Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 6:22 - ಕನ್ನಡ ಸತ್ಯವೇದವು C.L. Bible (BSI)

22 ಅವನು, “ಬೇಡ; ನೀನು ಸ್ವಾಧೀನಪಡಿಸಿಕೊಂಡು ಸೆರೆಯಾಗಿ ತಂದವರನ್ನು ಕತ್ತಿಬಿಲ್ಲುಗಳಿಂದ ಸಂಹರಿಸುವೆಯೋ? ಅವರಿಗೆ ಅನ್ನಪಾನಗಳನ್ನು ಕೊಡು; ಉಂಡುಕುಡಿದು ತಮ್ಮ ಯಜಮಾನನ ಬಳಿಗೆ ಹಿಂದಿರುಗಿ ಹೋಗಲಿ,” ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಅದಕ್ಕೆ ಅವನು, “ಇವರನ್ನು ನೀನು ಸಂಹರಿಸಬೇಡ, ಕತ್ತಿಬಿಲ್ಲುಗಳಿಂದ ಸ್ವಾಧೀನಪಡಿಸಿಕೊಂಡು ಸೆರೆಯಾಗಿ ತಂದವರನ್ನು ನೀನು ಸಂಹರಿಸುವೆಯೋ? ಇವರಿಗೆ ಅನ್ನಪಾನಗಳನ್ನು ಕೊಡು, ಉಂಡು ಕುಡಿದು ತಮ್ಮ ಯಜಮಾನನ ಬಳಿಗೆ ಹಿಂದಿರುಗಿ ಹೋಗಲಿ” ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಕತ್ತಿಬಿಲ್ಲುಗಳಿಂದ ಸ್ವಾಧೀನಪಡಿಸಿಕೊಂಡು ಸೆರೆಯಾಗಿ ತಂದವರನ್ನು ನೀನು ಸಂಹರಿಸುವಿಯೋ? ಇವರಿಗೆ ಅನ್ನಪಾನಗಳನ್ನು ಕೊಡು; ಉಂಡು ಕುಡಿದು ತಮ್ಮ ಯಜಮಾನನ ಬಳಿಗೆ ಹಿಂದಿರುಗಿ ಹೋಗಲಿ ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಎಲೀಷನು, “ಬೇಡ, ಅವರನ್ನು ಕೊಲ್ಲಬೇಡ. ನೀನು ಯುದ್ಧದಲ್ಲಿ, ನಿನ್ನ ಖಡ್ಗದಿಂದ, ನಿನ್ನ ಬಿಲ್ಲುಬಾಣಗಳಿಂದ ಸೆರೆಹಿಡಿದ ಜನರನ್ನು ಕೊಲ್ಲಬಾರದು, ಅರಾಮ್ಯರ ಸೇನೆಗೆ ಸ್ವಲ್ಪ ನೀರನ್ನು ಮತ್ತು ರೊಟ್ಟಿಗಳನ್ನು ಕೊಡು. ಅವರು ತಿಂದು, ನೀರು ಕುಡಿಯಲಿ. ನಂತರ ಅವರು ತಮ್ಮ ಮನೆಗೆ, ಅವರ ಒಡೆಯನ ಬಳಿಗೆ ಹೋಗಲಿ” ಎಂದು ಉತ್ತರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಅದಕ್ಕವನು, “ಸಂಹರಿಸಬೇಡ. ನೀನು ನಿನ್ನ ಖಡ್ಗದಿಂದಲೂ ನಿನ್ನ ಬಿಲ್ಲಿನಿಂದಲೂ ಸೆರೆಯಾಗಿ ತೆಗೆದುಕೊಳ್ಳದವರನ್ನು ಹೊಡೆಯುತ್ತೀಯೋ? ರೊಟ್ಟಿಯನ್ನೂ, ನೀರನ್ನೂ ಇವರ ಮುಂದೆ ಇಡು. ಅವರು ತಿಂದು ಕುಡಿದು ತಮ್ಮ ಯಜಮಾನನ ಬಳಿಗೆ ಹೋಗಲಿ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 6:22
10 ತಿಳಿವುಗಳ ಹೋಲಿಕೆ  

ಇದಲ್ಲದೆ, ಕತ್ತಿ - ಬಿಲ್ಲುಗಳಿಂದ ನಾನು ಅಮೋರಿಯರ ವಶದಿಂದ ಪಡೆದ ಬೆಟ್ಟದ ತಪ್ಪಲನ್ನು, ನಿನ್ನ ಅಣ್ಣಂದಿರಿಗೆ ಕೊಟ್ಟ ಪಾಲಿಗಿಂತ ಹೆಚ್ಚಾಗಿ, ನಿನಗೆ ಕೊಟ್ಟಿದ್ದೇನೆ,” ಎಂದು ಹೇಳಿದನು.


ಆ ದಿನಗಳಲ್ಲಿ ನನ್ನ ಜನರಿಗೆ ಹಾನಿಮಾಡದಂತೆ ಕಾಡಿನ ಮೃಗಗಳೊಂದಿಗೂ, ಆಕಾಶದ ಪಕ್ಷಿಗಳೊಂದಿಗೂ, ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳೊಂದಿಗೂ ಒಪ್ಪಂದಮಾಡಿಕೊಳ್ಳುವೆನು. ಬಿಲ್ಲುಬಾಣ, ಕತ್ತಿಕಠಾರಿಗಳು ಅವರ ನಾಡಿನಲ್ಲಿ ಇಲ್ಲದಂತೆ ಮಾಡುವೆನು; ನನ್ನ ಜನರು ಸುರಕ್ಷಿತವಾಗಿ ನೆಲಸುವಂತೆ ಮಾಡುವೆನು.


ನಾನು ಹೇಳುವುದನ್ನು ಗಮನಿಸಿರಿ; ನಿಮ್ಮ ಶತ್ರುಗಳನ್ನು ಪ್ರೀತಿಸಿರಿ; ನಿಮ್ಮನ್ನು ಪೀಡಿಸುವವರಿಗಾಗಿ ಪ್ರಾರ್ಥಿಸಿರಿ.


ಆದರೆ ಯೆಹೂದ್ಯ ಮನೆತನವನ್ನು ಪ್ರೀತಿಸಿ ಉದ್ಧರಿಸುವೆನು. ಬಿಲ್ಲುಬಾಣ, ಕತ್ತಿಕಾಳಗ, ಕುದುರೆರಾಹುತರು ಇವುಗಳಿಂದಲ್ಲ, ದೇವರಾದ ಸರ್ವೇಶ್ವರನ ಶಕ್ತಿಯಿಂದಲೇ ಅವರನ್ನು ರಕ್ಷಿಸುವೆನು,” ಎಂದರು.


ಬಿಲ್ಲುಬಾಣದಲಿ ನಾ ಭರವಸೆಯಿಡುವುದಿಲ್ಲ I ಕತ್ತಿ ಕಠಾರಿ ನನಗೆ ರಕ್ಷಣೆ ತರುವುದಿಲ್ಲ II


ಇದಲ್ಲದೆ ಕಣಜದ ಹುಳುಗಳನ್ನು ನಿಮ್ಮ ಮುಂದಾಗಿ ಕಳುಹಿಸಿದೆ. ಅವು ಅಮೋರಿಯರ ಅರಸರಿಬ್ಬರನ್ನು ಓಡಿಸಿಬಿಟ್ಟವು. ಇದು ನಿಮ್ಮ ಕತ್ತಿಬಿಲ್ಲುಗಳಿಂದ ಆದುದಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು