂಚಿಕೊಡುವರು. ನೀವು ಅದನ್ನು ತಿಂದರೂ ತೃಪ್ತಿಯಾಗದು.


ಅವರಲ್ಲಿ ಅಗಬ ಎಂಬವನು ಒಬ್ಬನು. ಇವನು ಪವಿತ್ರಾತ್ಮ ಪ್ರೇರಿತನಾಗಿ ಜಗತ್ತಿನಲ್ಲೆಲ್ಲಾ ಭೀಕರ ಕ್ಷಾಮ ಬರಲಿದೆಯೆಂದು ಮುಂತಿಳಿಸಿದನು. (ಇದು ಬಂದೊದಗಿದುದು ಕ್ಲಾಡಿಯಸ್ ಚಕ್ರವರ್ತಿಯ ಕಾಲದಲ್ಲಿ)


ಏಕೆಂದರೆ, ದಂಡನೆಯ ಕಾಲ ಅದು. ಅದನ್ನು ಕುರಿತು ಪವಿತ್ರಗ್ರಂಥದಲ್ಲಿ ಬರೆದಿರುವುದೆಲ್ಲಾ ಆಗ ನೆರವೇರಬೇಕು.


ಭೀಕರ ಭೂಕಂಪಗಳಾಗುವುವು; ಕ್ಷಾಮಡಾಮರಗಳು ತಲೆದೋರುವುವು, ಭಯಂಕರ ಘಟನೆಗಳೂ ಬಾಹ್ಯಾಕಾಶದಲ್ಲಿ ಅಪೂರ್ವ ಸೂಚನೆಗಳೂ ಕಾಣಿಸಿಕೊಳ್ಳುವುವು.


ಇಗೋ, ನನ್ನ ಹೆಸರುಗೊಂಡಿರುವ ನಗರದಲ್ಲಿ ಬಾಧಿಸಲು ಪ್ರಾರಂಭಿಸುತ್ತೇನೆ. ನೀವು ಆ ದಂಡನೆಗೆ ತಪ್ಪಿಸಿಕೊಳ್ಳುವಿರೊ? ಆಗುವುದೇ ಇಲ್ಲ. ಏಕೆಂದರೆ ಭೂನಿವಾಸಿಗಳೆಲ್ಲರಿಗೆ ವಿರುದ್ಧವಾಗಿ ಖಡ್ಗವನ್ನು ಬರಮಾಡುವೆನು. ಇದು ಸರ್ವಶಕ್ತ ಸರ್ವೇಶ್ವರನ ನುಡಿ.’


ಒಣನೆಲವಾಗಿಸಿದನಾತ ಬುಗ್ಗೆಗಳನು I ಉಪ್ಪುನೆಲವಾಗಿಸಿದ ಫಲಭೂಮಿಯನು II


ಆಗ ಗಾದನು ದಾವೀದನ ಬಳಿಗೆ ಬಂದು, “ನಿಮ್ಮ ನಾಡಿನಲ್ಲಿ ಏಳು ವರ್ಷಗಳ ಬರಗಾಲ ಉಂಟಾಗಬೇಕೋ, ಇಲ್ಲವೇ ನಿನ್ನ ಶತ್ರುಗಳು ನಿನ್ನನ್ನು ಸೋಲಿಸಿ ಮೂರು ತಿಂಗಳ ತನಕ ನಿನ್ನನ್ನು ಓಡಿಸಿಬಿಡಬೇಕೋ, ಇಲ್ಲವೆ ನಿನ್ನ ನಾಡಿನಲ್ಲಿ ಮೂರು ದಿನಗಳವರೆಗೂ ಘೋರವ್ಯಾಧಿ ಬರಬೇಕೋ? ನನ್ನನ್ನು ಕಳುಹಿಸಿದವರಿಗೆ ಯಾವ ಉತ್ತರವನ್ನು ತೆಗೆದುಕೊಂಡು ಹೋಗಬೇಕು, ಆಲೋಚಿಸಿ ಹೇಳು,” ಎಂದನು.


ದಾವೀದನ ಕಾಲದಲ್ಲಿ ಮೂರು ವರ್ಷಗಳವರೆಗೂ ಬಿಡದೆ ಬರವಿತ್ತು. ದಾವೀದನು ಸರ್ವೇಶ್ವರಸ್ವಾಮಿಯನ್ನು ವಿಚಾರಿಸಿದಾಗ, “ಸೌಲನು ಗಿಬ್ಯೋನ್ಯರನ್ನು ಕೊಲ್ಲಿಸಿದ್ದರಿಂದ ಅವನ ಮೇಲೂ ಅವನ ಮನೆಯವರ ಮೇಲೂ ರಕ್ತಾಪರಾಧ ಇರುತ್ತದೆ,” ಎಂಬ ಉತ್ತರ ದೊರಕಿತು.


ಕಾನಾನ್ ನಾಡಿನಲ್ಲಿ ಬರವು ಘೋರವಾದ್ದರಿಂದ ನಿಮ್ಮ ಸೇವಕರ ದನಕುರಿಗಳಿಗೆ ಮೇವು ಸಿಕ್ಕಲಿಲ್ಲ. ಆದ್ದರಿಂದ ಈ ದೇಶದಲ್ಲಿ ಸ್ವಲ್ಪಕಾಲ ಇರಬೇಕೆಂದು ಬಂದಿದ್ದೇವೆ. ಸೇವಕರು ಗೋಷೆನ್ ಪ್ರಾಂತ್ಯದಲ್ಲಿ ವಾಸಮಾಡುವಂತೆ ಅಪ್ಪಣೆಯಾಗಬೇಕು,” ಎಂದು ವಿನಂತಿಸಿದರು.


ದೇವರು ಈ ಕಾರ್ಯವನ್ನು ನಿರ್ಧರಿಸಿದ್ದಾರೆ; ಇದು ಬೇಗ ಬರಲಿದೆಯೆಂದು ತಿಳಿದುಕೊಳ್ಳಬೇಕು. ಏಕೆಂದರೆ ನಿಮಗೆ ಇಮ್ಮಡಿ ಕನಸುಬಿದ್ದಿದೆ.


ಜೋಸೆಫನು ಫರೋಹನಿಗೆ, “ತಾವು ಕಂಡ ಎರಡು ಕನಸುಗಳ ವಿಷಯ ಒಂದೇ. ದೇವರು ಮಾಡಬೇಕೆಂದಿರುವುದನ್ನು ಇವುಗಳ ಮೂಲಕ ತಮಗೆ ತಿಳಿಸಿದ್ದಾರೆ.


ಹಿಂದೆ ಅಬ್ರಹಾಮನ ಕಾಲದಲ್ಲಿ ಬಂದಿದ್ದ ಬರಗಾಲವು ಮತ್ತೊಮ್ಮೆ ಕಾನಾನ್ ನಾಡಿಗೆ ಬಂದಿತು. ಇಸಾಕನು ಫಿಲಿಷ್ಟಿಯರ ಅರಸ ಅಬೀಮೆಲೆಕನನ್ನು ಕಾಣಲು ಗೆರಾರಿಗೆ ಹೋದನು.


ಜೋಸೆಫನು ಹೇಳಿದ್ದ ಪ್ರಕಾರವೇ ಕ್ಷಾಮದ ಏಳು ವರ್ಷಗಳು ಪ್ರಾರಂಭವಾದವು. ಬರವು ಸುತ್ತಮುತ್ತಲಿನ ಎಲ್ಲ ದೇಶಗಳಿಗೂ ಹಬ್ಬಿತು. ಈಜಿಪ್ಟಿನಲ್ಲಿ ಮಾತ್ರ ಆಹಾರ ದೊರಕುತ್ತಿತ್ತು.


ಎಲೀಷನು ಪುನಃ ಗಿಲ್ಗಾಲಿಗೆ ಹೋದನು. ಆಗ ನಾಡಿನಲ್ಲಿ ಬರವಿತ್ತು. ಪ್ರವಾದಿಮಂಡಲಿಯವರು ತನ್ನ ಮುಂದೆ ಕೂಡಿಬರಲು ಅವನು ತನ್ನ ಸೇವಕನಿಗೆ, “ದೊಡ್ಡ ಹಂಡೆಯನ್ನು ತೆಗೆದುಕೊಂಡು ಇವರಿಗೆ ಅಡಿಗೆಮಾಡು,” ಎಂದು ಆಜ್ಞಾಪಿಸಿದನು.


ಊರು ಬಾಗಿಲಿನಲ್ಲಿ ಜನರಿಂದ ತುಳಿತಕ್ಕೆ ಸಿಕ್ಕಿ ಅವನು ಸತ್ತದ್ದರಿಂದ ಈ ಮಾತು ನೆರವೇರಿತು.


ಆಕೆ ದೈವಪುರುಷನ ಅಪ್ಪಣೆಯಂತೆ ತನ್ನ ಮನೆಯವರೊಡನೆ ಸ್ವಂತನಾಡನ್ನು ಬಿಟ್ಟುಹೋಗಿ ಫಿಲಿಷ್ಟಿಯರ ದೇಶದಲ್ಲಿ ವಾಸವಾಗಿದ್ದಳು.


ಆಗ ಎಲೀಷನು ಗೇಹಜಿಗೆ, “ಶೂನೇಮ್ಯಳನ್ನು ಕರೆ,” ಎಂದು ಆಜ್ಞಾಪಿಸಲು, ಅವನು ಆಕೆಯನ್ನು ಕರೆದನು. ಆಕೆ ಬಂದಾಗ ಎಲೀಷನು, “ನಿನ್ನ ಮಗನನ್ನುತೆಗೆದುಕೋ,” ಎಂದು ಹೇಳಿದನು.


“ನಿಮ್ಮ ಪಟ್ಟಣಗಳಲ್ಲಿ ಹೊಟ್ಟೆಗೆ ಹಿಟ್ಟಿಲ್ಲದಂತೆ ಮಾಡಿದವನು ನಾನೇ. ನೀವು ಹೋದೆಡೆಗಳಲ್ಲೆಲ್ಲ ನಿಮಗೆ ರೊಟ್ಟಿ ಸಿಗದಂತೆ ಮಾಡಿದವನು ನಾನೇ. ಆದರೂ ನೀವು ನನ್ನ ಬಳಿಗೆ ಹಿಂದಿರುಗಲಿಲ್ಲ.” ಇದು ಸರ್ವೇಶ್ವರಸ್ವಾಮಿಯ ನುಡಿ


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು