Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 6:29 - ಕನ್ನಡ ಸತ್ಯವೇದವು C.L. Bible (BSI)

29 ಮರುದಿನ ನಾನು ಈಕೆಗೆ, ‘ಈ ದಿನ ನಿನ್ನ ಮಗನನ್ನು ತೆಗೆದುಕೊಂಡು ಬಾ; ಅವನನ್ನು ಕೊಂದು ತಿನ್ನೋಣ,’ ಎಂದಾಗ ಈಕೆ ಅವನನ್ನು ಎಲ್ಲಿಯೋ ಅಡಗಿಸಿಬಿಟ್ಟಳು,” ಎಂದು ಹೇಳಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ನಾವಿಬ್ಬರೂ ನನ್ನ ಮಗನನ್ನು ಕೊಂದು ಬೇಯಿಸಿ ತಿಂದು ಬಿಟ್ಟೆವು. ಮರುದಿನ ನಾನು ಆಕೆಗೆ, “ಈ ಹೊತ್ತು ನಿನ್ನ ಮಗನನ್ನು ತೆಗೆದುಕೊಂಡು ಬಾ, ಅವನನ್ನು ಕೊಂದು ತಿನ್ನೋಣ ಅಂದಾಗ ಆಕೆಯು ಅವನನ್ನು ಎಲ್ಲಿಯೋ ಅಡಗಿಸಿಟ್ಟಳು” ಎಂದು ಹೇಳಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ನಾವಿಬ್ಬರೂ ನನ್ನ ಮಗನನ್ನು ಕೊಂದು ಬೇಯಿಸಿ ತಿಂದುಬಿಟ್ಟೆವು. ಮರುದಿವಸ ನಾನು ಈಕೆಗೆ - ಈಹೊತ್ತು ನಿನ್ನ ಮಗನನ್ನು ತೆಗೆದುಕೊಂಡು ಬಾ; ಅವನನ್ನು ಕೊಂದು ತಿನ್ನೋಣ ಅಂದಾಗ ಈಕೆಯು ಅವನನ್ನು ಎಲ್ಲಿಯೋ ಅಡಗಿಸಿಟ್ಟಳು ಎಂದು ಹೇಳಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ನಾವು ನನ್ನ ಮಗನನ್ನು ಬೇಯಿಸಿ, ನಾವು ತಿಂದು ಬಿಟ್ಟೆವು. ಮಾರನೆಯ ದಿನ ನಾನು ಈ ಸ್ತ್ರೀಗೆ, ‘ನಿನ್ನ ಮಗನನ್ನು ನಾವು ಕೊಂದು ತಿನ್ನೋಣ’ ಎಂದು ಹೇಳಿದೆನು. ಆದರೆ ಅವಳು ತನ್ನ ಮಗನನ್ನು ಅಡಗಿಸಿಟ್ಟಿದ್ದಾಳೆ!” ಎಂದು ಹೇಳಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

29 ಹಾಗೆಯೇ ನಾವು ನನ್ನ ಮಗನನ್ನು ಬೇಯಿಸಿ ಅವನನ್ನು ತಿಂದೆವು. ಮಾರನೆಯ ದಿವಸದಲ್ಲಿ ನಾನು ಅವಳಿಗೆ, ‘ನಾವು ನಿನ್ನ ಮಗನನ್ನು ತಿನ್ನುವಂತೆ ಅವನನ್ನು ಕೊಡು,’ ಎಂದೆನು. ಆದರೆ ಅವಳು ತನ್ನ ಮಗನನ್ನು ಬಚ್ಚಿಟ್ಟಿದ್ದಾಳೆ,” ಎಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 6:29
9 ತಿಳಿವುಗಳ ಹೋಲಿಕೆ  

“ಶತ್ರುಗಳು ನಿಮ್ಮ ಪಟ್ಟಣಗಳಿಗೆ ಮುತ್ತಿಗೆ ಹಾಕಿ ನಿಮ್ಮನ್ನು ಎಂಥ ಇಕ್ಕಟ್ಟಿಗೆ ಸಿಕ್ಕಿಸುವರೆಂದರೆ, ನೀವು ನಿಮ್ಮ ಸಂತಾನವನ್ನೇ, ಅಂದರೆ, ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಕೊಟ್ಟಿರುವ ಗಂಡುಹೆಣ್ಣು ಮಕ್ಕಳ ಮಾಂಸವನ್ನೇ ತಿನ್ನುವಿರಿ.


ನೀವು ನಿಮ್ಮ ಗಂಡುಹೆಣ್ಣು ಮಕ್ಕಳ ಮಾಂಸವನ್ನೇ ತಿನ್ನುವಿರಿ.


ನಾನೇ ನಿಮ್ಮನ್ನು ಸಂತೈಸುವೆನು ತಾಯಿಯಂತೆ ಸಾಂತ್ವನ ದೊರಕುವುದು ನಿಮಗೆ ಜೆರುಸಲೇಮಿನಲೆ.


ಹೆತ್ತ ತಾಯಿಗೆ ತನ್ನ ಕಂದನ ಪ್ರೀತಿ ಬತ್ತಿಹೋಗುವುದುಂಟೆ? ಆಕೆ ತನ್ನ ಮೊಲೆಗೂಸನು ಮರೆತುಬಿಡುವುದುಂಟೆ? ಒಂದು ವೇಳೆ ಆಕೆ ಮರೆತರೂ ನಾ ನಿನ್ನನು ಮರೆಯೆ.


ಆಗ, ಜೀವದಿಂದಿದ್ದ ಕೂಸಿನ ನಿಜವಾದ ತಾಯಿಗೆ ಕೂಸಿನ ವಿಷಯದಲ್ಲಿ ಕರುಳುಕರಗಿತು; “ನನ್ನೊಡೆಯಾ, ಬೇಡಿ; ಬದುಕಿರುವ ಕೂಸನ್ನು ಅವಳಿಗೇ ಕೊಟ್ಟುಬಿಡಿ; ಅದನ್ನು ಕೊಲ್ಲಿಸಬೇಡಿ,” ಎಂದು ಬೇಡಿಕೊಂಡಳು; ಎರಡನೆಯವಳು, “ಅದು ನನಗೂ ಬೇಡ, ನಿನಗೂ ಬೇಡ, ಕಡಿಯಲಿ,” ಎಂದು ಕೂಗಿದಳು.


“ಇದನ್ನೆಲ್ಲಾ ನೀವು ಅನುಭವಿಸಿದ ಮೇಲೂ ನನ್ನ ಮಾತಿಗೆ ಕಿವಿಗೊಡದೆ ನನಗೆ ವಿರೋಧವಾಗಿ ನಡೆದರೆ,


ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಕೊಟ್ಟಿರುವ ನಾಡಿನ ಪಟ್ಟಣಗಳಿಗೆಲ್ಲಾ ಅವರು ಮುತ್ತಿಗೆ ಹಾಕುವರು; ನೀವು ನೆಚ್ಚಿಕೊಳ್ಳುವ ಎತ್ತರವಾದ ಕೊತ್ತಲುಗಳುಳ್ಳ ಗೋಡೆಗಳನ್ನು ಕೆಡವಿಬಿಡುವರು.


ಕರುಣಾಮಯಿಗಳಾದ ಹೆಂಗಳೆಯರು ತಮ್ಮ ಕಂದಮ್ಮಗಳನ್ನು ಸ್ವಂತ ಕೈಯಿಂದ ಬೇಯಿಸಿದರು. ನನ್ನ ಜನರ ಪರಿವಿನಾಶದ ಕಾಲದೊಳು ತಮ್ಮ ತಾಯಿಗಳಿಗೆ ತಿಂಡಿಯಾದರು ಆ ಹಸುಳೆಗಳು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು