Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 6:6 - ಕನ್ನಡ ಸತ್ಯವೇದವು C.L. Bible (BSI)

6 ದೈವಪುರುಷನು, “ಅದು ಎಲ್ಲಿ ಬಿದ್ದಿತು?” ಎಂದು ಕೇಳಿದನು; ಅದು ಬಿದ್ದ ಸ್ಥಳವನ್ನು ಅವನು ತೋರಿಸಿದನು. ಆಗ ದೈವಪುರುಷನು ಆ ಮರದಿಂದ ಒಂದು ತುಂಡು ಕಟ್ಟಿಗೆಯನ್ನು ಕಡಿದು ಅಲ್ಲಿ ಹಾಕಿದನು; ಕೂಡಲೆ ಆ ಕೊಡಲಿ ತೇಲಾಡಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ದೇವರ ಮನುಷ್ಯನು ಅವನಿಗೆ, “ಅದು ಎಲ್ಲಿ ಬಿದ್ದಿತು?” ಎಂದು ಕೇಳಲು, ಅದು ಬಿದ್ದ ಸ್ಥಳವನ್ನು ಅವನು ತೋರಿಸಿದನು. ಆಗ ದೇವರ ಮನುಷ್ಯನು ಮರದಿಂದ ಒಂದು ತುಂಡು ಕಟ್ಟಿಗೆಯನ್ನು ಮುರಿದು ಅಲ್ಲಿ ಹಾಕಿದನು, ಕೂಡಲೆ ಕೊಡಲಿಯು ಮೇಲಕ್ಕೆ ಬಂದು ತೇಲಾಡಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ದೇವರ ಮನುಷ್ಯನು ಅವನನ್ನು - ಅದು ಎಲ್ಲಿ ಬಿದ್ದಿತು ಎಂದು ಕೇಳಲು ಅದು ಬಿದ್ದ ಸ್ಥಳವನ್ನು ಅವನು ತೋರಿಸಿದನು. ಆಗ ದೇವರ ಮನುಷ್ಯನು ಮರದಿಂದ ಒಂದು ತುಂಡು ಕಟ್ಟಿಗೆಯನ್ನು ಕಡಿದು ಅಲ್ಲಿ ಹಾಕಿದನು; ಕೂಡಲೆ ಕೊಡಲಿಯು ತೇಲಾಡಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ದೇವಮನುಷ್ಯನು, “ಅದು ಎಲ್ಲಿ ಬಿದ್ದಿತು?” ಎಂದು ಕೇಳಿದನು. ಆ ಮನುಷ್ಯನು ಕೊಡಲಿಯು ಬಿದ್ದ ಸ್ಥಳವನ್ನು ಎಲೀಷನಿಗೆ ತೋರಿಸಿದನು. ಆಗ ಎಲೀಷನು ಒಂದು ಕಡ್ಡಿಯನ್ನು ಮುರಿದು ಅದನ್ನು ನೀರಿನೊಳಕ್ಕೆ ಎಸೆದನು. ಆ ಕಡ್ಡಿಯು ಕಬ್ಬಿಣದ ಕೊಡಲಿಯನ್ನು ತೇಲುವಂತೆ ಮಾಡಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ದೇವರ ಮನುಷ್ಯನು, “ಅದು ಎಲ್ಲಿ ಬಿತ್ತು?” ಎಂದನು. ಅವನು ಎಲೀಷನಿಗೆ ಸ್ಥಳವನ್ನು ತೋರಿಸಿದ ತರುವಾಯ, ಎಲೀಷನು ಒಂದು ಕಟ್ಟಿಗೆಯನ್ನು ಕಡಿದು ಅಲ್ಲಿ ಹಾಕಿದ್ದರಿಂದ ಆ ಕಬ್ಬಿಣವು ತೇಲಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 6:6
8 ತಿಳಿವುಗಳ ಹೋಲಿಕೆ  

ಅವನು ಬುಗ್ಗೆಗೆ ಹೋಗಿ ಆ ನೀರಿನಲ್ಲಿ ಉಪ್ಪುಹಾಕಿದನು; “’ಇನ್ನು ಮುಂದೆ ಈ ನೀರಿನಿಂದ ಮರಣವಾಗಲಿ ಗರ್ಭಪಾತವಾಗಲಿ ಸಂಭವಿಸದಂತೆ ಇದರಲ್ಲಿದ್ದ ದೋಷವನ್ನೆಲ್ಲಾ ಪರಿಹರಿಸಿದ್ದೇನೆ,’ ಎಂಬುದಾಗಿ ಸರ್ವೇಶ್ವರ ನುಡಿದಿದ್ದಾರೆ,” ಎಂದನು.


ಆಗ ಅವನು, “ಹಿಟ್ಟನ್ನು ತಂದುಕೊಡಿ,” ಎಂದು ಹೇಳಿದನು; ಅವರು ತರಲು ಅದನ್ನು ಆ ಪಾತ್ರೆಯೊಳಗೆ ಹಾಕಿ, “ಈಗ ಇದನ್ನು ಬಡಿಸಬಹುದು,” ಎಂದನು. ಕೂಡಲೆ ಪಾತ್ರೆಯಲ್ಲಿದ್ದ ವಿಷವೆಲ್ಲಾ ಹೋಗಿತ್ತು.


ಮೋಶೆ ಸರ್ವೇಶ್ವರ ಸ್ವಾಮಿಯನ್ನು ಪ್ರಾರ್ಥಿಸಿದನು. ಆಗ ಸರ್ವೇಶ್ವರ ಅವನಿಗೆ ಒಂದು ಗಿಡವನ್ನು ತೋರಿಸಿದರು. ಅದನ್ನು ಆ ನೀರಿನಲ್ಲಿ ಹಾಕಿದಾಗ ನೀರು ಸಿಹಿಯಾಯಿತು.


ಆದುದರಿಂದ ಅವನು, “ಅಯ್ಯೋ! ಗುರುವೇ, ನಾನು ಅದನ್ನು ಸಾಲವಾಗಿ ತಂದಿದ್ದೆ,” ಎಂದು ಸಂತಾಪಿಸಿದನು.


ಎಲೀಷನು, “ಅದನ್ನು ತೆಗೆದುಕೋ,” ಎಂದು ಆಜ್ಞಾಪಿಸಲು ಆ ವ್ಯಕ್ತಿ ಕೈಚಾಚಿ ಅದನ್ನು ತೆಗೆದುಕೊಂಡನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು