2 ಅರಸುಗಳು 5:23 - ಕನ್ನಡ ಸತ್ಯವೇದವು C.L. Bible (BSI)23 ನಾಮಾನನು, “ಆರು ಸಾವಿರ ನಾಣ್ಯವನ್ನಾದರೂ ತೆಗೆದುಕೊಳ್ಳಬಾರದೇ,” ಎಂದು ಅವನನ್ನು ಒತ್ತಾಯಪಡಿಸಿ, ಅದನ್ನು ಎರಡು ಚೀಲಗಳಲ್ಲಿ ಹಾಕಿಸಿ, ಆ ಚೀಲಗಳನ್ನೂ ಎರಡು ದುಸ್ತು ಬಟ್ಟೆಗಳನ್ನೂ ಇಬ್ಬರು ಸೇವಕರ ಮೇಲೆ ಹೊರಿಸಿ, ಅವರನ್ನು ಗೇಹಜಿಯ ಸಂಗಡ ಕಳುಹಿಸಿದನು. ಅವರು ಹೊತ್ತುಕೊಂಡು ಇವನ ಮುಂದೆ ನಡೆದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201923 ನಾಮಾನನು, “ಎರಡು ತಲಾಂತನ್ನಾದರೂ ತೆಗೆದುಕೊಳ್ಳಬಾರದೆ?” ಎಂದು ಅವನನ್ನು ಒತ್ತಾಯಪಡಿಸಿ ಎರಡು ಚೀಲಗಳಲ್ಲಿ ಬೆಳ್ಳಿ ನಾಣ್ಯಗಳನ್ನು ತುಂಬಿಸಿ, ಆ ಚೀಲಗಳಲ್ಲಿ ಎರಡು ಜೋಡಿ ಬಟ್ಟೆಗಳನ್ನೂ ಇಟ್ಟು ಇಬ್ಬರು ಸೇವಕರ ಮೇಲೆ ಹೊರಿಸಿ ಅವರನ್ನು ಗೇಹಜಿಯ ಸಂಗಡ ಕಳುಹಿಸಿದನು. ಅವರು ಹೊತ್ತುಕೊಂಡು ಅವನ ಮುಂದೆ ನಡೆದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)23 ನಾಮಾನನು - ಎರಡು ತಲಾಂತನ್ನಾದರೂ ತೆಗೆದುಕೊಳ್ಳಬಾರದೇ ಎಂದು ಅವನನ್ನು ಒತ್ತಾಯಪಡಿಸಿ ಅದನ್ನು ಎರಡು ಚೀಲಗಳಲ್ಲಿ ಹಾಕಿಸಿ ಆ ಚೀಲಗಳನ್ನೂ ಎರಡು ದುಸ್ತುಬಟ್ಟೆಗಳನ್ನೂ ಇಬ್ಬರು ಸೇವಕರ ಮೇಲೆ ಹೊರಿಸಿ ಅವರನ್ನು ಗೇಹಜಿಯ ಸಂಗಡ ಕಳುಹಿಸಿದನು. ಅವರು ಹೊತ್ತುಕೊಂಡು ಇವನ ಮುಂದೆ ನಡೆದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್23 ನಾಮಾನನು, “ದಯಮಾಡಿ ಎಪ್ಪತ್ತು ಕಿಲೋಗ್ರಾಂ ತೆಗೆದುಕೊ!” ಎಂದು ಗೇಹಜಿಗೆ ಒತ್ತಾಯಪಡಿಸಿ ಎಪ್ಪತ್ತು ಕಿಲೋಗ್ರಾಂ ಬೆಳ್ಳಿಯನ್ನು ಎರಡು ಚೀಲಗಳಲ್ಲಿ ಹಾಕಿದನು ಮತ್ತು ಎರಡು ಥಾನು ಬಟ್ಟೆಯನ್ನು ತೆಗೆದುಕೊಂಡು ತನ್ನ ಸೇವಕರಿಗೆ ಕೊಟ್ಟನು. ಆ ಸೇವಕರು ಈ ವಸ್ತುಗಳನ್ನು ತೆಗೆದುಕೊಂಡು ಗೇಹಜಿಯೊಡನೆ ಹೋದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ23 ಆಗ ನಾಮಾನನು, “ನೀನು ದಯಮಾಡಿ ಆರು ಸಾವಿರ ನಾಣ್ಯಗಳನ್ನಾದರೂ ತೆಗೆದುಕೋ,” ಎಂದು ಹೇಳಿ ಗೇಹಜಿಯನ್ನು ಬಲವಂತ ಮಾಡಿದನು. ಹಾಗೆಯೇ ಆರು ಸಾವಿರ ಬೆಳ್ಳಿ ನಾಣ್ಯಗಳನ್ನು ಎರಡು ಚೀಲಗಳಲ್ಲಿ ಕಟ್ಟಿಸಿ, ಅದರ ಸಂಗಡ ಎರಡು ಜೊತೆ ಬಟ್ಟೆಗಳನ್ನು ಕೊಟ್ಟು, ತನ್ನ ಸೇವಕರಲ್ಲಿ ಇಬ್ಬರ ಮೇಲೆ ಹೊರಿಸಿದನು. ಅವರು ಗೇಹಜಿಯ ಮುಂದೆ ಹೊತ್ತುಕೊಂಡು ಹೋದರು. ಅಧ್ಯಾಯವನ್ನು ನೋಡಿ |