2 ಅರಸುಗಳು 7:4 - ಕನ್ನಡ ಸತ್ಯವೇದವು C.L. Bible (BSI)4 ಪಟ್ಟಣದೊಳಗೆ ಕ್ಷಾಮ ಇರುವುದರಿಂದ ಅಲ್ಲಿಗೆ ಹೋದರೂ ಸಾಯಬೇಕು. ಇಲ್ಲಿಯೇ ಕುಳಿತಿದ್ದರೂ ಸಾಯಬೇಕು. ಆದುದರಿಂದ ಹೊರಟುಹೋಗಿ ಸಿರಿಯಾದವರ ಪಾಳೆಯವನ್ನು ಸೇರೋಣ. ಅವರು ನಮ್ಮನ್ನು ಉಳಿಸುವುದಾದರೆ ಉಳಿಸಲಿ, ಕೊಲ್ಲುವುದಾದರೆ ಕೊಲ್ಲಲಿ,” ಎಂದು ಮಾತಾಡಿಕೊಂಡರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ಪಟ್ಟಣದೊಳಗೆ ಬರವಿರುವುದರಿಂದ ಅಲ್ಲಿ ಹೋದರೂ ಸಾಯಬೇಕು, ಇಲ್ಲಿಯೇ ಕುಳಿತಿದ್ದರೂ ಸಾಯಬೇಕು. ಆದುದರಿಂದ ಹೊರಟುಹೋಗಿ ಅರಾಮ್ಯರ ಪಾಳೆಯವನ್ನು ಸೇರೋಣ. ಅವರು ನಮ್ಮನ್ನು ಉಳಿಸುವುದಾದರೆ ಉಳಿಸಲಿ, ಕೊಲ್ಲುವುದಾದರೆ ಕೊಲ್ಲಲಿ” ಎಂದು ಮಾತನಾಡಿಕೊಂಡರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)4 ಪಟ್ಟಣದೊಳಗೆ ಬರವಿರುವದರಿಂದ ಅಲ್ಲಿ ಹೋದರೂ ಸಾಯಬೇಕು. ಇಲ್ಲಿಯೇ ಕೂತಿದ್ದರೂ ಸಾಯಬೇಕು. ಆದದರಿಂದ ಹೊರಟುಹೋಗಿ ಅರಾಮ್ಯರ ಪಾಳೆಯವನ್ನು ಸೇರೋಣ. ಅವರು ನಮ್ಮನ್ನು ಉಳಿಸುವದಾದರೆ ಉಳಿಸಲಿ, ಕೊಲ್ಲುವದಾದರೆ ಕೊಲ್ಲಲಿ ಎಂದು ಮಾತಾಡಿಕೊಂಡು ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್4 ಸಮಾರ್ಯದಲ್ಲಿ ಆಹಾರವು ಇಲ್ಲವೇ ಇಲ್ಲ. ನಾವು ನಗರದ ಒಳಗೆ ಹೋದರೆ, ನಾವು ಅಲ್ಲೇ ಸಾಯುತ್ತೇವೆ. ನಾವು ಇಲ್ಲೇ ಕುಳಿತಿದ್ದರೂ, ಸಾಯುವುದು ನಿಶ್ಚಿತ. ಆದ್ದರಿಂದ ನಾವು ಅರಾಮ್ಯರ ಪಾಳೆಯಕ್ಕೆ ಹೋಗೋಣ. ಅವರು ನಮ್ಮನ್ನು ಬದುಕಿಸಿದರೆ ನಾವು ಬದುಕೋಣ. ಅವರು ನಮ್ಮನ್ನು ಕೊಂದರೆ ಸಾಯೋಣ” ಎಂದು ಮಾತನಾಡಿಕೊಂಡರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ನಾವು ಇಲ್ಲಿಯೇ ಇದ್ದರೆ, ಪಟ್ಟಣದಲ್ಲಿ ಬರವಿರುವುದರಿಂದ ಅಲ್ಲಿ ಸಾಯುತ್ತೇವೆ. ಇಲ್ಲಿ ನಾವು ಕುಳಿತಿದ್ದರೂ ಹಾಗೆಯೇ ಸಾಯುತ್ತೇವೆ. ಆದ್ದರಿಂದ ನಾವು ಅರಾಮ್ಯರ ಪಾಳೆಯಕ್ಕೆ ಹೋಗಿ ಅವರಿಗೆ ಶರಣಾಗೋಣ. ಅವರು ನಮ್ಮನ್ನು ಬದುಕಿಸಿದರೆ ಬದುಕುವೆವು, ಅವರು ನಮ್ಮನ್ನು ಕೊಲ್ಲುವುದಾದರೆ ಕೊಲ್ಲಲಿ,” ಎಂದುಕೊಂಡರು. ಅಧ್ಯಾಯವನ್ನು ನೋಡಿ |
ಅರಸ ಸೌಲನಿಗೆ ವಿರುದ್ಧ ಯುದ್ಧಮಾಡಲು ಫಿಲಿಷ್ಟಿಯರೊಂದಿಗೆ ಹೋಗುತ್ತಿದ್ದಾಗ ಮನಸ್ಸೆ ಗೋತ್ರದ ಕೆಲವು ಜನ ಸೈನಿಕರು ಬಂದು ದಾವೀದನ ಪಕ್ಷದಲ್ಲಿ ಸೇರಿಕೊಂಡರು. ದಾವೀದನು ನಿಜವಾಗಿಯೂ ಫಿಲಿಷ್ಟಿಯರಿಗೆ ಸಹಾಯಮಾಡಲಿಲ್ಲ. ತನ್ನ ಮೊದಲಿನ ಯಜಮಾನ ಸೌಲನಿಗೆ ತಮ್ಮನ್ನು ಹಿಡಿದುಕೊಡಬಹುದೆಂಬ ಭಯ ಫಿಲಿಷ್ಟಿಯ ರಾಜರುಗಳಿಗೆ ಇದ್ದುದರಿಂದ ಅವರು ಅವನನ್ನು ಚಿಕ್ಲಗಿಗೆ ಹಿಂದಕ್ಕೆ ಕಳುಹಿಸಿದರು.